
ಹಣಕಾಸಿನ ಹರಿವಿನಲ್ಲಿ ಸ್ಥಿರತೆ ಕಾಣುತ್ತಾ ಇಲ್ಲ. ಆದಾಯ ಸಹ ಅಂದುಕೊಳ್ಳುವ ಮಟ್ಟದಲ್ಲಿ ಇಲ್ಲ. ಈ ಕಾರಣಕ್ಕೆ ಕೆಲವು ವ್ಯಾಪಾರ- ವ್ಯವಹಾರದ ಐಡಿಯಾ ಇದ್ದರೂ ಅದನ್ನು ಬಳಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ‘ಓಪಲ್ ಫೈರ್’ ಸ್ಟೋನ್ ಬಳಸಿದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ನೀವು ಮಾಡಿಕೊಂಡಂಥ ಒಪ್ಪಂದಗಳು ಏರಿಳಿತದ ಆದಾಯ ತರುತ್ತಿದೆ ಎಂಬುದು ನಿಮ್ಮ ಚಿಂತೆಗೆ ಕಾರಣ ಆಗಲಿದೆ. ಚರ್ಮಕ್ಕೆ ಸಂಬಂಧಿಸಿದ ಸಣ್ಣ- ಪುಟ್ಟ ಅಲರ್ಜಿಗಳು ದಿನದ ಮಟ್ಟಿಗೆ ನಿಮ್ಮನ್ನು ಆತಂಕಕ್ಕೆ ದೂಡಬಹುದು. ಸೂಕ್ತ ಔಷಧೋಪಚಾರ ಅಗತ್ಯವಿದೆ ಎಂದೆನಿಸಿದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ.
ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಚೆನ್ನಾಗಿ ಕೆಲಸ ಮಾಡಲಿದೆ. ಭವಿಷ್ಯದಲ್ಲಿ ನಿಮಗೆ ತೆರೆದುಕೊಳ್ಳಬಹುದಾದ ಅವಕಾಶಗಳ ಸೂಚನೆ ದೊರೆಯಲಿದೆ. ಶಾಲೆ- ಕಾಲೇಜು ಅಥವಾ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ಶುರು ಮಾಡಬೇಕು ಎಂದಿರುವವರಿಗೆ ಅನುಕೂಲಗಳು ಒದಗಲಿವೆ.
ನೀವು ಮಾಡುವ ಉದ್ಯೋಗ, ವೃತ್ತಿ ಅಥವಾ ವ್ಯವಹಾರಗಳ ಬಗ್ಗೆ ಹೊಸ ಚಿಂತನೆ ಅಳವಡಿಸಿಕೊಳ್ಳುತ್ತೀರಿ. ನಿಮ್ಮ ಆದಾಯ ಅಥವಾ ಲಾಭಕ್ಕೆ ಅಡೆತಡೆಯಾಗಿ ಇರುವಂಥ ಅಂಶವನ್ನು ಬಗೆಹರಿಸಿಕೊಳ್ಳಲು ಈ ದಿನ ಮಹತ್ತರವಾದ ಹೆಜ್ಜೆಯನ್ನು ಇಡಲಿದ್ದೀರಿ. ಸ್ನೇಹಿತರು- ಸಂಬಂಧಿಗಳ ನೆರವು ದೊರೆಯಲಿದೆ.
ಲೇಖನ- ಸ್ವಾತಿ ಎನ್.ಕೆ.