Horoscope: ರಾಶಿಭವಿಷ್ಯ, ಈ ರಾಶಿಯವರು ಮಾನಸಿಕ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:35ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ಗಂಟೆ 10:56 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01 :45ರ ವರೆಗೆ.
ಧನು ರಾಶಿ: ನಿಮ್ಮವರನ್ನು ದ್ವೇಷಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಮಾನಸಿಕ ಆರೋಗ್ಯವು ಕ್ಷೀಣಿಸುವುದು ನಿಮ್ಮ ಗಮನಕ್ಕೆ ಬರಲಿದೆ. ಆಸ್ತಿಗೆ ಸಂಬಂಧಿಸಿದ ವಿಚಾರಕ್ಕೆ ಕೋಪಗೊಂಡು ನೀವು ಏನನ್ನಾದರೂ ಹೇಳುವಿರಿ. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಇನ್ನೊಬ್ಬರ ಕಡೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಾರ್ಯದಲ್ಲಿ ಆಗುವ ವ್ಯತ್ಯಾಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಎರಡೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಉದ್ಯೋಗದ ಬಡ್ತಿಯನ್ನು ನೀವು ನಿರೀಕ್ಷಿಸಬಹುದು. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳೂ ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ.
ಮಕರ ರಾಶಿ: ಮಾನಸಿಕ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ವಿಳಂಬದ ಕಾರ್ಯಕ್ಕೆ ನೀವೇ ಜವಾಬ್ದಾರರಾಗಿರುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸನ್ನು ಪಡೆಯುವ ಬಯಕೆ ಇಟ್ಟುಕೊಳ್ಳುವಿರಿ. ಇದೇ ಓದಿಗೆ ಅವರನ್ನು ಹಚ್ಚುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಖನಿಜದ ವ್ಯವಹಾರ ತಕ್ಕಮಟ್ಟಿಗೆ ಆದಾಯವನ್ನು ಹೆಚ್ಚಿಸುವುದು. ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಮಿತ್ರರ ಆರ್ಥಿಕತೆಗೆ ನೀವು ಸಹಾಯ ಮಾಡುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ.
ಕುಂಭ ರಾಶಿ: ವಿವಾದಕ್ಕೆ ಆಸ್ಪದ ಕೊಡದೇ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಕಾರ್ಯದಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಕುಟುಂಬವನ್ನು ಮೆಚ್ಚಿಕೊಳ್ಳುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ನಿಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ಕಷ್ಟವಾದೀತು.
ಮೀನ ರಾಶಿ: ದೂರಪ್ರಯಾಣವನ್ನು ಮಾಡಲು ನಿಮಗೆ ಇಂದು ಕಷ್ಟವಾದೀತು. ನಿಮ್ಮ ಶ್ರಮದ ಬಗ್ಗೆ ನಿಮಗೆ ಪೂರ್ಣವಿಶ್ವಾಸವು ಇರದು. ನಿಮಗೆ ಇಂದು ಆಸ್ತಿಯ ವಿಚಾರದಲ್ಲಿ ಅನುಕೂಲವಾದ ಬೆಳವಣಿಗೆ ಇರಲಿದೆ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಆರೋಗ್ಯದ ವಿಚಾರದಲ್ಲಿ ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ಸ್ನೇಹಿತರ ಸಮಸ್ಯೆಗೆ ನೀವು ಸ್ಪಂದಿಸುವಿರಿ. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಷ್ಟವಸ್ತುಗಳನ್ನು ಪಡೆದುಕೊಳ್ಳಲು ಹಂಬಲಿಸುವಿರಿ. ಇಂದಿನ ಹಣಕಾಸಿನ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು.
-ಲೋಹಿತಶರ್ಮಾ – 8762924271 (what’s app only)