Shatanka Yoga 2025: ಶನಿ ಮತ್ತು ಗುರು ಸಂಯೋಗದಿಂದ ಶತಂಕ ಯೋಗ; 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
ಜುಲೈ 31ರಂದು ಶನಿ ಮತ್ತು ಗುರು ಗ್ರಹಗಳ ಅಪರೂಪದ ಶತಂಕ ಯೋಗ ರೂಪುಗೊಳ್ಳಲಿದೆ. ವೃಷಭ, ಮಕರ ಮತ್ತು ಕುಂಭ ರಾಶಿಯವರಿಗೆ ಈ ಯೋಗ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ವೃತ್ತಿ, ಆರ್ಥಿಕ, ಮತ್ತು ಕುಟುಂಬ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಮತ್ತು ಕುಂಭ ರಾಶಿಯವರಿಗೆ ಇಷ್ಟಾರ್ಥಗಳು ಈಡೇರಲಿದೆ. ಈ ಯೋಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಜ್ಯೋತಿಷ್ಯ ದೃಷ್ಟಿಕೋನದಿಂದ ಈ ದಿನ(ಜುಲೈ 31) ಬಹಳ ವಿಶೇಷವಾಗಿದೆ. ಏಕೆಂದರೆ ಈ ದಿನದಂದು, ಎರಡು ದೊಡ್ಡ ಗ್ರಹಗಳಾದ ಶನಿ ಮತ್ತು ಗುರು ನಡುವೆ ಪ್ರಬಲವಾದ ಸಂಯೋಗ ನಡೆಯುತ್ತದೆ. ಈ ಸಂಯೋಗವು ಶತಂಕ ಯೋಗವನ್ನು ಸೃಷ್ಟಿಸಿದೆ. ಇದನ್ನು ಅಪರೂಪವೆಂದು ಪರಿಗಣಿಸಲಾಗಿದ್ದು, ಈ ಯೋಗವು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರಲ್ಲೂ ಮೂರು ರಾಶಿಯವರಿಗೆ ಅದೃಷ್ಟದ ಸುರಿಮಳೆಯಾಗಲಿದೆ.
‘ಶತಂಕ ಯೋಗ‘ ಎಂದರೇನು?
ಜ್ಯೋತಿಷ್ಯದ ಪ್ರಕಾರ, ಎರಡು ಗ್ರಹಗಳು ಪರಸ್ಪರ 100 ಡಿಗ್ರಿ ಕೋನದಲ್ಲಿದ್ದಾಗ ಅದನ್ನು ಶತಂಕ ಯೋಗ ಎಂದು ಕರೆಯಲಾಗುತ್ತದೆ. ರಾತ್ರಿ ನಿಖರವಾಗಿ ರಾತ್ರಿ 10:09 ಕ್ಕೆ, ಶನಿ ಮತ್ತು ಗುರು ಈ ವಿಶೇಷ ಸ್ಥಾನದಲ್ಲಿರುತ್ತಾರೆ. ಪ್ರಸ್ತುತ, ಶನಿ ಮತ್ತು ಗುರುಗಳು ಮೀನ ರಾಶಿಯಲ್ಲಿ ಹಿಮ್ಮುಖದಲ್ಲಿದ್ದಾರೆ ಮತ್ತು ಗುರು ಮಿಥುನ ರಾಶಿಯಲ್ಲಿ ಸಾಗುತ್ತಿದ್ದಾರೆ. ಈ ಎರಡು ಗ್ರಹಗಳ ನಡುವಿನ ಈ 100 ಡಿಗ್ರಿ ಸಂಬಂಧವು ಅತ್ಯಂತ ಶಕ್ತಿಶಾಲಿ ಮತ್ತು ಶುಭ ಯೋಗವನ್ನು ಸೃಷ್ಟಿಸುತ್ತದೆ.
ಈ ಸಂಯೋಗ ಏಕೆ ವಿಶೇಷವಾಗಿದೆ?
ಶನಿ ಮತ್ತು ಗುರು ಎರಡೂ ಪ್ರಮುಖ ಗ್ರಹಗಳು. ಶನಿ ನ್ಯಾಯ ಮತ್ತು ಕರ್ಮದ ದೇವರು. ಒಬ್ಬ ವ್ಯಕ್ತಿಯು ಮಾಡಿದ ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಮತ್ತೊಂದೆಡೆ, ಗುರುವನ್ನು ಜ್ಞಾನ, ಸಂಪತ್ತು, ಸಮೃದ್ಧಿ ಮತ್ತು ವಿಸ್ತರಣೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳು ಉತ್ತಮ ಯೋಗಕ್ಕೆ ಬಂದಾಗ, ಅದು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಆರಂಭವನ್ನು ಸೂಚಿಸುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ಮತ್ತು ತಮ್ಮ ಗುರಿಗಳಿಗೆ ಸಮರ್ಪಿತರಾಗಿರುವವರಿಗೆ ಈ ಯೋಗವು ತುಂಬಾ ಪ್ರಯೋಜನಕಾರಿಯಾಗಿದೆ.
ಈ 3 ರಾಶಿಗಳಿಗೆ ಅದೃಷ್ಟದ ಸುರಿಮಳೆ:
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ಯೋಗವು ತುಂಬಾ ಶುಭವಾಗಿದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಬಲವಾದ ಅವಕಾಶಗಳಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿಯೂ ಸಂತೋಷ ಇರಲಿದೆ.
ಇದನ್ನೂ ಓದಿ: ಮೀನ ರಾಶಿಯಲ್ಲಿ ಶನಿ ಸಂಚಾರ; 2027 ರವರೆಗೆ ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ
ಮಕರ ರಾಶಿ:
ಮಕರ ರಾಶಿಯವರಿಗೆ ಈ ಸಮಯವು ತುಂಬಾ ಫಲಪ್ರದವಾಗಿರುತ್ತದೆ. ಶನಿ ಈ ರಾಶಿಯ ಅಧಿಪತಿ. ಗುರು ಮತ್ತು ಶನಿಯ ಸಂಯೋಗವು ಅವರಿಗೆ ಅನೇಕ ಕ್ಷೇತ್ರಗಳಲ್ಲಿ ಯಶಸ್ಸನ್ನು ತರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳ ಸಿಗಬಹುದು. ವ್ಯವಹಾರದಲ್ಲಿ ಹೂಡಿಕೆಯಿಂದ ಲಾಭದ ಸಾಧ್ಯತೆಯಿದೆ. ಆರೋಗ್ಯ ಸುಧಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ ರಾಶಿ:
ಈ ‘ಶತಂಕ ಯೋಗ’ವು ಕುಂಭ ರಾಶಿಯವರಿಗೆ ವರದಾನದಂತೆ. ಇವರಿಗೆ ಅದೃಷ್ಟದ ಸುರಿಮಳೆಯಾಗಲಿದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ನೀವು ಯಶಸ್ವಿಯಾಗುತ್ತೀರಿ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆಸೆಗಳು ಈಡೇರುತ್ತವೆ. ಪ್ರಯೋಜನಕಾರಿಯಾದ ಪ್ರಯಾಣದ ಅವಕಾಶಗಳು ನಿಮಗೆ ಒದಗಿ ಬರಲಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Thu, 31 July 25




