AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ

Quadrille Planetary Alignment 2026: ಮಂಗಳ ಗ್ರಹ ಮತ್ತು ಸೂರ್ಯ ಗ್ರಹ ಮಿತ್ರ ಗ್ರಹರಾದರೂ ಶ್ರವಣ ನಕ್ಷತ್ರದಲ್ಲಿ ಅವರ ಸಂಯೋಗದಿಂದ ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಜನರ ಮೇಲೆ ಆಗುವ ಪರಿಣಾಮ ಬೇರೆ ಬೇರೆ ಇರಲಿದೆ. ಇದರಲ್ಲಿ ಅಂಗಾರಕ ದೋಷದ ಪ್ರಭಾವವಿರಬಹುದಾದ್ದರಿಂದ ಈ ಚತುರ್ಗ್ರಹ ಸಂಯೋಗಗೊಂಡ ಅವಧಿಯಲ್ಲಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಖುದ್ದು ಜ್ಯೋತಿಷಿಗಳ ಬಳಿ ಜಾತಕ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ
ಚತುರ್ಗ್ರಹ ಸಂಯೋಗImage Credit source: mediabakery.com
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 30, 2026 | 2:02 PM

Share

ಗ್ರಹಗಳು ಒಂದೇ ರಾಶಿಯಲ್ಲಿ ಬರುವುದು ಒಂದಾದರೆ, ಒಂದೇ ನಕ್ಷತ್ರದಲ್ಲಿ ಇರುವುದು ಮತ್ತೂ ಸಾಮಿಪ್ಯವನ್ನು ಹೇಳುತ್ತದೆ. ಒಂದೇ ಪಾದವಂತೂ ನಿಕಟವರ್ತಿತ್ವದ ಸೂಚಕ. ಈ ವಾರ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಈ ನಾಲ್ಕು ಪ್ರಮುಖ ಗ್ರಹಗಳು ಶ್ರವಣ ನಕ್ಷತ್ರದಲ್ಲಿ ಅಂದರೆ ಮಕರ ರಾಶಿಯಲ್ಲಿ ಒಂದೇ ಬಾರಿಗೆ ಸಂಧಿಸಿದಾಗ ಅದು ಅತ್ಯಂತ ಪ್ರಭಾವಶಾಲಿ ಸಮಯವಾಗಿರುತ್ತದೆ. ಶ್ರವಣ ನಕ್ಷತ್ರವು ಚಂದ್ರನ ಆಧಿಪತ್ಯದಲ್ಲಿದ್ದು, ಮನಸ್ಸು, ತಾಯಿ, ನೀರಿಗೆ ಸಂಬಂಧಿಸಿದ ವಿಚಾರ, ಜ್ಞಾನ ಮತ್ತು ಶಿಸ್ತಿನ ಸಂಕೇತವಾಗಿದೆ. ​ಈ ಸಂಯೋಜನೆಯಿಂದ ಜ್ಯೋತಿಷ್ಯ ರಿತ್ಯಾ ಬಗ್ಗೋಣ ಪಂಚಾಂಗ ವಿಶ್ಲೇಷಣೆಯ ಪ್ರಕಾರ ಯಾವ ರಾಶಿಗಳಿಗೆ ಏನು ಫಲ ಇಲ್ಲಿದೆ:

ಶುಭ ಫಲ ರಾಶಿಗಳು

​ಮಕರ: ನಿಮ್ಮದೇ ರಾಶಿಯಲ್ಲಿ ಗ್ರಹಗಳ ಸಮ್ಮಿಲನವಿರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ದೊಡ್ಡ ಬದಲಾವಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ.

ವೃಷಭ: ಭಾಗ್ಯ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಅದೃಷ್ಟ ಒಲಿಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವಿದೆ.

ಕನ್ಯಾ: ಪಂಚಮ ಸ್ಥಾನದಲ್ಲಿ ಈ ಸಂಯೋಜನೆ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಯ, ಮಕ್ಕಳಿಂದ ಸುಖ ಮತ್ತು ಆಕಸ್ಮಿಕ ಧನಲಾಭವಾಗಲಿದೆ.

ಮಿಶ್ರ ಫಲ ರಾಶಿಗಳು

​ಮೇಷ: ದಶಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಯಶಸ್ಸು ಸಿಗಲಿದೆ.

​ಕರ್ಕಾಟಕ: ಸಪ್ತಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು.

​ವೃಶ್ಚಿಕ: ಧೈರ್ಯ ಹೆಚ್ಚಲಿದೆ, ಆದರೆ ಸಹೋದರರೊಂದಿಗೆ ಜಾಗರೂಕತೆಯಿಂದ ಇರಿ.

​ಅಶುಭ ಫಲ ರಾಶಿಗಳು

​ಧನು: ದ್ವಿತೀಯ ಸ್ಥಾನದಲ್ಲಿ ಮಂಗಳ ಮತ್ತು ಸೂರ್ಯ ಇರುವುದರಿಂದ ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಕಲಹ ಸಾಧ್ಯತೆ, ಹಣಕಾಸಿನ ವ್ಯಯವಾಗಬಹುದು.

​ಮಿಥುನ: ಅಷ್ಟಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.

​ಕುಂಭ: ವ್ಯಯ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ ಮತ್ತು ನಿದ್ರಾಹೀನತೆ ಕಾಡಬಹುದು.

– ಲೋಹಿತ ಹೆಬ್ಬಾರ್ ​

ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ