
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 06 – 15 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:57 – 16:24, ಗುಳಿಕ ಕಾಲ 12:03 – 13:30, ಯಮಗಂಡ ಕಾಲ 09:09 – 10:36.
ಮೇಷ ರಾಶಿ: ನಿಮ್ಮ ಜೀವನ ರಹಸ್ಯವನ್ನು ದೈವಜ್ಞರು ಹೇಳುವರು. ಜೀವನದ ಬಗ್ಗೆ ಸರಿಯಾದ ದೃಷ್ಟಿಯನ್ನು ಕೊಡಬೇಕಾಗುವುದು. ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಖಾಸಗಿ ಕಂಪನಿ ಉದ್ಯೋಗಿಗಳ ವೇತನವು ಹೆಚ್ಚಾಗುವುದು. ನಿಮ್ಮ ವರ್ಗಾವಣೆಯು ಅನಿವಾರ್ಯವಾಗಬಹುದು. ಸಂಗಾತಿಯ ಅನಾರೋಗ್ಯವನ್ನು ನೀವೇ ಉಪಚಾರದಿಂದ ಸರಿಮಾಡುವಿರಿ. ಪ್ರೀತಿಗೆ ಅಸಮ್ಮತಿ ತೋರಿಸುವವರ ನಿಮಗೆ ಸಿಟ್ಟು ಬಂದು ರೇಗಾಡುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು. ಪ್ರಸಾರ ಮಾಧ್ಯಮದವರಿಗೆ ಅನವರತ ಕಾರ್ಯಗಳು ಇರುವುದು. ಸಾಹಿತಿಗಳಿಗೆ ಸನ್ಮಾನ ಸಿಗುವುದು. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತವಾಗಬಹುದು. ಬಂಡವಾಳದಿಂದ ಹೆಚ್ಚಿನ ಲಾಭವಿದೆ. ಇಂದು ಕೆಲವು ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು.
ವೃಷಭ ರಾಶಿ: ನಿಮ್ಮ ಮೋಜು ಮಸ್ತಿಗಳು ಪ್ರದೇಶದ ಗಾಂಭೀರ್ಯವನ್ನು ಹಾಳುಮಾಡುವುದು. ನಿಮ್ಮ ಆಶಾಗೋಪುರ ಕಳಚಿಬೀಳಬಹುದು. ಸಿಟ್ಟನ್ನು ಯಾವುದಾದರೂ ಒಂದು ದಾರಿಯಲ್ಲಿ ಹೊರಹಾಕಿದೆ ಸಮಾಧಾನಪಟ್ಟುಕೊಳ್ಳುವಿರಿ. ನಿಮ್ಮ ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾಗಿ ಮಾಡಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು. ಮಹಿಳಾ ಅಧಿಕಾರಿಗಳಿಂದ ಕಿರಿಕಿರಿ ಹೆಚ್ಚು. ಸಹೋದ್ಯೋಗಿಗಳಿಗೆ ಸಹಕರಿಸುವಿರಿ. ಮೋಜಿನ ಸುತ್ತಾಟವು ಹೆಚ್ಚಾಗಬಹುದು. ಕಾನೂನು ಸಲಹೆಗಾರರಿಗೆ ಆದಾಯ ಹೆಚ್ಚಲಿದೆ. ಬಂಧುಗಳ ಜೊತೆ ವಾಗ್ವಾದ ಬೇಡ ಇಂದು. ತುಲನಾತ್ಮಕ ಅಧ್ಯಯನ ಮಾಡುವವರಿಗೆ ಸರಿಯಾದ ಮಾಹಿತಿ ಕೊರತೆ. ಇಂದು ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.
ಮಿಥುನ ರಾಶಿ: ನಿಮಗೆ ಬೇಕಾದವರನ್ನು ಹತ್ತಿರವೇ ಇಟ್ಟುಕೊಳ್ಳುವಿರಿ. ನಿಮ್ಮ ಕಣ್ಣು ಸ್ವಚ್ಛವಾಗಿದ್ದರೆ ಎಲ್ಲವೂ ಸುಂದರವೇ. ಸಮಯದಲ್ಲಿಯೂ ಇನ್ನೊಬ್ಬರಿಗೆ ಪ್ರಶಂಸೆ ಕೊಡಲಾರಿರಿ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಗೆಳೆತನದಲ್ಲಿ ಆಕಸ್ಮಿಕವಾಗಿ ದೂರಾಗುವುದು ಬರಲಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಹೆಚ್ಚಲಿರುವ ಆದಾಯದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಶಿಕ್ಷಕರಿಗೆ ವೇತನದಲ್ಲಿ ಹೆಚ್ಚಳವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ನಿಮ್ಮ ಪ್ರಭಾವವು ಪ್ರತ್ಯಕ್ಷವಾಗಿ ಕಾರ್ಯ ಮಾಡಿದರೂ ಪರೋಕ್ಷವಾಗಿ ಆಗದು. ನಿಮ್ಮ ಮಕ್ಕಳ ನಡವಳಿಕೆಯಿಂದ ಬೇಸರ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿ. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ತೃಪ್ತಿ ಸಿಗದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು.
ಕರ್ಕಾಟಕ ರಾಶಿ: ನಿರುದ್ದೇಶದ ಪ್ರಯಾಣದಿಂದ ಒತ್ತಡದ ಮನಸ್ಸು ಹಗುರಾಗಲಿದೆ. ಪಾಠ್ಯ ಚಟುವಟಿಕೆಗಳ ಬಗ್ಗೆ ಗಮನ ಕಡಿಮೆಯಾಗುವುದು. ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಅನವಶ್ಯಕ ಸಾಲಗಳಿಂದ ದೂರವಿರಿ. ಸಾಮಾಜಿಕ ಕಾರ್ಯವನ್ನು ಸಮಯ ಹೊಂದಿಸಿ ಮಾಡುವರು. ಹಳೆ ಮಿತ್ರರನ್ನು ಭೇಟಿಯಾಗುವಿರಿ. ಸರ್ಕಾರಿ ನೌಕರರಿಗೆ ಹೆಚ್ಚಿನ ಗಳಿಕೆಯಾಗಲಿದೆ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ತಯಾರಿ ಆರಂಭವಾಗುವುದು. ಮುಖ್ಯ ಉದ್ಯಮದ ಜೊತೆ ಇನ್ನೇನಾದರೂ ಸಣ್ಣ ಖರ್ಚಿಗೆ ಬೇಕಾದುದನ್ನು ಮಾಡಿಕೊಳ್ಳುವಿರಿ. ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇಂದಿನ ದುಡಿಮೆಗೆ ಅಲ್ಪ ಶ್ರಮವಾದರೂ ಇರಲಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನೆರಮನೆಯವರ ಜೊತೆ ವಾದ ಮಾಡಬೇಕಾದೀತು.
ಸಿಂಹ ರಾಶಿ: ನಿಮ್ಮ ಪರಿಚಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಳ್ಳುವಿರಿ. ಸಮಾನತೆಯನ್ನು ನಿಮ್ಮ ಕೆಳಗೆ ಬರುವ ಎಲ್ಲ ವ್ಯಕ್ತಿಗಳಲ್ಲಿ ತೋರಿಸುವಿರಿ. ನೈಪುಣ್ಯತೆಯು ಇಂದು ನಿಮ್ಮ ಕೈ ಹಿಡಿಯದೇ ಇರಬಹುದು. ಮನೆಯಲ್ಲಿ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ವಿಚಾರಿಸಬಹುದು. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಇಂದಿನ ನಿಮ್ಮ ಕಾರ್ಯದಲ್ಲಿ ತಾಳ್ಮೆ ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಜಯಿಸಿ. ಹೆಚ್ಚಲಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗುವುದು. ನಿಮ್ಮ ಉಪಸ್ಥಿತಿಯೇ ಇಂದು ಬಹಳ ಮುಖ್ಯವಾಗಬಹುದು. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಪಡೆಯಲು ಹೊಸ ತಂತ್ರವನ್ನು ರೂಪಿಸಬಹುದು. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಬರುವುದರಿಂದ ಸಂತೋಷವಾಗಿ ಇರುವಿರಿ. ಇಬ್ಬರ ಸ್ನೇಹವು ನಿಮ್ಮ ಕಾರಣದಿಂದ ದೂರಾಗಲಿದೆ. ಆರೋಗ್ಯವು ಚೆನ್ನಾಗಿ ಇರಲಿದ್ದು ಆಲಸ್ಯವನ್ನು ಬಿಡಬೇಕಾದೀತು. ಈ ದಿನ ತಂದೆ ತಾಯಿಯ ಬೆಂಬಲವು ಪೂರ್ಣವಾಗಿ ಇರುವುದು. ಅವರಿಂದ ಆರ್ಥಿಕ ಸಹಾಯವೂ ದೊರೆಯಬಹುದು.
ಕನ್ಯಾ ರಾಶಿ: ನಿಮಗೆ ವಿದ್ಯೆಗಿಂತ ಹೆಚ್ಚಾಗಿ ಕೌಶಲದ ಕಾರಣ ಉದ್ಯೋಗ ಪ್ರಾಪ್ತಿಯ ಸಾಧ್ಯತೆ ಇದೆ. ನ್ಯಾಯಸಮ್ಮತ ವ್ಯವಸ್ಥೆಯನ್ನು ಬಿಟ್ಟುಹೋಗುವುದು ಸರಿಯಾಗದು. ಬಿಡುವಿನ ವೇಳೆಯನ್ನು ಮಕ್ಕಳು ದುರುಪಯೋಗ ಮಾಡಿಕೊಳ್ಳುವರು. ಏನಾದರೂ ಕೆಲಸವನ್ನು ಕೊಡುತ್ತಲೇ ಅವರನ್ನು ಸರಿಯಾದ ದಾರಿಗೆ ತರಬೇಕಾದೀತು. ಮನೋರಂಜನೆ ನಿಮಗೆ ಅನಿವಾರ್ಯವಾಗುವುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಹೂಡಿಕೆ ಮಾಡಿ. ಪ್ರತಿ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುವುದು. ಹಳೆಯ ಸಂಗಾತಿಯ ಸ್ಥಿತಿಯನ್ನು ಕೇಳಿ ವಿಕೃತ ಆನಂದಪಡುವಿರಿ. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡಬೇಡಿ. ನೀವು ಮುಖ್ಯವಾದ ಅವಕಾಶಗಳಿಂದ ವಂಚಿತರಾಗುವಿರಿ. ವ್ಯವಹಾರದಲ್ಲಿ ಸ್ನೇಹ ಸಲ್ಲದು. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ. ಆಚಾತುರ್ಯದಿಂದ ಅನಂತರ ಪಶ್ಚಾತ್ತಾಪ ಪಡುವಿರಿ. ಯಾರ ಪ್ರೀತಿಯನ್ನೂ ಕಡೆಗಾಣಿಸುವುದು ಬೇಡ. ನಿಮಗೆ ಕಾಣಿಸಿದ್ದನ್ನು ಮಾತ್ರ ನಂಬುವಿರಿ.
ತುಲಾ ರಾಶಿ: ನಿಮ್ಮವರ ದೀರ್ಘಕಾಲದ ಅನಾರೋಗ್ಯವು ಸಕಾರಾತ್ಮಕ ಬದಲಾವಣೆ ಕಾಣದು. ಅಸಮಾಧಾನದಲ್ಲಿಯೂ ಯುಕ್ತಾಯುಕ್ತವಾದ ಮಾತುಗಳನ್ನು ಆಡುವಿರಿ. ನಿಮಗೆ ಒಳ್ಳೆಯ ಭೂಮಿಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ನಿಮ್ಮ ಜಾಣ್ಮೆಯಿಂದ ಇಂದಿನ ಆದಾಯವನ್ನು ಹೆಚ್ಚುಮಾಡಿಕೊಳ್ಳುವಿರಿ. ನಿಮ್ಮ ವೈಯಕ್ತಿಕ ಜೀವನಕ್ಕೆ ಚ್ಯುತಿ ಬಾರದಂತೆ ವ್ಯವಹರಿಸುವಿರಿ. ನಿಮ್ಮ ಅಸಹಾಯಕತೆಯನ್ನು ಮನೆಯವರ ಮೇಲೆ ಹಾಕುವ ಸಾಧ್ಯತೆ ಇದೆ. ಬಂಧುಗಳ ಜೊತೆ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಆದಾಯಕ್ಕೆ ತಕ್ಕಂತೆ ಜೀವನ ಇಟ್ಟುಕೊಳ್ಳಿ. ಸ್ಪರ್ಧಾತ್ಮಕ ವಿಚಾರಕ್ಕೆ ಹೆಚ್ಚು ಸಿದ್ಧತೆ ಅವಶ್ಯಕ. ನೀವು ಸಂಗಾತಿಗೆ ಕೊಡುವ ಅಚ್ಚರಿಯು ಹಳಸಲಾಗಿರುವುದು. ನಿಮ್ಮ ಹೊಸ ವಾಹನ ಖರೀದಿಯ ಕನಸು ನನಸಾಗಬಹುದು. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.
ವೃಶ್ಚಿಕ ರಾಶಿ: ನಿಮ್ಮ ಉದ್ದೇಶವನ್ನು ಸಾಧಿಸಿಕೊಳ್ಳಲು ಆಗದೇ ಇರಲು ಕಾರಣ ಬಂಧುಗಳು. ಹೇಗಾದರೂ ಮಾಡಿ ಹತ್ತಿಕ್ಕು ಪ್ರಯತ್ನವನ್ನು ಪ್ರಬಲವಾಗಿ ಮಾಡಿಸುವರು. ವೃತ್ತಿಯ ವಿಚಾರದಲ್ಲಿ ಹಿರಿಯರಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ಬಹಳ ಒತ್ತಡವಿರುವ ಕಾರಣ ಬರುವ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ಮಾಡಬೇಕಾಗುವುದು. ಅಪಮಾನದಿಂದಾಗಿ ಆದ ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ವಿರೋಧಿಗಳ ಪಿತೂರಿಯಿಂದ ಅರ್ಧಕ್ಕೆ ನಿಲ್ಲಬಹುದು. ಇನ್ನೊಬ್ಬರನ್ನು ದೂರುವುದರಿಂದ ನಿಮಗೆ ಸಮಾಧಾನ ಸಿಗಲಿದೆ. ಖರೀದಿಗೆ ಹೋದರೆ ಒಂದಿಲ್ಲೊಂದು ಬೇಕೆನಿಸುವುದು. ಯಾವಾಗಲೂ ಯೋಚಿಸದ ಸಂಬಂಧಗಳು ನಿಮ್ಮ ಹತ್ತಿರ ಬರಬಹುದು. ಜೀವನ ಸಂಗಾತಿಯ ಜೊತೆ ಯಾವುದಾದರೂ ವಿಚಾರಕ್ಕೆ ಕಲಹವಾಗಬಹುದು. ನೂತನ ಕಾರ್ಯದ ಆರಂಭಕ್ಕೆ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ಪಡೆಯಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.
ಧನು ರಾಶಿ: ದಿನವಿಡೀ ಸಂಗಾತಿಯನ್ನು ಅನ್ಯಾನ್ಯ ಕಾರಣಕ್ಕೆ ಪೀಡಿಸುವಿರಿ. ಇದು ಗಂಭೀರವಾದರೆ ತಲೆದಂಡ ತೆರಬೇಕಾಗುವುದು. ನಿಮ್ಮ ಔದಾಸೀನ್ಯವು ಮಕ್ಕಳಮೇಲೆ ಪರಿಣಾಮ ಬೀರುವುದು. ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ಸರ್ಕಾರಿ ನೌಕರರಿಗೆ ಹೆಚ್ಚಿನ ಲಾಭವಿದೆ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿಡುವುದು ಉತ್ತಮ. ಆರ್ಥಿಕ ವಿಚಾರದಲ್ಲಿ ಸ್ನೇಹಿತರ ನಡುವೆ ಶತ್ರುತ್ವ ಉಂಟಾಗಬಹುದು. ಅಧಿಕಾರಿಗಳಿಂದ ಪರಿಶೀಲನೆ ಆಗಬಹುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವೂ ಬೇಡ. ಧೈರ್ಯದಿಂದ ಹೊಸ ಯೋಜನೆಯೊಂಡನ್ನು ಆರಂಭಿಸುವಿರಿ. ನಿಮ್ಮ ತಿಳುವಳಿಕೆಗಳಿಂದ ಬರುವ ತೊಂದರೆಯನ್ನು ಪರಿಹರಿಸಿಕೊಳ್ಳುವಿರಿ. ಯಾವುದೇ ರೀತಿಯಲ್ಲೂ ಅಪಘಾತವು ಆಗಬಹುದು. ಅತಿಯಾದ ಒತ್ತಾಯದಿಂದ ನಿಮಗೇ ತೊಂದರೆ. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.
ಮಕರ ರಾಶಿ: ನಿಮಗಿಂತ ಮೇಲಿನ ಸ್ಥಾನದವರು ಇದ್ದರೂ ನೀವೇ ಅವರಂತೆ ವರ್ತಿಸುವಿರಿ. ಗೃಹೋಪಯೋಗಿ ಬಳಕೆಯ ವ್ಯಾಪಾರದಲ್ಲಿ ಆದಾಯ ಕಂಡರೂ ಕೆಲವರಿಂದ ವಂಚನೆಯೂ ಆಗುವುದು. ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲ ಒಳಗಾಗುವಿರಿ. ಯಾವುದನ್ನೂ ಅತಿಯಾಗಿ ಮೈಮೇಲೆ ಎಳೆದುಕೊಳ್ಳುವುದು ಬೇಡ. ಮನೆ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಇದು ನಿಮ್ಮ ಅಸಹಾಯಕತೆಯನ್ನು ತೋರಿಸುವುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ನೆಮ್ಮದಿ ದೊರೆಯುವುದು. ಪ್ರಯಾಣ ಕಾಲದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಈ ದಿನ ಸಣ್ಣ ಓಡಾಟಗಳನ್ನು ಮಾಡುವಿರಿ. ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಪ್ರಯಾಣದಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಇದೆ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.
ಕುಂಭ ರಾಶಿ: ನೀವು ಹಾಕುವ ಷರತ್ತುಗಳಿಗೆ ಪಾಲುದಾರಿಕೆಯಲ್ಲಿ ಒಪ್ಪಿಗೆ ಸಿಗದು. ಸಾಮಾಜಿಕ ವ್ಯವಸ್ಥೆಯಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ಕಷ್ಟ. ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡೆತಡೆಗಳು ಬರುವುದು. ಬಾಯಿ ತಪ್ಪಿ ಆಡಿದ ಮಾತಿಗೂ ಬೆಲೆ ಕೊಡುವಿರಿ. ಸ್ವಲ್ಪ ಆಲೋಚಿಸಿದರೆ ಸಮಸ್ಯೆಗಳಿಗೆ ಉತ್ತರ ಸಿಗುವುದು. ಭೂಮಿಯ ವ್ಯವಹಾರದಲ್ಲಿ ನಿಮಗೆ ಜಯ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನವಶ್ಯಕ ಗೊಂದಲಕ್ಕೆ ಒಳಗಾಗಬಹುದು. ಯಾರದೋ ಮಾತನ್ನು ಕೇಳಿ ಹೂಡಿಕೆ ಮಾಡುವುದು ಬೇಡ. ಬೇಕಿದ್ದರೆ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಆಸೆ ಆಮಿಷಗಳಿಗೆ ಬಲಿಯಾಗದೇ ನಿಮ್ಮ ಗುರಿಯತ್ತ ಗಮನ ನೀಡಿರಿ. ಸ್ನೇಹಿತರ ಕಾರಣಕ್ಕೆ ತೊಂದರೆಯಲ್ಲಿ ಸಿಕ್ಕಿಬೀಳುವಿರಿ.
ಮೀನ ರಾಶಿ: ನಿಮ್ಮದೇ ದೊಡ್ಡ ಕಷ್ಟವೆಂದು ಭಾವಿಸಿದರೆ ನಿಮ್ಮ ನೋವೇ ಅಧಿಕವಾಗಿರುವುದು. ಹೂಡಿಕೆಯನ್ನು ನೀವು ಸಮಯವರಿತು ಹಿಂಪಡೆಯುವಿರಿ. ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು. ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ಇಂದು ಹೆಚ್ಚುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿಯಾಗುವುದು. ನಿಮಗೇ ಗೊತ್ತಿಲ್ಲದಂತೆ ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗುವುದು. ಜವಾಬ್ದಾರಿಯಲ್ಲಿ ಆಗು ಹೋಗುಗಳು ನಿಮ್ಮಮೇಲೇ ಬರುವುದು. ನಿಮ್ಮ ಮಾನಸಿಕ ಬಲವು ಅಧಿಕವಾಗುವುದು. ಅನುಭವಯುಕ್ತವಾದ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರಲಿವೆ. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಲಿ ಸಂದರ್ಭವು ಬರಲಿದ್ದು ನೀವು ಮಾತನಾಡುವಾಗ ಉದ್ವೇಗಕ್ಕೆ ಒಳಗಾಗದೇ ಇರಿ. ಸಂಗಾತಿಯ ಕೋಪಕ್ಕೆ ಕಾರಣವನ್ನು ಸಮಾಧಾನ ಮಾಡಲು ಪ್ರಯತ್ನಿಸಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸದ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.
ಲೋಹಿತ ಹೆಬ್ಬಾರ್-8762924271 (what’s app only)