Horoscope: ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ನಷ್ಟ ಅನುಭವಿಸುವಿರಿ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ನವೆಂಬರ್​ 30: ಕಲೆಗೆ ಸಂಬಂಧಿಸಿದಂತೆ ನೀವು ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮಾತಿಗೆ ಯಾರಾದರೂ ಕಲಹವಾಡುತ್ತ ಬರಬಹುದು. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಹಾಗಾದರೆ ನವೆಂಬರ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ನಷ್ಟ ಅನುಭವಿಸುವಿರಿ
ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ನಷ್ಟ ಅನುಭವಿಸುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಅತಿಗಂಡ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:32 ರಿಂದ 10:57ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:46 ರಿಂದ 03:11 ರವರೆಗೆ, ಗುಳಿಕ ಕಾಲ ಸಂಜೆ 06:43 ರಿಂದ 08:07 ರವರೆಗೆ.

ತುಲಾ ರಾಶಿ: ನಿಮ್ಮ ಭಾರ ಕಡಿಮೆಯಾಗಲು ಉಪಾಯವನ್ನು ಕಂಡುಕೊಳ್ಳುವಿರಿ. ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ಇಂದು ಆಗುವ ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟ. ಬುದ್ಧಿವಂತಿಕೆ ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ಕಲೆಗೆ ಸಂಬಂಧಿಸಿದಂತೆ ನೀವು ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮಾತಿಗೆ ಯಾರಾದರೂ ಕಲಹವಾಡುತ್ತ ಬರಬಹುದು. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಮನೆಯಲ್ಲಿ ನಿಮಗೆ ಕಳ್ಳತನದ ಭಯವು ಇರುವುದು. ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ಸ್ವಲ್ಪಮಟ್ಟಿಗೆ ನಷ್ಟವಾಗುವುದು. ಅನುಭವಿಗಳ ಮಾರ್ಗದರ್ಶನವು ನಿಮಗೆ ಇಂದು ಸಿಗುವುದು. ಯಾರಾದರೂ ಮಾನಸಿಕವಾದ ಒತ್ತಡವನ್ನು ತರಿಸಬಹುದು.

ವೃಶ್ಚಿಕ ರಾಶಿ: ಅನಿಶ್ಚಿತತೆಯಿಂದ ಭಯವಾಗುವ ಸಾಧ್ಯತೆ.‌ ಪ್ರಭುತ್ವವನ್ನು ಇನ್ನೊಬ್ಬರಿಂದ ಪಡೆಯುವಿರಿ. ಯಾರನ್ನೋ ಟೀಕಸುತ್ತ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ತಾತ್ಕಾಲಿಕ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಸ್ತ್ರೀಯರಿಂದ ನಿಮಗೆ ಸಂತೋಷವು ಸಿಗುವುದು. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡಬಹುದು. ವಿವಾಹ ವಿಚಾರವನ್ನು ನೀವು ಏನಾದರೂ ಹೇಳಬಹುದು. ಇಂದು ನಿಮಗೆ ಮಕ್ಕಳ‌ ಮೇಲೆ ಮೋಹವು ಅಧಿಕವಾಗಲಿದೆ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು.

ಧನು ರಾಶಿ: ಕೈಯಲ್ಲಿರುವ ಬೆಣ್ಣೆ ಬಿಟ್ಟು ತುಪ್ಪಕ್ಕೆ ಅರಸಿದರೆ ಅದು ಕಷ್ಟ. ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ನಿಮ್ಮ ಪ್ರೌಢಿಮೆಯನ್ನು ತೋರಿಸಿ. ನಿಮ್ಮ‌ ಅಭಿಪ್ರಾಯವೂ ಮುಖ್ಯವಾಗಬಹುದು. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳವಾಗಿ ಮಾತನಾಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರಲು ನಿಮ್ಮಲ್ಲಿ ಬಹಳ ಉತ್ಸಾಹವು ಇರುವುದು. ಮಕ್ಕಳನ್ನು ನೀವು ನಿಮ್ಮ ಶಿಸ್ತಿಗೆ ತರಲು ಪ್ರಯತ್ನಿಸುವಿರಿ. ವ್ಯಾಪಾರಕ್ಕೆ ಯೋಗ್ಯವಾದ ಮಾತು ಇರಲಿ.

ಮಕರ ರಾಶಿ: ಇಂದು ಮನೆಯಲ್ಲಿ ಅಸ್ವತಂತ್ರತೆಯ ಅನುಭವ ಬರಬಹುದು. ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋಧಕರಿಗೆ ಒಳ್ಳೆಯದೆಂದು ಅವಕಾಶವು ಸಿಗುವುದು. ಸಾಮಾಜಿಕ ಕೆಲಸಗಳು ನಿಮಗೆ ದಿನದ ಕೆಲಸದಂತೆ ಅಭ್ಯಾಸವಾಗುವುದು.‌ ಬಂಧುಗಳ ಆಗಮನವು ಖುಷಿಕೊಡುವುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸವು ಘಾಸಿಯಾಗಿ ನಿಮಗೆ ಬೇಸರವಾಗುವುದು.

ಕುಂಭ ರಾಶಿ: ಇಂದಿನ‌ ಲೋಭವು ನಿಮ್ಮ‌ ಸಂತೋಷವನ್ನು ಕಿತ್ತುಕೊಳ್ಳಬಹುದು. ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ‌ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಕೆಲವು ದುರಭ್ಯಾಸವನ್ನು ಬಿಡುವಿರಿ. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಯಾವುದನ್ನೂ ತಿಳಿವಳಿಕೆ ಇಲ್ಲದೇ ಮುಂದುವರಿಯುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿ ಕಾಣಿಸುವುದು. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು.

ಮೀನ ರಾಶಿ: ನಿಮ್ಮ ಶೋಧನೆ ಸತ್ಯವನ್ನು ತೋರಿಸುವ ಕಡೆ ಇರಲಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಕೆಲಸದಲ್ಲಿ ಗೊಂದಲವು ಉಂಟಾಗಬಹುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ. ಕಾಲು ನೋವಿನಿಂದ ಓಡಾಡುವುದು ಕಷ್ಟವಾದೀತು. ನಿಮ್ಮ ವರ್ತಮಾನದ ಸನ್ನಿವೇಶವನ್ನು ನೀವು ಆಪ್ತರಿಗೆ ತಿಳಿಸುವಿರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ.

ಹಗಲೆಲ್ಲ ಬಸನಗೌಡ ಯತ್ನಾಳ್ ವಿಷಯದಲ್ಲಿ ಮಾತಾಡುವುದು ಇಷ್ಟವಿಲ್ಲ: ವಿಜಯೇಂದ್ರ
ಹಗಲೆಲ್ಲ ಬಸನಗೌಡ ಯತ್ನಾಳ್ ವಿಷಯದಲ್ಲಿ ಮಾತಾಡುವುದು ಇಷ್ಟವಿಲ್ಲ: ವಿಜಯೇಂದ್ರ
ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್
ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್
ಯತ್ನಾಳ್ ಲಿಂಗಾಯತರ ಕ್ಷಮಾಪಣೆ ಕೇಳಿ ಗೌರವ ಉಳಿಸಿಕೊಳ್ಳಲಿ: ಸ್ವಾಮೀಜಿ
ಯತ್ನಾಳ್ ಲಿಂಗಾಯತರ ಕ್ಷಮಾಪಣೆ ಕೇಳಿ ಗೌರವ ಉಳಿಸಿಕೊಳ್ಳಲಿ: ಸ್ವಾಮೀಜಿ
ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ
ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ
ಆನೇಕಲ್: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು
ಆನೇಕಲ್: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು
ಮಾತಾಡಿದರೆ ಯತ್ನಾಳ್ ಸರಿಹೋಗುತ್ತಾರೆ, ಸಮಸ್ಯೆಯೇನೂ ಇಲ್ಲ: ಯಡಿಯೂರಪ್ಪ
ಮಾತಾಡಿದರೆ ಯತ್ನಾಳ್ ಸರಿಹೋಗುತ್ತಾರೆ, ಸಮಸ್ಯೆಯೇನೂ ಇಲ್ಲ: ಯಡಿಯೂರಪ್ಪ
ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಣೆ
ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಣೆ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ