
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವರಿಯಾನ್, ಕರಣ : ಗರಜ, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:05 – 18:40, ಯಮಗಂಡ ಕಾಲ 12:21 – 13:56, ಗುಳಿಕ ಕಾಲ 15:31 – 17:05.
ಮೇಷ ರಾಶಿ: ಸೌಂದರ್ಯ ವರ್ಧನೆಗೆ ಸಮಯವನ್ನು ಇಡುವಿರಿ. ಸಂಬಂಧಿಕರ ಸಹವಾಸ, ಸಹಾಯಗಳು ಸಿಗಲಿವೆ. ನಿಮ್ಮ ಅಂತಸ್ಸತ್ತ್ವ ಗಟ್ಟಿ ಇರುವುರಿಂದ ಯಾರ ಮಾತಿಗೂ ಕಿವಿಗೊಡದೆ ನೀವು ನಿರ್ಧರಿಸಿದ ಕೆಲಸದಲ್ಲಿ ಮುಂದುವರಿಯುತ್ತೀರಿ. ನೀವು ಮನೋರಂಜನೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.
ವೃಷಭ ರಾಶಿ: ಇಂದು ಯಾವುದೇ ಕಾರಣಕ್ಕೆ ಪ್ರಯಾಣವನ್ನು ಅತಿಯಾಗಿ ಮಾಡಬೇಡಿ. ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಪರರ ಆಕರ್ಷಣೆಯಿಂದ ಮನಸ್ಸು ಅರಳುವುದು. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ. ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿದಿದ್ದರೂ ಅನ್ಯ ಮಾರ್ಗವಿಲ್ಲದೇ ಇರಬೇಕಾದೀತು. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ. ಕುಮಾರ್ಗದಿಂದ ಆದಾಯವನ್ನು ಪಡೆಯುವಿರಿ. ಭೂಮಿಯ ಖರೀದಿಗೆ ಮನಸ್ಸಾಗುವುದು.
ಮಿಥುನ ರಾಶಿ: ನಿಮ್ಮ ವಿವಾಹದ ಮಾತುಕತೆಗಳಿಂದ ಬಹಳ ನೆಮ್ಮದಿ ನೀಡುವುದು. ವಿವಾಹದ ಬಹು ನಿರೀಕ್ಷೆ ಹುಸಿಯಾಗಲಿದೆ. ಅಪರೂಪದ ಸ್ನೇಹಿತನ ಜೊತೆ ಸುತ್ತಾಟ. ವ್ಯರ್ಥವೆನಿಸಿದರೂ ನಿಮಗೆ ಬೇಕಾದ ಅಂಶಗಳು ಅವನಿಂದ ಸಿಗಲಿದೆ. ನಿಮ್ಮ ಗೊಂದಲಗಳಿಗೆ ತೆರೆ ಬೀಳಲಿದೆ. ವೈದ್ಯರಿಗೆ ಇಂದು ಉತ್ತಮದಿನವಾಗಿಲ್ಲ. ನೀವೂ ದೈವಕ್ಕೆ ಶರಣಾಗಲೇ ಬೇಕು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ.
ಕರ್ಕಾಟಕ ರಾಶಿ: ನಿಮ್ಮ ಮಾತುಗಳನ್ನು ಸರಿಯಾಗಿ ಆಡಿ. ಇಲ್ಲವಾದರೆ ಅನೇಕ ಶುಭಕಾರ್ಯಗಳಿಂದ, ಉತ್ತಮ ಕಾರ್ಯಗಳಿಂದ ವಂಚಿತರಾಗುವಿರಿ. ಮಕ್ಕಳ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹುದು. ಸಹೋದರರಿಗೆ ಆರ್ಥಿಕ ಸಹಾಯ ಮಾಡುವಿರಿ. ನಿಮ್ಮಿಬ್ಬರ ಮಾತಿನ ಚಕಮಕಿಯಲ್ಲಿ ಕೂಸು ಬಡವಾದೀತು. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.
ಸಿಂಹ ರಾಶಿ: ಇಂದು ದಿನವಿಡೀ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ನಿಮ್ಮ ವೇಗವನ್ನು ನಿಯಂತ್ರಿಸಲು ಅನ್ಯರ ಹಸ್ತಕ್ಷೇಪ ಹೆಚ್ಚಾಗುವುದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ.
ಕನ್ಯಾ ರಾಶಿ: ನಿಮ್ಮ ಯೋಜನೆಗೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದು. ಕೂಡಲೇ ವಿರುದ್ಧದ ಆಲೋಚನೆ ಬೇಡ, ಯಥಾಸ್ಥಿತಿ ಇರಲಿ. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಪಿತ್ತರೋಗದಿಂದ ಬಳಲುವ ಸಾಧ್ಯತಯಿದೆ. ಮನೆಯಲ್ಲಿಯೇ ಉಂಟಾದ ಜಗಳವನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.
ತುಲಾ ರಾಶಿ: ಪ್ರೀತಿಯನ್ನು ಮನೆಯವರ ಮೇಲೂ ತೋರಿಸಬಹುದು. ಕೇವಲ ಅನ್ಯಲಿಂಗಿಯರ ಮೇಲೆ ಮಾತ್ರವಲ್ಲ. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಸಂಕಟಪಡಬಹುದು. ವಿವಾಹಯೋಗವು ನಿಮಗಿದೆ. ಯಾವುದಾದರೂ ಉಪಯೋಗಕ್ಕೆ ಬರುವ ಕೆಲಸಕ್ಕೆ ಕೈ ಹಾಕಿ. ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ.
ವೃಶ್ಚಿಕ ರಾಶಿ: ಸಣ್ಣ ಆದಾಯದಿಂದ ಆರ್ಥಿಕವಾಗಿ ಇಂದು ಸಬಲರಾಗುವಿರಿ. ಪ್ರೀತಿಪಾತ್ರರಾದವರ ಭೇಟಿಯು ಸಂತೋಷವನ್ನು ಹೆಚ್ಚಿಸೀತು. ಹಿರಿಯರ ಮಾತುಗಳು ನಿಮ್ಮ ಮನಸ್ಸಿಗೆ ನಾಟಿ ಇಲ್ಲಿಯವರೆಗಿನ ಕಾರ್ಯಕ್ಕೆ ಪಾಶ್ಚಾತ್ತಾಪವನ್ನು ಅನುಭವಿಸುವಿರಿ. ಮಕ್ಕಳ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನಿಮ್ಮ ಕಷ್ಟವನ್ನು ಕುಟುಂಬಕ್ಕೆ ದಾಟಿಸಲಾರಿರಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.
ಧನು ರಾಶಿ: ನಿಮ್ಮನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ನಿಮ್ಮ ಚಿಂತನೆಯ ಜಗತ್ತು ಎಲ್ಲದಕ್ಕಿಂತ ಭಿನ್ನವಾಗಿರಲಿದೆ. ಅವರನ್ನು ನಗಣ್ಯ ಮಾಡಬೇಡಿ. ನಿಮ್ಮ ಮೇಲೆ ಸಲ್ಲದ ಪಿತೂರಿಗಳನ್ನು ಮಾಡಿಯಾರು.ಅವರ ಮೇಲೆ ಒಂದು ಕಣ್ಣಿರಲಿ. ಸ್ನೇಹಿತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಶುಭಸಮಾಚಾರ ನಿಮಗೆ ಗೊತ್ತಾಗಲಿದೆ. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು.
ಮಕರ ರಾಶಿ: ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಹಣವೊಂದು ನೆಮ್ಮದಿಗೆ ಕಾರಣವಾಗದು. ಒಳ್ಳೆಯ ಸ್ವಭಾವವೇ ಮುಖ್ಯವಾಗಿ ಇರುವುದು. ಭವಿಷ್ಯದ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ವ್ಯವಹಾರವನ್ನು ಯಾರೋ ನಿಯಂತ್ರಿಸಿದಂತೆ ಅನ್ನಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನಿಮ್ಮ ಗುಟ್ಟನ್ನು ಬಿಟ್ಟಕೊಡುವುದು ಬೇಡ. ಮಕ್ಕಳಲ್ಲಿ ಪ್ರೀತಿ ಅಧಿಕವಾಗುವುದು.
ಕುಂಭ ರಾಶಿ: ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಅಪರೂಪದ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ನೀವೇ ಆರಂಭಿಸಿದ ಕಾರ್ಯದ ಯಶಸ್ಸನ್ನು ಪರರಿಗೆ ಕೊಡಬೇಕಾಗುವುದು. ಜಯವೃತ್ತಿಗೆ ಸಂಬಂಧಿಸಿದಂತೆ ಶುಭದಿನವಾಗಿದೆ. ಸಾಮಾಜಿಕವಾದ ಸ್ಥಾನಮಾನ ಹೆಚತಚಾಗುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು.
ಮೀನ ರಾಶಿ: ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು, ಕೆಲಸವನ್ನು ಮಾಡಬೇಡಿ. ಬಯಸದೇ ಬಂದಿದ್ದನ್ನು ಉಳಿಸಿಕೊಳ್ಳುವುದು ಕಷ್ಟ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಭೂಮಿಯ ವ್ಯವಹಾರದಲ್ಲಿ ದ್ವೇಷ ಸಾಧಿಸಿ ಪ್ರಯೋಜನವಾಗದು. ನಿಮ್ಮನ್ನು ನೌಕರರು ಹೋಗಳುವರು. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ಸಹನೆಯ ಪರೀಕ್ಷೆಯಲ್ಲಿ ನೀವು ಗೆಲ್ಲುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)