Horoscope: ಈ ರಾಶಿಯವರು ಹಣದ ಮೇಲೆ ಸ್ವಲ್ಪ ನಿಯಂತ್ರಣ ವಹಿಸಿಸುವುದು ಅವಶ್ಯಕ
ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಕಾರ್ಯ ಆರಂಭಿಸುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದು ಡಿಸೆಂಬರ್ 14 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.
ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 14) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಗುರುವಾರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಗಂಡ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:50 ರಿಂದ 08:14ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:39 ರಿಂದ 11: 03ರ ವರೆಗೆ.
ಧನು ರಾಶಿ : ನಿಮ್ಮ ಆಸೆಗಳನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ. ದಾನದಿಂದ ನಿಮಗೆ ಮನಶ್ಶಾಂತಿಯು ಸಿಕ್ಕಂತಾಗುವುದು. ಸಂಬಂಧಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವಿರಿ. ಬಾಕಿ ಇರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತವೆ. ನಿಮ್ಮ ಪ್ರೇಮವು ವಿಪರೀತ ಗೊಂದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ಕಾರ್ಯಗಳನ್ನು ಪರೀಕ್ಷಿಸಿಕೊಂಡು ಮುಂದೆಸಾಗಿರಿ. ಇಲ್ಲವಾದರೆ ಕುರುಡನು ಹಗ್ಗವನ್ನು ಹೊಸೆದಂತೆ ಆದೀತು.
ಮಕರ ರಾಶಿ : ವಾಕ್ಸಮರವನ್ನು ಎಲ್ಲರ ಜೊತೆಯೂ ಮಾಡುವಿರಿ. ನಿಮಗೆ ಉತ್ತೇಜನ ಕೊಡದೇ ಕಾರ್ಯಗಳು ನಿಧಾನವಾಗುವುದು. ಸಾಲ ಮಾಡುವ ವಿಚಾರವು ನಿಮಗೆ ಕಹಿಯಾಗಬಹುದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ವಿದ್ಯಾರ್ಥಿಗಳಿಗೆ ಅಭ್ಯಾಸವು ಬಹಳ ಕಷ್ಟಕರ ಎನಿಸಬಹುದು. ಉತ್ಪಾದನೆಯಲ್ಲಿ ಕುಂಟಿತವಾಗಲಿದೆ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು.
ಕುಂಭ ರಾಶಿ : ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಮಕ್ಕಳಿಗೆ ಭವಿಷ್ಯದ ಬಗ್ಗೆ ಕಲ್ಪನೆಯನ್ನು ಕೊಡುವಿರಿ. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಕೆಲವನ್ನು ನೀವೇ ಮೈಮೇಲೆ ಹಾಕಿಕೊಂಡು ಸಂಕಟಪಡುವಿರಿ. ಕರ್ತವ್ಯದ ಕಡೆ ಗಮನ ಕೊಡಿ.
ಮೀನ ರಾಶಿ : ಉದ್ಯಮದಲ್ಲಿ ಸಾಧಿಸಬೇಕಾದರೆ ಸಂದರ್ಭಕ್ಕೆ ತಕ್ಕಂತೆ ಆಲೋಚನೆಗಳನ್ನು ಬದಲಾಯಿಸಿ. ನಿಮ್ಮ ವೇಗದ ಕ್ರಿಯೆಯು ಗೊಂದಲಕ್ಕೆ ಸಿಕ್ಕಿಸಬಹುದು. ಮೌಲ್ಯಯುತವಾದ ವಸ್ತುವೊಂದನ್ನು ಖರೀದಿಸುವಿರಿ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ನಿಮ್ಮ ಮನೋವೇಗವು ಕಾರ್ಯಕ್ಕೆ ಹೆಚ್ಚು ಪುಷ್ಟಿಯನ್ನು ನೀಡುವುದು. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪಾಲದಾರಿಕೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡಲಾರಿರಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕಾರ್ಯವು ಸಲೀಸಾಗಿ ಆಗುವುದು.
-ಲೋಹಿತ ಹೆಬ್ಬಾರ್ – 8762924271 (what’s app only)