Horoscope: ರಾಶಿಭವಿಷ್ಯ, ಇಂದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ
ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಕಾರ್ಯ ಆರಂಭಿಸುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದು ಡಿಸೆಂಬರ್ 6 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.
ಕೈ ಉಜ್ಜಿ ಮುಖಕ್ಕೆ ಒತ್ತಿ ನಿಧಾನವಾಗಿ ಕಣ್ಣು ತೆರೆದು ಪ್ರಪಂಚವನ್ನು ನೋಡಿದ ನಂತರ ಇಂದು ತಮ್ಮ ಭವಿಷ್ಯ ಹೇಗಿದೆ ಎಂದು ಅರಿತುಕೊಳ್ಳುತ್ತಾರೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 6) ರಾಶಿಭವಿಷ್ಯ (Horoscope) ಹೇಗಿದೆ ಎಂಬುದು ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಪ್ರೀತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:48 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:10 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ 12:24ರ ವರೆಗೆ.
ಧನು ರಾಶಿ : ಕುಟುಂಬದ ಕಲಹವು ಅನಿರೀಕ್ಷಿತವಾಗಿ ಕಾಣಿಸಿಕೊಂಡೀತು. ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳುವಿರಿ. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ. ಮನಸ್ಸಿಗೆ ಅಧಿಕ ವಿಶ್ರಾಂತಿಯ ಅಗತ್ಯವಿರುವುದು. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯುತ್ ಉಪಕರಣದಿಂದ ತೊಂದರೆಯಾದೀತು.
ಮಕರ ರಾಶಿ : ಆರೋಗ್ಯದ ಸ್ಥಿತಿಯೂ ಸರಿಯಿಲ್ಲದೇ ಯಾವುದೂ ನಿಮ್ಮ ಬುದ್ಧಿಗೆ ಸೂಚಿಸದು. ಇಂದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ. ದೈಹಿಕವಾಗಿ ಸದೃಢವಾಗಿರಲು ನಿಮ್ಮ ಪ್ರಯತ್ನ ಅತಿ ಮುಖ್ಯ. ಆದಾಯದಲ್ಲಿಯೂ ನಿಮಗೇ ಪೂರ್ಣತೃಪ್ತಿ ಇರದು. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಹತ್ವದ ಕೆಲಸವು ಹಲವು ದಿನಗಳವರೆಗೆ ಬಾಕಿಯಿದ್ದರೆ, ಅವುಗಳನ್ನು ಮುಗಿಸಿ. ನಿಮ್ಮ ತಪ್ಪನ್ನು ಯಾರ ಮೇಲೋ ಹಾಕುವಿರಿ. ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಯುವಕರು ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ.
ಕುಂಭ ರಾಶಿ : ಪ್ರಭಾವೀ ವ್ಯಕ್ತಿಗಳ ಸಹಕಾರವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸ್ವಂತ ಉದ್ಯಮ ಬಗ್ಗೆ ಅತಿಯಾದ ಆಸಕ್ತಿ ಇರುವುದು. ಆಹಾರದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಿರಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ದಿನದ ಆರಂಭವು ಸಾಮಾನ್ಯವಾಗಿರುತ್ತದೆ. ಹಣವನ್ನು ಬಹಳ ನೈಪುಣ್ಯದಿಂದ ಖರ್ಚು ಮಾಡುವಿರಿ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ. ಅಸಾಧ್ಯವನ್ನು ನೀವು ಸಾಧಿಸುವ ಪ್ರಯತ್ನ ಮಾಡುವಿರಿ. ಕೆಲಸದ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ.
ಮೀನ ರಾಶಿ : ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹೋಗಿ ಮುಗ್ಗರಿಸುವಿರಿ. ಮಕ್ಕಳ ಬಗ್ಗೆ ನಿಮಗೆ ಸ್ವಲ್ಪ ಅಸಮಾಧಾನವಾಗಬಹುದು. ಇಂದು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಹೂಡಿಕೆಯಿಂದ ಲಾಭವು ಸಿಗಲಿದೆ. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ನಿದ್ರೆಯಿಂದ ತೊಂದರೆಯಾಗಬಹುದು.
-ಲೋಹಿತಶರ್ಮಾ – 8762924271 (what’s app only)