ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 3ರ ದಿನಭವಿಷ್ಯ

Daily Numerology March 03: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 3ರ ದಿನಭವಿಷ್ಯ
ದಿನ ಭವಿಷ್ಯ
Image Credit source: Pinterest
Edited By:

Updated on: Mar 03, 2026 | 11:15 AM

ನೀವು ಇಟ್ಟಿರುವ ಮುಖ್ಯವಾದ ವಸ್ತುವೋ ದಾಖಲೆಯೋ ಸಮಯಕ್ಕೆ ನಿಮಗೆ ಸಿಗದೆ ಅದರ ಹುಡುಕಾಟದಲ್ಲಿ ತೊಡಗಿದ್ದಲ್ಲಿ ‘ಕಾರ್ತವೀರ್ಯಾರ್ಜುನ’ ಅಂತ ಸ್ಮರಣೆ ಮಾಡಿ. ಜೊತೆಗೆ ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುತ್ತಿದ್ದರೆ ಆಗಲೂ ಸ್ಮರಣೆ ಮಾಡುವುದರಿಂದ ಅನುಕೂಲ ಆಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ನಿಮ್ಮ ಸಂಪರ್ಕ ವಲಯ ವಿಸ್ತರಿಸುವಂಥ ಅವಕಾಶಗಳು ಹೆಚ್ಚಾಗಿವೆ. ಹೊಸ ವ್ಯಕ್ತಿಗಳ ಪರಿಚಯವಾಗಿ, ಅವರಿಂದ ದೀರ್ಘಾವಧಿಗೆ ದೊಡ್ಡ ಅನುಕೂಲಗಳು ಆಗುವ ಸುಳಿವು ಸಿಗಲಿದೆ. ನೀವು ತೊಡಗಿಕೊಂಡ ವ್ಯವಹಾರದಲ್ಲಿ ಆಗುವ ಬೆಳವಣಿಗೆಯಿಂದ ನಿಮಲ್ಲಿ ಹೊಸ ಚೈತನ್ಯ ಮೂಡಲಿದೆ. ಭಾವನಾತ್ನಕ ಕ್ಷಣಗಳಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಮಿತವ್ಯಯದ ಕಡೆಗೆ ಹೆವ್ವು ಗಮನ ನೀಡುವುದು ಅಗತ್ಯ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮ ಯಾವುದೇ ಕೆಲಸಕ್ಕೆ ಸಂಗಾತಿಯಿಂದ ಪ್ರೋತ್ಸಾಹ ದೊರೆಯಲಿದೆ. ವಿಮರ್ಶಾತ್ಮಕವಾಗಿ ನಿಮ್ಮ ಸ್ನೇಹಿತರು ಹೇಳುವಂಥ ಅಭಿಪ್ರಾಯಗಳನ್ನು ಗೌರವಿಸಿ. ಹೀಗೆ ಮಾಡುವುದರಿಂದ ನಿಮ್ಮ ಮುಂದಿನ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಎದೆಯುರಿ- ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಇನ್ನು ಮನೆಯ ಕೆಲಸ- ಕಾರ್ಯಗಳಲ್ಲಿ ಹಲವಾರು ರೀತಿಯಲ್ಲಿ ಸಹಕಾರ ದೊರೆಯಲಿದೆ. ಈ ಹಿಂದೆ ಆದ ಘಟನೆಗಳ ಬಗ್ಗೆ ಪ್ರಸ್ತಾವ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಬೇಸರ ಕಾಡಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ಕೆಲವು ಹೊಸ ಕೆಲಸ- ಕಾರ್ಯಗಳನ್ನು ಆರಂಭ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಪದೋನ್ನತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಮಾಹಿತಿ ದೊರೆಯಲಿದೆ. ಅಥವಾ ಮುಖ್ಯವಾದ ಕೆಲವು ಹೊಸ ಜವಾಬ್ದಾರಿಗಳನ್ನು ನಿಮಗೆ ವಹಿಸಲಿದ್ದಾರೆ. ಕುಟುಂಬ ಸದಸ್ಯರ ಪೈಕಿ ಹಿರಿಯರಾದವರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಮಾಡುವುದು ಅವಶ್ಯ ಇರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Follow Us