
ಒಂದು ಸಣ್ಣ ತಟ್ಟೆಯಲ್ಲಿ ಸ್ವಲ್ಪ ಕಲ್ಲು ಉಪ್ಪು (Rock Salt) ಇಟ್ಟು ನಿಮ್ಮ ಮನೆಯ ಅಥವಾ ಕೆಲಸದ ಜಾಗದ ಮೂಲೆಯಲ್ಲಿಡಿ. ಇದು ಸುತ್ತಲಿನ ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ. ಸಂಜೆ ಅದನ್ನು ನೀರಿನಲ್ಲಿ ವಿಸರ್ಜಿಸಿ. ಈ ದಿನ ಅಪ್ಪಿತಪ್ಪಿಯೂ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ
ನಿಮ್ಮಲ್ಲಿ ಕೆಲವರಿಗೆ ಈ ದಿನದ ಆರಂಭ ಅಷ್ಟೇನೂ ಚೆನ್ನಾಗಿರುವುದಿಲ್ಲ. ಆ ಕಾರಣಕ್ಕಾಗಿ ಎಂದಿನ ಉತ್ಸಾಹದಲ್ಲಿ ನೀವು ಕಂಡುಬರುವುದಿಲ್ಲ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಅಂದುಕೊಳ್ಳದ ಕೆಲವು ಫಲಿತಾಂಶ ಬರುವುದರಿಂದ ವಿಚಲಿತರಾಗುವಂತೆ ಆಗಲಿದೆ. ಸ್ವಲ್ಪ ದೂರದ ಸ್ಥಳಕ್ಕೆ ತೆರಳಿ ಏಕಾಂಗಿಯಾಗಿ ಸಮಯ ಕಳೆಯೋಣ ಎಂದೆನಿಸಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾಗದ- ದಾಖಲೆ ಪತ್ರಗಳ ವ್ಯವಹಾರ ಸಲೀಸಾಗಿ ಆಗಲಿದೆ.
ಪ್ಲಾನಿಂಗ್- ಪರಿಶ್ರಮ ಜತೆಯಾಗಿ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ದಂಪತಿ ಮಧ್ಯೆ ಸಂತೋಷಕರವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳಿ. ಕಡಿಮೆ ಬಡ್ಡಿ- ದೀರ್ಘಾವಧಿ ಹೀಗೆ ಏನೇ ಆಕರ್ಷಣೆಗಳು ಇದ್ದರೂ ಸಾಲ ಪಡೆದುಕೊಳ್ಳಬೇಡಿ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರು ಅದೆಷ್ಟೇ ಸಣ್ಣ ಪ್ರಮಾಣದ ಕೆಲಸವಾದರೂ ನೀವೇ ಪೂರ್ಣಗೊಳಿಸುವುದು ಉತ್ತಮ.
ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಡಿ. ಒಂದು ವೇಳೆ ತಾಯಿಯ ಅಥವಾ ತಾಯಿ ಸಮಾನರಾದವರ ಆರೋಗ್ಯ ಚಿಂತೆಗೆ ಕಾರಣ ಆಗಲಿದೆ. ಫಾಲೋಅಪ್ ಚೆಕಪ್ ಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಹೂಡಿಕೆ ವಿಚಾರಕ್ಕೆ ಬಂದಲ್ಲಿ ಹೆಚ್ಚಿನ ರಿಸ್ಕ್ ಇರುವಂಥದ್ದರಿಂದ ದೂರ ಇರುವುದು ಒಳ್ಳೆಯದು. ಅನುಭವಿಗಳ ಮಾರ್ಗದರ್ಶನ- ಸಲಹೆ ಕಂಡುಬಂದಲ್ಲಿ ಪಡೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.