
ಪ್ರೀತಿಯಲ್ಲಿ ಇದ್ದು, ವಿರಸಗಳು ಪದೇ ಪದೇ ಆಗುತ್ತಾ ಇದ್ದಲ್ಲಿ ಹಾಗೂ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ನಾನಾ ರೀತಿ ಅಡೆತಡೆಗಳು ಎದುರಾಗುತ್ತಾ ಇದ್ದಲ್ಲಿ ‘ರೋಸ್ ಕ್ವಾರ್ಟ್ಜ್’ ಸ್ಟೋನ್ ಉಂಗುರ, ಹಾರ ಅಥವಾ ಬ್ರೇಸ್ ಲೆಟ್ ಹಾಕಿದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ.
ನಿಮ್ಮ ಬಳಿ ಇರುವಂಥ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ ದಿನವಾಗಿರುತ್ತದೆ. ತಾವೊಬ್ಬರೇ ಹೋಗುವುದಕ್ಕಿಂತ ಜತೆಯಲ್ಲಿ ನೀವೂ ಬಂದರೆ ಅನುಕೂಲ ಆಗುತ್ತದೆ ಎಂದು ನಿಮ್ಮ ಸ್ನೇಹಿತರು ಹೇಳುವುದರಿಂದ ದಿಢೀರ್ ಪ್ರಯಾಣ ತೆರಳುವಂತೆ ಆಗಲಿದೆ. ಶೀತ- ಜ್ವರದ ಬಾಧೆ ಅಲ್ಪ ಪ್ರಮಾಣದಲ್ಲಿಯಾದರೂ ಕಾಡಲಿದೆ.
ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಇದರಿಂದ ನಿಮಗೂ ಸಂತೋಷ- ಸಮಾಧಾನ ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ- ವೃತ್ತಿ- ವ್ಯವಹಾರ- ವ್ಯಾಪಾರಗಳಲ್ಲಿ ನಿಮ್ಮ ಮಾತಿಗೆ ತೂಕ ಸಿಗುವ ದಿನ ಇದಾಗಿರುತ್ತದೆ. ಕುಟುಂಬದಲ್ಲಿ ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ವಿಷಯಗಳು ಚರ್ಚೆ ಆಗಲಿವೆ.
ಅಲರ್ಜಿ– ಚರ್ಮದ ಸಮಸ್ಯೆಗಳು ಪದೇಪದೇ ಕಾಣಿಸುತ್ತಾ ತೊಂದರೆ ನೀಡುತ್ತಾ ಇದ್ದಲ್ಲಿ ಅಂಥವುಗಳಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ದಿನ ಇದಾಗಿರುತ್ತದೆ. ಹಣಕಾಸು ವಿಚಾರದಲ್ಲಿ ಹರಿವು ಚೆನ್ನಾಗಿರುತ್ತದೆ. ದೂರದ ಸಂಬಂಧಿಗಳಿಂದ ಸಂತಸದ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿ, ಮದುವೆಗೆ ಒಪ್ಪಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಲೇಖನ- ಸ್ವಾತಿ ಎನ್.ಕೆ.