AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravana Maas 2025: ಶ್ರಾವಣ ಮಾಸದ ಪ್ರತಿದಿನದ ಮಹತ್ವ ಹಾಗೂ ಪ್ರಮುಖ ಹಬ್ಬಗಳ ಮಾಹಿತಿ

2025ರ ಶ್ರಾವಣ ಮಾಸವು ಜುಲೈ 25 ರಿಂದ ಆಗಸ್ಟ್ 28 ರವರೆಗೆ ಆಚರಿಸಲಾಗುತ್ತದೆ. ಶಿವಪೂಜೆಗೆ ವಿಶೇಷ ಮಹತ್ವವಿರುವ ಈ ಮಾಸದಲ್ಲಿ ಶ್ರಾವಣ ಸೋಮವಾರ ವ್ರತ, ಶ್ರಾವಣ ಶುಕ್ರವಾರ ವ್ರತ ಮುಂತಾದ ವಿವಿಧ ವ್ರತಗಳು ಮತ್ತು ಹಬ್ಬಗಳು ಆಚರಿಸಲ್ಪಡುತ್ತವೆ. ಪ್ರತಿ ದಿನವೂ ವಿಭಿನ್ನ ದೇವತೆಗಳಿಗೆ ಅರ್ಪಿತವಾಗಿದ್ದು, ಶ್ರಾವಣ ಪೂರ್ಣಿಮೆ, ರಕ್ಷಾ ಬಂಧನ ಮುಂತಾದ ಪ್ರಮುಖ ಹಬ್ಬಗಳನ್ನು ಒಳಗೊಂಡಿದೆ.

Shravana Maas 2025: ಶ್ರಾವಣ ಮಾಸದ ಪ್ರತಿದಿನದ ಮಹತ್ವ ಹಾಗೂ ಪ್ರಮುಖ ಹಬ್ಬಗಳ ಮಾಹಿತಿ
ಶ್ರಾವಣ ಮಾಸ
ಅಕ್ಷತಾ ವರ್ಕಾಡಿ
|

Updated on:Jul 25, 2025 | 10:42 AM

Share

2025 ರ ಶ್ರಾವಣ ಮಾಸ ಜುಲೈ 25 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿದೆ. ಶ್ರಾವಣ ಶಿವರಾತ್ರಿ ಪ್ರಮುಖವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಜೊತೆಗೆ ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರೀಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಶ್ರಾವಣ ಮಾಸವು ಜುಲೈ 25 ರಂದು ಶುಕ್ರವಾರದಿಂದ ಪ್ರಾರಂಭವಾಗಿ ಆಗಸ್ಟ್ 23, 2025 ರಂದು ಶುಕ್ರವಾರ ಕೊನೆಗೊಳ್ಳುತ್ತದೆ. ಶ್ರಾವಣ ಸೋಮವಾರ ವ್ರತವನ್ನು ಪ್ರತಿ ಸೋಮವಾರ, ಜುಲೈ 28, ಆಗಸ್ಟ್ 4, ಆಗಸ್ಟ್ 11, ಆಗಸ್ಟ್ 18 ರಂದು ಆಚರಿಸಲಾಗುತ್ತದೆ.

ಶ್ರಾವಣ ಮಾಸದ ಪ್ರತಿಯೊಂದು ದಿನದ ಮಹತ್ವ:

  • ಸೋಮವಾರ: ಶಿವನಿಗೆ ಅರ್ಪಿತ. ಶಿವನನ್ನು ಭಕ್ತಿಯಿಂದ ಪೂಜಿಸಲು ಭಕ್ತರು ಶ್ರಾವಣ ಸೋಮವಾರ ವ್ರತವನ್ನು ಆಚರಿಸುತ್ತಾರೆ.
  • ಮಂಗಳವಾರ: ಗೌರಿ ದೇವಿಗೆ ಅರ್ಪಿತ. ಈ ದಿನ ಮಹಿಳೆಯರು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ.
  • ಬುಧವಾರ: ಶ್ರೀಕೃಷ್ಣ ಅಥವಾ ವಿಷ್ಣುವಿಗೆ ಅರ್ಪಿತ.
  • ಗುರುವಾರ: ಭಗವಾನ್ ಬುದ್ಧನಿಗೆ ಅರ್ಪಿತ.
  • ಶುಕ್ರವಾರ: ಲಕ್ಷ್ಮಿ ದೇವಿಗೆ ಅರ್ಪಿತ. ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಶ್ರಾವಣ ಶುಕ್ರವಾರ ವ್ರತವನ್ನು ಆಚರಿಸುತ್ತಾರೆ.
  • ಶನಿವಾರ: ಶನಿ ದೇವನಿಗೆ ಅರ್ಪಿತ. ಶನಿಯ ವಕ್ರದೃಷ್ಟಿಯ ಪರಿಣಾಮಗಳನ್ನು ಕಡಿಮೆ ಮಾಡಲು ಬಯಸುವವರು ಶನಿವಾರ ವ್ರತವನ್ನು ಅನುಸರಿಸುತ್ತಾರೆ.
  • ಭಾನುವಾರ: ಸೂರ್ಯದೇವನಿಗೆ ಅರ್ಪಿತ.

ಶುಭ ಸಮಾರಂಭಗಳಿಗೆ ಜುಲೈ 26, 27, 30, 31 ಮತ್ತು ಆಗಸ್ಟ್ 3, 5, 7, 8, 10, 11, 14, 15, 17 ಮತ್ತು 18 ಉತ್ತಮ ದಿನವಾಗಿದ್ದು, ವಿವಿಧ ಧಾರ್ಮಿಕ ಮತ್ತು ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಶ್ರಾವಣ ಮಾಸದ ಇತರ ಹಲವು ಹಬ್ಬಗಳು:

ಹಬ್ಬ ದಿನಾಂಕಗಳು ಕ್ಯಾಲೆಂಡರ್
ಕಾಮಿಕಾ ಏಕಾದಶಿ ಜುಲೈ 21, 2025 ಶ್ರಾವಣ ಮಾಸದ ಕೃಷ್ಣ ಪಕ್ಷ
ನಾಗರ ಪಂಚಮಿ 29 ಜುಲೈ 2025 ಶ್ರಾವಣ ಮಾಸದ ಅಮವಾಸ್ಯೆಯ ನಂತರದ 5 ನೇ ದಿನ
ಶ್ರಾವಣ ಪುತ್ರ ಏಕಾದಶಿ 05 ಆಗಸ್ಟ್ 2025 ಶ್ರಾವಣ ಪೂರ್ಣಿಮಾ ಮೊದಲ ಶುಕ್ರವಾರ
ವರಲಕ್ಷ್ಮಿ ವ್ರತ 08 ಆಗಸ್ಟ್ 2025 ಶ್ರಾವಣ ಮಾಸದ ಅಮವಾಸ್ಯೆಯ ನಂತರದ 11 ನೇ ದಿನ
ಶ್ರಾವಣ ಪೂರ್ಣಿಮೆ ಅಥವಾ ನೂಲು ಹುಣ್ಣಿಮೆ 09 ಆಗಸ್ಟ್ 2025 ಶ್ರಾವಣ ಪೂರ್ಣಿಮಾ (ಹುಣ್ಣಿಮೆ)
ರಕ್ಷಾ ಬಂಧನ 09 ಆಗಸ್ಟ್ 2025 ಶ್ರಾವಣ ಪೂರ್ಣಿಮಾ (ಹುಣ್ಣಿಮೆ)
ಕೃಷ್ಣ ಜನ್ಮಾಷ್ಟಮಿ 15 ಆಗಸ್ಟ್ 2025 ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Fri, 18 July 25

ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ