Horoscope: ಯಾರನ್ನೂ ಲಘುವಾಗಿ ಕಾಣುವುದು ಬೇಡ, ಧನ ಸಹಾಯ ಸಿಗುವುದು

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್​ 01: ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು. ಇಂದು ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಹಾಗಾದರೆ ಡಿಸೆಂಬರ್​ 01ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಯಾರನ್ನೂ ಲಘುವಾಗಿ ಕಾಣುವುದು ಬೇಡ, ಧನ ಸಹಾಯ ಸಿಗುವುದು
ಯಾರನ್ನೂ ಲಘುವಾಗಿ ಕಾಣುವುದು ಬೇಡ, ಧನ ಸಹಾಯ ಸಿಗುವುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸುಕರ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಸಂಜೆ 04:36 ರಿಂದ 06:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ರಿಂದ 01:47 ರವರೆಗೆ, ಗುಳಿಕ ಕಾಲ ಮಧ್ಯಾಹ್ನ03:11 ರಿಂದ 04:36 ರವರೆಗೆ.

ತುಲಾ ರಾಶಿ: ಮಕ್ಕಳ ವಿಚಾರಕ್ಕೆ ಸಾಲವನ್ನು ಪಡೆಯಬೇಕಾಗುವುದು. ಇಂದು ನಿಂತಿರುವ ಕಾರ್ಯಗಳಿಗೆ ಸರಿಯಾದ ಕಾಯಕಲ್ಪವನ್ನು ಕೊಡುವಿರಿ. ಕೋಪವನ್ನು ಶಾಂತ ಮಾಡಿಸಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು. ಇಂದು ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆ ಬೇಡ. ವಿವಾಹದ ಮಾತುಕತೆಯನ್ನೂ ಮುಂದೂಡುವುದು ಉತ್ತಮ. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನ ಸಹಾಯವು ಸಿಗುವುದು. ಯಾರನ್ನೂ ಲಘುವಾಗಿ ಕಾಣುವುದು ಬೇಡ. ಇಂದು ವಹಿಸಿಕೊಂಡ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾದೀತು. ನಿಮ್ಮ ಆಪತ್ತಿಗೆ ಸಹಾಯ ಮಾಡುವವರನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಸೂಕ್ಷ್ಮತೆಯನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಆಗುವ ಸಂತಸಕ್ಕೆ ನೀವು ಪಾಲುದಾರರಾಗಿರುವಿರಿ. ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮಗೆ ಯಶಸ್ಸನ್ನು ಲಾಭವಾಗುವ ಉತ್ತಮ ಕಾರ್ಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಸಂಗಾತಿಯ ಪ್ರೀತಿಯಿಂದ ನೀವು ಅಚ್ಚರಿಗೊಳ್ಳುವಿರಿ. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಪರರ ದ್ರವ್ಯದ ಆಸೆಯಾಗಲಿದೆ. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಒತ್ತಾಯವಿದ್ದರೂ ಧೈರ್ಯ ಸಾಲದು. ಆಪ್ತರನ್ನು ನೀವು ಮಾತಿನಿಂದಾಗಿ ದೂರ ಮಾಡಿಕೊಳ್ಳುವಿರಿ. ಬರಬೇಕಾದ ಹಣವು ನಿಮ್ಮ ಕೈ ಸೇರಲಿದೆ. ಇಂದು ನಿಮ್ಮ ನಡೆಯು ಹೊಸಬರಂತೆ ಕಾಣುವುದು. ಯಾವುದೇ ಆಟವನ್ನು ಸ್ಪರ್ಧಾಮನೋಭಾವದಿಂದ ಆಡಿದರೆ ಕ್ಷೇಮ. ದ್ವೇಷವು ಹುಟ್ಟಬಹುದು.

ಧನು ರಾಶಿ: ಗೃಹೋದ್ಯೋಗಿಗಳಿಗೆ ಒತ್ತಡ ಅಧಿಕವಾಗಿರುವುದು. ಇಂದು ನಿಮ್ಮ ಕಾರ್ಯದಲ್ಲಿ ಅಪಯಶಸ್ಸು ಬಾರದಂತೆ ಕ್ರಮವನ್ನು ತೆಗೆದುಕೊಳ್ಳಿ. ಇಂದು ನೀವು ಹೂಡಿಕೆಯ ಮುಖಾಂತರ ಆರ್ಥಿಕ ಸಬಲತೆಯನ್ನು ಪಡೆಯಲು ಯೋಚಿಸುವಿರಿ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಬಹಳ ಉತ್ಸಾಹದಿಂದ ಇರುವಿರಿ. ನಿಮ್ಮನ್ನು ಆಶ್ರಯಿಸಿ ಬಂದವರಿಗೆ ಇಲ್ಲವೆನಬೇಡಿ. ಅಪರಿಚಿತರಿಂದ ಅಗತ್ಯ ಸಹಕಾರವನ್ನು ಪಡೆಯುವಿರಿ. ನೀವು ಹೊಸ ವಾಹನವನ್ನು ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು. ಇಂದು ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಆದಾಯವನ್ನು ಹೆಚ್ಚಿಸಲು ಮತ್ತೊಂದು ಉದ್ಯೋಗವನ್ನು ಬದಲಾಯಿಸಲು ಪರಿಗಣಿಸಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು.

ಮಕರ ರಾಶಿ: ಮಾತನ್ನು ಮೀರಿ ನಡೆಯುವುದು ಬೇಡ. ನೀವು ಆದಾಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಕಡಿಮೆ ಖರ್ಚನ್ನು ಮಾತ್ರ ಯೋಜಿಸಿ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಇರುವ ವಿಚಾರವನ್ನು ನೀವು ಸ್ಪಷ್ಟಪಡಿಸಿ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡುವಿರಿ. ಸಾಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆ ಕಡಿಮೆ ಆದೀತು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ಅನಿರೀಕ್ಷಿತ ವಾರ್ತೆಗಳು ನಿಮಗೆ ದುಃಖವನ್ನು ಕೊಡಬಹುದು. ಬುದ್ಧಿವಂತಿಕೆಯಿಂದ‌ ಗೆಲವು ಸಾಧ್ಯ. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ.

ಕುಂಭ ರಾಶಿ: ಆಕಸ್ಮಿಕ ಧನಲಾಭದಿಂದ ತೊಂದರೆಗೆ ಒಳಗಾಗುವಿರಿ. ಸಾಲದ ಮರುಪಾವತಿಯಾದರೂ ಮತ್ತೆ ಸಾಲದ ಭಯವು ಕಾಡುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ಬಂಧುಗಳ ಸಹಕಾರವನ್ನು ಅಪೇಕ್ಷಿಸುವಿರಿ. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ನಿಮ್ಮನ್ನು ಅಪಹಾಸ್ಯ ಮಾಡಲಿದ್ದು ನಿಮಗೆ ಕೋಪ ಬರುವುದು. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕಬೇಕಾದೀತು. ಉಪಕಾರವು ಮರೆತುಹೋಗಬಹುದು. ಇಂದು ಸಿಟ್ಟನ್ನು ನಿಮ್ಮ ಹಿಡಿತದಲ್ಲಿ ಇರಿಸಿಕೊಳ್ಳಿ. ಎಲ್ಲಿಗಾದರೂ ಹೋಗಿ ಸುತ್ತಾಡುವ ಮನಸ್ಸಾದೀತು. ಮೇಲಧಿಕಾರಿಗಳ ಪ್ರಶ್ನೆಗೆ ಉತ್ತರಿಸಬೇಕು. ಏಕಾಂತವನ್ನು ನೀವು ಇಷ್ಟಪಡಲಾರಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು.

ಮೀನ ರಾಶಿ: ನಿಮ್ಮ ಭವಿಷ್ಯವನ್ನು ಮತ್ಯಾರೋ ನಿರ್ಧರಿಸಿದಂತೆ ಆಗಬಹುದು.‌ ಇಂದು ಅನಗತ್ಯವಾಗಿ ಯಾರದೋ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಹಿರಿಯರ ಆರೋಗ್ಯದ ಬಗ್ಗೆ ಸಮಸ್ಯೆಯಿಂದಾಗಿ ಓಡಾಟವನ್ನು ಮಾಡಬೇಕಾದೀತು. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಅವಕಾಶವು ಎಷ್ಟೇ ಇದ್ದರೂ ಬೇಕಾದುದಷ್ಟನ್ನೇ ಮಾತನಾಡಿ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬೇಡ. ಇಂದಿನ ಲೆಕ್ಕಾಚಾರದಿಂದ ಧನವ್ಯಯದ ಮಾಹಿತಿಯು ಸಿಗುವುದು. ಇದರಿಂದ ನೀವು ಅಚ್ಚರಿಗೊಳ್ಳುವಿರಿ. ಮನೆಯ ಹೊರಗೆ ಇಂದು ಹೆಚ್ಚು ಸುತ್ತಾಡುವಿರಿ. ಮಾನಸಿಕ ಒತ್ತಡದಿಂದ ಆಯಾಸವು ಅಧಿಕವಾಗುವುದು. ಇಂದು ವಸತಿಗೆ ಸಮಸ್ಯೆಯಾಗಬಹುದು.

ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ