AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 21 October : ಇಂದು ಈ ರಾಶಿಯವರು ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮವಾಸ್ಯಾ ತಿಥಿ ಮಂಗಳವಾರ ಮೇಲ್ನೋಟದ ತೀರ್ಮಾನ, ಅಕ್ರಮ ಮಾರ್ಗ, ಹಣದ ಮದ, ಮಾತಿನ ತಿರಸ್ಕಾರ, ನೀರಿನಿಂದ ಭಯ, ಅಪರಿಚಿತರ‌ ಕಿರಿಕಿರಿ ಇವೆಲ್ಲ ಇಂದಿನ ಭವಿಷ್ಯ.

Horoscope Today 21 October : ಇಂದು ಈ ರಾಶಿಯವರು ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಸುಷ್ಮಾ ಚಕ್ರೆ|

Updated on: Oct 21, 2025 | 2:56 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಐಂದ್ರ, ಕರಣ : ಚತುಷ್ಪಾತ್, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:00 – 16:28, ಗುಳಿಕ ಕಾಲ 12:04 – 13:32, ಯಮಗಂಡ ಕಾಲ 09:08 – 10:36

ಮೇಷ ರಾಶಿ :

ನಿಮಗೆ ಆದರ್ಶರಾದವರು ಮಾಡುವ ತಪ್ಪನ್ನು ಸಹಿಸಲಾರಿರಿ. ನಿಮ್ಮ ಒರಟು ಮಾತಿನಿಂದ ಸಂಗಾತಿಗೆ ಬೇಸರವಾಗುವುದು. ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿಯನ್ನು ಮುಂದೂಡಿ ಇಂದು ಖರೀದಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಿಸುವವರಾಗಿದ್ದರೆ ನಿಮಗೆ ಅನೇಕ ವಸ್ತುಗಳು ಲಾಭವಾಗಿ ಬರಲಿವೆ. ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ. ವೃತ್ತಿಯನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಹಠಾತ್ ಆಗಿ ಕೆಲಸದಿಂದ ಕೈ ಬಿಡಬಹುದು. ಸಾಧನೆಯ ಸಂದರ್ಶನದಲ್ಲಿ ಅಪಾಯದ ಹೇಳಿಕೆಗಳು ಬರಬಹುದು. ಕ್ಷಮೆಯನ್ನು ಯಾಚಿಸಿ,‌ ಅಲ್ಲೇ ಪರಿಹಾರ ಕಂಡುಕೊಳ್ಳಿ. ನಿಮ್ಮ ತಂತ್ರಗಳು ವ್ಯಾಪಾರದಲ್ಲಿ ಲಾಭವನ್ನು ತಂದೀತು. ಸಮಯಕ್ಕೆ ಉಚಿತವಾದ ಮಾತನ್ನು ಆಡಿ. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ವಿದ್ಯಾರ್ಥಿಗಳಿಗೆ ಆಪಾದನೆ ಬರಬಹುದು. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ :

ಅಕ್ರಮದ ಲಾಭವು ನಿಮ್ಮ ಕೈ ಸೇರುವುದರೊಳಗೇ ಮಾಯವಾಗುವುದು. ಅರಿವಿಗೆ ಬಾರದೇ ಕೆಲವು ತಪ್ಪುಗಳು ನಡೆಯುವುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡುವಿರಿ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡುವ ತಾಳ್ಮೆ ಹಾಗೂ ಸಮಯ ಎರಡೂ ಇರಬಾರದು. ಬರಬೇಕಾದ ಹಣದಲ್ಲಿ ಸ್ವಲ್ಪ ಬಂದಿದ್ದು ನಿಮಗೆ ಸಂತೋಷವಾಗಲಿದೆ. ಆಹಾರದ ಕಲಬೆರೆಕಿಯಿಂದ ಆರೋಗ್ಯ ಹಾಳು. ಸತ್ಯಾಸತ್ಯಗಳು ಗೊತ್ತಿಲ್ಲದೇ ತೀರ್ಮಾನ ಅಸಾಧ್ಯ. ಆದಾಯದ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಇಂದಿನ ನಿಮ್ಮ ಪ್ರಯಾಣವು ಬಹಳ ಗೊಂದಲ ಮಯವಾಗಿ ಇರುವರು. ಇನ್ನೊಬ್ಬರನ್ನು ಬೊಟ್ಟು ತೋರಿಸುವುದು ಕಡಿಮೆ ಮಾಡಿ. ಎಷ್ಟೇ ಪ್ರಯತ್ನಿಸಿದರೂ ಸುಮ್ಮನೆ ಇರಲು ಆಗದು.

ಮಿಥುನ ರಾಶಿ :

ಪರಿಶೀಲಿಸದೇ ಯಾವುದೇ ಕ್ರಮಕ್ಕೆ ಮುಂದಾಗುವುದು ಬೇಡ. ಕಲ್ಲಿನಂತೆ ಬಿದ್ದಿದ್ದರೆ ಯಾರೂ ಏನೂ ಮಾಡಲಾಗದು. ಇರುವ ಚೈತನ್ಯವನ್ನು ಬೆಳೆಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳಬಡೆಕು. ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ನಿಮ್ಮ ವಾಹನಕ್ಕಾಗಿ ಅಧಿಕ ಖರ್ಚನ್ನು ಮಾಡಬೇಕಾಗಿ ಬರಬಹುದು. ಆಲಸ್ಯದಿಂದ ಇರುವ ಕಾರಣ ಕಛೇರಿಯಲ್ಲಿ ಮೇಲಾಧಿಕಾರಿಯಿಂದ ನಿಮಗೆ ಸೂಚನೆ ಬರಬಹುದು. ಮಾರಾಟದಿಂದ ಆರ್ಥಿಕ ತೊಂದರೆಯು ನೀಗುವುದು. ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ಸರಿ ಮಾಡಿಕೊಳ್ಳಿ. ಭಯಂಕರ ಜಲರಾಶಿಯನ್ನು ದಾಟುವುದು ಭಯ ತರಿಸಬಹುದು. ಪ್ರೀತಿಯ ಮಾತುಗಳೇ ನಿಮ್ಮತ್ತ ಜನರನ್ನು ಆಕರ್ಷಿಸುವುದು ಮತ್ತು ವ್ಯಾಪಾರವು ಲಾಭದಾಯಕವಾಗುವುದು. ಧಾರ್ಮಿಕ ಕಾರ್ಯಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ. ಬಿಡುಗಡೆಗಾಗಿ ದಾರಿಯನ್ನು ನೀವೇ ಹುಡುಕಿಕೊಳ್ಳುವಿರಿ.

ಕರ್ಕಾಟಕ ರಾಶಿ :

ವೈರಿಗಳ ಬಲದಿಂದ ಚಿಂತೆ, ಕಾನೂನಾತ್ಮಕ ಕ್ರಮಕ್ಕೆ ಸಲಹೆ ಪಡೆಯುವಿರಿ. ಕೊರತೆಗಳಿದ್ದರೂ ಅದನ್ನು ತೋರಿಸದಂತೆ ನಡೆದುಕೊಳ್ಳುವಿರಿ. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕಗಳು ಬರಲಿದ್ದು ನಿಶ್ಚಯವಾದ ವಿವಾಹವು ಅನ್ಯಾನ್ಯ ಕಾರಣಗಳಿಂದ ಮುಂದೆ ಹೋಗುವುದು. ದೈವಜ್ಞರನ್ನು ಭೇಟಿಯಾಗಿ ಸಮಸ್ಯೆಗೆ ಇರುವ ಪರಿಹಾರವನ್ನು ಪಡೆದು, ಅದನ್ನು ಕುಲಪುರೋಹಿತರ ಸಮಕ್ಷಮದಲ್ಲಿ ಮಾಡಿಸಿ. ವಿದ್ಯೆಯ ಕಾರಣಕ್ಕೆ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮಧ್ಯ ವಯಸ್ಸು ದಾರಿಯನ್ನು ತಪ್ಪಿಸಬಹುದು. ಇಂದಿನ ಬೇಸರವನ್ನು ಕಳೆಯಲು ಎಲ್ಲಿಗಾದರೂ ಹೊರಗೆ ಹೋಗಲಿದ್ದೀರಿ. ಪುಣ್ಯಶಾಲಿಗಳ ಸಂಗವು ಸಿಗಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಹೊರಗಡೆಗೆ ಕೃಷಿಯ ಉತ್ಪನ್ನದ ಮಾರಾಟ ಮಾಡುವಿರಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎನಿಸುವುದು.

ಸಿಂಹ ರಾಶಿ :

ಆರೋಗ್ಯದ ದೃಢತೆಗೆ ವೃತ್ತಿಯಿಂದ ನಿವೃತ್ತಿಯಾಗುವ ಮನಸ್ಸಿರುವುದು. ಸಂಪತ್ತಿನ ಮದವು ಏರುಮುಖವಾಗುವುದು. ನಿಮ್ಮ ಬಗ್ಗೆ ಎಚ್ಚರಿಕೆಯಂತೂ ಇರಲಿ. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ಆಸ್ತಿಯ ಖರೀದಿಯ ವಿಚಾರದಲ್ಲಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಇನ್ನೊಬ್ಬರ ಆದಾಯದ ಮೇಲೆ ಕಣ್ಣು ಹಾಕುವುದು ಸರಿಯಲ್ಲ. ನಿಮ್ಮ ಬಲವಾದ ಇಚ್ಛಾಶಕ್ತಿಯು ನಿಮಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿಯಾಗುವುದು. ನಿಮ್ಮ ಯೋಗ್ಯವಾದ ಯೋಜನೆ ಇದ್ದರೂ ಅದನ್ನು ಸಂದರ್ಭಕ್ಕೆ ಸರಿಯಾಗಿ ಹೇಳುವುದು ಉತ್ತಮ. ಅನಾರೋಗ್ಯದವರು ಮಿತಿಮೀರಿ ಆಹಾರ ಸೇವಿಸುವುದು ಬೇಡ. ಅಪರಿಚಿತರಿಗೆ ನೀವು ಸಭ್ಯರಂತೆ ತೋರುವಿರಿ. ನಿಮ್ಮ ಬಗ್ಗೆ ಇದ್ದ ಪೂರ್ವಾಗ್ರಹದ ಭಾವನೆಗಳು ನಿಮ್ಮ‌ಇಂದಿನ ವರರ್ತನೆಯಿಂದ ಬದಲಾಗಬಹುದು. ನಿಮ್ಮ ಭಾವನೆಗೆ ಸ್ಪಂದಿಸುವವರು ಇಂದು ಸಿಗಬಹುದು. ಕಾನೂನಿನ ವಿಚಾರದಲ್ಲಿ ನಿರ್ದಿಷ್ಟತೆ ಇರಲಿ.

ಕನ್ಯಾ ರಾಶಿ :

ಹಿರಿಯರ ಒಪ್ಪಿಗೆ ಇಲ್ಲದೇ ಇರುವ ಸಾಹಸಕ್ಕೆ ಮುಂದುವರಿಯುವುದು ಬೇಡ. ನೀವು ಮಾಡಿದ ಉಪಕಾರವು ಇತರಿಗೆ ತಿಳಿಯದಂತೆ ಇರಲಿ.‌ ಇಲ್ಲವಾದರೆ ನಿಮಗೇ ತೊಂದರೆ. ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಇಂದು ನೀವು ಬಂಧುಗಳಿಗೆ ಸಹಕಾರ ಮಾಡುವಿರಿದಾರೂ ಪ್ರತಿಫಲದ ಅಪೇಕ್ಷೆಯು ಇರಲಿದೆ. ದೈನ್ಯದಿಂದ ಏನನ್ನೂ ಯಾರ ಬಳಿಯೂ ಕೇಳುವುದು ಬೇಡ. ಕಾನೂನಿಗೆ ಸಂಬಂಧಿಸಿದ್ದನ್ನು ಏಕಾಂಗಿಯಾಗಿ ನಿಭಾಯಿಸಿ ಜಯಿಸುವಿರಿ. ನೀವು ಕೊಟ್ಟ ಹಣವನ್ನು ಹಿಂದಿರುಗಿ ಪಡೆಯಲು ಕಷ್ಟವಾದೀತು. ವಿನಾಕಾರಣ ಮನಸ್ಸು ಬೆಳಗಿನಿಂದಲೇ ಮಂಕಾಗಿ ಇರುವುದು. ಬಂಧುಗಳ ಕಷ್ಟವನ್ನು ಹಂಚಿಕೊಳ್ಳುವಿರು. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ. ಕುಲದೇವರ ಉಪಾಸನೆಯಿಂದ ಮನಸ್ಸಿಗೆ ನೆಮ್ಮದಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ. ಭವಿಷ್ಯದ ಭದ್ರೆತೆಗೆ ಬೇಕಾದ ಬುನಾದಿಯನ್ನು ಹಾಕಿಕೊಳ್ಳುವಿರಿ.

ತುಲಾ ರಾಶಿ :

ಮಕ್ಕಳ ಉತ್ಸಾಹಕ್ಕೆ ಭಂಗ ತರದೆ ಸರಿಯಾದ ಕಡೆ ಹೋಗುವಂತೆ ಮಾರ್ಗವನ್ನು ಬದಲಿಸಿ. ನಿಮಗೆ ಇಂದು ಕೆಟ್ಟ ಮಾತು ಕೇಳಿಬರಬಹುದು. ಅದಕ್ಕೆ ಪ್ರತಿಕ್ರಯಿಸದೇ ನಿಮ್ಮೊಳಗೇ ಇಟ್ಟುಕೊಳ್ಳಿ. ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ನಿಮಗೆ ಗೊತ್ತೇ ಇರದ ಕೆಲಸದಿಂದ ನಿಮಗೆ ಅಪವಾದವು ಕೇಳಿಬರುವುದು. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲೂ ಆಗದು. ಬೇರೆ ಬೇರೆ ಆಲೋಚನೆಯು ನಿಮ್ಮ ಕೆಲಸದ ವೇಗವನ್ನು ನಿಯಂತ್ರಿಸುವುದು. ಪ್ರೇಮವು ನಿಮಗೆ ವಿಘ್ನದಂತೆ ತೋರಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡುವರು. ಮಕ್ಕಳ ವಿಚಾರಕ್ಕೆ ಅಪಮಾನವನ್ನು ಎದುರಿಸಬೇಕಾಗಬಹುದು. ಸ್ವಯಂ ಸಾಮರ್ಥ್ಯವಿದ್ದಾಗ ಇನ್ನೊಬ್ಬರನ್ನು ಆಶ್ರಯಿಸುವುದು ಇಷ್ಟವಾಗದು. ಅವಕಾಶದಿಂದ ವಂಚಿತರಾದರೂ ಏನೂ ಅನಿಸದು. ಕೆಲವನ್ನು ಅಳೆದು ತೂಗಿ ಮಾತಾನಾಡಿದರೆ ಮಾತ್ರ ನೀವು ಎಲ್ಲರ ಜೊತೆ ಸೌಹಾರ್ದದಿಂದ ಇರಲು ಸಾಧ್ಯ. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ.

ವೃಶ್ಚಿಕ ರಾಶಿ :

ಹಲವು ದಿನಗಳ ಯೋಜನೆಯ ಮಥನದ ಅನಂತರ ಕಾರ್ಯರೂಪಕ್ಕೆ ಬರುವ ಸಂಭವವಿದೆ. ಯಾವುದಾದರೂ ಒಂದರಲ್ಲಿ ಪ್ರಾವೀಣ್ಯ ಪಡೆದುಕೊಳ್ಳಿ. ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಗೆಳೆಯರು ಮಾಡಿದ ತಮಾಷೆಯು ನಿಮಗೆ ಕಂಟಕವಾಗಬಹುದು. ನಿಮ್ಮ ಇಂದಿನ ಕೆಲಸವು ಆದರೂ ಅದಕ್ಕೆ ಹೆಚ್ಚು ಶ್ರಮ, ಸಮಯ ಎರಡನ್ನೂ ಕೊಡಬೇಕಾದೀತು. ಈ ದಿನವನ್ನು ಬಹಳ ಕಷ್ಟದಿಂದ ಕಳೆಯಬೇಕಾಗುವುದು. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಗಳೂ ಇರಲಿ. ಯಾರನ್ನಾದರೂ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಆರೋಗ್ಯಕರ ಆಹಾರ ವಿತರಕರಿಗೆ ಬೇಡಿಕೆ ಬರುವುದು. ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡಷ್ಟು ನಿಮ್ಮ ಕಾರ್ಯವು ಯಶಸ್ಸು ಪಡೆಯುವುದು. ಬಂಧುಗಳ ಮನೆಯಲ್ಲಿ ನೀವು ಸಂಭ್ರಮಿಸುವಿರಿ. ಇಂದಿನ ಕೆಲವು ಸಂದಿಗ್ಧವಾದ ಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯುವ ಅವಶ್ಯಕತೆ ಇದೆ.‌

ಧನು ರಾಶಿ :

ಬೇಡದೇ ಇದ್ದರೂ ಒತ್ತಾಯಕ್ಕೆ ಮಣಿದು ಮನೆಗೆ ಬೇಕಾದುದನ್ನು ಖರೀದಿಸುವಿರಿ. ಕೊಟ್ಟ ಕೆಲಸವನ್ನು ಶಿಸ್ತಿನಿಂದ ಮಾಡುವಿರಿ. ಅಲ್ಪ ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಅಧಿಕಾರ ಪ್ರಾಪ್ತಿಯ ಬೆನ್ನಲ್ಲೇ ಶತ್ರುಗಳನ್ನೂ ಕಟ್ಟಿಕೊಳ್ಳುವಿರಿ. ಹಿತಶತ್ರುಗಳಿಂದ ಎಚ್ಚರವಾಗಿರುವುದು ಅವಶ್ಯಕ. ಚಂಚಲ‌ವಾದ ಮನಸ್ಸು ನಿಮ್ಮ ಸಂಗತಿಯನ್ನು ಮರೆಮಾಚಿಸಬಹುದು. ಹೂಡಿಕೆಯಲ್ಲಿ ನಿಮಗೆ ಪೂರ್ಣ ಮನಸ್ಸು ಇರದು. ನಿಮ್ಮ ಮನಸ್ಸು ನಕಾರತ್ಮಕ ಚಿಂತನೆಯಲ್ಲಿಯೇ ಹೆಚ್ಚು ಇರಲಿದೆ. ಹಳೆಯ ಗೆಳತಿಯು ನಿಮ್ಮನ್ನು ಪುನಃ ಇಷ್ಟಪಡುವರು. ಯಾರದರೂ ನಿಮ್ಮ ಪರಿಚಿತರನ್ನುವಂತೆ ನಟಿಸಬಹುದು. ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ನಿಮಗೆ ಸಿಗಬೇಕಾದ ಫಲವು ಸಿಗದು. ಕಫಪ್ರಕೃತಿಯಿಂದ ಸಂಕಟವಾಗುವುದು. ಆಪ್ತರ ಜೊತೆ ವಿವಾದವಾಗಬಹುದು. ದಾಂಪತ್ಯಜೀವನವು ಅಲ್ಪ ಸರಸ ಸ್ವಲ್ಪ ವಿರಸದಿಂದಲೂ ಇರುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು.

ಮಕರ ರಾಶಿ :

ಇಂದು ಮಾತಿನಿಂದ ಹಲವರನ್ನು ರಂಜಿಸುವಿರಿ. ನಿಮಗೆ ಉದ್ಯೋಗದಿಂದ ನಿವೃತ್ತಿಯು ಬೇಕೆನಿಸಬಹುದು. ಮುಖಂಡರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗುವುದು. ಕಾರ್ಯದ‌ ಕಡೆ ಹೆಚ್ಚು ಗಮನವಿರಲಿ. ಯಾರಿಗೂ ಸಾಲವಾಗಿ ಹಣವನ್ನು ಕೊಡುವುದು ಬೇಡ. ಪುನಃ ಬರುತ್ತದೆ ಎಂಬ ನಿರೀಕ್ಷೆಯೂ ಬೇಡ. ಒತ್ತಡವು ಆಧಿಕವಾದರೆ ಎಲ್ಲಿಗಾದರೂ ಹೋಗಿ ಬನ್ನಿ. ಕೆಲವು ಜವಾಬ್ದಾರಿಗಳನ್ನು ಆಲೋಚಿಸಿ ಪಡೆಯುವುದು ಸೂಕ್ತ. ಬರವಣಿಗೆಯು ಸಣ್ಣ ಆದಾಯದ ಮೂಲವೂ ಅಸಗಬಹುದು. ಸ್ನೇಹಿತರ ಜೊತೆಗಿನ ಓಡಾಟದಿಂದ‌ ನಿಮ್ಮವರಿಗೆ ಅನುಮಾನವು ಬರಬಹುದು. ನೀವಾಡುವ ಮಾತು ಜವಾಬ್ದಾರಿಯುತ ಸ್ಥಾನದಿಂದ ಬರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬದ ವಿಚಾರವನ್ನು ನೀವೇ ಎತ್ತಿಕೊಂಡು ಕಲಹವನ್ನು ಸೃಷ್ಟಿಸಿ ಆಮೇಲೆ ಜಾರಿಕೊಳ್ಳುವಿರಿ. ಸಾಮಾನ್ಯರ ನಡುವೆ ಸಮಾನ್ಯರಂತೆ ವರ್ತಿಸಿ. ಉದ್ಯೋಗದ ಪ್ರಯತ್ನವು ಫಲಿಸುವುದು.

ಕುಂಭ ರಾಶಿ :

ಸೋಲಿಗೆ ಆತ್ಮಾವಲೋಕನ ಹಾಗೂ ಪ್ರತಿ ಹಂತದ ವಿಶ್ಲೇಷಣೆ ಅತ್ಯಗತ್ಯ. ಇಂದು ನಿಮಗೆ ಸಣ್ಣ ತಡೆಯೂ ದೊಡ್ಡದಾಗಿ ಕಾಣಿಸುವುದು. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಆರದ ಗಾಯಕ್ಕೆ ಮತ್ತಷ್ಟು ಬಿಸಿ ತಗುಲೀತು. ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು. ನಿಮಗೆ ಸಿಗಬೇಕೆಂದಿದ್ದರೆ ಅದನ್ನು ಬದಲಿಸಲಾಗದು. ಎಲ್ಲ ವಿಚಾರದಲ್ಲಿಯೂ ಗೊಂದಲವನ್ನು ಮಾಡಿಕೊಳ್ಳುವಿರಿ. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಹೊರಗಡೆ ವಿಶೇಷ ಭೋಜನಕ್ಕೆ ಇಂದು ಆಮಂತ್ರಣ ಬರುವುದು. ಮನಸ್ಸು ಬಹಳ ದುರ್ಬಲವಾಗಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೋಗದೇ ಕಾರ್ಯದಲ್ಲಿಯೇ ಹೆಚ್ಚು ತೊಡಗಿಕೊಳ್ಳುವರು. ಕುಟುಂಬದಲ್ಲಿ ನಿಮ್ಮ ಪಾತ್ರವನ್ನು ಗಮನನಿಸಿಕೊಳ್ಳಿ. ವಿಶ್ರಾಂತಿಯ ಅವಶ್ಯಕತೆ ಇರಲಿದೆ. ಯಾವ ಸಂದರ್ಭದಲ್ಲೂ ನೀವು ಸಹಾಯಕ್ಕೆ ಸಿಗುವಿರಿ. ಬಂಧುಗಳ ವಿಶ್ವಾಸವು ಇಂದು ಸಾಬೀತಾಗಬಹುದು.

ಮೀನ ರಾಶಿ :

ಹೇಳುದ್ದನ್ನೇ ಹೇಳುವುದು ನಿಮಗೂ ಕೇಳುಗರಿಗೂ ತ್ರಾಸಾಗಲಿದೆ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನಿಸುವುದು ಕಷ್ಟವೇ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ನಿಮಗೆ ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ ಸಹಕಾರದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ನಿಮಗೆ ಅಚ್ಚರಿಯನ್ನು ಉಂಟುಮಾಡಬಹುದು. ಕೆಲವರ ವ್ಯಕ್ತಿತ್ವವು ನೀವು ಅನುಸರಿಸುವಿರಿ. ಸೋಲಿಗೆ ಸರಿಯಾದ ಉತ್ತರದ ನಿರೀಕ್ಷೆ ಇರುವುದು. ನಿಮ್ಮ ಯೋಜನೆಯನ್ನು ಆಡಳಿತಕ್ಕೆ ಮನದಟ್ಟು ಮಾಡಬೇಕಾಗುವುದು. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ಭಾವನೆಗಳನ್ನು ಲೆಕ್ಕಿಸದೇ ಕೆಲಸದಲ್ಲಿ ಮಗ್ನರಾಗುವಿರಿ. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ. ಮಾಡಲೇಬೇಕಾದ ಕಾರ್ಯಗಳ‌ ಬಗ್ಗೆ ಹೆಚ್ಚು ಗಮನ ಅಗತ್ಯ. ಉದ್ಯೋಗದ ವೇಳೆ ಏಕಾಗ್ರತೆಗೆ ಭಂಗ ಬರಬಹುದು. ಎಲ್ಲದಕ್ಕೂ ಇನ್ನೊಬ್ಬರನ್ನು ಬೊಟ್ಟುಮಾಡಿ ತೋರಿಸುವುದು ಸರಿಯಾಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ.

– ಲೋಹಿತ ಹೆಬ್ಬಾರ್ – 8762924271 (what’s app only)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!