Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 30ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ನಿರ್ಧಾರ ಮಾಡುವುದಕ್ಕೆ ಭಯ ಆಗುತ್ತಾ ಇದೆಯಾ? ಅದರಲ್ಲೂ ಮದುವೆ, ಮನೆ ಕಟ್ಟುವ ವಿಚಾರ, ಆಸ್ತಿ ಹಂಚಿಕೆ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಮಾತನಾಡುವ ಬಗ್ಗೆ ಮನಸ್ಸಿನೊಳಗೆ ದ್ವಂದ್ವ ಕಾಡುತ್ತಾ ಇದೆಯಾ ‘ಲಾವಾ ಸ್ಟೋನ್’ ಬಳಸುವುದರಿಂದ ಸ್ಪಷ್ಟ ನುಡಿಗಳು ನಿಮ್ಮದಾಗಲಿವೆ. ಅದರಲ್ಲೂ ಏನು ಹೇಳಿದರೆ ಏನಾಗಿಬಿಡುತ್ತದೋ ಎಂಬ ಆತಂಕ ದೂರವಾಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ಆದಾಯದಲ್ಲಿ ಏರಿಕೆ ನಿರೀಕ್ಷೆ ಮಾಡಬಹುದಾದ ಬೆಳವಣಿಗೆಗಳು ಆಗಲಿವೆ. ಇತ್ತೀಚೆಗೆ ಮಾಡಿದಂಥ ಹೂಡಿಕೆಗಳು ಇದ್ದಲ್ಲಿ ಅದರಲ್ಲಿ ಉತ್ತಮ ಲಾಭ ನಿಮ್ಮ ಕೈ ಸೇರಲಿದೆ. ವಿಪರೀತ ಮಾತನಾಡುವ ಸ್ವಭಾವ ನಿಮ್ಮದಾಗಿದ್ದಲ್ಲಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು. ಮಕ್ಕಳ ಶಿಕ್ಷಣ ವಿಚಾರ ಚಿಂತೆಗೆ ಕಾರಣ ಆಗಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನೀವೇ ಈ ಹಿಂದೆ ಸ್ನೇಹಿತರಿಗೆ ನೀಡಿದ್ದ ಸಲಹೆ ತಲೆನೋವಾಗಿ ಪರಿಣಮಿಸಲಿದೆ. ಆ ಕಾರಣಕ್ಕೆ ವಿಪರೀತ ದೊಡ್ಡ ಜವಾಬ್ದಾರಿಯೊಂದು ತಲೆ ಮೇಲೆ ಬರಲಿದೆ. ಈ ದಿನ ಪೂರ್ಣ ಮಾಡಲೇಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ. ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿ ಆಗಬೇಕು ಎಂಬ ಬಗ್ಗೆ ವೇಳಾಪಟ್ಟಿಯಂತೆ ನಡೆದುಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಮನೆಯ ಸ್ವಚ್ಛತಾ ಕೆಲಸಗಳನ್ನು ಮಾಡಿ ಮಗಿಸುವುದು ಮುಖ್ಯವಾಗಿ ಕಂಡುಬರಲಿದೆ. ಮದುವೆಗಾಗಿ ಪ್ರಯತ್ನಿಸುತ್ತಾ ಇರುವ ವಿವಾಹ ವಯಸ್ಕರಿಗೆ ಶುಭವಾ ಬೆಳವಣಿಗೆ ನಿರೀಕ್ಷೆ ಮಾಡಬಹುದು. ದುಬಾರಿ ಶೂ ಅಥವಾ ವಾಚ್ ಖರೀದಿಗೆ ಹೆಚ್ಚಿನ ಹಣವನ್ನು ವೆಚ್ಚ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದಲ್ಲಿ ಮನಸ್ಸು ಹತೋಟಿಯಲ್ಲಿ ಇರಲಿ.
ಲೇಖನ- ಸ್ವಾತಿ ಎನ್.ಕೆ.
