Horoscope 27 Nov: ದಿನಭವಿಷ್ಯ, ನಿಮ್ಮವರೇ ನಿಮಗೆ ವಂಚನೆ ಮಾಡುವರು, ಆಸ್ತಿ ರಕ್ಷಣೆ ಅನಿವಾರ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 27, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 27 Nov: ದಿನಭವಿಷ್ಯ, ನಿಮ್ಮವರೇ ನಿಮಗೆ ವಂಚನೆ ಮಾಡುವರು, ಆಸ್ತಿ ರಕ್ಷಣೆ ಅನಿವಾರ್ಯ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 27 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶಿವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:05 ರಿಂದ 09:30ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:55 ರಿಂದ 12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:45 ರಿಂದ 03:10ರ ವರೆಗೆ.

ಮೇಷ ರಾಶಿ: ಅಸಂತೋಷವು ನಿಮ್ಮನ್ನು ಕಾಡುವುದು. ಸುಮ್ಮನೆ ಕುಳಿತರೆ ಒಂದಿಲ್ಲೊಂದು ಚಿಂತೆಯು ಕಾಡುವುದು. ಇಂದು ನೀವು ನಿಮ್ಮ ಉದ್ದೇಶಿಸಿದ್ದಕ್ಕಿಂತ ಅಧಿಕ ಮುನ್ನಡೆ ಸಾಧಿಸುವಿರಿ. ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳದೇ ಕಾರ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ನಿಮ್ಮವರೇ ನಿಮಗೆ ವಂಚನೆ ಮಾಡುವರು. ಆಲಸ್ಯದಿಂದ ಹೊರ ಬಂದು ಉಪಯುಕ್ತವಾದುದನ್ನು ಮಾಡಲು ಪ್ರಯತ್ನಿಸಿ.

ವೃಷಭ ರಾಶಿ: ಅತಿಯಾದ ಆತ್ಮವಿಶ್ವಾಸವೇ ನಿಮಗೆ ಮುಳುವಾದೀತು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳಿಗೆ ಆಡಿ. ಉತ್ಸಾಹದಿಂದ ಏನನ್ನಾದರೂ ಮಾಡಿಕೊಳ್ಳಲು ಹೋಗುವುದು ಬೇಡ. ಗೊತ್ತಿಲ್ಲದ ಕೆಲಸವನ್ನೂ ಮಾಡಲು ಹೋಗುವಿರಿ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು. ಇಂದು ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳುವಿರಿ.

ಮಿಥುನ ರಾಶಿ: ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಪ್ರೀತಿಯು ಉಂಟಾಗಬಹುದು. ನೆರೆಯವರ ಜೊತೆ ಸೌಹಾರ್ದ ಮಾತುಕತೆ ಇರಲಿ. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಹಣವನ್ನು ಯಾರಿಗಾದರೂ ಸಲಾವಾಗಿ ಕೊಡುವಾಗ ನೋಡಿಕೊಳ್ಳಿ.

ಕಟಕ ರಾಶಿ: ಆದಾಯದಲ್ಲಿ ತೊಂದರೆಯಾಗಲಿದೆ. ಪ್ರೇಮವು ಪರಿವರ್ತನೆಯಾಗಬಹುದು. ಬಾಂಧವರಲ್ಲಿ ಆಪ್ತತೆ ಹೆಚ್ಚಗುವುದು. ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಇತ್ತೀಚಿನ ಕೆಲವು ಸ್ಥಿತಿಗಳು ಒತ್ತಡವನ್ನು ತಂದಿರಬಹುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಕಳೆದುಕೊಂಡದ ವಸ್ತುವಿನ ಬಗ್ಗೆ ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ. ಬಿಡುವಿನ ಸಮಯವನ್ನು ಅಧಿಕ ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ನಿಮ್ಮ ಸಹಜತೆಯು ಮರೆಯಾಗುವುದು.

ಸಿಂಹ ರಾಶಿ: ಉನ್ನತ ಪದವೀಧರರಿಗೆ ಉದ್ಯೋಗ ಸಿಗದೇ ಆತಂಕ ಕಾಡಬಹುದು. ಯಾರ ಬಗ್ಗೆಯಾದರೂ ಗೊತ್ತಿದ್ದರಷ್ಟೇ ಮಾತನಾಡಿ. ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ಕೆಲವನ್ನು ನೀವು ನಿರ್ಲಕ್ಷಿಸುವುದೇ ಸೂಕ್ತ. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಖರ್ಚು ಮಾಡುವ ಅನಿವಾರ್ಯತೆಯು ಬರಬಹುದು. ಸಂಗಾತಿಯ ಕಡೆಯಿಂದ ನಿಮಗೆ ಹೊಗಳಿಕೆ ಇರುವುದು. ನಿಮ್ಮ ಪ್ರಯತ್ನವು ಸಫಲವಾಗುವುದು.

ಕನ್ಯಾ ರಾಶಿ: ಸ್ತ್ರೀಯರು ಅನ್ಯರ ಜೊತೆ ವಾಗ್ವಾದ ಮಾಡುವಿರಿ‌. ನಿಮ್ಮದೆಂದು ಯಾರದೋ ವಸ್ತುಗಳನ್ನು ನೀವು ಬಳಸುವಿರಿ. ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಚಾತುರ್ಯದಿಂದ ನಡೆದ ಘಟನೆಯು ನಿಮ್ಮನ್ನು ಕಾಡಬಹುದು. ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟವಾಗುವುದು. ಮಾತನಾಡವೇಕಾದ ಸಂಧರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕುವಷ್ಟು ಮಾತ್ರ ಸಿಗುವುದು. ನಿರುಪಯುಕ್ತ ವಸ್ತುಗಳನ್ನು ಇಂದು ನೀವು ಬೇರೆಯವರಿಗೆ ಕೊಡುವಿರಿ. ಮನೋರಂಜನೆಗಾಗಿ ಹಣವನ್ನು ಖರ್ಚು ಮಾಡುವಿರಿ.

ತುಲಾ ರಾಶಿ: ಯಾರದೋ ಮಾತಿನಿಂದ ಶುಭ ಕಾರ್ಯಕ್ಕೆ ಚಾಲನೆ ನೀಡುವುದು ಬೇಡ. ಸರಿಯಾದ ವ್ಯಕ್ತಿಗಳ ಸಂಪರ್ಕವನ್ನು ಮಾಡಿ. ಇಂದು ವಿಶ್ರಾಂತಿಯು ಕಡಿಮೆ‌ ಆದಂತೆ ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು. ಇನ್ನೊಬ್ಬರ ಬಳಿ ಇರುವ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ಮನೆಯವರ ಜೊತೆ ಸಮಯವನ್ನು ನೀವು ಕಳೆಯಬೇಕು ಎನ್ನಿಸಬಹುದು. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ತಪ್ಪನ್ನು ಸರಿ ಮಾಡಿಕೊಂಡು ಮುನ್ನಡೆಯುವಿರಿ.

ವೃಶ್ಚಿಕ ರಾಶಿ: ಜಾಣ್ಮೆಯಿಂದ ಕೆಲಸ ಮಾಡುವ ವಿಧಾನವನ್ನು ಕಲಿಯುವುದು ಉತ್ತಮ. ಒಂದೇ ಕಾರ್ಯದಿಂದ ಅಧಿಕ ಲಾಭವನ್ನು ಪಡೆಯುವ ಬಗ್ಗೆ ಯೋಚಿಸಿ. ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಫಲತೆಯನ್ನು ಕಾಣುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಕೆಲಸವು ನಿಧಾನವಾಗುವುದು. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು.

ಧನು ರಾಶಿ: ನ್ಯಾಯಾಲಯದಲ್ಲಿ ಮತ್ತೆ ಹೊಸ ದೂರುಗಳನ್ನು ಎದುರಿಸಬೇಕಾದೀತು. ನಿಮ್ಮನ್ನು ನೆಮ್ಮದಿಯಿಂದ ಇರಲು ಶತ್ರುಗಳು ಬಿಡಲಾರರು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು. ಹಣಕಾಸಿನ‌ ವಿಚಾರದಲ್ಲಿ ತಿಳಿದು ವ್ಯವಹರಿಸಿ. ನಿಮ್ಮ‌ ಭವಿಷ್ಯವನ್ನು ಮಿತ್ರರ ಜೊತೆ ಹಂಚಿಕೊಂಡು ಸಂತೋಷಪಡುವಿರಿ.

ಮಕರ ರಾಶಿ: ಋಣದಿಂದ ಮುಕ್ತರಾಗಲು ದೇವರ ಮೊರೆ ಹೋಗುವಿರಿ. ಕೆಲವರ ಮಾತು ನಿಮಗೆ ಕಹಿಯಾದೀತು. ಗೌಪ್ಯ ಸ್ಥಳದಲ್ಲಿ ತೊಂದರೆ ಕಾಣಿಸಿಕೊಂಡೀತು. ನಿಮ್ಮ ಆಸಕ್ತಿಯು ಹೊಸ ಕ್ರಮದ ಹಾದಿಯಲ್ಲಿ ತೋರಿಸಬಹುದು, ನಿಮ್ಮ ಆಲೋಚನೆಗಳನ್ನು ಸರಿಯಾದ ಕಡೆ ವ್ಯಕ್ತಪಡಿಸಿ. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ. ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಧವಿಧವಾದ ಔಷಧೋಪಚಾರಗಳನ್ನು ಮಾಡುವಿರಿ. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ಮಾತುಗಳನ್ನು ಅಲ್ಲಗಳೆಯಲಾರಿರಿ.

ಕುಂಭ ರಾಶಿ: ಮನೋವೇಗವನ್ನು ನೀವು ನಿಯಂತ್ರಿಸುವ ಅವಶ್ಯಕತೆ ಇದೆ. ಕಲ್ಪನೆಯನ್ನು ಪ್ರಯೋಗಕ್ಕೆ ಅಳವಡಿಸಲಾಗದು. ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಮಿತ್ರರ ಸಹಾಯದಿಂದ ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಪ್ರೀತಿಪಾತ್ರರ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ. ಕಡಿಮೆ ಖರ್ಚಿನಲ್ಲಿ ಇಂದಿನ ಕಾರ್ಯವು ನೋಡಿಕೊಳ್ಳಿ. ಸ್ವಯಾರ್ಜಿತ ಆಸ್ತಿಯ ಮೇಲೆ ಇತರರ ಕಣ್ಣು ಬೀಳಬಹುದು. ಉತ್ಸಾಹವನ್ನು ನಿಮ್ಮವರ ಚುಚ್ಚು ಮಾತು ಕಡಿಮೆ ಮಾಡಬಹುದು. ಮಾತನಾಡಿ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ.

ಮೀನ ರಾಶಿ: ಸಣ್ಣ ವ್ಯಾಪಾರದವರಿಗೆ ಲಾಭವಾಗುವುದು. ವೃತ್ತಿಯನ್ನು ಕಿರಿಕಿರಿಯನ್ನು ತಪ್ಪುಸಿಕೊಳ್ಳಲು ಮಾತನಾಡದೇ ಸುಮ್ಮನಿರುವುದು ಉಚಿತ. ಇಂದು ಕೌಂಟುಬಿಕ ವ್ಯವಹಾರದಲ್ಲಿ ಮಹತ್ತ್ವದ ತಿರುವು ಸಿಗುವುವುದು. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಪಾಲುದಾರಿಕೆಯಲ್ಲಿ ಉಂಟಾದ ಗೊಂದಲ್ಲವನ್ನು ಸರಿ ಮಾಡಿಕೊಂಡೂ ಮೈತ್ರಿ ಮಾಡಿಕೊಂಡಲ್ಲಿ ಇಬ್ಬರಿಗೂ ಅನುಕೂಲವಿದೆ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಇಂದು ಮಾಡಿಕೊಳ್ಳಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ಹಿರಿಯರ ಮಾರ್ಗದರ್ಶನವನ್ನು ಅಲ್ಲಗಳೆಯುವಿರಿ. ಸೌಲಭ್ಯಗಳನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ.

ಲೋಹಿತಶರ್ಮಾ – 8762924271 (what’s app only)