AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janma Nakshatra Dosha: ಯಾವ್ಯಾವ ನಕ್ಷತ್ರಗಳಲ್ಲಿ ಜನನವಾದರೆ ದೋಷ? ಇಲ್ಲಿದೆ ಪರಿಹಾರ ಸಹಿತ ಸಂಪೂರ್ಣ ವಿವರ

ವೈದಿಕ ಜ್ಯೋತಿಷ್ಯದ ಪ್ರಕಾರವಾಗಿ ಕೆಲವು ನಕ್ಷತ್ರಗಳಲ್ಲಿ ಜನನವಾಗುವ ಮಕ್ಕಳಿಂದ ಸ್ವತಃ ಆ ಮಗುವಿಗೋ ಹಾಗೂ ಕೆಲ ಸಂದರ್ಭದಲ್ಲಿ ತಂದೆ ಅಥವಾ ತಾಯಿ ಅಥವಾ ಸೋದರ ಸಂಬಂಧಿಕರಿಗೆ ಅಪಾಯ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ ಜಾತಕದಲ್ಲಿನ ಕೆಲವು ಗ್ರಹ ಸ್ಥಿತಿಯೇ ಪರಿಹಾರ ರೂಪದಲ್ಲಿ ಕೆಲಸ ಮಾಡುತ್ತದೆ ಅಂತಲೂ ಸೂಚಿಸಲಾಗಿದೆ. ಪ್ರಾಥಮಿಕ ಮಾಹಿತಿಯಾಗಿ ಇಲ್ಲಿ ಅಂಥ ನಕ್ಷತ್ರಗಳ ಮಾಹಿತಿಯನ್ನು ನೀಡಲಾಗಿದೆ. ಮಗುವಿನ ಜನನವಾದ ನಂತರದಲ್ಲಿ ಜ್ಯೋತಿಷಿಗಳ ಬಳಿ ಒಮ್ಮೆ ಮಗುವಿನ ಜಾತಕವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಸಿಕೊಂಡು ಈ ವಿವರಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬಹುದು.

Janma Nakshatra Dosha: ಯಾವ್ಯಾವ ನಕ್ಷತ್ರಗಳಲ್ಲಿ ಜನನವಾದರೆ ದೋಷ? ಇಲ್ಲಿದೆ ಪರಿಹಾರ ಸಹಿತ ಸಂಪೂರ್ಣ ವಿವರ
ನಕ್ಷತ್ರ ಮಂಡಲ
ಸ್ವಾತಿ ಎನ್​ಕೆ
| Updated By: Digi Tech Desk|

Updated on: Jul 22, 2025 | 3:53 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಕೆಲವು ನಕ್ಷತ್ರದಲ್ಲಿ ಆಗುವಂಥ ಜನನವು ಸ್ವತಃ ಆ ಮಗುವಿಗೆ ಹಾಗೂ ಆ ನವಜಾತ ಶಿಶುವಿನ ಸಂಬಂಧಿಗಳಿಗೆ ಶುಭಕರವಲ್ಲ. ಅವು ಯಾವ ನಕ್ಷತ್ರಗಳು ಮತ್ತು ಇನ್ನೂ ಕೆಲವು ಉದಾಹರಣೆ ಸಹಿತವಾಗಿ ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಚಾರವನ್ನು ಉದಾಹರಣೆಯಾಗಿ ಹೇಳಬೇಕು ಅಂದರೆ, ಒಂದು ವೇಳೆ ಆ ಮಗುವಿನ ಜನನ ಕಾಲದಲ್ಲಿನ ಲಗ್ನದಲ್ಲಿಯೇ ಗುರು ಗ್ರಹ ಇದ್ದಲ್ಲಿ ಅಥವಾ ಗುರು ಗ್ರಹದ ದೃಷ್ಟಿಯು ಲಗ್ನದ ಮೇಲೆ ಇದ್ದಲ್ಲಿ ಈ ನಕ್ಷತ್ರ ದೋಷವು ನಿವಾರಣೆ ಆಗುತ್ತದೆ. ಗುರು ಗ್ರಹದ ದೃಷ್ಟಿ ಅಂದರೆ ಅರ್ಥ, ಯಾವ ರಾಶಿಯಲ್ಲಿ ಗುರು ಗ್ರಹ ಸ್ಥಿತವಾಗಿರುತ್ತದೋ ಅಲ್ಲಿಂದ ಐದು, ಏಳು ಹಾಗೂ ಒಂಬತ್ತನೇ ಮನೆಯ ವೀಕ್ಷಣೆಯನ್ನು ಮಾಡುತ್ತದೆ. ಹಾಗೆ ವೀಕ್ಷಿಸುವ ಮನೆಯ ಪೈಕಿ ಆ ನವಜಾತ ಶಿಶುವಿನ ಲಗ್ನವು ಇದೆ ಎಂದಾದಲ್ಲಿ ಆಗ ನಕ್ಷತ್ರ ದೋಷವು ನಿವಾರಣೆ ಆಗುತ್ತದೆ. ಈಗ ನಕ್ಷತ್ರ ದೋಷದ ವಿಚಾರಕ್ಕೆ ಬರೋಣ.

ಅಶ್ವಿನಿ ನಕ್ಷತ್ರ: ಈ ನಕ್ಷತ್ರದ ಮೊದಲನೇ ಪಾದದಲ್ಲಿ ಜನನವಾದರೆ ಆ ಮಗುವಿನ ತಂದೆಗೆ ಮೂರು ತಿಂಗಳ ಕಾಲ ತೊಂದರೆಗಳು ಇರುತ್ತವೆ. ಅದರ ಪರಿಹಾರ ಎಂಬಂತೆ ತಮ್ಮಿಂದ ಸಾಧ್ಯವಾದ ಮಟ್ಟಿಗೆ ಸಣ್ಣ ಪ್ರಮಾಣದಲ್ಲಿಯಾದರೂ ಚಿನ್ನವನ್ನು ದಾನ ಮಾಡಿದಲ್ಲಿ ರಕ್ಷಣೆಯಾಗುತ್ತದೆ.

ಭರಣಿ ನಕ್ಷತ್ರ: ಒಂದು ವೇಳೆ ಭರಣಿ ನಕ್ಷತ್ರದ ಮೂರನೇ ಪಾದದಲ್ಲಿ ಜನನವಾದರೆ ಇಪ್ಪತ್ತೇಳು ದಿನಗಳ ಕಾಲ ಆ ಮಗುವಿಗೇ ತೊಂದರೆಗಳಿರುತ್ತವೆ.

ರೋಹಿಣಿ ನಕ್ಷತ್ರ: ಈ ನಕ್ಷತ್ರದ ಮೊದಲನೇ ಪಾದದಲ್ಲಿ ಮಗು ಜನಿಸಿದರೆ ಅದರ ಸೋದರ ಮಾವನಿಗೆ, ಎರಡನೇ ಪಾದದಲ್ಲಿ ಹುಟ್ಟಿದರೆ ತಂದೆಗೆ, ಮೂರನೇ ಪಾದದಲ್ಲಿ ತಾಯಿಗೆ ಅಪಾಯ ಇರುತ್ತದೆ. ಆದರೆ ನಾಲ್ಕನೇ ಪಾದದಲ್ಲಿ ಜನನವಾದರೆ ಎಲ್ಲರಿಗೂ ಒಳ್ಳೆಯದು.

ಪುಷ್ಯ ನಕ್ಷತ್ರ: ಈ ನಕ್ಷತ್ರದಲ್ಲಿ ಹಗಲಿನಲ್ಲಿ ಗಂಡು ಮಗುವಿನ ಜನನವಾದರೆ ತಂದೆಗೆ ತೊಂದರೆ, ರಾತ್ರಿ ವೇಳೆ ಹೆಣ್ಣುಮಗುವಿನ ಜನನವಾದಲ್ಲಿ ತಾಯಿಗೆ ತೊಂದರೆ, ಮೊದಲನೇ ಪಾದದಲ್ಲಿ ಜನನವಾದರೆ ಸೋದರಮಾವನಿಗೆ, ಅದರಲ್ಲಿ ಎರಡನೇ ಪಾದದ ಮಧ್ಯಾವಧಿಯಲ್ಲಿ ಜನಿಸಿದರೆ ಸೋದರಮಾವನಿಗೆ ಮೂರು ತಿಂಗಳು ಅಪಾಯ. ಪರಿಹಾರವಾಗಿ ತಮ್ಮಿಂದ ಸಾಧ್ಯವಾದಷ್ಟು ಗಂಧದ ಚಕ್ಕೆ ಅಥವಾ ಕೊರಡನ್ನು ದಾನ ನೀಡಿದಲ್ಲಿ ಪರಿಹಾರ.

ಆಶ್ಲೇಷಾ ನಕ್ಷತ್ರ: ಮೊದಲನೇ ಪಾದದಲ್ಲಿ ಜನನವಾದರೆ ಯಾವುದೇ ದೋಷವಿಲ್ಲ. ಎರಡನೇ ಪಾದವಾದಲ್ಲಿ ಸ್ವತಃ ಆ ಮಗುವಿಗೆ ತೊಂದರೆ, ಮೂರನೇ ಪಾದದಲ್ಲಿಯಾದರೆ ತಾಯಿಗೆ, ನಾಲ್ಕನೇ ಪಾದವಾದರೆ ತಂದೆಗೆ ತೊಂದರೆ. ಪರಿಹಾರವಾಗಿ ಅನ್ನದಾನವನ್ನು ಮಾಡಬೇಕು.

ಆಶ್ಲೇಷಾ ನಕ್ಷತ್ರದ ಕೊನೆಯ ಭಾಗ ಹಾಗೂ ಮಖಾ ನಕ್ಷತ್ರದ ಮೊದಲ ಭಾಗದ ನಲವತ್ತೆಂಟು ನಿಮಿಷ (ಎರಡು ಘಟಿ) ಮತ್ತು ಇದೇ ರೀತಿ ರೇವತಿ ನಕ್ಷತ್ರದ ಕೊನೆಯ ಭಾಗ ಮತ್ತು ಅಶ್ವಿನಿ ನಕ್ಷತ್ರದ ಆರಂಭದ ಎರಡು ಘಟಿ (ನಲವತ್ತೆಂಟು ನಿಮಿಷ) ಅಶುಭ ಎಂದು ಪರಿಗಣಿಸಲಾಗುತ್ತದೆ. ಇಂಥ ಸಮಯದಲ್ಲಿ ಜನನವಾದಲ್ಲಿ ನವಗ್ರಹ ಶಾಂತಿಯನ್ನು ಮಾಡಿಸಿಕೊಳ್ಳಬೇಕು.

ಮಖಾ ನಕ್ಷತ್ರ: ಈ ನಕ್ಷತ್ರದ ಮೊದಲ ಪಾದದಲ್ಲಿ ಮಗುವಿನ ಜನನವಾದರೆ ತಂದೆಗೆ ಐದು ತಿಂಗಳ ಕಾಲ ಅಪಾಯ ಇರುತ್ತದೆ. ಪರಿಹಾರವಾಗಿ- ಹಯಗ್ರೀವ ದೇವರ ವಿಗ್ರಹವನ್ನು ದಾನ ಮಾಡಿದಲ್ಲಿ ಉತ್ತಮ.

ಉತ್ತರಾ ನಕ್ಷತ್ರ: ಮೊದಲ ಹಾಗೂ ನಾಲ್ಕನೇ ಪಾದದಲ್ಲಿ ಮಗುವಿನ ಜನನವಾದಲ್ಲಿ ಪೋಷಕರಿಗೆ ಹಾಗೂ ಆ ಮಗುವಿನ ಸೋದರ- ಸೋದರಿಯರಿಗೆ ಮೂರು ತಿಂಗಳ ಕಾಲ ಅಪಾಯ. ಇದಕ್ಕೆ ಪರಿಹಾರವಾಗಿ ಪಾತ್ರೆಯಲ್ಲಿ ಎಳ್ಳನ್ನು ಹಾಕಿ, ಅದನ್ನು ದಾನ ಮಾಡಬೇಕು.

ಚಿತ್ತಾ ನಕ್ಷತ್ರ: ಈ ನಕ್ಷತ್ರದ ಒಂದು, ಎರಡು, ಮೂರನೇ ಪಾದದಲ್ಲಿ ಜನನವಾದರೆ ಪೋಷಕರಿಗೆ ಹಾಗೂ ಆ ಮಗುವಿನ ಸೋದರ- ಸೋದರಿಯರಿಗೆ ಆರು ತಿಂಗಳು ಅಪಾಯ. ಬಟ್ಟೆಯನ್ನು ದಾನ ಮಾಡುವುದು ಇದಕ್ಕೆ ಪರಿಹಾರ.

ಜ್ಯೇಷ್ಠಾ ನಕ್ಷತ್ರ: ಆ ನಕ್ಷತ್ರ ಎಷ್ಟು ಅವಧಿಗೆ ಇದೆ ಎಂಬುದನ್ನು ನೋಡಿಕೊಳ್ಳಬೇಕು. ಅಂದರೆ ಒಟ್ಟಾರೆಯಾಗಿ ಎಷ್ಟು ಗಂಟೆಗಳ ಕಾಲ ಆ ನಕ್ಷತ್ರವಿದೆ ಎಂಬುದನ್ನು ಗುರುತು ಮಾಡಿಟ್ಟುಕೊಂಡು, ಅವಧಿಯನ್ನು ಹತ್ತು ಭಾಗ ಮಾಡಿಕೊಳ್ಳಬೇಕು. ಮೊದಲನೇ ಅವಧಿಯಲ್ಲಿ ಜನನವಾದಲ್ಲಿ ತಾಯಿಯ ತಾಯಿಗೆ, ಎರಡನೇ ಭಾಗದಲ್ಲಿ ತಾಯಿಯ ತಂದೆಗೆ, ಮೂರನೇದರಲ್ಲಿ ಪೋಷಕರಿಗೆ ಹಾಗೂ ತಾಯಿಯ ಸೋದರ- ಸೋದರಿಯರಿಗೆ, ನಾಲ್ಕನೆಯದರಲ್ಲಿ ಆ ಮಗುವಿನ ಸೋದರ- ಸೋದರಿಯರಿಗೆ, ಐದನೇ ಭಾಗದಲ್ಲಿ ಸ್ವತಃ ಆ ಮಗುವಿಗೆ ಅಪಾಯ. ಆರನೇ ಭಾಗವಾದಲ್ಲಿ ಶುಭ. ಏಳನೇ ಭಾಗವಾದಲ್ಲಿ ಆ ಮಗುವು ಗಂಡಾದಲ್ಲಿ ಬೆಳೆದು ದೊಡ್ಡದಾದ ನಂತರದಲ್ಲಿ ಅದರ ಪತ್ನಿಗೆ, ಎಂಟನೇ ಭಾಗದಲ್ಲಿ ಸ್ವತಃ ಮಗುವಿಗೆ, ಒಂಬತ್ತನೇ ಭಾಗದಲ್ಲಿ ಆ ಮಗುವಿನ ತಂದೆಗೆ, ಇನ್ನು ಹತ್ತನೇ ಭಾಗದಲ್ಲಿ ಜನನವಾದಲ್ಲಿ ಆ ಮಗುವಿನ ತಾಯಿಗೆ ಅಪಾಯ.

ಜ್ಯೇಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ಮಗುವಿನ ಜನನವಾದರೆ ತಂದೆಗೆ ಒಂಬತ್ತು ತಿಂಗಳ ಕಾಲ ಅಪಾಯ. ಇದಕ್ಕೆ ಪರಿಹಾರವಾಗಿ ಗೋದಾನವನ್ನು ಹೇಳಲಾಗಿದೆ.

ಜ್ಯೇಷ್ಠಾ ನಕ್ಷತ್ರದ ಕೊನೆ ಭಾಗ ಹಾಗೂ ಮೂಲಾ ನಕ್ಷತ್ರದ ಮೊದಲ ಭಾಗ ಎರಡೂ ಸೇರಿ ಹನ್ನೆರಡು ನಿಮಿಷ (ಅರ್ಧ ಘಟಿ) ಅಂಥರಲ ಎನ್ನಲಾಗುತ್ತದೆ. ಒಂದು ಈ ವೇಳೆ ಈ ಅವಧಿಯಲ್ಲಿ ಗಂಡು ಮಗುವಿನ ಜನನವಾದಲ್ಲಿ ಇದರಿಂದ ಸ್ವತಃ ಆ ಮಗುವಿಗೆ ತೊಂದರೆ ಆಗುತ್ತದೆ. ಆದರೆ ಇದೇ ಅವಧಿಯಲ್ಲಿ ಹೆಣ್ಣುಮಗುವಿನ ಜನನವಾದಲ್ಲಿ ಯಾವುದೇ ದೋಷವಿಲ್ಲ.

ಮೂಲಾ ನಕ್ಷತ್ರ: ಆ ನಕ್ಷತ್ರ ಎಷ್ಟು ಅವಧಿಗೆ ಇದೆ ಎಂಬುದನ್ನು ನೋಡಿಕೊಳ್ಳಬೇಕು. ಅಂದರೆ ಒಟ್ಟಾರೆಯಾಗಿ ಎಷ್ಟು ಗಂಟೆಗಳ ಕಾಲ ಆ ನಕ್ಷತ್ರವಿದೆ ಎಂಬುದನ್ನು ಗುರುತು ಮಾಡಿಟ್ಟುಕೊಂಡು, ಅವಧಿಯನ್ನು ಹನ್ನೆರಡು ಭಾಗ ಮಾಡಿಕೊಳ್ಳಬೇಕು. ಮೊದಲು- ತಂದೆಗೆ, ಎರಡು- ತಾಯಿಗೆ, ಮೂರು- ಅಣ್ಣನಿಗೆ, ನಾಲ್ಕು- ಅಕ್ಕನಿಗೆ, ಐದು- ಮಾವನಿಗೆ, ಆರು- ತಂದೆಯೊಂದಿಗೆ ಒಡಹುಟ್ಟಿದವರಿಗೆ, ಏಳು- ತಾಯಿಯೊಂದಿಗೆ ಒಡಹುಟ್ಟಿದವರಿಗೆ ಅಪಾಯ, ಎಂಟನೇ ಭಾಗದಲ್ಲಿ ಹಣಕಾಸಿನ ನಷ್ಟ, ಒಂಬತ್ತರಲ್ಲಿ ಜೀವಹಾನಿ, ಹತ್ತರಲ್ಲಿ ದಾರಿದ್ರ್ಯ, ಹನ್ನೆರಡನೇ ಭಾಗದಲ್ಲಿ ಜನನವಾದಲ್ಲಿ ಸ್ವತಃ ಆ ಮಗುವಿಗೆ ಅಪಾಯದ ಬಗ್ಗೆ ಹೇಳಲಾಗಿದೆ. ಇದು ಮೂರು ತಿಂಗಳ ಕಾಲ ಇರುತ್ತದೆ. ಎಮ್ಮೆಯನ್ನು ದಾನ ಮಾಡಿದಲ್ಲಿ ಇದಕ್ಕೆ ಪರಿಹಾರ ಎಂದು ಹೇಳಲಾಗಿದೆ.

ಮೂಲಾ ನಕ್ಷತ್ರ: ಮೊದಲನೇ ಪಾದದಲ್ಲಿ ತಂದೆಗೆ, ಎರಡನೇ ಪಾದ ತಾಯಿಗೆ, ಮೂರನೇ ಪಾದವಾದಲ್ಲಿ ಹಣಕಾಸಿನ ನಷ್ಟ ಮತ್ತು ನಾಲ್ಕನೇ ಪಾದವಾದರೆ ಶುಭ.

ಪೂರ್ವಾಷಾಢ ನಕ್ಷತ್ರ: ಈ ನಕ್ಷತ್ರದಲ್ಲಿ ಹಗಲಿನ ವೇಳೆ ಗಂಡು ಮಗುವಿನ ಜನನವಾದರೆ ತಂದೆ ಒಳಿತಲ್ಲ, ಸೂರ್ಯೋದಯ, ಸೂರ್ಯಾಸ್ತ ಅಥವಾ ಮಧ್ಯರಾತ್ರಿ ವೇಳೆ ಪೂರ್ವಾಷಾಢ ಅಥವಾ ಪುಷ್ಯ ನಕ್ಷತ್ರದಲ್ಲಿ ಮಗುವಿನ ಜನನವಾದರೆ ಇದರಿಂದ ಆ ಮಗುವಿನ ತಂದೆಗೆ ಒಳ್ಳೆಯ ಫಲಗಳಿಲ್ಲ.

ರೇವತಿ ನಕ್ಷತ್ರ: ಈ ನಕ್ಷತ್ರದ ನಾಲ್ಕನೇ ಪಾದದಲ್ಲಿ ಮಗುವಿನ ಜನನವಾದಲ್ಲಿ ಮೂರು ತಿಂಗಳ ಕಾಲ ತಂದೆಗೆ ಅಪಾಯ. ಪರಿಹಾರವಾಗಿ ತಮ್ಮಿಂದ ಸಾಧ್ಯವಾದ ಪ್ರಮಾಣದಲ್ಲಿ ಸುವರ್ಣ ದಾನ ಮಾಡಬೇಕು ಎಂದು ಹೇಳಲಾಗಿದೆ.

ಇಲ್ಲಿರುವ ಮಾಹಿತಿಯು ಸಾಮಾನ್ಯವಾದ ಅಂಶವನ್ನು ಒಳಗೊಂಡಿದ್ದು, ಮಗುವಿನ ಜನನವಾದ ನಂತರದಲ್ಲಿ ಒಮ್ಮೆ ಜ್ಯೋತಿಷಿಗಳ ಬಳಿ ತೆರಳಿ, ಜಾತಕ ಪರಾಮರ್ಶೆ ಮಾಡಿಸಿಕೊಂಡು ಮುಂದುವರಿಯಬೇಕು.

ಲೇಖನ: ಸ್ವಾತಿ ಎನ್.ಕೆ.

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ