Baba Vanga 2024 Predictions: ಜಗತ್ತಿನ ನಿದ್ದೆ ಕೆಡಿಸಲಿದೆಯಾ ಹೊಸ ವರ್ಷ? 2024 ರ ಬಗ್ಗೆ ಬಾಬಾ ವಾಂಗ ಹೇಳಿದ್ದೇನು?

Baba Vanga 2024 Predictions: ನಿಖರವಾದ ಭವಿಷ್ಯ ಹೇಳುವುದಕ್ಕೆ ಹೆಸರುವಾಸಿಯಾಗಿರುವ ಬಾಬಾ ವಂಗಾ, 2024 ರಲ್ಲಿ ಪುಟಿನ್ ಹತ್ಯೆಯ ಯತ್ನ, ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು, ಜಾಗತಿಕ ಆರ್ಥಿಕ ಬಿಕ್ಕಟ್ಟು, ಹೆಚ್ಚಿದ ಸೈಬರ್ ದಾಳಿಗಳು ಮತ್ತು ಹವಾಮಾನ ಬದಲಾವಣೆಯ ತೀವ್ರತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.

Baba Vanga 2024 Predictions: ಜಗತ್ತಿನ ನಿದ್ದೆ ಕೆಡಿಸಲಿದೆಯಾ ಹೊಸ ವರ್ಷ? 2024 ರ ಬಗ್ಗೆ ಬಾಬಾ ವಾಂಗ ಹೇಳಿದ್ದೇನು?
ಬಾಬಾ ವಾಂಗ ಭವಿಷ್ಯವಾಣಿ 2024
Follow us
ನಯನಾ ಎಸ್​ಪಿ
| Updated By: Digi Tech Desk

Updated on:Dec 20, 2023 | 3:34 PM

ಬಲ್ಗೇರಿಯಾದ ನಾಸ್ಟ್ರಾಡಾಮಸ್‌ ಎಂದೇ ಪ್ರಸಿದ್ದಿ ಹೊಂದಿರುವ ಬಾಬಾ ವಂಗಾ 2024 ರ (Baba Vanga 2024 Predictions) ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಬಾಬಾ ವಂಗಾ 9/11 ಮತ್ತು COVID ಸಾಂಕ್ರಾಮಿಕದಂತಹ ಪ್ರಮುಖ ಘಟನೆಗಳ ಬಗ್ಗೆಯೂ ಜಗತ್ತಿಗೆ ಎಚ್ಚರಿಕೆ ನೀಡಿದ್ದರು. ಇನ್ನೇನು 2024 ಹೊಸ್ತಿಲಲ್ಲಿರುವಾಗ ನಾವೆಲ್ಲರೂ ಗಮನಿಸಬೇಕಾದ 5 ವಿಷಯಗಳ ಬಗ್ಗೆ ವಾಂಗ ಭವಿಷ್ಯವಾಣಿ ನುಡಿದಿದ್ದಾರೆ:

ವ್ಲಾಡಿಮಿರ್ ಪುಟಿನ್ ಮೇಲೆ ಹತ್ಯೆಯ ಯತ್ನ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡವುದು ರಷ್ಯಾದವರೆ ಹೊರಗಿನವರಲ್ಲ ಎಂದು ಬಾಬಾ ವಂಗಾ ಭವಿಷ್ಯ ನುಡಿಡಿದ್ದಾರೆ.

ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು: ಬಾಬಾ ವಂಗಾ ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುವ ಸಾಧ್ಯತೆಯನ್ನು ಸಹ ಅವರು ಉಲ್ಲೇಖಿಸಿದ್ದಾರೆ.

ಪ್ರಮುಖ ಜಾಗತಿಕ ಆರ್ಥಿಕ ಬಿಕ್ಕಟ್ಟು: ಬಾಬಾ ವಾಂಗ ಭವಿಷ್ಯವಾಣಿಯ ಪ್ರಕಾರ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತವೆ.

ಸೈಬರ್ ದಾಳಿಗಳಲ್ಲಿ ಏರಿಕೆ: 2024 ರಲ್ಲಿ ಸೈಬರ್ ದಾಳಿಗಳು ಉಲ್ಬಣಗೊಳ್ಳುವ ನಿರೀಕ್ಷೆಯಿದೆ, ಇದು ಗಂಭೀರವಾದ ಭದ್ರತಾ ಬೆದರಿಕೆಯನ್ನು ಉಂಟುಮಾಡುವ ವಿದ್ಯುತ್ ಗ್ರಿಡ್‌ಗಳು ಮತ್ತು ನೀರಿನ ಸೌಲಭ್ಯಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ.

ವಿಪರೀತ ಹವಾಮಾನ ಘಟನೆಗಳು: ಹವಾಮಾನ ಬದಲಾವಣೆಯು ಹೆಚ್ಚು ತೀವ್ರವಾದ ಹವಾಮಾನ ಘಟನೆಗಳನ್ನು ಉಂಟುಮಾಡುತ್ತದೆ, ಜಗತ್ತಿಗೆ ಹೆಚ್ಚುವರಿ ಸವಾಲುಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಟಾಪ್ 4 ರಾಶಿಯವರು

ಈ ಆತಂಕಕಾರಿ ಮುನ್ನೋಟಗಳ ಹೊರತಾಗಿಯೂ, ಬಾಬಾ ವಂಗಾ ಅವರು 2024 ರಲ್ಲಿ ಧನಾತ್ಮಕ ಬೆಳವಣಿಗಳ ಬಗ್ಗೆಯೂ ಹೇಳಿದ್ದಾರೆ. ಆಲ್ಝೈಮರ್ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳೊಂದಿಗೆ ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿಯ ಬಗ್ಗೆ ಅವರು ಭವಿಷ್ಯ ನುಡಿಡಿದ್ದಾರೆ. ಅದಲ್ಲದೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಯನ್ನು ನಿರೀಕ್ಷಿಸಿದ್ದರು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Tue, 28 November 23

ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್