ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:35ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ಗಂಟೆ 10:56 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01 :45ರ ವರೆಗೆ.
ಮೇಷ ರಾಶಿ: ನಿಮ್ಮ ಕಛೇರಿಯ ಸ್ಥಳದ ಬದಲಾವಣೆಯನ್ನು ಮಾಡಬೇಕಾದೀತು. ಅನಿಶ್ಚಿತ ಮನಸ್ಸಿನಿಂದ ನಿಶ್ಚಿತ ಗುರಿಯನ್ನು ನೀವು ಪಡೆಯಲು ಸಾಧ್ಯವಾಗದು. ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಮನೆಯ ಪ್ರಶಾಂತ ವಾತಾವರಣವು ಉದ್ವಿಗ್ನಗೊಂಡೀತು. ಔದಾರ್ಯವು ಅಧಿಕವಾಗಿ ಬೇಡ. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಪಾಲುದಾರಿಕೆಯಲ್ಲಿ ಬಹುಪಾಲು ನಿಮ್ಮದಿರುವುದು. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್ಯವು ಇಂದಿನ ಸುತ್ತಾಟದಿಂದ ವ್ಯರ್ಥವಾಗುವುದು.
ವೃಷಭ ರಾಶಿ: ಮಾತಿನ ಮೇಲೆ ಹಿಡಿತ ತಪ್ಪುವ ಸಾಧ್ಯತೆ ಇದೆ. ಎಲ್ಲ ಸಂದರ್ಭಗಳನ್ನು ಒಂದೇ ರೀತಿಯಲ್ಲಿ ತೂಗುವುದು ಸರಿಯಾಗದು. ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದಲ್ಲಿರುವ ಮಕ್ಕಳನ್ನು ನೋಡುವ ಆಸೆಯಾಗಬಹುದು. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಹಿರಿಯರ ಬೋಧನೆಯು ಉಪಯುಕ್ತವೆನಿಸುವುದು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇಷ್ಟವಾಗುವುದು. ಹಲವು ಕಡೆಗಳಿಂದ ಕಾರ್ಯದ ಒತ್ತಡವು ಬರಬಹುದು.
ಮಿಥುನ ರಾಶಿ: ಮಾತಿನಿಂದಾಗಿ ಕಲಹವು ಅಧಿಕವಾದೀತು. ಪರೋಕ್ಷವಾಗಿ ನೀವು ಎಲ್ಲ ಕೆಲಸದಲ್ಲಿಯೂ ಭಾಗವಹಿಸುವಿರಿ. ನಿಮ್ಮ ಇಂದಿನ ಕೆಲಸವು ಯಶಸ್ಸಿನ ಎತ್ತರಕಗಕೆ ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯನ್ನು ಇಟ್ಟುಕೊಂಡವರು ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ. ನಿಮಗಾದ ವಂಚನೆಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಗೌರವವು ಕಡಿಮೆ ಆದಂತೆ ಅನ್ನಿಸೀತು. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಸಹಾಯ ಬಯಸಿದವರಿಗೆ ಸಹಕಾರ ನೀಡಿ.
ಕಟಕ ರಾಶಿ: ಮೇಲಧಿಕಾರಿಗಳ ಮಾತು ನಿಮಗೆ ಕಹಿಯಾದೀತು. ವಾಹನದಿಂದ ಕೆಲವು ತೊಂದರೆಗಳು ಆದೀತು. ದುರಭ್ಯಾಸದಿಂದ ದೂರವಿರುವ ಮನಸ್ಸು ಬರಬಹುದು. ದೇಹಾರೋಗ್ಯದ ಬಗ್ಗೆ ಚಿಂತೆಯು ಹೆಚ್ಚಾದೀತು. ನಿಮ್ಮ ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಪ್ರಗತಿಯನ್ನು ಕಾಣುವರು. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಸಹೋದರನ ಆರೋಗ್ಯದ ಬಗ್ಗೆ ಅಧಿಕ ಗಮನವಿರುವುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ