
ಕೋಟಿ ನಕ್ಷತ್ರ ಪುಂಜಗಳ ನಡುವೆ ಕ್ರಾಂತಿವೃತ್ತದ ಸಮೀಪದಲ್ಲಿ ಜೋಡಿ ನಕ್ಷತ್ರವಿದ್ದರೆ (Nakshatra) ಅದೇ ಪೂರ್ವಾಭಾದ್ರ (Poorvabhadra Nakshatra) ಅಥವಾ ಪೂರ್ವಾಭಾದ್ರಪದ ನಕ್ಷತ್ರ. ಮನುಷ್ಯ ಗಣ ಮಾತ್ರವಲ್ಲ ಆದಿ ನಾಡಿ ಹಾಗೂ ವಾತ ಪ್ರಕೃತಿಯ ನಕ್ಷತ್ರವೂ ಆಗಿದೆ. ಸೇ ಸೋ ದ ದಿ ನಾಮಾಕ್ಷರವುಳ್ಳ ಈ ನಕ್ಷತ್ರದ ಅಧಿಪತಿ ಶಿವನ ಹನ್ನೊಂದು ರೂಪದಲ್ಲಿ ಒಂದು ರೂಪ ಅಜೈಕಪಾತ್. ಈ ನಕ್ಷತ್ರ ಹುಣ್ಣುಮೆಯ ದಿನ ಬಂದರೆ ಅದು ಭಾದ್ರಪದ ಮಾಸವಾಗಲಿದೆ. ಈ ನಕ್ಷತ್ರದ ಮೂರು ಪಾದ ಕುಂಭ ರಾಶಿ ಹಾಗೂ ಒಂದು ಪಾದ ಮೀನ ರಾಶಿಯಲ್ಲಿ ಇರಲಿದೆ.
ಇನ್ನು ಇದರ ಜೊತೆ ಇರುವ ಇಪ್ಪತ್ತಾರನೇ ನಕ್ಷತ್ರ ಉತ್ತರಾಭಾದ್ರ. ಇದರ ದೇವತೆ ಅಹಿರ್ಬುಧ್ನ್ಯ ಎನ್ನುವ ಇನ್ನೊಂದು ಶಿವನ ರೂಪವೇ ಆಗಿದೆ.
ಇದೂ ಕೂಡ ಎರಡು ನಕ್ಷತ್ರಗಳ ಸಮೂಹವಾಗಿದ್ದು, ಮನುಷ್ಯಗಣ. ಮಧ್ಯ ನಾಡಿಯಾದ ಇದು ದು ಜ ಞ ಥ ನಾಮಾಕ್ಷರಸಿಂದ ಕೂಡಿದೆ. ಮೀನ ರಾಶಿಯಲ್ಲಿಯೇ ನಾಲ್ಕೂ ಪಾದಗಳೂ ಇರಲಿವೆ.
ಕೊನೆ ನಕ್ಷತ್ರ ರೇವತೀ. ಸೂರ್ಯನ ಅಂಶವಾದ ಪೂಷಾ ಎನ್ನುವ ದೇವತೆ ಇದೇ ನಕ್ಷತ್ರದ್ದು. ದೇವಗಣಕ್ಕೆ ಸೇರಿದ್ದು ಇದು ಅಂತ್ಯನಾಡಿ, ಕಫ ಪ್ರಕೃತಿಯದ್ದಾಗಿದೆ. ಮೀನಿನ ಆಕಾರದ ಮೂವತ್ತೆರಡು ನಕ್ಷತ್ರಗಳ ಸಮೂಹ. ಈ ನಕ್ಷತ್ರದ ನಾಮಾಕ್ಷರ ದಿ ಥೋ ಚ ಚಿ. ಇದರ ಎಲ್ಲ ಪಾದಗಳೂ ಮೀನರಾಶಿಯಲ್ಲಿ ಇರಲಿವೆ.
ಮಾನಸಿಕ ಸ್ತಿಮಿತವನ್ನು ಕಳೆದುಕೊಳ್ಳುವರು. ಸಮಾಧಾನ ಚಿತ್ತ ಇವರಲ್ಲಿ ಇರದು. ಪ್ರತಿಯೊಂದು ವಿಚಾರವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸುವರು.
ಇವರು ಸ್ತ್ರೀಯರ ಯಾವ ಆಮಿಷಕ್ಕೂ ಒಳಗಾಗಲಾರರು. ಸ್ತ್ರೀಯರ ಮಾತನ್ನು ಇವರು ಕೇಳಲಾರರು. ಎಲ್ಲ ಸ್ತ್ರೀಯರನ್ನು ಗೆದ್ದವರು ಇವರಾಗುವರು.
ಈ ನಕ್ಷತ್ರದವರಿಗೆ ಯಾವ ವಸ್ತುವನ್ನೂ ಕೊಡುವ ಸ್ವಭಾವ ಬಹಳ ಕಡಿಮೆ. ಯಾರಿಗೂ ಏನನ್ನೂ ಕೊಡಲು ಇಷ್ಟಪಡಲಾರರು. ತಮಗೇ ಬೇಕೆನ್ನುವ ಮನೋಭಾವ ಇರಲಿದೆ.
ಆಲಸ್ಯದ ಸ್ವಭಾವವು ಇವರಲ್ಲಿ ನಿದ್ರೆಯ ಕಾರಣಕ್ಕೆ ಬರಲಿದೆ. ನಿದ್ರೆಯ ಅವಧಿಯು ಇವರಿಗೆ ಹೆಚ್ಚಿರಲಿದೆ. ಕಡಿಮೆ ನಿದ್ರೆಯು ಇವರಿಗೆ ಕಾರ್ಯ ಮಾಡಲು ತೊಂದರೆ ಕೊಡಬಹುದು.
ಸಂಗಾತಿಯಿಂದ ಕಷ್ಟವನ್ನು ಅನುಭವಿಸುವರು. ಅವಳ ಕಾರಣದಿಂದ ನಾನಾಪ್ರಕಾರದಲ್ಲಿ ದುಃಖಿಸುವ ಸಂದರ್ಭ ಬರಲಿದೆ. ಎಚ್ಚರಿಕೆಯಿಂದ ವರ್ತಿಸುವ ಅವಶ್ಯಕತೆ ಇರುತ್ತದೆ.
ಉತ್ತರಾಭಾದ್ರಾ ನಕ್ಷತ್ರದಲ್ಲಿ ಜನಿಸಿದವರು ಹೀಗಿರುವರು.
ಈ ನಕ್ಷತ್ರದಲ್ಲಿ ಜನಿಸುವವರು ಕುಟುಂಬದಲ್ಲಿ ಪ್ರಮುಖ ವ್ಯಕ್ತಿಗಳಾಗಿರುವರು. ಉನ್ನತ ಅಧಿಕಾರದಿಂದ ಕಲಾವಿದರಾಗಿ, ಉದ್ಯಮದಿಂದ, ಆರ್ಥಿಕತೆಯಿಂದ ಸಬಲರೂ ಮುಖ್ಯರೂ ಆಗುವರು.
ಇವರ ದೇಹ ಬಹಳ ಎತ್ತರ ಇರದು. ವಾಮನ ರೂಪದಲ್ಲಿ ಕಾಣಿಸುವರು ಹಾಗೂ ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಅಧಿಕ ಆಸಕ್ತಿ ಇರುವುದು.
ಬಲ ಕಡಿಮೆ ಇದ್ದರೂ ತಮ್ಮ ಪ್ರಭಾವದಿಂದ ಹಾಗೂ ಬುದ್ಧಿಶಕ್ತಿಯಿಂದ ಶತ್ರುಗಳನ್ನು ಗೆಲ್ಲುವರು ಮತ್ತು ಶತ್ರುಗಳೇ ಇಲ್ಲದಂತೆ ಮಾಡಿಕೊಳ್ಳುವರು.
ಇದನ್ನೂ ಓದಿ: ಅವತಾರ ಪುರುಷರೇ ನೀವು? ತಿಳಿದುಕೊಳ್ಳಿ…
ಅತ್ಯಂತ ಶುದ್ಧ ನಡತೆಯುಳ್ಳವರು ಇವರು. ಯಾವುದೇ ಅಪವಾದವನ್ನು ತಮ್ಮ ಮೇಲೆ ತಂದುಕೊಳ್ಳದೇ ಪ್ರಾಮಾಣಿಕವಾಗಿ ಜೀವನ ಸಾಗಿಸುವವರಾಗಿರುತ್ತಾರೆ.
ಇವರ ಕುಲವು ಸಚ್ಚಾರಿತ್ರ್ಯದಿಂದ ಧಾರ್ಮಿಕ ಆಚರಣೆಯಿಂದ ಅಥವಾ ಒಳ್ಳೆಯ ಸ್ವಭಾವದಿಂದ ಖ್ಯಾತಿಯನ್ನು ಪಡೆದಿರುತ್ತದೆ. ಇವರಿಂದಲೂ ಕುಲಕ್ಕೆ ಗೌರವ ಸಿಗಬಹುದು.
ಯಾವಗಲೂ ಇವರು ತಮ್ಮ ಮನೆಯಲ್ಲಿ ವಾಸ ಮಾಡಲು ಇಚ್ಛಿಸುವರು. ಬೇರೆ ಸ್ಥಳಗಳಲ್ಲಿ ಇರಲು ಇವರು ಇಷ್ಟಪಡುವುದಿಲ್ಲ. ತಮ್ಮ ಮನೆಯೇ ನೆಮ್ಮದಿಯ ಸ್ಥಳವಾಗಿರುವುದು.
ಇದೆಲ್ಲ ವಿಶೇಷ ಗುಣಗಳು ಈ ನಕ್ಷತ್ರಗಳಲ್ಲಿ ಇರಲಿದ್ದು, ಜನಿಸುವಾಗ ಗುರು, ಶುಕ್ರ, ಬುಧ, ಚಂದ್ರರು ಈ ನಕ್ಷತ್ರದಲ್ಲಿ ಇದ್ದರೆ ಲಕ್ಷಣಗಳು ಪೂರ್ಣವಾಗಿ ಯೋಜಿತವಾಗಲಿದೆ.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Fri, 16 May 25