
11-01-2026ರಿಂದ 17-01-2026ರವರಗೆ ಉದ್ಯೋಗದಲ್ಲಿ ನಾನಾ ಬಗೆಯ ವಿಷಮತೆಗಳು ಕಂಡುಬಂದರೂ ಅಂತ್ಯದಲ್ಲಿ ಸಮತ್ವ ಉಂಟಾಗಲಿದೆ. ನಿರುದ್ಯೋಗಿಗಳಿಗೆ ಅವರಿಗೆ ಬೇಕಾದ ಕೆಲಸವಿಲ್ಲ ಎಂಬ ಬೇಸರವೇ ಅಧಿಕ. ನಿಮ್ಮ ಮನಸ್ಸಿನ ಮೇಲೆ ಈ ವಾರ ಹೆಚ್ಚು ಪರಿಣಾಮಕಾರಿಯಾದ ಪ್ರಭಾವ ಬೀರಲಿದೆ.
ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಹೊಣೆಗಾರಿಕೆಗಳಿಂದ ಮೆಚ್ಚುಗೆ ಸಿಗುತ್ತದೆ, ನಿರುದ್ಯೋಗಿಗಳಿಗೆ ಅವಕಾಶ ಸೂಚನೆ ಇದ್ದರೂ ಆತುರದ ನಿರ್ಧಾರ ಮತ್ತು ಅಸಮಾಧಾನ ಪ್ರಗತಿಯನ್ನು ಸ್ವಲ್ಪ ತಡೆಯಬಹುದು.
ಈ ವಾರದಲ್ಲಿ ಉದ್ಯೋಗಸ್ಥರಿಗೆ ಸ್ಥಿರತೆ ಹಾಗೂ ಆದಾಯ ವೃದ್ಧಿಯ ಸೂಚನೆ, ನಿರುದ್ಯೋಗಿಗಳಿಗೆ ಸಹಾಯ ಸಿಗಬಹುದು, ಆದರೆ ನಿಧಾನಗತಿ ಮತ್ತು ಬದಲಾವಣೆ ಭಯ ಅವಕಾಶಗಳನ್ನು ಕೈ ತಪ್ಪಿಸಬಹುದು.
ಮೂರನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಸಂದರ್ಶನ ಯೋಗ ಇದ್ದರೂ ಏಕಾಗ್ರತೆಯ ಕೊರತೆ ಮತ್ತು ಗೊಂದಲ ಸಂಪೂರ್ಣ ಯಶಸ್ಸಿಗೆ ಅಡ್ಡಿಯಾಗಬಹುದು.
ಚಂದ್ರನ ಆಧಿಪತ್ಯದ ಈ ರಾಶಿಯ ಉದ್ಯೋಗಸ್ಥರಿಗೆ ಅಧಿಕೃತ ಕೆಲಸಗಳಲ್ಲಿ ಅನುಕೂಲ, ನಿರುದ್ಯೋಗಿಗಳಿಗೆ ಪ್ರಯತ್ನ ಫಲ ನೀಡಬಹುದು, ಆದರೆ ಮಾತಿನ ಅಸಾವಧಾನತೆ ಮತ್ತು ಮನಸ್ತಾಪ ಮಾನಸಿಕ ಒತ್ತಡ ತರುತ್ತದೆ.
ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ನಾಯಕತ್ವ ಮತ್ತು ಗೌರವ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇದ್ದರೂ ಅಹಂಕಾರ ಮತ್ತು ಇತರರ ಅಸೂಯೆ ವಿಳಂಬಕ್ಕೆ ಕಾರಣವಾಗಬಹುದು.
ಈ ರಾಶಿಯರಿಗೆ ಎರಡನೇ ವಾರ ಉದ್ಯೋಗಸ್ಥರಿಗೆ ಶಿಸ್ತಿನ ಕೆಲಸದಿಂದ ಮೆಚ್ಚುಗೆ, ನಿರುದ್ಯೋಗಿಗಳಿಗೆ ಅವಕಾಶದ ಸೂಚನೆ ಇದ್ದರೂ ಅಧಿಕ ಒತ್ತಡ ಮತ್ತು ದಣಿವು ಉತ್ಸಾಹ ಕಡಿಮೆ ಮಾಡಬಹುದು.
ಏಳನೇ ರಾಶಿಯವರಿಗೆ ಉದ್ಯೋಗದಲ್ಲಿರುವವರಿಗೆ ಹೊಸ ಒಪ್ಪಂದ ಲಾಭ, ನಿರುದ್ಯೋಗಿಗಳಿಗೆ ಪರಿಚಯದಿಂದ ಅವಕಾಶ ಸಿಗಬಹುದು, ಆದರೆ ನಿರ್ಧಾರದಲ್ಲಿ ಗೊಂದಲ ಮತ್ತು ವಿಳಂಬವು ಪ್ರಗತಿಯನ್ನು ಕುಗ್ಗಿಸುತ್ತದೆ.
ಕುಜನ ಆಧಿಪತ್ಯದ ಈ ರಾಶಿಯವರಿಗೆ ಉದ್ಯೋಗಸ್ಥರಿಗೆ ಸ್ಪರ್ಧೆಯಲ್ಲಿ ಗೆಲುವು, ನಿರುದ್ಯೋಗಿಗಳಿಗೆ ಅವಕಾಶ ಕಾಣಿಸಿಕೊಳ್ಳಬಹುದು, ಆದರೆ ಶತ್ರುಕಾಟ ಮತ್ತು ರಹಸ್ಯ ವಿಚಾರಗಳು ಒತ್ತಡ ಹೆಚ್ಚಿಸಬಹುದು.
ಎರಡನೇ ವಾರ ಉದ್ಯೋಗದಲ್ಲಿರುವವರಿಗೆ ಬದಲಾವಣೆ ಅಥವಾ ವಿದೇಶ ಸಂಪರ್ಕ ಲಾಭ, ನಿರುದ್ಯೋಗಿಗಳಿಗೆ ಅವಕಾಶ ಇದ್ದರೂ ಅತಿಯಾದ ನಿರೀಕ್ಷೆ ಅಸ್ಥಿರತೆ ಉಂಟುಮಾಡಬಹುದು.
ಈ ವಾರ ಉದ್ಯೋಗಸ್ಥರಿಗೆ ಶ್ರಮದಿಂದ ಸ್ಥಾನಮಾನ ಹೆಚ್ಚಳ, ನಿರುದ್ಯೋಗಿಗಳಿಗೆ ನಿಧಾನವಾಗಿ ಅವಕಾಶ ಸಿಗುತ್ತದೆ, ಆದರೆ ಫಲ ತಡ ಮತ್ತು ಮಾನಸಿಕ ಒತ್ತಡ ಸಹನೆ ಪರೀಕ್ಷಿಸುತ್ತದೆ.
ಜನವರಿಯ ಈ ವಾರ ಉದ್ಯೋಗದಲ್ಲಿರುವವರಿಗೆ ತಾಂತ್ರಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಆಲೋಚನೆಗಳಿಂದ ಅವಕಾಶ, ಆದರೆ ತಂಡದ ಅಸಮಂಜಸತೆ ಮತ್ತು ವಿಳಂಬ ಅಡ್ಡಿಯಾಗಬಹುದು.
ಈ ವಾರದಲ್ಲಿ ಉದ್ಯೋಗಸ್ಥರಿಗೆ ಸಮಸ್ಯೆ ಪರಿಹಾರ, ನಿರುದ್ಯೋಗಿಗಳಿಗೆ ಕೆಲಸದ ಸೂಚನೆ ಕಂಡರೂ ಆತ್ಮವಿಶ್ವಾಸ ಕೊರತೆ ಮತ್ತು ನಿರ್ಧಾರ ವಿಳಂಬ ಪ್ರಗತಿಯನ್ನು ನಿಧಾನಗೊಳಿಸಬಹುದು.
– ಲೋಹಿತ ಹೆಬ್ಬಾರ್ – 8762924271 (what’s app only)