ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಕೆಲಸ, ವ್ಯವಹಾರ, ವಹಿವಾಟುಗಳು, ಕುಟುಂಬ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ ಮತ್ತು ದಿನವಿಡೀ ನಡೆಯುವ ಮಂಗಳಕರ ಮತ್ತು ಅಶುಭ ಘಟನೆಗಳ ಬಗ್ಗೆ ಇಂದಿನ (2023 ಡಿಸೆಂಬರ್ 07) ಭವಿಷ್ಯದಲ್ಲಿ ತಿಳಿಯಿರಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದಶಮಿ, ನಿತ್ಯನಕ್ಷತ್ರ: ಹಸ್ತಾ, ಯೋಗ: ಆಯುಷ್ಮಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:13 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ 08:11ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:35 ರಿಂದ 10:59ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಮನೋಭಿಲಾಷೆಯನ್ನು ಪ್ರಕಟಿಸುವಿರಿ. ಯಾರನ್ನಾದರೂ ಕಡೆಗಣಿಸುವ ಅವಶ್ಯಕತೆ ಇಲ್ಲ. ಬೇಕಾದಲ್ಲಿಗೆ ಜೋಡಿಸಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು. ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ಇಷ್ಟದವರ ಮಾತಿನಿಂದ ಮನಸ್ಸಿನ ಭಾರವು ದೂರಾಗುವುದು. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು. ಕಛೇರಿಯ ಕೆಲಸದಲ್ಲಿ ನಾನಾ ಕಾರಣಗಳಿಂದ ನಿಧಾನವಾಗಲಿದೆ. ಕೃಷಿಯಲ್ಲಿ ನೀವು ಹೆಚ್ಚು ಪ್ರಗತಿಯನ್ನು ಸಾಧಿಸುವ ಮನಸ್ಸು ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ ಇಂದು ಸಂತೋಷವು ಇರಲಿದೆ. ಅನುಕಂಪದಿಂದ ಏನನ್ನಾದರೂ ಸಾಧಿಸಿಕೊಳ್ಳುವಿರಿ.
ವೃಷಭ ರಾಶಿ: ಬಿಚ್ಚು ಮನಸ್ಸಿನಿಂದ ನೀವು ಆಡಬಾರದ ಮಾತುಗಳನ್ನು ಆಡುವಿರಿ. ವಸ್ತುಗಳ ರಕ್ಷಣೆಯ ವಿಚಾರದಲ್ಲಿ ನೀವು ಕಾಳಜಿ ಸಾಲದು. ಸಾಹಿತ್ಯಾಸಕ್ತರು ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವರು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ನಿಮ್ಮ ಜನಪ್ರಿಯತೆಯು ಕಡಿಮೆ ಆದಂತೆ ತೋರುವುದು. ಸಹೋದ್ಯೋಗಿಗಳಿಂದ ಸಹಾಯವನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಅಭದ್ರತೆಯನ್ನು ನೀವು ದೂರಮಾಡಿಕೊಳ್ಳುವುದು ಉತ್ತಮ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು. ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ. ನಿಮ್ಮ ವಿವಾಹದ ಮಾತುಕತೆಯಿಂದ ಸಂತೋಷವಾಗಲಿದೆ.
ಮಿಥುನ ರಾಶಿ: ನಿಮ್ಮ ಮಾತನಾಡುವ ಸ್ವಭಾವವು ಎಲ್ಲರಿಗೂ ಇಷ್ಟವಾಗದೇ ಇದ್ದೀತು. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅದೃಷ್ಟದ ಪರೀಕ್ಷೆಯು ಆಗಬಹುದು. ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವು ಸಿಗುವುದು. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಕಳೆದುಕೊಂಡ ವಸ್ತುಗಳನ್ನು ಪುನಃ ಸಂಪಾದಿಸುವ ಮಾನಸಿಕ ಸ್ಥಿತಿಯನ್ನು ಹೊಂದಿರುವಿರಿ. ಕಾಲು ನೋವು ಹೆಚ್ಚಾಗಿದ್ದು ವೈದ್ಯರ ಸಲಹೆಯನ್ನು ಪಡೆಯುವಿರಿ. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ವಿಷಮಸ್ಥಿತಿಯನ್ನು ಸಮಸ್ಥಿಯನ್ನಾಗಿ ಮಾಡಿಕೊಳ್ಳುವ ವಿಧಾನವು ಗೊತ್ತಿದೆ.
ಕರ್ಕಾಟಕ ರಾಶಿ: ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಚಾಣಾಕ್ಷತನದಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ನಿಮ್ಮ ಮಾರ್ಯಾದೆಯನ್ನು ಮೀರಿ ವರ್ತಿಸದಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಗೌಪ್ಯ ಸಂಗತಿಗಳನ್ನು ಹೊರಹಾಕುವಿರಿ.
ಸಿಂಹ ರಾಶಿ: ಬಂಧುಗಳು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ಕೆಲವನ್ನು ನೀವು ಮರೆತು ನಡೆಯುವುದು ಒಳ್ಳೆಯದು. ವೃತ್ತಿಯಲ್ಲಿ ನಿಮಗೆ ಆಕಸ್ಮಿಕ ಪ್ರಶಂಸೆಯಿಂದ ಅಚ್ಚರಿಗೊಳ್ಳುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಮಾತನ್ನು ನೀವು ಸಹಿಸಲಾರಿರಿ. ವಾಮಮಾರ್ಗದಿಂದ ಹಣವನ್ನು ಸಂಪಾದಿಸುವ ಮನಸ್ಸು ಇರಲಿದೆ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ಮನೆಯಲ್ಲಿ ಅಶಾಂತಿಯ ವಾತಾವರಣವು ಸರಿಮಾಡಿಕೊಳ್ಳಿ. ಹಣಕಾಸಿನ ವ್ಯವಹಾರದಲ್ಲಿ ನೀವು ದಾಖಲೆಯನ್ನು ಇಟ್ಟುಕೊಳ್ಳಿ. ಬೇಗ ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಸರಿಯಾಗುವುದು. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು. ಸಂಶೋಧಕರು ಒತ್ತಡದಲ್ಲಿ ಕಾರ್ಯವನ್ನು ಕಾರ್ಯವನ್ನು ಮಾಡುವರು.
ಕನ್ಯಾ ರಾಶಿ: ಅಪರಿಚಿತ ಸಂಪರ್ಕವು ಇಂದಾಗಲಿದೆ. ಯಾರನ್ನೋ ದೂಷಿಸಿ ನೀವು ದೊಡ್ಡವರಾಗುವುದು ಬೇಡ. ಮೌನ ವಹಿಸಿ, ಎಲ್ಲರೂ ಸಿಟ್ಟಾಗುವಂತೆ ಮಾಡುವಿರಿ. ಹಿರಿಯರು ನಿಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪದಲ್ಲಿ ನೀವಿರುವಿರಿ. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಶುಭ ಸುದ್ದಿಯ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರುವುದು. ಆನಾರೋಗ್ಯವನ್ನು ನಿರ್ಲಕ್ಷಿಸುವಿರಿ. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡುವುದಿಲ್ಲ.
ತುಲಾ ರಾಶಿ: ದೇವರ ದರ್ಶನಕ್ಕೆ ಕುಟುಂಬದ ಜೊತೆ ಹೋಗುವ ಯೋಚನೆ ಮಾಡುವಿರಿ. ಹಿರಿಯರ ಬಗ್ಗೆ ಪ್ರೀತಿ ಬರುವುದು. ಅಧಿಕಾರ ತಪ್ಪುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ. ಮಕ್ಕಳಿಗಾಗಿ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು. ಮಹಿಳೆಯರು ಸಮಾರಂಭಗಳಿಗೆ ಮನೆಗೆ ಹೋಗುವ ಸಾಧ್ಯತೆ ಇದೆ. ಆತಂಕವನ್ನು ನೀವು ಸುಲಭವಾಗಿ ಎದುರಿಸುವಿರಿ.
ವೃಶ್ಚಿಕ ರಾಶಿ: ಧನಸಂಪಾದನೆಗೆಂದು ಹೋಗಿ ಧನನಷ್ಟವನ್ನು ಮಾಡಿಕೊಳ್ಳುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಅಧಿಕಾರವು ಸಿಗಬಹುದು. ಪರಿಚಿತರ ವಿವಾಹಕ್ಕೆ ಓಡಾಟ ಮಾಡಿ ಸಫಲರಾಗುವಿರಿ. ಹಲವಾರು ಅನುಭವವನ್ನು ಪಡೆದುಕೊಂಡೂ ಮತ್ತೆ ಅದೇ ತಪ್ಪನ್ನು ಮಾಡುವಿರಿ. ಇಂದು ಬಹು ದಿನಗಳ ಚಿಂತಿತ ಕಾರ್ಯವು ಫಲ ಕೊಡದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ. ಆಪ್ತರ ಬಗೆಗಿನ ಊಹೆಯು ವ್ಯತ್ಯಾಸವಾದೀತು. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ. ಇಂದು ಸಂಗಾತಿಯ ಪ್ರೀತಿಯನ್ನು ನೀವು ಹೆಚ್ಚು ಅನುಭವಿಸುವಿರಿ. ನಿಮ್ಮ ಕಂಡು ಅಸೂಯೆ ಪಡುವವರಿಗೆ ಇನ್ನಷ್ಟು ತುಪ್ಪ ಸುರಿಯುವಿರಿ.
ಧನು ರಾಶಿ: ನಿಮಗೆ ವಿಶ್ವಾಸದ ಕೊರತೆ ಕಾಣಿಸಿಕೊಳ್ಳುವುದು. ಆಪ್ತರು ಅದನ್ನು ಪೂರ್ಣ ಮಾಡುವರು. ಸಾಹಿತ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಹದ ತಪ್ಪಿದ ಆರೋಗ್ಯವು ವ್ಯಾಧಿಯಾಗಿ ನಿಮ್ಮನ್ನು ದುರ್ಬಲ ಮಾಡೀತು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ಬೀಳಿಸಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಒತ್ತಡದ ಕಾರ್ಯದಿಂದ ನೀವು ದೂರ ಉಳಿಯುವಿರಿ. ಇಂದು ಯಾರ ಮಾತನ್ನೂ ಪೂರ್ಣವಾಗಿ ನಂಬಲು ಆಗದು. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ತಪ್ಪನ್ನು ಮರೆಮಾಚುವಿರಿ. ಆದರೂ ಗೊತ್ತಾಗುವುದು.
ಮಕರ ರಾಶಿ: ಗೊಂದಲದಿಂದ ನಿಮಗೆ ಯಾವುದನ್ನೂ ಪೂರ್ಣವಾಗಿ ಸ್ವೀಕರಿಸಲಾಗದು. ವಿವಾಹದ ಬಗ್ಗೆ ನಿಮಗೆ ತಿರಸ್ಕಾರದ ಭಾವವು ಇರುವುದು. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಯಂತ್ರಗಳ ಮಾರಾಟದಿಂದ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಪಾಲಿಗೆ ಬಂದಿದ್ದು ಪಂಚಾಮೃತವಾಗಲಿದೆ. ನೆರೆಹೊರೆಯರ ಜೊತೆ ವಾಗ್ವಾದ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ನಿಮಗೆ ಏನಾದರೂ ಆಗಬಹುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಉದ್ಯೋಗದ ಮಿತ್ರರು ಇಂದು ಸಿಗವರು. ಅಂಗಳವನ್ನೇ ಹಾರಲು ಬಾರದವ ಆಕಾಶವನ್ನು ಹಾರಿದಂತೆ ಆಗುವುದು.
ಕುಂಭ ರಾಶಿ: ಪರಸ್ಥಳದ ನೋವನ್ನು ನೀವು ನಿಮ್ಮವರ ಜೊತೆ ಹಂಚಿಕೊಳ್ಳುವಿರಿ. ಅಧಿಕಾರಿಗಳ ಜೊತೆ ಸಭ್ಯ ವರ್ತನೆ ಇರಲಿ. ಆರ್ಥಿಕ ವಿಚಾರವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ವಿದೇಶ ಪ್ರಯಾಣಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮ್ಮ ವಿನಂತಿಯನ್ನು ಯಾರೂ ಪುರಸ್ಕರಿಸದೇ ಇರಬಹುದು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ವಿದೇಶೀ ವ್ಯವಹಾರದಿಂದ ನಿಮಗೆ ಲಾಭವಿದೆ. ಕುಟುಂಬದಲ್ಲಿ ನೆಮ್ಮದಿಯ ತಂದುಕೊಳ್ಳುವಿರಿ. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ಇನ್ನೊಬ್ಬರ ಕ್ಷೇಮ ಭಾಗಿಯಾಗುವಿರಿ. ಹಣದ ಮೂಲವನ್ನು ಹುಡುಕುವ ಪ್ರಯತ್ನವು ಪೂರ್ಣ ಫಲಿಸದು. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸಿಕೊಳ್ಳುವಿರಿ. ಬಹಳ ದಿನಗಳ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವುದು. ಸಾಹಸದ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ.
ಮೀನ ರಾಶಿ: ಇಂದು ನಮಗಾಗುವ ಅಲ್ಪಲಾಭವೂ ಅನಂತ ಫಲವನ್ನು ಕೊಡಬಹುದು. ಆರೋಗ್ಯದ ಏರಿಳಿತವು ನಿಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವುದು. ನಿಮ್ಮ ಸ್ಥಿರಾಸ್ತಿಯ ಮಾರಾಟಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಿರುವುದು. ಯಾರನ್ನೂ ಜೊತೆಗೆ ಕರೆದುಕೊಂಡು ಹೋಗುವ ಅಭ್ಯಾಸವಿಲ್ಲ. ಒಂಟಿಯಾಗಿ ಏನನ್ನೂ ಮಾಡಬಲ್ಲಿರಿ. ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ.
-ಲೋಹಿತಶರ್ಮಾ – 8762924271 (what’s app only)