Horoscope: ಈ ರಾಶಿಯವರಿಗೆ ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ

ವಿವಾಹವಾಗಲು ಇಚ್ಛಿಸುತ್ತಿರುವವರಿಗೆ ಈ ದಿನ ಸೂಕ್ತವೇ? ಧಾರ್ಮಿಕ ಕಾರ್ಯಕ್ರಮ ನಡೆಸಬಹುದೇ? ವೃತ್ತಿಯಲ್ಲಿ ಬದಲಾವಣೆಗಳು ಇವೆಯೇ ಎಂಬಿತ್ಯಾದಿ ಮಾಹಿತಿಗಳು ದಿನಭವಿಷ್ಯದಲ್ಲಿ ತಿಳಿದುಕೊಳ್ಳಬಹುದು. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 06) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Horoscope: ಈ ರಾಶಿಯವರಿಗೆ ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 06, 2023 | 12:30 AM

ಕೈ ಉಜ್ಜಿ ಮುಖಕ್ಕೆ ಒತ್ತಿ ನಿಧಾನವಾಗಿ ಕಣ್ಣು ತೆರೆದು ಪ್ರಪಂಚವನ್ನು ನೋಡಿದ ನಂತರ ಇಂದು ತಮ್ಮ ಭವಿಷ್ಯ ಹೇಗಿದೆ ಎಂದು ಅರಿತುಕೊಳ್ಳುತ್ತಾರೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 6) ರಾಶಿಭವಿಷ್ಯ (Horoscope) ಹೇಗಿದೆ ಎಂಬುದು ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಪ್ರೀತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:48 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:10 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ 12:24ರ ವರೆಗೆ.

ಸಿಂಹ ರಾಶಿ : ಪ್ರಶಂಸೆಯಿಂದ‌ ನಿಮಗೆ ಸಂಕೋಚವಾಗುವುದು. ಕೆಲಸವನ್ನು ನಿರ್ವಿಘ್ನವಾಗಿ ಪೂರ್ಣಮಾಡುವಿರಿ. ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ನಿಮ್ಮ ಮಿತವಾದ ಮಾತಿನಿಂದ ಇತರರಿಗೆ ಅಚ್ಚರಿಯಾದೀತು.

ಕನ್ಯಾ ರಾಶಿ : ನಿಮ್ಮ‌ ಪ್ರಭಾವವು ಕಡಿಮೆಯಾದಂತೆ ತೋರುತ್ತದೆ. ಸ್ನೇಹಿತರಿಂದ ನಿಮ್ಮ ಉದ್ಯೋಗವು ಬದಲಾದೀತು. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಳೆಯ ಬಂಧುಗಳನ್ನು ಭೇಟಿ ಮಾಡುವುದು ಇಂದಿನ ಉತ್ಸಾಹಕ್ಕೆ ಕಾರಣವಾಗುವುದು. ನೀವು ಹೊಸ ಗುರಿಗಳನ್ನು ಹೊಂದಿದ್ದು ನಿಮ್ಮ ಪ್ರಯತ್ನಗಳನ್ನು ಪ್ರಾರಂಭಿಸುವಿರಿ. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸಿ, ಖುಷಿಪಡುವರು. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಸಂಪತ್ತಿನ ಹೆಚ್ಚಳವಾಗಬಹುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಆಪ್ತರ ಮಾತುಗಳು ನಿಮ್ಮ‌ ತಲೆಯಲ್ಲಿ ಕೊರೆಯಬಹುದು.

ತುಲಾ ರಾಶಿ : ಸರ್ಕಾರದ ಕಡೆಯಿಂದ ಒತ್ತಡವು ಬರಲಿದ್ದು, ಪ್ರಭಾವಿ ವ್ಯಕ್ತಿಗಳಿಂದ ಅದನ್ನು ತಪ್ಪಿಸುಕೊಳ್ಳುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ದೂರದೂರಿಗೆ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ಎಂದೋ ಬರುವ ಸಮಸ್ಯೆಗಳಿಗೆ ಇಂದು ಚಿಂತೆಪಡುವಿರಿ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ. ಸೋಲನ್ನು ನಿರೀಕ್ಷಿಸಿದರೂ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾದೀತು. ವ್ಯವಹಾರದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರುತ್ತದೆ. ವಾದಗಳ ಕಡೆ ಹೆಚ್ಚು ಗಮನವಿರುವುದು.

ವೃಶ್ಚಿಕ ರಾಶಿ : ನಿಮ್ಮ‌ ಹಳೆಯ ತಪ್ಪುಗಳಿಂದ ಹೊಸ ಸ್ಥಾನ, ಅವಕಾಶಗಳು ಸಿಗದೇ ಇರಬಹುದು. ಪ್ರಯತ್ನಕ್ಕೆ ಪೂರ್ಣಫಲವು ಲಭ್ಯವಾಗದೇ ಹೋದೀತು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನವು ನಿಮ್ಮ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ಸಜ್ಜನರ ಕೂಟದಲ್ಲಿ ಭಾಗವಹಿಸುವಿರಿ. ಸಂಜೆಯ ವೇಳೆಗೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಹಿರಿಯರಿಗೆ ಗೌರವವನ್ನು ಕೊಡುವಿರಿ. ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದು.