ವಾರದ ಪ್ರೇಮ – ಪ್ರೀತಿ: ನಿಂತಿದ್ದ ಪ್ರೇಮ ಸಂಬಂಧಗಳು ಮತ್ತೆ ಚಲಿಸುವ ಕಾಲ

ನವೆಂಬರ್ 15-21ರ ಈ ವಾರದಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಋಜುವಾಗಿ ಚಲಿಸುತ್ತಾ, ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಉಚ್ಚ ಗುರು ಕರ್ಕಾಟಕದಲ್ಲಿ ಆಶೀರ್ವದಿಸುತ್ತಾನೆ. ಈ ಗ್ರಹಗಳ ಸಂಚಾರವು ನಿಂತಿದ್ದ ಪ್ರೇಮ ಸಂಬಂಧಗಳಿಗೆ ಮತ್ತೆ ಚಲನೆ ನೀಡುತ್ತದೆ. ಪ್ರತಿ ರಾಶಿಗಳಿಗೂ ಪ್ರೀತಿ, ವಿವಾಹ ಮತ್ತು ಬಾಂಧವ್ಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಧೈರ್ಯದಿಂದ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ತಾಳ್ಮೆಯಿಂದ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇದು ಸೂಕ್ತ ಸಮಯ. ಬಲವಂತಕ್ಕೆ ಅವಕಾಶ ನೀಡದಿರಿ.

ವಾರದ ಪ್ರೇಮ - ಪ್ರೀತಿ: ನಿಂತಿದ್ದ ಪ್ರೇಮ ಸಂಬಂಧಗಳು ಮತ್ತೆ ಚಲಿಸುವ ಕಾಲ
ಸಾಂದರ್ಭಿಕ ಚಿತ್ರ
Edited By:

Updated on: Nov 13, 2026 | 9:52 PM

ನವೆಂಬರ್ ೧೫ರಿಂದ ೨೧ರ ವೆರೆಗೆ ಶುಕ್ರನು ವಕ್ರತೆಯಿಂದ ಕನ್ಯಾ ರಾಶಿಯಲ್ಲಿ ಋಜುವಾಗಿ ನಡೆಯುತ್ತಿದ್ದಾನೆ. ಸೂರ್ಯನನು ವೃಶ್ಚಿಕ ಪ್ರವೇಶಿಸುತ್ತಾನೆ. ಸಿಂಹದಲ್ಲಿ ಕುಜ, ಕೇತು ಇದ್ದರೆ, ಕರ್ಕಾಟಕದಲ್ಲಿ ಉಚ್ಚ ಗುರು ಆಶೀರ್ವದಿಸುತ್ತಾನೆ. ನಿಂತಿದ್ದ ಸಂಬಂಧಗಳು ಮತ್ತೆ ಚಲಿಸುವ ವಾರವಿದು. ಬಲವಂತಕ್ಕೆ ಅವಕಾಶ ಕೊಡದೇ ಇರುವಂತೆ ನೋಡಿಕೊಳ್ಳಿ.

ಮೇಷ ರಾಶಿ :
ಪಂಚಮದಲ್ಲಿ ಕುಜನ ಬಲದಿಂದ ಪ್ರೀತಿಯಲ್ಲಿ ಉತ್ಸಾಹ ಹೆಚ್ಚುತ್ತದೆ. ಮನದ ಮಾತನ್ನು ಧೈರ್ಯದಿಂದ ಹೇಳಿ, ಆದರೆ ಕೋಪದ ಮಾತಿಗೆ ಕಡಿವಾಣ ಹಾಕಿ. ವಾರಾಂತ್ಯದಲ್ಲಿ ಸಿಹಿ ಸುದ್ದಿ ಬರಬಹುದು.

Loading...

ವೃಷಭ ರಾಶಿ :
ಶುಕ್ರನು ಪಂಚಮದಲ್ಲಿ ಮಾರ್ಗಿಯಾಗಿ ಪ್ರೇಮದ ಹಾದಿ ತೆರೆಯುತ್ತಾನೆ. ಹಳೆಯ ಮನಸ್ತಾಪ ಕರಗುತ್ತದೆ. ಚತುರ್ಥದ ಕುಜ ಮನೆಯಲ್ಲಿ ಸ್ವಲ್ಪ ಬಿಸಿ ಮಾತು ತರಬಹುದು, ಆದ್ದರಿಂದ ಸಹನೆ ಇರಲಿ.

ಮಿಥುನ ರಾಶಿ :
ತೃತೀಯದ ಕುಜ ನಿಮ್ಮ ಮಾತಿಗೆ ಮೋಡಿ ತುಂಬುತ್ತಾನೆ. ಹೊಸ ಪರಿಚಯ ನಿಧಾನವಾಗಿ ಪ್ರೀತಿಯಾಗಿ ಅರಳಬಹುದು. ಒಂಟಿಯಾಗಿರುವವರಿಗೆ ಶುಭ ವಾರ್ತೆ, ಜೋಡಿಗಳಿಗೆ ಸಂತಸದ ಸಂಜೆಗಳು.

ಕರ್ಕಾಟಕ ರಾಶಿ :
ಲಗ್ನದಲ್ಲಿ ಉಚ್ಚ ಗುರು ನಿಮ್ಮ ಆಕರ್ಷಣೆಯನ್ನು ಹೆಚ್ಚಿಸುತ್ತಾನೆ. ವಿವಾಹ ಮಾತುಕತೆಗಳು ಮುಂದುವರಿಯುತ್ತವೆ. ಭಾವುಕತೆ ಹೆಚ್ಚಿರುವುದರಿಂದ ಸಣ್ಣ ವಿಷಯಕ್ಕೆ ನೊಂದುಕೊಳ್ಳದಿರಿ, ಸಂಗಾತಿಯ ಉದ್ದೇಶ ಅರಿಯಿರಿ.

ಸಿಂಹ ರಾಶಿ :
ಲಗ್ನದಲ್ಲಿ ಕುಜ–ಕೇತು ಇರುವುದರಿಂದ ಹಠ ಹೆಚ್ಚಾಗಬಹುದು. ಸಂಗಾತಿಯ ಮಾತಿಗೆ ಕಿವಿಗೊಟ್ಟರೆ ಬಾಂಧವ್ಯ ಗಟ್ಟಿಯಾಗುತ್ತದೆ. ಗುರುವಿನ ದೃಷ್ಟಿಯಿಂದ ವಾರದ ಕೊನೆಗೆ ಶುಭ ಬೆಳವಣಿಗೆ ಸಿಗುತ್ತದೆ.

ಕನ್ಯಾ ರಾಶಿ :
ಶುಕ್ರ ನಿಮ್ಮ ರಾಶಿಯಲ್ಲೇ ಮಾರ್ಗಿಯಾಗುವುದರಿಂದ ಅರ್ಧಕ್ಕೆ ನಿಂತಿದ್ದ ಪ್ರೇಮ ವಿಷಯಗಳು ಮತ್ತೆ ಚಲಿಸುತ್ತವೆ. ಹಳೆಯ ಸ್ನೇಹಿತರೊಬ್ಬರು ಸಂಪರ್ಕಿಸಬಹುದು. ನಿಮ್ಮ ಭಾವನೆಗಳನ್ನು ಮುಚ್ಚಿಡದೆ ವ್ಯಕ್ತಪಡಿಸಿ.

ತುಲಾ ರಾಶಿ :
ಶುಕ್ರ ದ್ವಾದಶದಲ್ಲಿರುವುದರಿಂದ ಏಕಾಂತದ ಕ್ಷಣಗಳು ಹೆಚ್ಚು. ಸೂರ್ಯ ದ್ವಿತೀಯಕ್ಕೆ ಹೋಗುವುದರಿಂದ ಮಾತಿನಲ್ಲಿ ಮೃದುತ್ವ ಅಗತ್ಯ. ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡಿದರೆ ಅಂತರ ಕಡಿಮೆಯಾಗುತ್ತದೆ.

ವೃಶ್ಚಿಕ ರಾಶಿ :
ಸೂರ್ಯನ ಪ್ರವೇಶದಿಂದ ಆತ್ಮವಿಶ್ವಾಸ ಹೊಳೆಯುತ್ತದೆ. ಪ್ರೀತಿಯಲ್ಲಿ ತೀವ್ರತೆ ಇರುತ್ತದೆ. ಅನುಮಾನ ಬಿಟ್ಟು ನಂಬಿಕೆ ಇಟ್ಟರೆ ಸಂಬಂಧ ಸುಂದರವಾಗುತ್ತದೆ. ಹೊಸ ಆಕರ್ಷಣೆ ನಿಮ್ಮತ್ತ ಬರಬಹುದು.

ಧನು ರಾಶಿ :
ಭಾಗ್ಯಸ್ಥಾನದಲ್ಲಿ ಕುಜನ ಬಲ ಇದೆ. ದೂರದ ಊರಿನ ವ್ಯಕ್ತಿಯಿಂದ ಪ್ರೇಮ ಪ್ರಸ್ತಾಪ ಬರಬಹುದು. ಹಿರಿಯರ ಆಶೀರ್ವಾದ ದೊರೆಯುತ್ತದೆ. ಆತುರದ ನಿರ್ಧಾರ ಬೇಡ, ಸ್ವಲ್ಪ ಸಮಯ ತೆಗೆದುಕೊಳ್ಳಿ.

ಇದನ್ನೂ ಓದಿ: ರುದ್ರಾಕ್ಷಿ ಧರಿಸಿ ಬಾತ್‌ರೂಮ್‌ಗೆ ಹೋಗಬಹುದೇ? ಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

ಮಕರ ರಾಶಿ :
ಸಪ್ತಮದಲ್ಲಿ ಉಚ್ಚ ಗುರು ದಾಂಪತ್ಯಕ್ಕೆ ಶುಭ ನೀಡುತ್ತಾನೆ. ಅಷ್ಟಮದ ಕುಜ, ಕೇತುವಿನಿಂದ ಆಳದ ಭಾವನೆಗಳು ಹೊರಬರುತ್ತವೆ. ವಾದ ತಪ್ಪಿಸಿ, ಮೌನವಾಗಿ ಆಲಿಸಿ; ವಾರಾಂತ್ಯ ಶಾಂತವಾಗಿರುತ್ತದೆ.

ಕುಂಭ ರಾಶಿ :
ಸಪ್ತಮದ ಕುಜ ಸಂಗಾತಿಯೊಂದಿಗೆ ಸ್ವಲ್ಪ ತಾಪ ತರಬಹುದು, ಸಮಾಧಾನ ಮುಖ್ಯ. ಸಂಜೆಯ ಸಮಯವನ್ನು ಜೊತೆಯಾಗಿ ಕಳೆದರೆ ಸಂಬಂಧಕ್ಕೆ ಮೆರುಗು ಬರುತ್ತದೆ. ಸಣ್ಣ ಉಡುಗೊರೆ ಮನ ಗೆಲ್ಲುತ್ತದೆ.

ಮೀನ ರಾಶಿ :
ಸಪ್ತಮದಲ್ಲಿ ಶುಕ್ರ ಋಜುವಾಗಿ ದಾಂಪತ್ಯ ಸುಖ ನೀಡುತ್ತಾನೆ. ಪಂಚಮದಲ್ಲಿ ಗುರುವಿನ ಆಶೀರ್ವಾದದಿಂದ ಪ್ರೇಮಕ್ಕೆ ಬೆಂಬಲ ಸಿಗುತ್ತದೆ. ವಿವಾಹ ಯೋಗ ಬಲವಾಗಿದೆ, ಕುಟುಂಬದ ಸಹಕಾರ ಲಭಿಸುತ್ತದೆ.

– ​ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us