Weekly Horoscope ವಾರ ಭವಿಷ್ಯ: ಮುಂದಿನ ವಾರ ಯಾವ ರಾಶಿಗೆ ಏನು ಫಲ?

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮುಂದಿನ ವಾರ ಯಾವ ರಾಶಿಗೆ ಏನು ಫಲ?
ವಾರ ಭವಿಷ್ಯ
Follow us
TV9 Web
| Updated By: Skanda

Updated on: Jul 10, 2021 | 6:50 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ವಾರಭವಿಷ್ಯ: ತಾ.12-07-2021 ರಿಂದ ತಾ.18-07-2021 ರ ತನಕ, ರಾಶಿಭವಿಷ್ಯ

ಮೇಷ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಬಹಳ ಲವಲವಿಕೆಯುಳ್ಳ ಕಾಲ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಕೇಳಿ ಬರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಕಂಡರು ಸ್ನೇಹಿತರ ಸಹಕಾರದಿಂದ ಅದು ಪರಿಹಾರ ವಾಗುತ್ತದೆ. ಮಕ್ಕಳ ಯೋಗಕ್ಷೇಮದ ಬಗ್ಗೆ ಸ್ವಲ್ಪ ನಿಗಾ ಇರಲಿ. ಹಣದ ಒಳಹರಿವು ಕಡಿಮೆ ಇದ್ದರೂ ಹಣದ ನಿರ್ವಹಣೆ ಸರಿಯಾಗಿ ಮಾಡುವಿರಿ. ಹಣ ಉಳಿಸುವ ವಿಷಯಗಳಲ್ಲಿ ನಿಮ್ಮ ಸಾಫಲ್ಯತೆ ಕಂಡು ಬರುತ್ತದೆ. ಕುಟುಂಬದಲ್ಲಿನ ವಿಷಯಗಳ ಬಗ್ಗೆ ಗಮನಹರಿಸುವುದು ಒಳ್ಳೆಯದು. ಸಂಗಾತಿಗೆ ಅವರ ಹಿರಿಯರಿಂದ ಧನಸಹಾಯ ಬರುತ್ತದೆ. ಲೋಹದ ಮೂರ್ತಿಗಳನ್ನು ತಯಾರು ಮಾಡಿ ಮಾರುವವರಿಗೆ ಹೆಚ್ಚಿನ ವ್ಯಾಪಾರ ವಿದೆ. ಸ್ಥಿರಾಸ್ತಿಯ ಬಗ್ಗೆ ಇದ್ದ ತಕರಾರುಗಳು ಪರಿಹಾರಕ್ಕೆ ದಾರಿಮಾಡಿಕೊಡುತ್ತವೆ. ಅದೃಷ್ಟ ಬಣ್ಣ: ಕೇಸರಿ ಬಣ್ಣ ಅದೃಷ್ಟ ಸಂಖ್ಯೆ: 9

ವೃಷಭ ರಾಶಿ: ಸಂಗಾತಿಯ ಸಹಾಯದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚರ್ಚೆ ಮನೆಯಲ್ಲಿ ನಡೆಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯದಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯನ್ನು ಕಾಣಬಹುದು. ಸಸ್ಯಸಂಪತ್ತನ್ನು ಕಾಪಾಡಲು ಇಚ್ಚಿಸುವವರು ಹೆಚ್ಚು ಚುರುಕಾಗಿ ಕೆಲಸ ಮಾಡುವವರು. ವ್ಯವಹಾರದಲ್ಲಿ ಪರಿಶ್ರಮಕ್ಕೆ ತಕ್ಕ ಆದಾಯವೂ ಬರುತ್ತದೆ. ಕೆಲವು ರಾಜಕೀಯ ಮುಖಂಡರುಗಳಿಗೆ ಜನರೆದುರಿಗೆ ಮುಖಭಂಗ ಅನುಭವಿಸುವ ಸಂದರ್ಭವಿದೆ, ಈ ಬಗ್ಗೆ ಎಚ್ಚರಿಕೆ ವಹಿಸಿರಿ. ಅನಗತ್ಯ ಕೋಪದಿಂದ ವ್ಯವಹಾರದಲ್ಲಿ ನಷ್ಟದ ಸಾಧ್ಯತೆ ಇದೆ. ಆದ್ದರಿಂದ ಅತಿ ಕೋಪ ಬೇಡ. ಹಳೆಯ ಸಾಲವನ್ನು ಈಗ ವಸೂಲಿ ಮಾಡಬಹುದು. ಅದೃಷ್ಟ ಬಣ್ಣ: ಹಳದಿ ಬಣ್ಣ ಅದೃಷ್ಟ ಸಂಖ್ಯೆ: 6

ಮಿಥುನ ರಾಶಿ: ಒಂದು ರೀತಿಯ ಆಲಸ್ಯ ಮನೆಮಾಡಿರುತ್ತದೆ. ಬಂಧುಗಳೊಡನೆ ವ್ಯವಹರಿಸುವಾಗ ನಿಷ್ಕಲ್ಮಶ ಮನಸ್ಸಿನಿಂದ ವ್ಯವಹರಿಸಿರಿ, ಆಗ ಉತ್ತಮ ಬಾಂಧವ್ಯ ಮೂಡುತ್ತದೆ. ಕೃಷಿ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಯಾವುದೇ ಕೆಲಸಗಳಲ್ಲೂ ಆತುರದ ನಿರ್ಧಾರ ಬೇಡ. ವೃತ್ತಿಯಲ್ಲಿ ಹೊಸ ಗೆಳೆಯರು ದೊರೆತು ಸಂತಸವಾಗುತ್ತದೆ. ಹಣದ ಪೂರೈಕೆಯು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಒದಗಿಬರುತ್ತದೆ. ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಸಂತಸ ಪಡುವಿರಿ. ನಿಮ್ಮವರೇ ನಿಮ್ಮ ತೇಜೋವಧೆ ಮಾಡಲು ಮುಂದಾಗುವರು, ಆದರೆ ಜಾಣ್ಮೆಯಿಂದ ಅದನ್ನು ಎದುರಿಸಿ ನಿಜವನ್ನು ಬಯಲು ಮಾಡುವಿರಿ. ಅದೃಷ್ಟ ಬಣ್ಣ: ಹಸಿರು ಬಣ್ಣ ಅದೃಷ್ಟ ಸಂಖ್ಯೆ: 5

ಕಟಕ ರಾಶಿ: ರಾಜಕಾರಣಿಗಳಿಗೆ ಉತ್ತಮ ವಾರ, ಅವರ ಬಹು ದಿನಗಳ ಆಸೆಯೊಂದು ಈಡೇರುವ ಸಂದರ್ಭ ಇದೆ. ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗುವುದು. ಪತ್ರಿಕೋದ್ಯಮ ನಡೆಸುವವರ ಮೇಲೆ ಕೆಲವೊಂದು ಇಲಾಖಾ ತನಿಖೆಗಳು ಬರಬಹುದು. ಪ್ರೀತಿ ವಾತ್ಸಲ್ಯ ತುಂಬಿದ ಮಾತುಗಳಿಂದಾಗಿ ದಂಪತಿಗಳ ನಡುವೆ ಅನುಬಂಧ ಹೆಚ್ಚುತ್ತದೆ. ದೊಡ್ಡ ಯೋಜನೆಗಳನ್ನು ರೂಪಿಸುವಾಗ ವಿಘ್ನಗಳು ಉಂಟಾಗದಂತೆ ಎಚ್ಚರ ವಹಿಸಿರಿ. ಎಲ್ಲ ರೀತಿಯ ಸಾಲಗಳನ್ನು ತೀರಿಸಲು ಉತ್ತಮ ಅವಕಾಶವಿದೆ. ಅದೇ ರೀತಿ ಬರಬೇಕಿದ್ದ ಸಾಲಗಳನ್ನು ವಸೂಲಿ ಮಾಡಬಹುದು. ವಯಸ್ಕರಿಗೆ ಸಂಬಂಧಗಳು ಕೂಡಿಬರಬಹುದು. ತಾಯಿಯಿಂದ ಸ್ವಲ್ಪ ಸಹಾಯ ದೊರೆಯುತ್ತದೆ. ವ್ಯವಹಾರಗಳಲ್ಲಿ ಜಿಜ್ಞಾಸೆಗಳು ಬಂದರೂ ನಂತರ ಸರಿಯಾಗುವುದು. ಅದೃಷ್ಟ ಬಣ್ಣ: ಬಿಳಿಪು ಬಣ್ಣ ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ: ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಲಕ್ಷಣಗಳಿವೆ. ನಿಮ್ಮ ಕಠಿಣ ಮಾತಿನಿಂದ ಕೈಕೆಳಗಿನ ಕೆಲಸಗಾರರು ತಿರುಗಿಬೀಳಬಹುದು. ನಿಮ್ಮ ಗುರಿ ಸಾಧನೆಗಾಗಿ ತಾಳ್ಮೆವಹಿಸುವುದು ಅತಿ ಅಗತ್ಯ. ಹಣದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ, ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಸರ್ಕಾರಿ ನೌಕರರಿಗೆ ಹೆಚ್ಚು ಒತ್ತಡಗಳು ಬಂದರೂ ಅದಕ್ಕೆ ತಕ್ಕಂತೆ ಆದಾಯವೂ ಇರುತ್ತದೆ. ಸಹೋದರಿಯರ ನಡುವೆ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ. ಮಕ್ಕಳಿಂದ ನಿಮಗೆ ಧನಸಹಾಯವಿರುತ್ತದೆ. ಆಹಾರದಿಂದ ಅನಾರೋಗ್ಯದ ಸಾಧ್ಯತೆಯಿದೆ ಎಚ್ಚರ. ಅದೃಷ್ಟ ಬಣ್ಣ: ಕೆಂಪು ಬಣ್ಣ ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ: ಕೃಷಿಕರಿಗೆ ತಮ್ಮ ಸೌಲಭ್ಯದ ಜೊತೆಗೆ ಅನುದಾನ ದೊರೆಯುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಹಣದ ಹರಿವು ಇರುತ್ತದೆ. ಕೆಲವರಿಗೆ ವ್ಯವಹಾರ ನಿಮಿತ್ತ ದೂರ ಪ್ರಯಾಣದ ಸಾಧ್ಯತೆಗಳಿವೆ. ಸಂಗೀತಗಾರರಿಗೆ ಮಾನ್ಯತೆ ದೊರಕುತ್ತದೆ, ಗೌರವಧನ ಸಹ ದೊರೆಯುವ ಸಾಧ್ಯತೆ ಇದೆ. ಆಕರ್ಷಕ ಮಾತಿನಿಂದ ವ್ಯವಹಾರದಲ್ಲಿ ಮೇಲುಗೈ ಸಾಧಿಸುವಿರಿ. ನಿಮ್ಮ ವಿರೋಧಿಗಳ ಸಂಚನ್ನು ಅರಿತು ಅದಕ್ಕೆ ತಕ್ಕಂತೆ ಪ್ರತಿ ಸಂಚನ್ನು ರೂಪಿಸುವಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ನಿಂತಿದ್ದ ಸರ್ಕಾರಿ ಆದಾಯಗಳು ಹಿರಿಯರಿಗೆ ಪುನಃ ಬರತೊಡಗುತ್ತವೆ. ಮೂರ್ತಿಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಲಾಭವಿರುತ್ತದೆ. ಅದೃಷ್ಟ ಬಣ್ಣ: ಗುಲಾಬಿ ಬಣ್ಣ ಅದೃಷ್ಟ ಸಂಖ್ಯೆ: 7

ತುಲಾ ರಾಶಿ: ಭೂಮಿಯ ವ್ಯವಹಾರಗಳಿಗೆ ಸಂಬಂಧಿ ಸಿದಂತೆ ಶೀಘ್ರಗತಿಯಲ್ಲಿ ಕಾರ್ಯಚಟುವಟಿಕೆಗಳು ನಡೆದು ಲಾಭ ಬರುತ್ತದೆ. ತೈಲ ಸಂಸ್ಕರಣೆಯನ್ನು ಮಾಡುವ ವರಿಗೆ ಬೇಡಿಕೆ ಬರುತ್ತದೆ ಮತ್ತು ಹೊಸ ತೈಲ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಬೇಕಾದ ಅನುಕೂಲಗಳು ದೊರೆಯುತ್ತವೆ. ಚಿಕ್ಕದಾಗಿ ಆರಂಭವಾದ ಕೆಲವು ಗೃಹೋದ್ಯಮಗಳು ಈಗ ಉದ್ದಿಮೆಯ ಸ್ವರೂಪವನ್ನು ಪಡೆಯುತ್ತವೆ. ಗಾಯನ ಕಲಾವಿದರಿಗೆ ಉತ್ತಮ ಮಾರುಕಟ್ಟೆ ದೊರೆಯುವ ಸಾಧ್ಯತೆ ಇದೆ. ಪಕ್ಕ ವಾದ್ಯದವರ ಸೂಕ್ಷ್ಮ ಪ್ರತಿಭೆಗಳು ಹೊರಬರುವ ಸಾಧ್ಯತೆಯಿದೆ. ಸಾಮಾನ್ಯರೀತಿಯಾದ ಆದಾಯ ಇರುತ್ತದೆ. ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತಯಾರುಮಾಡಿ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಅದೃಷ್ಟ ಬಣ್ಣ: ಆರೆಂಜ್ ಬಣ್ಣ ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ: ನಿಮ್ಮ ಮಾನಸಿಕ ಚಿಂತನೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದು. ಸಂಸಾರದ ಸೌಕರ್ಯಕ್ಕಾಗಿ ಹೊಸ ಪ್ರಯತ್ನಗಳನ್ನು ಮಾಡುವಿರಿ. ಹೊಸ ಆದಾಯಮೂಲದ ಅನ್ವೇಷಣೆಯನ್ನು ಮಾಡುವಿರಿ. ಯುವಕರಿಗೆ ವೃತ್ತಿರಂಗದಲ್ಲಿ ಹಳೆ ವೈಷಮ್ಯ ಗರಿಗೆದರಬಹುದು ಆದ್ದರಿಂದ ಯಾರ ಬಳಿಯೂ ದ್ವೇಷ ಸಾಧಿಸದಿರುವುದು ಒಳ್ಳೆಯದು. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಕಾಲ. ಪತ್ರಿಕಾ ರಂಗದವರು ತಮ್ಮ ಸುದ್ದಿಗಾಗಿ ಹಗಲು ರಾತ್ರಿ ದಣಿದರೂ ಒಳ್ಳೆ ಸುದ್ದಿ ಸಿಗುವ ಸಮಯ. ಹಿರಿಯರಿಗೆ ವಾಹನ ಖರೀದಿಯ ಯೋಗ ಕೂಡಿಬರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರಬಹುದು. ಕೃಷಿ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು. ಅದೃಷ್ಟ ಬಣ್ಣ: ನೀಲಿ ಬಣ್ಣ ಅದೃಷ್ಟ ಸಂಖ್ಯೆ: 6

ಧನಸ್ಸು ರಾಶಿ: ವೃತ್ತಿಯಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಮಾನ್ಯತೆ ದೊರೆತು ಹೆಚ್ಚಿನ ಜವಾಬ್ದಾರಿಯು ದೊರೆಯುತ್ತದೆ. ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ರಾಜಕಾರಣಿಗಳಿಗೆ ಅನಿರೀಕ್ಷಿತ ಒತ್ತಡಗಳು ಬರುತ್ತವೆ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಸನ್ಮಾನ ಮತ್ತು ಗೌರವ ಪ್ರಾಪ್ತಿಯಾಗುತ್ತದೆ. ಕುರುಕುಲು ತಿಂಡಿಯನ್ನು ಮಾಡಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ಮೆಟ್ಟಿಲೇರುವ ಅವಕಾಶವಿರುತ್ತದೆ. ಕೃಷಿಕರಿಗೆ ಉತ್ತಮ ಲಾಭ ಇರುತ್ತದೆ. ಉಪಾಧ್ಯಾಯರಿಗೆ ಗೌರವ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಬರುತ್ತದೆ ಮತ್ತು ಅವರು ತಯಾರಿಸುವ ಕ್ಷೀರೋತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುತ್ತದೆ. ಅದೃಷ್ಟ ಬಣ್ಣ: ತಿಳಿ ಹಳದಿ ಬಣ್ಣ ಅದೃಷ್ಟ ಸಂಖ್ಯೆ: 4

ಮಕರ ರಾಶಿ: ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಶತ್ರುಗಳನ್ನು ಮಟ್ಟಹಾಕಲು ನೀವು ಬಳಸುವ ತಂತ್ರಗಳು ಸಾಕಷ್ಟು ಫಲವನ್ನು ಕೊಡುತ್ತದೆ. ಸ್ನೇಹಿತರೊಂದಿಗೆ ಕೂಡಿ ಮಾಡುವ ಕಠಿಣ ಪರಿಶ್ರಮದ ಕೆಲಸಗಳು ನಿಮಗೆ ಹೆಸರನ್ನು ತರುತ್ತದೆ. ಮನೆ ಪಾಠವನ್ನು ಮಾಡುವವರಿಗೆ ವಿದ್ಯಾರ್ಥಿಗಳು ದೊರೆತು ಹೆಚ್ಚು ಸಂಪಾದನೆ ಆಗುತ್ತದೆ. ಭೂಮಿಯ ಮೇಲಿನ ಹಕ್ಕಿನ ವಿಷಯದಲ್ಲಿ ಗೊಂದಲಗಳು ಮೂಡಬಹುದು. ಮನಸ್ಸಿಗೆ ಸಂತೋಷವಾಗುವ ಶುಭ ಸುದ್ದಿಯನ್ನು ಕೇಳುವಿರಿ. ಬಂಧುಗಳ ಮಧ್ಯೆ ಇರುವ ಮನಸ್ತಾಪವನ್ನು ಮಾತುಕತೆ ಮಾಡಿ ಪರಿಹರಿಸಿಕೊಳ್ಳುವಿರಿ. ಕೃಷಿಗೆ ಬಳಸುವ ಯಂತ್ರೋಪಕರಣಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಅದೃಷ್ಟ ಬಣ್ಣ: ಕಪ್ಪು ಬಣ್ಣ ಅದೃಷ್ಟ ಸಂಖ್ಯೆ: 4

ಕುಂಭ ರಾಶಿ: ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಶೃಂಗಾರ ಸಾಮಗ್ರಿಗಳನ್ನು ತಯಾರು ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಸರಕು ಸಾಗಣೆ ಮಾಡುವವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಮನ್ನಣೆ ದೊರೆತು ಉತ್ತಮ ಕೆಲಸ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರುತ್ತದೆ. ತಾಯಿಯಿಂದ ಹೆಚ್ಚಿನ ಧನಸಹಾಯ ಸಿಗುವ ಸಾಧ್ಯತೆಯಿದೆ. ಸಹೋದರರ ಕಷ್ಟಗಳಿಗೆ ಸಹಾಯ ಮಾಡುವಿರಿ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇದೆ. ಅದೃಷ್ಟ ಬಣ್ಣ: ನೀಲಿ ಬಣ್ಣ ಅದೃಷ್ಟ ಸಂಖ್ಯೆ: 8

ಮೀನ ರಾಶಿ: ಆಪ್ತರೊಂದಿಗೆ ವಿಚಾರ ವಿನಿಮಯ ಮಾಡಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಯೋಜನೆಯೊಂದನ್ನು ರೂಪಿಸುವಿರಿ. ರಫ್ತು ಮಾರಾಟಗಾರರಿಗೆ ವ್ಯವಹಾರ ಕುದುರುವುದರಿಂದ ಲಾಭ ಸಹ ಹೆಚ್ಚುತ್ತದೆ. ಅನಿರೀಕ್ಷಿತ ಧನಾಗಮನದ ಸಾಧ್ಯತೆಗಳಿವೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿಯೊಂದು ಕೇಳಿ ಬರುತ್ತದೆ. ಗೃಹಾಲಂಕಾರ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಭೂ ಸಂಬಂಧಿ ವ್ಯವಹಾರಗಳನ್ನು ನಡೆಸುವವರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ. ಅದೃಷ್ಟ ಬಣ್ಣ: ಹಳದಿ ಬಣ್ಣ ಅದೃಷ್ಟ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ