AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NED: ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಟೀಂ ಇಂಡಿಯಾ

India vs Netherlands T20 WC: ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ 17 ರನ್‌ಗಳ ಗೆಲುವು ಸಾಧಿಸಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ. ಶಿವಂ ದುಬೆ ಅವರ ಅರ್ಧಶತಕದಿಂದ 193 ರನ್ ಕಲೆಹಾಕಿದ ಭಾರತ, ನೆದರ್ಲ್ಯಾಂಡ್ಸ್ ತಂಡವನ್ನು 176 ರನ್‌ಗಳಿಗೆ ಕಟ್ಟಿಹಾಕಿತು.

IND vs NED: ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಟೀಂ ಇಂಡಿಯಾ
India Vs Netherlands
ಪೃಥ್ವಿಶಂಕರ
|

Updated on:Feb 18, 2026 | 10:53 PM

Share

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್​ನ (T20 World Cup ) ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Netherlands) 17 ರನ್​ಗಳ ಗೆಲುವು ದಾಖಲಿಸಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದವರೆಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 193 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡರೂ ಭಾರತದ ಬೌಲರ್​ಗಳ ಎದುರು ಹೋರಾಟದ ಪ್ರದರ್ಶನ ನೀಡಿ 176 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಶಿವಂ ದುಬೆ ಅರ್ಧಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು. ತಂಡದ ಪರ ಅಮೋಘ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ ಕೇವಲ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಬೃಹತ್ ಸಿಕ್ಸರ್‌ಗಳೊಂದಿಗೆ 66 ರನ್ ಕಲೆಹಾಕಿದರು. ಅವರೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್ (34), ತಿಲಕ್ ವರ್ಮಾ (31), ಮತ್ತು ಹಾರ್ದಿಕ್ ಪಾಂಡ್ಯ (30) ಉಪಯುಕ್ತ ಕಾಣಿಕೆ ನೀಡಿದರು. ಆದಾಗ್ಯೂ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಶೂನ್ಯಕ್ಕೆ ಔಟಾಗಿ ಬೇಡದ ವಿಶ್ವದಾಖಲೆಗೆ ಕೊರಳೊಡ್ಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಹೋರಾಟ ನೀಡಿದ ನೆದರ್ಲ್ಯಾಂಡ್ಸ್

ಈ ಬೃಹತ್ ಗುರಿ ಬೆನ್ನಟ್ಟಲು ಮೈದಾನಕ್ಕೆ ಇಳಿದ ನೆದರ್ಲ್ಯಾಂಡ್ಸ್ ತಂಡವು ಕೂಡ ದಿಟ್ಟ ಹೋರಾಟ ನೀಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಸಿತು. ತಂಡದ ಪರ ಬಾಸ್ ಡಿ ಲೀಡೆ (33) ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಉಳಿದ ಬ್ಯಾಟರ್​ಗಳು ಕೂಡ ಹೋರಾಟದ ಇನ್ನಿಂಗ್ಸ್ ಆಡಿದರು. ಭಾರತ ಪರ ಮಿಂಚಿದ ವರುಣ್ ಚಕ್ರವರ್ತಿ ತ3 ವಿಕೆಟ್ ಪಡೆದರೆ, ಶಿವಂ ದುಬೆ ಬೌಲಿಂಗ್​ನಲ್ಲೂ 2 ವಿಕೆಟ್ ಪಡೆದರು. ಉಳಿದಂತೆ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್‌ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

IND vs NED: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ

ಭಾರತಕ್ಕೆ ಸತತ 4ನೇ ಜಯ

ಗುಂಪು ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಈಗ ಸೂಪರ್ 8 ಸುತ್ತಿನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಪ್ರಸ್ತುತ ಟೀಂ ಇಂಡಿಯಾದ ಫಾರ್ಮ್ ನೋಡಿದರೆ, ಈ ಬಾರಿಯೂ ಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ಗೆ ಬರುತ್ತಿರುವುದರಿಂದ ತಂಡ ಮತ್ತಷ್ಟು ಬಲಿಷ್ಠವಾಗಿ ಕಾಣತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Wed, 18 February 26

ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು?
ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು?
ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ
ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ