January Monthly Horoscope 2023: ಮಾಸ ಭವಿಷ್ಯ, 2023ರ ಜನವರಿ ತಿಂಗಳಲ್ಲಿ ಯಾವ ರಾಶಿಗೆ ಏನು ಫಲ?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2023 | 6:15 AM

ಜನವರಿ ಮಾಸ ಭವಿಷ್ಯ 2023: ಈ ತಿಂಗಳು ಏನೆಲ್ಲ ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಯಾವ ಯೋಗ ಇದೆ ಇತ್ಯಾದಿ ಎಲ್ಲಾ ಮಾಹಿತಿ ಇಲ್ಲಿದೆ.

January Monthly Horoscope 2023: ಮಾಸ ಭವಿಷ್ಯ, 2023ರ ಜನವರಿ ತಿಂಗಳಲ್ಲಿ ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರ
Image Credit source: indiatvnews.com
Follow us on

ವರ್ಷದ ಮೊದಲ ಜನವರಿ ತಿಂಗಳಲ್ಲಿ ಅನೇಕ ಗ್ರಹಗಳ (Horoscope) ಚಲನೆ ಬದಲಾಗುತ್ತೆ. ಈ ತಿಂಗಳು ನಿಮ್ಮ ಜೀವನದಲ್ಲಿ ಯಾವ ರೀತಿಯ ಏಳು-ಬೀಳುಗಳು ಉಂಟಾಗಬಹುದು. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರು ಈ ತಿಂಗಳು ಏನೆಲ್ಲ ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಯಾವ ಯೋಗ ಇದೆ ಇತ್ಯಾದಿ ಮಾಹಿತಿ ಇಲ್ಲಿದೆ ಮುಂದೆ ಓದಿ.

  1. ಮೇಷ: ಶುಭಕಾಲವಿದು. ಶನಿಯು ಏಕಾದಶಭಾವಕ್ಕೆ ಪ್ರವೇಶ ಮಾಡುತ್ತಾನೆ. ಇವನು ಧನಲಾಭ, ಕಾರ್ಯಗಳಲ್ಲಿ ಕೀರ್ತಿಯನ್ನು ನೀಡುವನು. ಗುರುಬಲವಿಲ್ಲ. ಏಪ್ರಿಲ್ ನಲ್ಲಿ ಮೇಷರಾಶಿಗೆ ಪ್ರವೇಶಿಸುವನು. ಅಷ್ಟಾಗಿ ಶುಭವಿರದು. ಶನಿಯ ಬಲವೇ ನಿಮಗೆ ಬಹಳ ಬೆಂಬಲ, ಧೈರ್ಯವನ್ನು ನೀಡುತ್ತದೆ. ಉದ್ಯೋಗದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣುತ್ತೀರಿ. ಈ ತಿಂಗಳು ಶುಭಫಲಗಳಿವೆ. ಯಾವುದೇ ವಿಘ್ನಗಳು ನಿಮ್ಮ ಕಾರ್ಯಕ್ಕೆ ವಿಘ್ನವನ್ನು ತರಲಾರವು. ಉನ್ನತ ಸ್ಥಾನಮಾನಗಳು ಸಿಗಲಿವೆ.
  2. ವೃಷಭ: ಶುಭಕರವಾದ ಗುರುಬಲವಿದೆ. ಲಾಭವನ್ನು ಮಾಡುತ್ತಾನೆ. ಆಸೆಪಟ್ಟ ಕಾರ್ಯಗಳು ಆಗುತ್ತವೆ. ದಶಮಕ್ಕೆ ಶನಿಯ ಸಂಚಾರವಾಗಲಿದೆ. ಸ್ಥಿರತೆಯಿರಲಿದೆ ಉದ್ಯೋಗದಲ್ಲಿ. ಮಹಾಲಾಭವಿಲ್ಲದಿದ್ದರೂ ಅಪಕೀರ್ತಿಯಂತೂ ಬಾರದು. ಕುಟುಂಬದಲ್ಲಿ ಗೌರವವನ್ನು ಗುರು ಕೊಡಿಸುತ್ತಾನೆ. ತಂದೆಯಿಂದ ಬೆಂಬಲವಿರುತ್ತದೆ. ಆಭರಣ ಖರೀದಿಯನ್ನು ಮಾಡುವಿರಿ. ಪುಣ್ಯಸ್ಥಳಗಳ ದರ್ಶನವನ್ನು ಪಡೆಯುವಿರಿ. ರಾಜಕೀಯವಾಗಿ ಬೆಳಯುವವರಿಗೆ ಅವಕಾಶಗಳು ಸಿಗಲಿವೆ.
  3. ಮಿಥುನ: ಅಷ್ಟಮಭಾವದ ಶನಿಯಿಂದ ಅನೇಕ ನೋವುಗಳನ್ನು ಉಂಡಿದ್ದೀರಿ. ಹಣಕಾಸಿನ ಸಮಸ್ಯೆಗಳೂ ನಿಮ್ಮನ್ನು ಬಿಟ್ಟಿಲ್ಲ. ಜನವರಿಯಲ್ಲಿ ನವಮಸ್ಥಾನಕ್ಕೆ ಶನಿಯು ಪ್ರವೇಶಿಸುವನು. ಶುಭವನ್ನೇ ನೀಡುವನು. ದಶಮದಲ್ಲಿ ಇರುವ ಗುರುವು ಒಳ್ಳೆಯ ಕಾರ್ಯಕ್ಕೆ ಜೋಡಿಸುವನು. ದ್ವಾದಶದ ಮಂಗಳನು ಭೂಮಿಯನ್ನು ನಷ್ಟಗೊಳಿಸುವನು. ಕುಜನ ಸ್ಥಾನಾಂತರವನ್ನು ನಿರೀಕ್ಷಿಸಿ. ನಷ್ಟ ಮತ್ತು ಕಷ್ಟಗಳನ್ನು ಅನುಭವಿಸಿದ ನೀವು ಸುಖದ ನಿರೀಕ್ಷೆಯಲ್ಲಿ ಇರಿ.
  4. ಕಟಕ: ಈ ತಿಂಗಳು ಗುರುಬಲವಿದೆ. ಇಲ್ಲಿಯವರಗೆ ಸಪ್ತಮದಲ್ಲಿದ್ದ ಶನಿಯು ಅಷ್ಟಮಕ್ಕೆ ಹೋಗುವನು. ಆ ನಿಮಗೆ ಬಹಳಷ್ಟು ಸಮಸ್ಯೆಗಳು ಎದುರಾಗಬಹುದು. ನಿಮ್ಮವರ ವಿರೋಧ ಸಿಗಲಿದೆ‌. ಕೌಟುಂಬಕಕಲಹ ಅತಿಯಾಗಬಹುದು. ಮನಸ್ಸಿನ ತುಮುಲದಿಂದಾಗಿ ಏನೆಲ್ಲ ಸಂಬಂಧಿಸಬಹುದು. ಸಹನೆಯನ್ನೇ ಗಟ್ಟಿಯಾಗಿ ಇಟ್ಟುಕೊಳ್ಳಿ ಸ್ವಲ್ಪ ಕಾಲ. ಸರಿಯಾಗುವುದು. ಉದ್ಯೋಗದಲ್ಲಿ ಒತ್ತಡವಿರಲಿದೆ. ನಿಮ್ಮ ಶ್ರಮ ಕಾರ್ಯವೈಖರಿಯು ನಗಣ್ಯವಾಗುತ್ತದೆ. ಇದು ಗ್ರಹಗತಿಯ ಕಾರಣದಿಂದ ಆಗುತ್ತದೆ. ತಾಳ್ಮೆಯೇ ಇದಕ್ಕೆಲ್ಲ ಉತ್ತರವಾಗಲಿದೆ.
  5. ಸಿಂಹ: ಗುರುಬಲವಿಲ್ಲ. ಷಷ್ಠದಿಂದ ಸಪ್ತಮಕ್ಕೆ ಶನಿ ಬರುವನು. ಈಗಾಗಲೇ ಲಾಭವನ್ನು ನೀಡಿರುತ್ತಾನೆ. ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ. ಆಲೋಚಿಸಿ ಕಾರ್ಯಗಳನ್ನು ಮಾಡಿ, ಮುನ್ನಡೆಸಿ. ಜನವರಿಯಲ್ಲಿ ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವನು. ತಂದೆ ಹಾಗೂ ಮಕ್ಕಳ ನಡುವೆ ವೈಮನಸ್ಯವನ್ನು ಉಂಟುಮಾಡುವನು. ಶುಕ್ರನು ಕುಂಭರಾಶಿಯನ್ನು ಪ್ರವೇಶಿಸಿದಾಗ ಅನಾರೋಗ್ಯ, ಕಾಲಿಗೆ ಸಂಬಂಧಪಟ್ಟ ಖಾಯಿಲೆಗಳು ಕಾಣಿಸಬಹುದು. ಅಷ್ಟಮದ ಗುರುವು ಕಾರ್ಯವಿಳಂಬವನ್ನು ಮಾಡಿಸುತ್ತಾನೆ. ತಾಳ್ಮೆಯೇ ನಿಮ್ಮ ಅಸ್ತ್ರವಾಗಲಿ.
  6. ಕನ್ಯಾ: ಈಗ ನಿಮಗೆ ಕಲ್ಲು ಮುಟ್ಟಿದರೂ ಚಿನ್ನವಾಗುವ ಸಮಯ. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಶನಿಯ ಆರನೇ ಮನೆ ಪ್ರವೇಶ ನಿಮಗೆ ಬಹಳ ಲಾಭವನ್ನು ತಂದುಕೊಡುತ್ತದೆ. ಅನೇಕ ದಿನಗಳಿಂದ ಕನಸು ಕಾಣುತ್ತಿದ್ದ ಒಂದು ಮಹತ್ಕಾರ್ಯಕ್ಕೆ ಈಗ ಕೈ ಹಾಕುತ್ತೀರಿ. ನಡೆಸಿಕೊಡಬಹುದಾದ ಮಾತುಗಳನ್ನು ಮಾತ್ರ ಆಡಿ. ಇಲ್ಲವಾದರೆ ನಿಮ್ಮನ್ನು ಅಪಕೀರ್ತಿ ಬೆನ್ನಟ್ಟಿ ಬರುವುದು. ಷಷ್ಠಭಾವದ ಶನಿಯು ಅನಾರೋಗ್ಯವನ್ನೂ ನಿಶ್ಶತ್ರುಗಳನ್ನೂ ಮಾಡುವನು. ಸಪ್ತಮದ ಗುರುವು ಗುರು ಸಕಲಶುಭಕಾರ್ಯಗಳಿಗೂ ಯಶಸ್ಸನ್ನು ಕೊಡುವನು. ಗೌರವಾದಿಗಳು ಅರಸಿ ಬರುವುವು.
  7. ತುಲಾ: ಈ ಮಾಸದಲ್ಲಿ ಗುರುಬಲವಿಲ್ಲ. ಚತುರ್ಥದಿಂದ ಪಂಚಮಕ್ಕೆ ದಾಟಲಿದ್ದಾನೆ ಶನಿ. ಸ್ವಾಸ್ಥ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಯೋಜನೆಗಳು ಅಪೂರ್ಣಗೊಳ್ಳುವುವು. ಕೆಲವು ನಿರ್ಧಾರಗಳು ಸಮಾಧಾನ ತರುವುದಿಲ್ಲ. ಖರ್ಚು ಹೆಚ್ಚಾಗಲಿದೆ. ಶ್ರಮ ಹೆಚ್ಚು ಫಲ‌ ಕಡಿಮೆ. ರವಿ , ಬುಧ, ಶುಕ್ರರ ಸಂಯೋಗದಿಂದ ಕುಟುಂಬದಲ್ಲಿ ವಾತಾವರಣ ಸ್ವಲ್ಪ ತಿಳಿಯಾಗುವುದು. ಯಾವುದೇ ಸಾಹಸದ ತೀರ್ಮನ, ಕೆಲಸಗಳನ್ನು ಮಾಡಲು ಹೋಗಬೇಡಿ.
  8. ವೃಶ್ಚಿಕ: 2023 ಮೊದಲ ತಿಂಗಳು ಬಲವಂತ ಮಾಸವಾಗಲಿದೆ. ಅನೇಕ ಗ್ರಹರು ಅನುಕೂಲವನ್ನು ಮಾಡುವರು. ಚತುರ್ಥಕ್ಕೆ ಹೋಗುವ ಶನಿಯು ಸ್ವಲ್ಪಮಟ್ಟಿನ ಅನನುಕೂಲವನ್ನು ಮಾಡುವನು. ಗುರುಬಲವಿರುವಾಗ ದೀಪದ ಎದುರು ಕತ್ತಲೆಯಷ್ಟೇ ಪ್ರಭಾವವಿರಲಿದೆ. ವಿವಾಹದ ಮಾತುಕತೆಗಳು ನಡಯಲಿವೆ. ಪಂಚಮದ ಗುರುವು ವಿದ್ಯಾರ್ಥಿಗಳಿಗೆ ಶುಭವನ್ನು ಎಸಗುವನು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೇರಣೆಯನ್ನು ಕೊಡುವನು. ಷಷ್ಠದ ರಾಹು ಶತ್ರುಕುಲಸಂಹಾರಕನಾಗಿರುವನು. ವಿದೇಶ ಪ್ರಯಾಣವು ಸಾಧ್ಯತೆಯಿದೆ.
  9. ಧನಸ್ಸು: 2023ರ ಜನವರಿಯಲ್ಲಿ ಈ ರಾಶಿಯ ತೃತೀಯದಲ್ಲಿ ಶನಿಯಿರಲಿರುವನು. ನಷ್ಟ ಹಾಗೂ ಕಷ್ಟಗಳಿಂದ ಮುಕ್ತಿಯೂ ಅಗಲಿದೆ. ಸಾಡೇಸಾತ್ ಈ ತಿಂಗಳಲ್ಲಿ ಮುಕ್ತಾಯವಾಗಲಿದೆ. ಕಾರ್ಯದ ನಿಮಿತ್ತ ಮನೆಯಿಂದ ದೂರವಾಗಿದ್ದರೆ ಇನ್ನು ಮನೆಗೆ ಮರಳಲಿದ್ದೀರಿ. ಏನನ್ನಾದರು ಹೊಸತನ್ನು ಮಾಡಬೇಕೆಂದು ಅಂದುಕೊಂಡರೆ, ಮೂರರ ಶನಿಯು ನೂರು ಬಲವನ್ನು ನೀಡುವನು. ಭೂಲಾಭವನ್ನು ಆರರ ಮಂಗಳನು ಕೊಡುವನು. ಒಳ್ಳೆಯ ಭೂಮಿಯನ್ನು ಖರೀದಿಸಿ.
  10. ಮಕರ: ದ್ವಿತೀಯದ ಶನಿಯು ತೃತೀಯಕ್ಕೆ ಈ ತಿಂಗಳಲ್ಲಿ ಚಲಿಸುವನು. ಏಳುವರೆಯ ಶನಿಯು ಉಳಿದ ಎರಡುವರೆ ವರ್ಷದ ಭಾಗಕ್ಕೆ ಹೋಗುವನು. ಈ ತಿಂಗಳಲ್ಲಿ ಹೊಸ ಅವಕಾಶಗಳಿಗೆ ಅವಕಾಶವಿಲ್ಲ. ಸಿಕ್ಕ ಅವಕಾಶಗಳೇ ಚೆನ್ನಾಗಿರಲಿದೆ. ತೃತೀಯದ ಗುರು ಕಿಂಚಿತ್ ಲಾಭವನ್ನು ತರುವನು. ಮುಳುಗುವವಗೆ ಹುಲ್ಲುಕಡ್ಡಿಯು ಆಸರೆಯಾದಂತೆ ಆಗಲಿದೆ. ಉತ್ತಮ ಬದಲಾವಣೆಯ ನಿರೀಕ್ಷೆಯಲ್ಲಿರಿ. ಪರಿಶ್ರಮಕ್ಕೆ ಪಕ್ವವಾದ ಫಲವೇ ಸಿಗಲಿದೆ.
  11. ಕುಂಭ: ರಾಹುಬಲವಿದೆ. ಸಾಡೇಸಾತ್ ನ ಕೋಟೆಯಲ್ಲಿ ಬಂಧಿಯಾಗಿರುವಿರಿ. ಗುರುಬಲವೂ ಇದೆ. ಆದರೆ ಕೆಲವು ಬೇಸರದ ಸನ್ನಿವೇಶಗಳು ಎದುರಾಗಲಿವೆ. ನಡೆ-ನುಡಿಗಳ ಬಗ್ಗೆ ಆದಷ್ಟು ಜಾಗರೂಕರಾಗಿರಿ. ಅಪಕೀರ್ತಿಯು ಬಂದು ನಿಮ್ಮನ್ನು ಅಪ್ಪಿಕೊಳ್ಳಬಹುದು. ಚತುರ್ಥದ ಕುಜನ ಆವಾಸವು ವಾಹನ ಖರೀದಿಯನ್ನು ಮಾಡಿಸುತ್ತದೆ. ಬುದ್ಧಿಯ ಉಪಯೋಗವನ್ನು ರವಿ, ಬುಧ, ಶುಕ್ರರು ಮಾಡಿಸಿಕೊಡಲಿದ್ದಾರೆ. ಇದರಿಂದ ವೃತ್ತಿಯಲ್ಲಿ ಕೀರ್ತಿ ಸಿಗುವುದು. ಸಂತಾನದ ಸುವಾರ್ತೆ ಕೇಳಿಬರಲಿದೆ.
  12. ಮೀನ: ಹಣಕಾಸಿನ ಮುಗ್ಗಟ್ಟಿನಿಂದಲೇ ಈ ವರ್ಷದ ಆರಂಭವಾಗಲಿದೆ. ಏಳುವರೆಯ ಶನಿಯ ಪ್ರಭಾವವೂ ಇರಲಿದೆ. ಕುಂಟುತ್ತ ಎಲ್ಲ ಕೆಲಸವೂ ಸಾಗುತ್ತದೆ. ಸದಾ ಅಸಮಾಧಾನವು ನಿಮ್ಮ ಸುತ್ತಲಿರುತ್ತದೆ. ವರ್ಗಾವಣೆಯನ್ನೂ ನಿರೀಕ್ಷಿಸಬಹುದು. ಮನಸ್ಸಿಲ್ಲದ ಮನಸ್ಸಿನಿಂದ ಹೋಗಬೇಕಾಗಬಹುದು. ಸಂಪತ್ತಿನ ಸಮಸ್ಯೆಯೂ ಇದುರಾಗುವುದು. ಏಪ್ರಿಲ್ ನಲ್ಲಿ ಗುರುವು ಸ್ಥಾನಾಂತರ ಪಡೆದು ನಿರಾಳವನ್ನು ಕೊಡಿಸುವನು. ಗುರುವಿನಿಂದ ಗೊತ್ತಿಲ್ಲದೆ ಖರ್ಚುಗಳು ತನ್ನಷ್ಟಕ್ಕೇ ಆಗುತ್ತಿರುತ್ತದೆ.

ಲೇಖನ: ಲೋಹಿತಶರ್ಮಾ ಇಡುವಾಣಿ

ಮತ್ತಷ್ಟು ಜೋತ್ಯಿಷ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.