Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 29ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 29ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ಎಂಬುದರ ಜೊತೆಗೆ ದಿನಕ್ಕೆ ಒಂದರಂತೆ ಕ್ರಿಸ್ಟಲ್ ಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ. ಅದರ ಮೊದಲ ಪ್ರಯತ್ನ ಸನ್ ಸ್ಟೋನ್. ಹಿಂಜರಿಕೆ ಕಾಡುತ್ತಿದೆಯಾ, ಗೊತ್ತಿರುವಂಥ ವಿಷಯಗಳನ್ನೇ ಆತ್ಮವಿಶ್ವಾಸದಿಂದ ಹೇಳುವುದು ಕಷ್ಟ ಆಗುತ್ತಿದೆಯಾ? ಈ ಸನ್ ಸ್ಟೋನ್ ಬಳಸಿದ್ದಲ್ಲಿ ನಾಯಕತ್ವ ಗುಣ ನಿಮ್ಮಲ್ಲಿ ಮತ್ತೂ ಹೆಚ್ಚಾಗುತ್ತದೆ. ಹಿಂಜರಿಕೆ, ಆತ್ಮವಿಶ್ವಾಸದ ಕೊರತೆ ಇವೆಲ್ಲ ದೂರವಾಗುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನೀವು ಹೇಳಿದ್ದೆಲ್ಲ ಸರಿಯಿದೆ, ಅದೇ ರೀತಿ ಮುಂದುವರಿಯೋಣ ಎಂಬ ಉತ್ಸಾಹದ ಮಾತುಗಳನ್ನು ಆಡುತ್ತಿದ್ದವರು ಏಕಾಏಕಿ ತಮ್ಮ ಧ್ವನಿಯನ್ನೇ ಬದಲಿಸಿ, ಉಲ್ಟಾ ಹೇಳುವುದಕ್ಕೆ ಶುರು ಮಾಡ್ತಾರೆ. ದೊಡ್ಡ ಮೊತ್ತದ ಹಣವನ್ನು ಕೈಯಿಂದ ಹಾಕಿ, ಶುರು ಮಾಡಬೇಕಾದ ಆರ್ಡರ್ ಗಳು ಇದ್ದಲ್ಲಿ ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸಿ ಮುಂದಕ್ಕೆ ಹೆಜ್ಜೆ ಇಡಿ. ನಂಬಿಕೆ ಬೇಕು ನಿಜ, ಆದರೆ ಅತಿಯಾದ ನಂಬಿಕೆ ಹಣಕಾಸಿಗೆ ತೊಡಕು ಎಂಬುದು ನೆನಪಲ್ಲಿರಲಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮ್ಮ ಈ ಹಿಂದಿನ ಯಾವುದೇ ಪ್ರಸ್ತಾವನೆ ಈ ದಿನ ಜೀವ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನೇನು ಅದು ವಾಪಸ್ ಬರುವ ಹಾಗೆ ಕಾಣಲ್ಲ ಎಂದು ಅಸೆಯೇ ಬಿಟ್ಟಿದ್ದ ಹಣ ಕೂಡ ಹಿಂತಿರುಗಿ ಬರುವ ಅವಕಾಶಗಳಿವೆ. ನಿಮ್ಮ ಜೊತೆಗೆ ಇದ್ದು ಕೂಡ ಉದ್ಯೋಗ- ವ್ಯವಹಾರದಲ್ಲಿ ಸಹಕಾರ ನೀಡದಿದ್ದವರು ಸಹ ಈಗ ಪೂರ್ಣ ಮನಸ್ಸಿನಿಂದ ನಿಮ್ಮ ಜೊತೆ ಇರುವುದಾಗಿ ಹೇಳಲಿದ್ದಾರೆ. ಕಡಿಮೆ ಎಂದುಕೊಂಡಂಥ ಕೆಲಸಗಳೇ ಒಳ್ಳೆ ಆದಾಯ ತಂದುಕೊಡುತ್ತವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಅಯ್ಯೋ ಮಾತನಾಡಿ, ಸಿಕ್ಕಿಹಾಕಿಕೊಂಡು ಬಿಟ್ಟೆನಲ್ಲ ಎಂಬ ಪರಿಸ್ಥಿತಿ ಈ ದಿನ ನಿಮ್ಮದಾಗಲಿದೆ. ಯಾವುದಕ್ಕೂ ಇರಲಿ ಎಂದುಕೊಂಡು ಎಮರ್ಜೆನ್ಸಿ ಫಂಡ್ ಎಂದು ನೀವಿಟ್ಟುಕೊಂಡಿದ್ದ ಹಣವೇ ಸಹಾಯಕ್ಕೆ ಬರಲಿದೆ. ಎಲ್ಲರನ್ನೂ ಒಂದೇ ರೀತಿ ಕಾಣಬೇಕು, ಅವರಿಗೆ ಬೇಕಾದ ಕೆಲಸ ಮಾಡಿಕೊಡಬೇಕು ಎಂಬ ನಿಮ್ಮ ಉದ್ದೇಶ ಈಡೇರುವ ಸಾಧ್ಯತೆ ಈ ದಿನ ಇದೆ.
ಲೇಖನ- ಸ್ವಾತಿ ಎನ್.ಕೆ.
