AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan Month 2025: ಶನಿ ವಕ್ರದೃಷ್ಟಿಗೆ ಒಳಗಾಗಿದ್ದೀರಾ? ಶ್ರಾವಣ ಮಾಸದ ಶನಿವಾರ ಶಿವಲಿಂಗಕ್ಕೆ ಈ ವಸ್ತು ಅರ್ಪಿಸಿ

ಶ್ರಾವಣ ಮಾಸವು ಜುಲೈ 23 ರಿಂದ ಆರಂಭವಾಗುತ್ತಿದೆ. ಈ ಮಾಸದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿದೆ. ಶ್ರಾವಣ ಶನಿವಾರದಂದು ಶಿವನನ್ನು ಪೂಜಿಸುವುದು ಅತ್ಯಂತ ಶುಭಕರ. ಶನಿ ದೋಷ ನಿವಾರಣೆಗೆ ಕಪ್ಪು ಎಳ್ಳು, ಶಮಿ ಎಲೆ, ನೀಲಿ ಹೂವು ಮತ್ತು ಸಾಸಿವೆ ಎಣ್ಣೆಯ ದೀಪವನ್ನು ಅರ್ಪಿಸುವುದು ಉತ್ತಮ. ಇದರಿಂದ ಶನಿ ಮತ್ತು ಶಿವರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯಿದೆ.

Shravan Month 2025: ಶನಿ ವಕ್ರದೃಷ್ಟಿಗೆ ಒಳಗಾಗಿದ್ದೀರಾ? ಶ್ರಾವಣ ಮಾಸದ ಶನಿವಾರ ಶಿವಲಿಂಗಕ್ಕೆ ಈ ವಸ್ತು ಅರ್ಪಿಸಿ
ಶಿವಲಿಂಗ
ಅಕ್ಷತಾ ವರ್ಕಾಡಿ
|

Updated on: Jul 19, 2025 | 10:22 AM

Share

2025 ರ ಶ್ರಾವಣ ಮಾಸ ಜುಲೈ 23 ರಿಂದ ಪ್ರಾರಂಭವಾಗುತ್ತಿದೆ. ಈ ಮಾಸದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿದೆ. ಮತ್ತೊಂದೆಡೆ, ಶನಿವಾರ ಶನಿ ದೇವರನ್ನು ಪೂಜಿಸುವ ದಿನ. ಶ್ರಾವಣ ಮಾಸದ ಮೊದಲ ಶನಿವಾರವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ದೇವರು ಸ್ವತಃ ಶಿವನ ಕಟ್ಟಾ ಭಕ್ತ, ಆದ್ದರಿಂದ ಶ್ರಾವಣ ಶನಿವಾರದಂದು ಶಿವನನ್ನು ಪೂಜಿಸುವುದರಿಂದ ಶನಿಯ ವಕ್ರ ದೃಷ್ಟಿಯಿಂದ ನೀವು ಮುಕ್ತಿಯನ್ನು ಪಡೆಯಬಹುದು.

ಜಾತಕದಲ್ಲಿ ಶನಿಯ ಸಾಡೇಸಾತಿ ಇರುವವರು ಶ್ರಾವಣ ಶನಿವಾರದಂದು ಶಿವನನ್ನು ಪೂಜಿಸುವುದು ತುಂಬಾ ಒಳ್ಳೆಯದು. ಶನಿವಾರ ಶಿವಲಿಂಗಕ್ಕೆ ಈ 4 ವಸ್ತುಗಳನ್ನು ತುಂಬಾ ಮುಖ್ಯ. ಇವು ಶನಿಗೆ ಮಾತ್ರ ಪ್ರಿಯವಾದವುಗಳಲ್ಲ, ಶಿವನಿಗೂ ಸಹ ಪ್ರಿಯವಾದುದು ಎಂದು ನಂಬಲಾಗಿದೆ.

ಶನಿವಾರ ಶಿವಲಿಂಗಕ್ಕೆ ಏನು ಅರ್ಪಿಸಬೇಕು?

ಶ್ರಾವಣ ಮಾಸದ ಶನಿವಾರದಂದು ಶಿವಲಿಂಗಕ್ಕೆ ಕಪ್ಪು ಎಳ್ಳು, ಶಮಿ ಎಲೆ ಮತ್ತು ನೀಲಿ ಹೂವುಗಳನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಶನಿವಾರ ಶಿವಲಿಂಗದ ಬಳಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ಮತ್ತು ನೀರನ್ನು ಅರ್ಪಿಸುವುದು ಸಹ ಫಲಪ್ರದವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಕಪ್ಪು ಎಳ್ಳು:

ಶನಿವಾರ ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸುವುದರಿಂದ ಶನಿ ದೋಷದಿಂದ ಪರಿಹಾರ ಸಿಗುತ್ತದೆ ಮತ್ತು ಶನಿ ದೇವರ ಆಶೀರ್ವಾದ ಸಿಗುತ್ತದೆ.

ಶಮಿ ಎಲೆಗಳು:

ಶಮಿ ಗಿಡವು ಶನಿ ದೇವನಿಗೆ ಪ್ರಿಯವಾದದ್ದು, ಆದ್ದರಿಂದ ಶನಿವಾರ ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುವುದರಿಂದ ಶನಿಯು ಸಂತೃಪ್ತನಾಗುತ್ತಾನೆ. ಅಲ್ಲದೆ, ಸಾಡೇಸತಿ ಮತ್ತು ಧೈಯ್ಯಾಗಳ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ.

ನೀಲಿ ಹೂವುಗಳು:

ನೀಲಿ ಹೂವುಗಳು ಶನಿ ಗ್ರಹವನ್ನು ಪ್ರತಿನಿಧಿಸುತ್ತವೆ ಮತ್ತು ಶಿವನಿಗೆ ಪ್ರಿಯವಾದವು, ಆದ್ದರಿಂದ ಶನಿವಾರ ಶಿವಲಿಂಗಕ್ಕೆ ನೀಲಿ ಹೂವುಗಳನ್ನು ಅರ್ಪಿಸುವುದರಿಂದ ಶನಿದೇವನ ವಿಶೇಷ ಆಶೀರ್ವಾದ ಸಿಗುತ್ತದೆ.

ಇದನ್ನೂ ಓದಿಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ

ಸಾಸಿವೆ ಎಣ್ಣೆ:

ಶ್ರಾವಣ ಮಾಸದ ಶನಿವಾರ ಶಿವಲಿಂಗದ ಮೇಲೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಶನಿ ದೇವರು ಪ್ರಸನ್ನರಾಗುತ್ತಾರೆ ಮತ್ತು ಶನಿ ದೋಷದಿಂದ ಪರಿಹಾರ ಪಡೆಯುತ್ತಾರೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಶ್ರಾವಣ ಶನಿವಾರದಂದು ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ, ಶನಿದೇವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಶನಿಯ ಸಾಡೇಸಾತಿ ಮತ್ತು ಧೈಯದಿಂದಾಗುವ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಅಲ್ಲದೆ, ಶ್ರಾವಣ ಶನಿವಾರದಂದು ಶಿವ ಮತ್ತು ಶನಿದೇವರ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ