Horoscope 25 Nov: ದಿನಭವಿಷ್ಯ, ಉದ್ಯಮದಲ್ಲಿ ಬರುವ ವಿಘ್ನಗಳನ್ನು ಅನಾಯಾಸವಾಗಿ ಎದುರಿಸುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 25, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 25 Nov: ದಿನಭವಿಷ್ಯ, ಉದ್ಯಮದಲ್ಲಿ ಬರುವ ವಿಘ್ನಗಳನ್ನು ಅನಾಯಾಸವಾಗಿ ಎದುರಿಸುವಿರಿ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 25 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:29 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:45 ರಿಂದ 03:10ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:39 ರಿಂದ 08:04ರ ವರೆಗೆ.

ಮೇಷ ರಾಶಿ: ಕಛೇರಿಯಲ್ಲಿ ನಿಮಗೆ ಆದ ಅಸಮಾಧಾನವನ್ನು ಹೊರಹಾಕುವಿರಿ. ಎಲ್ಲರ‌ ಮಾತುಗಳನ್ನು ನೀವು ನಕಾರಾತ್ಮಕವಾಗಿಯೇ ಸ್ವೀಕರಿಸುವಿರಿ. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ಕೋಪಗೊಳ್ಳುವ ಸಂದರ್ಭದಲ್ಲಿ ನೀವು ನಿಯಂತ್ರಣವನ್ನು ಕಳೆದುಕೊಳ್ಳುವಿರಿ. ನಿಮ್ಮವರನ್ನು ನೀವು ಬಿಡುವಿರಿ.‌ ಸಂಗಾತಿಯನ್ನು ನೀವೇ ಬೇಡದ ಮಾತುಗಳಿಂದ ಬೇಸರಿಸಿ ಅನಂತರ ಬೆಣ್ಣೆ ಸವರುವಿರಿ. ಇಂದು ನಿದ್ರೆಯನ್ನು ಅಧಿಕವಾಗುವುದು. ಸಹೋದರರ ಜೊತೆಗಿನ ಮಾತುಕತೆ ಸಂತಸವನ್ನು ಕೊಡಬಹುದು. ನೌಕರರಿಂದ ನಿಮ್ಮ ಕೆಲಸವು ಅನಾಯಾಸವಾಗಿ ಮುಗಿಯುವುದು. ದೂರದ ಗೆಳೆಯರು ನಿಮಗೆ ಸಹಾಯ ಮಾಡರು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ಸ್ನೇಹಿತರ‌ ಜೊತೆ ಸುತ್ತಾಟ ಮಾಡುವಿರಿ.

ವೃಷಭ ರಾಶಿ: ಹಲವು ದಿನಗಳ ಬೇಡಿಕೆಯು ಈಡೇರಬಹುದು. ಪ್ರತ್ಯಕ್ಷವಾಗಿ ಕಂಡರೂ ನಂಬಿಕೆ ಬಾರದು. ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಸಂಗಾತಿಗೆ ಹೇಳಬೇಕಾದುದನ್ನು ಹೇಳಲಾಗದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ವಿಜಯ ಪ್ರಾಪ್ತಿ. ಚಿತ್ತವನ್ನು ದೃಢವಾಗಿ ಇಟ್ಟುಕೊಳ್ಳಬೇಕಾಗುವುದು. ಹಳೆಯ ಖಾಯಿಲೆಯಿಂದ ಮತ್ತೆ ಸಂಕಟವಾಗಲಿದೆ. ಹೊಸಬರ ಪರಿಚಯವು ನಿಮ್ಮಲ್ಲಿ ಪರಿವರ್ತನೆ ಮಾಡಿಸುವುದು. ಮುಖ್ಯಸ್ಥರಾಗಿದ್ದು ಯಾರ ವಿಚಾರದಲ್ಲಿಯೂ ಪಕ್ಷಪಾತವನ್ನು ಮಾಡುವುದು ಯೋಗ್ಯವಲ್ಲ. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕೆನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳುವಿರಿ.

ಮಿಥುನ ರಾಶಿ: ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ಕಾರಣ ಬೇಕಾದೀತು.‌ ಕಳ್ಳರ ಭೀತಿಯು ಕಾಡಬಹುದು. ಅಧಿಕಾರಿಗಳಿಂದ ನಿಮಗೆ ಒತ್ತಡವು ಬಂದು ಯಾವ ಕೆಲಸವನ್ನೂ ಪೂರ್ಣ ಮಾಡಲಾಗದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳನ್ನು ನೀವು ಮರೆಯುವಿರಿ. ನಿಮ್ಮವರೇ ಆದರೂ ಕಳೆದುಕೊಂಡ ನಂಬಿಕೆಯನ್ನು ಮತ್ತೆ ತೋರಿಸಲಾರಿರಿ. ಹೊಸತನ್ನು ಕಲಿಯುವ ಆಸೆಯು ಇಲ್ಲವಾಗುವುದು. ಮಾತನ್ನು ಮಿತವಾಗಿ ಆಡಿ. ನಿಮ್ಮದೇ ಚಿಂತನೆಯನ್ನು ಕಾರ್ಯದಲ್ಲಿ ಪ್ರಯೋಗಿಸುವಿರಿ. ಯಾರ ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು. ನಿಮ್ಮ ಹುದ್ದೆಯು ಏರುವ ಸಾಧ್ಯತೆ ಇದೆ.

ಕಟಕ ರಾಶಿ: ಹಿರಿಯರಿಂದ ನಿಮಗೆ ಕೆಲವು ಮಾತುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಇಂದು ನಿಮಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಇಷ್ಟವಾಗದು. ನಂಬಿಕೆಯನ್ನು ನೀವು ಕಳೆದುಕೊಳ್ಳಬೇಕಾಗುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ‌ ಮೌನವಾಗಿ ಇರುವಿರಿ. ವಿವಾಹಕ್ಕಾಗಿ ಬಹಳ ಶ್ರಮವಹಿಸಬೇಕಾದೀತು. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಸಕಾರಾತ್ಮಕ ಚಿಂತನೆಯನ್ನು ಮಾಡಲು ಕಷ್ಟವಾದೀತು.

ಸಿಂಹ ರಾಶಿ: ಕೈಯ್ಯಲ್ಲಿ ಹಣವಿಲ್ಲದೇ ಯಾರನ್ನಾದರೂ ಕೇಳಬೇಕಾದೀತು. ಯಾರಿಂದಲಾದರೂ ಮಾನಸಿಕವಾಗಿ ಕಿರುಕುಳ ಉಂಟಾಗಬಹುದು. ಅದನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯ ವಿಧಾನವನ್ನು ರೂಪಿಸಿಕೊಳ್ಳುವಿರಿ. ದೇಹಕ್ಕೆ ಯೋಗ್ಯವಲ್ಲದ ಆಹಾರದ ಸ್ವೀಕಾರದಿಂದ ನಿಮಗೆ ತೊಂದರೆಯಾದೀತು. ಸಹೋದರಿಯ ಜೊತೆ ಮನೆಗೆ ಸಂಬಂಧಿಸಿದಂತೆ ಮಾತಾಗಬಹುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸಾಧ್ಯವಾಗಬಹುದು. ನಿಮ್ಮ ಅಸಹಜ ವರ್ತನೆಯಿಂದ ಸಂಗಾತಿಗೆ ಸಿಟ್ಟು ಬರಬಹುದು. ನಿಮ್ಮ‌ ದುರಭ್ಯಾಸವು ಗೊತ್ತಾದೀತು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಾಯುತ್ತಿರುವಿರಿ. ನಿಮ್ಮ ನಕಾರಾತ್ಮಕ ವರ್ತನೆಯ ಬಗ್ಗೆ ಯಾರಾದರೂ ಹೇಳಿಯಾರು. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗಿರುವಿರಿ. ಕೆಲವು ವಿಚಾರಗಳನ್ನು ಬೇಕೆಂದೇ ನಿರ್ಲಕ್ಷ್ಯಿಸಿ ಅವಕಾಶದಿಂದ ವಂಚಿತರಾಗುವಿರಿ.

ಕನ್ಯಾ ರಾಶಿ: ವಸ್ತುಗಳ ವಿನಿಮಯವನ್ನು ಮಾಡಿಕೊಳ್ಳುವಿರಿ. ಕೃಷಿಗೆ ಕೆಲವು ಉಪಯುಕ್ತ ಅಂಶಗಳನ್ನು ಪಡೆಯುವಿರಿ. ಅಸೂಯೆಯಿಂದ ಏನನ್ನೋ ಸಾಧಿಸಲು ಹೋಗುವಿರಿ. ಅತಿಯಾದ ಆತ್ಮವಿಶ್ವಾಸವೇ ನಿಮ್ಮನ್ನು ಕೆಳಗಿಳಿಸಬಹುದು. ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ನಿಮ್ಮ ದೌರ್ಬಲ್ಯಗಳು ನಿಮ್ಮ ಯಶಸ್ಸನ್ನು ಕಟ್ಟಿಹಾಕಬಹುದು. ವಿದ್ಯಾರ್ಥಿಗಳು ಆಲಸ್ಯದಿಂದ ಇರುವರು. ಇನ್ನೊಬ್ಬರ ಚಿಂತನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗಿ. ನಿಮಗೆ ಗೊತ್ತಿರುವ ಕಾರ್ಯಕುಶಲತೆಯನ್ನು ಮೆಚ್ಚುಬರು. ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡಬೇಕಾದೀತು. ಸಂಗಾತಿಗೆ ನಿಮ್ಮಿಂದ ಅಪರೂಪದ ಉಡುಗೊರೆಯು ಸಿಗಲಿದೆ.‌ ಚಾಲನೆಯು ಜಾಗರೂಕತೆಯಿಂದ ಇರಲಿ.

ತುಲಾ ರಾಶಿ: ಮನೆಯ ಶುಭ ಕಾರ್ಯದಲ್ಲಿ ನೀವು ಬಹಳ ಖುಷಿಯಿಂದ ಇರುವಿರಿ. ಕಲ್ಪನಾಲೋಕದಿಂದ ಹೊರಬಂದು ವಾಸ್ತವದಲ್ಲಿ ಇರಿ. ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿರುವಂತೆ ಭಾಸವಾಗುವುದು. ನೆರೆಯರ ಜೊತೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಿರಿ. ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ವ್ಯವಹಾರದಲ್ಲಿ ಅಡೆತಡೆಯಾಗಬಹುದು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಅವಲೋಕಿಸಿ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ನಿಂದನೆಯ ಮಾತುಗಳು ಕೇಳಿಸಬಹುದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ.‌ ನಿಮ್ಮ‌ ನಿಶ್ಚಿತ ಬುದ್ಧಿಯು ಬರುವ ಸಮಸ್ಯೆಗಳನ್ನು ಎದುರಿಸುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ವೃದ್ಧಿಯಾಗುವುದು. ‌ದಿನದ ಕಾರ್ಯವನ್ನು ಬದಲಾಯಿಸಿಕೊಳ್ಳುವಿರಿ. ಬೇಕಾದುದನ್ನು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಉದ್ಯಮದಲ್ಲಿ ಬರುವ ವಿಘ್ನಗಳನ್ನು ಅನಾಯಾಸವಾಗಿ ದೂರಮಾಡಿಕೊಳ್ಳುವಿರಿ. ಇನ್ನೊಬ್ಬರ ವಿಚಾರಗಳಿಗೆ ಮೂಗುತೂರಿಸಲಿದ್ದೀರಿ. ನಿಮ್ಮದೊಂದೇ ಶ್ರೇಷ್ಠ ಎಂಬ ಭಾವನೆಯು ಬರುವುದು. ಯಾರನ್ನೋ ಉತ್ತೇಜಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕೆಲವರು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ಮನಸ್ಸು ಚಂಚಲವಾದ್ದರಿಂದ ಕ್ಷಣಕ್ಕೊಂದು ಆಲೋಚನೆ ಬರಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸ ಹೋಗುವಿರಿ. ಸಂಗಾತಿಗೆ ಪೆಟ್ಟುಗಳು ಆಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಧನವ್ಯಯವಾಗುವುದು. ರಾಜಕೀಯದಲ್ಲಿ ಕೆಲವು ಬದಲಾವಣೆಯನ್ನು ನೀವು ನಿರೀಕ್ಷಿಸಬಹುದು. ಮಕ್ಕಳಿಗೆ ಬೇಕಾದುದನ್ನು ಕೊಡಿಸಬೇಕಾದೀತು. ಮನೆಯ ಬಗ್ಗೆಯೇ ಆಲೋಚನೆ ಇರುವ ಕಾರಣ ಕಛೇರಿಯಲ್ಲಿ ಕೆಲಸದ ಮನಃಸ್ಥಿತಿ ಇರದು.

ಧನು ರಾಶಿ: ಪ್ರಯಾಣ ಮಾಡುವಾಗ ಜಾಗರೂಕತೆ ಮುಖ್ಯವಾಗಿರಲಿ. ಆರ್ಥಿಕತೆಯು ಸ್ವಲ್ಪ ಚೇತರಿಕೆಯಾಗಲಿದೆ. ಸಮಾರಂಭಗಳಿಗೆ ಭೇಟಿ ಕೊಡುವ ಸಂದರ್ಭವು ಬರಬಹುದು. ನಿಮ್ಮ ದಿನಚರಿಯು ಬದಲಾಗಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮವು ಉಂಟಾಗಬಹುದು. ನೀವು ಇಂದು ಆರಂಭಿಸಿದ ಕೆಲಸವು ಪೂರ್ಣ ಆಗುವವರೆಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಸಂಗಾತಿಯ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಎಂಬ ಮನಸ್ಸಾದೀತು. ವಿದೇಶದ ಸ್ನೇಹಿತರ ಪರಿಚಯವನ್ನು ಮಾಡಿಕೊಳ್ಳುವಿರಿ. ಹಿತಶತ್ರುಗಳು ನಿಮ್ಮ ಮನಸ್ಸಿನ ಜೊತೆ ಆಟವಾಡಬಹುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಕೇಳಿ ಪಡೆದುಕೊಳ್ಳಬೇಕಾದೀತು. ಯಾರ ಮೇಲೂ ದೋಷಾರೋಪವನ್ನು ಮಾಡುವಿರಿ. ನೀವು ಇಂದು ಕೆಲವರಿಗೆ ಅಪ್ರಾಮಾಣಿಕರಂತೆ ಕಾಣಿಸುವಿರಿ.

ಮಕರ ರಾಶಿ: ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ನಂಬಿಕೆಯು ಬಲವಾಗುವ ಸನ್ನಿವೇಶವು ಕಾಣಿಸಿಕೊಳ್ಳುವುದು. ಸಂಗಾತಿಯ ಸ್ಪಂದನೆಯಿಂದ ಉತ್ಸಾಹವು ಅಧಿಕವಾಗುವುದು.‌ ಆಪ್ತರ ಸಲಹೆಯನ್ನು ನಿರಾಕರಿಸುವಿರಿ. ಯಾರನ್ನಾದರೂ ದ್ವೇಷಿಸುವ ಮನೋಭಾವವು ಬರುವ ಸಾಧ್ಯತೆ ಇದೆ. ನಿಮ್ಮ ಒರಟುತನವು ನಿಮಗೆ ಮುಳುವಾಗಬಹುದು. ದೇಹದ ನಾನಾ ಭಾಗಗಳಲ್ಲಿ ನೋವುಗಳು ಕಾಣಿಸಿಕೊಳ್ಳುವುದು. ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಇಂದು ಮಾಡಿಕೊಳ್ಳಲಾಗದು. ಇನ್ನೊಬ್ಬರ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿಕೆ ಇರುವುದು. ಆರ್ಥಿಕ ಹಾಗೂ ಸಮಯದ ನಷ್ಟದಿಂದಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಕಾಯುತ್ತಿರಬೇಕಾದೀತು. ವಾಹನದ ನಷ್ಟವು ನಿಮಗೆ ಹೊರೆಯಾಗುವುದು.

ಕುಂಭ ರಾಶಿ: ನಿಮ್ಮ ಒಳ ಗುಟ್ಟನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ನಿಮ್ಮ ಊಹೆಯು ವ್ಯತ್ಯಾಸವಾಗಿ ಅನ್ಯರಿಂದ ಅಪಮಾನವಾಗಬಹುದು. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವಿರಿ. ಆಸ್ತಿಯ ಖರೀದಿಯಲ್ಲಿ ಗೊಂದಲ ಇರುವುದು. ಆದಾಯದ ಮೂಲವನ್ನು ಬಲಪಡಿಸಿಕೊಳ್ಳಬೇಕಾದೀತು. ಇನ್ನೊಬ್ಬರ ಅಪ್ರಯೋಜಕ ಸಲಹೆಗೆ ಕಿವಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವಿರಿ. ಮಕ್ಕಳ ಬಗ್ಗೆ ಪ್ರೀತಿ ಇರಲಿ. ಸ್ತ್ರೀಯರ ಬಳಿ ವಿನಂತಿ ಮಾಡಿಕೊಂಡು ಸಹಾಯವನ್ನು ಪಡೆದಯುವಿರಿ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಒಂಟಿಯಾಗಿ ಸುತ್ತಾಡುವಿರಿ. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬಂದು ವಾಗ್ವಾದವೂ ಆಗಬಹುದು. ಉನ್ನತಮಟ್ಟದಲ್ಲಿ ಅಧಿಕಾರಿಗಳ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು.

ಮೀನ ರಾಶಿ: ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುವುದು. ದುಡುಕಿ ಕೆಲವು ಸಂದರ್ಭಗಳನ್ನು ಹಾಳುಮಾಡಿಕೊಳ್ಳುವುದು ಬೇಡ. ದೇಹದ ಆಲಸ್ಯವನ್ನು ಬಿಡವುದು ನಿಮಗೆ ಇಂದು ಸುಲಭವಾಗದು. ಇಂದು ನಿಮ್ಮ ಅನೇಕ‌ ದಿನಗಳ ಬಯಕೆಯನ್ನು ಪೂರ್ಣ ಮಾಡಿಕೊಳ್ಳುವ ಸಂದರ್ಭವು ಬರಬಹುದು. ರಕ್ಷಣಾವ್ಯವಸ್ಥೆಯಲ್ಲಿ ಇರುವವರಿಗೆ ಉನ್ನತ ಸ್ಥಾನವು ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಮನೆಯಿಂದ ದೂರವಿರಬೇಕಾಗಿ ಬರಬಹುದು. ಅನ್ಯರ ವಿಷಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಆರ್ಥಿಕತೆಯ ಕಾರಣದಿಂದ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಆಪ್ತರಿಂದ ಧನಸಹಾಯವನ್ನೂ ಬಯಸುವಿರಿ. ವಿವಾಹಕ್ಕೆ ತೊಂದರೆಯಾದ ವಿಷಯವನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ. ಮಾತಿನಲ್ಲಿ ತೂಕವಿರಲಿ.

-ಲೋಹಿತಶರ್ಮಾ – 8762924271 (what’s app only)