Nitya Bhavishya: ಆರೋಗ್ಯದ ಮೇಲೆ ಗಮನವಿರಲಿ, ಆಪ್ತರ ಸಲಹೆ ಸ್ವೀಕರಿಸಿ

2023 ಮಾರ್ಚ್ 4ರ ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಆರೋಗ್ಯದ ಮೇಲೆ ಗಮನವಿರಲಿ, ಆಪ್ತರ ಸಲಹೆ ಸ್ವೀಕರಿಸಿ
ಪ್ರಾತಿನಿಧಿಕ ಚಿತ್ರImage Credit source: marca.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 04, 2023 | 6:03 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 4ರ ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ 09: 47 ರಿಂದ 11:16ರವರೆಗೆ, ಯಮಘಂಡ ಕಾಲ 02: 13 ರಿಂದ 03: 42 ರವರೆಗೆ, ಗುಳಿಕ ಕಾಲ 06: 49 ರಿಂದ ಮಧ್ಯಾಹ್ನ 08:18ರವರೆಗೆ.

ಮೇಷ: ಕುಟುಂಬದ ಜೊತೆ ಬೆರೆತರೂ ಒಂಟಿತನವು ಬಹಳವಾಗಿ ಕಾಡಲಿದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಂಪತ್ತು ಸ್ವಲ್ಪ ವ್ಯಯವಾಗಿ ಆರ್ಥಿಕವಾಗಿ ಸಮಸ್ಯೆಯಾಗಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಆಪ್ತರ ಸಲಹೆಯನ್ನು ಸ್ವೀಕರಿಸಿ. ಅವರನ್ನೂ ಗೌರವಿಸಿ. ಸಂಜೆಯೊಳಗೆ ನಿಮಗೆ ಶುಭವಾರ್ತೆಯೊಂದು ಬರಲಿದೆ. ಅಸಾಧ್ಯವೆನಿಸಿ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಲು ಹೋಗಬೇಡಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಡಿ. ಹೆಚ್ಚಿನ ಯಶಸ್ಸು ಸಿಗಬಹುದು. ಅನಿರೀಕ್ಷಿತವಾಗಿ ಸಂಪತ್ತು ವ್ಯಯವಾಗುವ ಸಾಧ್ಯತೆ ಇದೆ, ಕುಬೇರಮಂತ್ರವನ್ನು ಪಠಿಸಿ.

ವೃಷಭ: ಈ ಮೊದಲೇ ಯೋಜಿತವಾದ ನಿಮ್ಮ ನಿರ್ಧಾರಗಳನ್ನು ಯಾರಾದರೂ ಬದಲಾಯಿಸಬಹುದು. ಅನಿವಾರ್ಯತೆಯನ್ನು ನೋಡಿ ಅದನ್ನು ಬದಲಿಸಿ. ನಿಮಗೆ ನಿಮ್ಮ ಯೋಜನೆಯ ಸ್ಪಷ್ಟವಾದ ಮಾಹಿತಿ ಇರಲಿ. ಸ್ನೇಹಿತರಿಂದ ಆಪತ್ಕಾಲದಲ್ಲಿ ಸಹಾಯವು ದೊರೆಯಲಿದೆ. ಅದನ್ನು ಮರಳಿ ಕೊಡುವ ಷರತ್ತಿನೊಂದಿಗೆ ಪಡೆಯಿರಿ. ದೂರದ ಪ್ರಯಾಣವು ನಿಮಗೆ ಆಯಾಸವನ್ನು ಉಂಟುಮಾಡಬಹುದು. ತಂತ್ರಜ್ಞರಿಗೆ ಹೊಸ ಕೆಲಸಕ್ಕೆ ಆಹ್ವಾನಬರಬಹುದು. ವಾತದಿಂದ ಊತಗಳು ಉಂಟಾಗಬಹುದು. ನೋವನ್ನು ಆಪ್ತರ ಜೊತೆ ಹಂಚಿಕೊಳ್ಳಿ. ಪಾರ್ವತೀಸಹಿತನಾದ ಶಿವನನ್ನು ಸ್ಮರಿಸಿ.

ಮಿಥುನ: ಆಲಸ್ಯವು ನಿಮ್ಮನ್ನು ಕಾಡುವುದು. ಉದ್ಯೋಗದ ಸ್ಥಳದಲ್ಲಿ ಕಾರ್ಯಗಳು ನಿಧಾನವಾಗಲಿದೆ. ಒಂದಾದಮೇಲೊಂದು ಬರುವ ಕೆಲಸಗಳಿಂದ ಒತ್ತಡವು ಅತಿಯಾಗಲಿದೆ. ಸಮಾಧಾನಚಿತ್ತದಿಂದ ಸ್ವೀಕರಿಸಿ. ವಿನಾಕಾರಣ ಮನೆಯಲ್ಲಿ ವಾಗ್ವಾದಗಳು ನಡೆಯಬಹುದು. ದ್ವೇಷಸಾಧನೆಗೆ ಹೋಗಬೇಡಿ. ಅಂತಹ ಸಂದರ್ಭದಲ್ಲಿ ಮೌನವಹಿಸುವುದು ಒಳ್ಳೆಯದು. ಭರವಸೆಯೇ ನಿಮ್ಮ ಭವಿಷ್ಯಕ್ಕೆ ಆಧಾರವಾಗಿರಲಿದೆ. ದೇವತಾಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಹೀಗೆಯೇ ಆಗಬೇಕು ಎನ್ನುವ ಯಾವುದೇ ಗಟ್ಟಿ ನಿರ್ಧಾರಗಳು ಬೇಡ. ಲಕ್ಷ್ಮೀಸಹಿತನಾದ ನಾರಾಯಣನನ್ನು ನಮಸ್ಕರಿಸಿ.

ಕಟಕ: ಆರೋಗ್ಯವು ಇಂದು ಸುದೃಢವಾಗಿ ಇರಲಿದೆ. ಆಸ್ತಿಗೆ ಸಂಬಂಧಿಸದಂತೆ ಕುಟುಂಬದಲ್ಲಿ ಸ್ವಲ್ಪ ಮಟ್ಟಿನ ಕಲಹಗಳು ಆಗಬಹುದು. ತಂದೆ ಮತ್ತು ಮಕ್ಕಳು ಒಮ್ಮನಸ್ಸಿನಿಂದ ಇರಲು ಯತ್ನಿಸಿ. ನಿಮ್ಮ ಕನಸುಗಳೆಲ್ಲವೂ ನನಸಾಗುವ ನಂಬಿಕೆಯನ್ನು ಇಟ್ಟುಕೊಂಡಿರಿ. ಒಂದೊಂದಾಗಿಯೇ ಪೂರ್ಣವಾಗುವುದು. ದೈವವು ನಿಮ್ಮ ಕನಸನ್ನು ನನಸಾಗಿಸಲು ಸಮಯವನ್ನು ತೆಗದುಕೊಳ್ಳುವುದು. ಸ್ವಂತ ಉದ್ಯೋಗಿಗಳಿಗೆ ಲಾಭವಾಗಲಿದೆ. ವಿವಾಹದ ಮಾತುಕತೆಗಳು ವಿಳಂಬವಾಗಬಹುದು. ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಮನಃಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ. ಭಗವದ್ಗೀಯು ನಿಮ್ಮ ಮನೋವಿಕಾರವನ್ನು ಸರಿ ಮಾಡಲಿದೆ‌.

ಸಿಂಹ: ಮನಸ್ಸು ಹತ್ತಾರು ಕಡೆ ಹೋಗುವ ಕಾರಣ ಏಕಾಗ್ರತೆಯ ಕೊರತೆಯು ಕಾಣಲಿದೆ. ಸಮಾಜಿಕವಾದ ಗೌರವಗಳು ನಿಮಗೆ ಸಿಗಬಹುದು. ವಿವಾಹ ಸಮಾರಂಭಗಳಿಗೆ ಹೋಗಲಿದ್ದೀರಿ. ಸಂಗೀತ ಕಲಾವಿದರಿಗೆ ದೊಡ್ಡ ಕೀರ್ತಿಯು ಲಭಿಸುವ ಎತ್ತರದ ಪ್ರದೇಶಗಳಿಗೆ ಹೋಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸಗಳಿಗೆ ಅಡ್ಡಿಯನ್ನು ಉಂಟುಮಾಡಲು ಕೆಲವರು ಇರುತ್ತಾರೆ. ಚಾತುರ್ಯದಿಂದ ಕೆಲಸಗಳನ್ನು ಮಾಡಿ. ತಂದೆ ಹಾಗೂ ತಾಯಿಯರ ಆಶೀರ್ವಾದವನ್ನು ಪಡೆದು ಮುಂದಿನ ಕೆಲಸಕ್ಕೆ ಹೋಗಿ. ನಿಮ್ಮ ಅಂತರಂಗವನ್ನು ಯಾರಮುಂದೂ ಪೂರ್ಣವಾಗಿ ಬಿಚ್ಚಿಡಲು ಹೋಗಬೇಡಿ. ಪತ್ನಿಯ ಆರೋಗ್ಯವು ವ್ಯತ್ಯಾಸವಾಗಲಿದೆ. ಮೃತ್ಯುಂಜಯನನ್ನು ಜಪಿಸಿ.

ಕನ್ಯಾ: ಹಿರಿಯರೆದುರು ವಿನಯದಿಂದ ವರ್ತಿಸಿ. ಅದೃಷ್ಟವಿದೆ ಎಂದು ಏನನ್ನಾದರೂ ಮಾಡಲು ಹೋಗಬೇಡಿ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ವಿಧವಿಧವಾದ ಚಿಂತೆಗಳು ನಿಮ್ಮ ಮನಸ್ಸು ಕೆಡಿಸಬಹುದು. ಅನ್ಯರಿಂದ ವಂಚನೆಗೆ ಒಳಗಾಗಬಹುದು. ದ್ವಂದ್ವದಲ್ಲಿ ಇರುವ ನಿಮಗೆ ಸ್ಪಷ್ಟವಾದ ಮಾರ್ಗವನ್ನು ಬುದ್ಧಿಯ ಮೂಲಕ ದೈವವೇ ಸೂಚಿಸುವುದು. ಉದರಕ್ಕೆ ಸಂಬಂಧಿಸಿದ ರೋಗವು ಅತಿಯಾಗಬಹುದು. ಮಕ್ಕಳು ಮನೆಗೆ ಹೋಗಲಿದ್ದೀರಿ. ನಾಗಬಿಂಬಕ್ಕೆ ಕ್ಷೀರಾಭಿಷೇಕ ಮಾಡಿ. ಅಭೀಷ್ಟಗಳು ಫಲಿಸುವುವು.

ತುಲಾ: ಆರ್ಥಿಕ ಅಭಿವೃದ್ಧಿಗೆ ದುಷ್ಟರ ಮಾರ್ಗದರ್ಶನ ಇರಲಿದೆ. ಆ ಮಾರ್ಗವನ್ನು ಒಪ್ಪಿಕೊಳ್ಳಬೇಡಿ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಬಹುದು. ಸರಿಯಾದ ನ್ಯಾಯವಾದಿಗಳನ್ನು ವಾದಕ್ಕೆ ಕರೆಸಿಕೊಳ್ಳಿ. ದಾಂಪತ್ಯದಲ್ಲಿ ಉಂಟಾದ ಕಲಹವು ವಿಚ್ಛೇದನಕ್ಕೆ ಕಾರಣವಾಗಬಹುದು. ಪೂಜ್ಯರ ಭೇಟಿಯಾಗಲಿದ್ದು ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ. ಕೃಷಿಕರಿಗೆ ಅಷ್ಟಾಗಿ ಲಾಭವು ಇರುವುದಿಲ್ಲ. ಈ ಮೊದಲೇ ಗೊತ್ತಾಗಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸುತ್ತದೆ. ಆದರೆ ಕಾಲವು ಮುಂದೆ ಬಂದಿರುತ್ತದೆ. ಈಗೇನು ಮಾಡಬೇಕು ಎನ್ನುವುದು ಆಲೋಚಿಸಿ. ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ನಿರ್ವಿಘ್ನದಾತನನ್ನು ಸ್ಮರಿಸಿ.

ವೃಶ್ಚಿಕ: ಅಲ್ಪ ಶ್ರಮಕ್ಕೆ ಹೆಚ್ಚು ಫಲವನ್ನು ನಿರೀಕ್ಷಿಸುತ್ತೀದ್ದೀರಿ. ಇದರಿಂದ ದುಃಖವನ್ನು ಅನುಭವಿಸಬೇಕಾದೀತು. ಎಷ್ಟೋ ವರ್ಷದ ಅನಂತರ ನಿಮ್ಮನ್ನು ಭೇಟಿಯಾಗಲು ಸ್ನೇಹಿತರು ಬರಲಿದ್ದಾರೆ. ಅವರ ಜೊತೆ ಸುತ್ತಾಟ ನಡೆಸುವಿರಿ. ನಿಮ್ಮ ಮಕ್ಕಳು ನಿಮಗೆ ಪ್ರತ್ಯುತ್ತರ ನೀಡುವರು. ಅದನ್ನು ಸಹಿಸಿಕೊಳ್ಳಲಾರಿರಿ. ಸ್ನೇಹಿತರ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಇನ್ನೊಬ್ಬರಮೇಲೆ ಹೇರಲು ಪ್ರಯತ್ನಿಸಬೇಡಿ. ಕುಳಿತಲ್ಲೇ ಕುಳಿತುಕೊಳ್ಳುವ ಮನಸ್ಸಿಲ್ಲದೇ ವ್ಯಗ್ರರಾಗಿರುವಿರಿ. ಹೊರಗೆ ಸುತ್ತಾಡಲು ಹೋಗುವಿರಿ. ಧನ್ವಂತರಿಯನ್ನು ಜಪಿಸಿ. ರೋಗೋಪಶಮನವಾಗುವುದು.

ಧನು: ದಿಢೀರನೆ ಆಗುವಧನವ್ಯಯವು ನಿಮ್ಮಲ್ಲಿ ಆತಂಕವನ್ನು ತರಲಿದೆ. ಕಛೇರಿಯಿಂದ ವಿದೇಶಕ್ಕೆ ಹೋಗುವ ಪ್ರಸ್ತಾಪವು ಬರಬಹುದು. ಆದರೂ ಮನೆಯ ಪರಿಸ್ಥಿತಿಯನ್ನು ಕಂಡು ಅದನ್ನು ತಳ್ಳಿಹಾಕಲಿದ್ದೀರಿ. ಸಂತಾನದಿಂದ ಸಂತಸವು ಉಂಟಾಗಲಿದೆ‌. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಧನವ್ಯಯವಾಗುವುದು. ಏಕಾಂತವನ್ನು ಇಷ್ಟಪಡುವಿರಿ. ಆದರೆ ಅಲ್ಲಿ ನಿಮಗೆ ಕಿರಿಕಿರಿಯ ಸ್ಥಿತಿ ಬರಲಿದೆ. ಬಟ್ಟೆಗಳನ್ನು ಮಾರಾಟಮಾಡುವವರಿಗೆ ಉತ್ತಮ ಲಾಭವಾಗಲಿದೆ. ಗುರುವಿನ ದರ್ಶನವನ್ನು ಮಾಡಿ. ಷಷ್ಠದಲ್ಲಿರುವ ಕುಜನಿಂದ ಶತ್ರುಗಳ ನಾಶವಾಗಲಿದೆ.

ಮಕರ: ಯಾರ ಮೇಲೂ ಕಾಲು ಕೆರೆದು ವಿನಾಕಾರಣ ವ್ಯಾಜ್ಯ ಮಾಡಲು ಹೋಗಬೇಡಿ. ನಿಮ್ಮ ಮೇಲೇ ಅಪರಾಧವು ಬರಬಹುದು. ಪರಿಹಾರದ ಮಾರ್ಗವನ್ನು ಕಂಡುಕೊಂಡು ಪರಿಹರಿಸಿಕೊಳ್ಳಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ವಾಹನದಿಂದ ಆಗುವ ಅಪಘಾತವು ನೂಲೆಳೆಯ ಅಂತರದಲ್ಲಿ ಬಚಾವಾಗುವಿರಿ. ಪೂರ್ವಕೃತ ಉಪಕಾರವೇ ನಿಮಗೆ ಬೇಕಾದಾಗ ಸಹಾಯಕ್ಕೆ ಬರುವುದು. ಇಷ್ಟು ದಿನ ಮಂದಗತಿಯಲ್ಲಿದ್ದ ಗೃಹ ನಿರ್ಮಾಣ ಕಾರ್ಯವು ವೇಗವನ್ನು ಪಡೆಯಲಿದೆ. ಇಂಜಿನಿಯರಿಂಗ್ ಆಗಿದ್ದು ಸ್ವಂತ ಉದ್ಯಮವನ್ನು ಮಾಡುತ್ತಿದ್ದವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕೃಷಿಕರು ಲಾಭಗಳಿಸುವರು. ಶಿವಸಾನ್ನಿಧ್ಯದಲ್ಲಿ ಪಂಚಾಕ್ಷರಿ ಜಪವನ್ನು ಮಾಡಿ.

ಕುಂಭ: ಅನುಕರಣೆಯನ್ನು ಬಿಟ್ಟುಬಿಡಿ. ಅದು ನಿಮಗೆ ಶೋಭೆ ತರದು. ನಿಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸುವರು. ನಿಮ್ಮ ನಡೆಯು ಅರ್ಥವಾಗದ್ದಾಗಿರುತ್ತದೆ. ಹಣವನ್ನು ಹೊಂದಿದ್ದರೂ ನಿರ್ಧನಿಕರಂತೆ ಇರುವಿದು ನಿಮ್ಮ ಸ್ವಭಾವವಾಗಿರುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುತ್ತೀರಿ. ಅದಕ್ಕೋಸ್ಕರ ಶ್ರಮಿಸುತ್ತೀರಿ. ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ಸ್ನೇಹಿತರು ನಿಮ್ಮನ್ನು ಮೆಚ್ಚಿಕೊಳ್ಳುವರು. ಅವರಿಗೆ ಎಂದಿಗೂ ಸಹಾಯವನ್ನು ಮಾಡುವಿರಿ. ಬಂಧುಗಳನ್ನು ಭೇಟಿಯಾಗಲಿದ್ದೀರಿ. ಕಾರ್ಯವು ನಿಧಾನವಾಗಿದೆ ಎಂದು ಕಂಡರೂ ಚಿಂತೆ ಬೇಡ.‌ ಕಾಲಕ್ಕೆ ಆಗಬೇಕಾದುದು ಆಗುವುದು.

ಮೀನ: ಒಮ್ಮೆಲೆ ಎಲ್ಲವನ್ನು ಮಾಡುತ್ತೆನೆ ಎಂಬ ಹುಂಬುತನ ಬೇಡ. ನಾಲ್ಕಾರು ಕೆಲಸಗಳನ್ನು ಮಾಡಲು ಇಚ್ಛಿಸುವಿರಿ. ನಿಮ್ಮ ನಡಿಗೆ ಬಹಳ ವೇಗವಾಗಿರುತ್ತದೆ. ಒಂದು ಘಟನೆಯಂತೆ ಇನ್ನೊಂದು ಘಟನೆಯನ್ನು ಊಹಿಸಲು ಹೋಗಿ ಹಳ್ಳಕ್ಕೆ ಬೀಳುವಿರಿ. ಬಂಧುಗಳು ನಿಮ್ಮನ್ನು ಕಂಡು ನಕ್ಕಾರು. ನಿಮ್ಮ ಕೆಲಸದ ಮೂಲಕ ಅವರಿಗೆ ಉತ್ತರವನ್ನು ಕೊಡಲು ಹೋಗಿ. ಮಾತಿನಿಂದ ಮಾತೇ ಬೆಳೆಯುವುದು, ಕೆಲಸವಲ್ಲ. ದಾಂಪತ್ಯದಲ್ಲಿ ಸುಖವಿರಲಿದೆ. ಶಿವಲಿಂಗಕ್ಕೆ ಬಿಲ್ವಾರ್ಚನೆ‌ ಮಾಡಿ ಬನ್ನಿ.

ಲೋಹಿತಶರ್ಮಾ, ಇಡುವಾಣಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ