Weekly Horoscope: ವಾರ ಭವಿಷ್ಯ: ಮಾರ್ಚ್ 31 ರಿಂದ ಏಪ್ರಿಲ್ 6 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಮಾರ್ಚ್ 31 ರಿಂದ ಏಪ್ರಿಲ್ 6 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಇದು ಏಪ್ರಿಲ್ ತಿಂಗಳ ಮೊದಲ ವಾರವಾಗಿದೆ. ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿದ್ದು, ದ್ವಾದಶ ರಾಶಿಯವರಿಗೆ ಶುಭಾಶುಭ ಮಿಶ್ರಫಲವನ್ನು ಗ್ರಹಗಳು ಕೊಡಲಿವೆ. ಅಶುಭ ಫಲವನ್ನು ಹೊಂದಿದವರು ಗ್ರಹಗಳ ಪ್ರೀತಿಯನ್ನು ಸಂಪಾದಿಸಿ ಉತ್ತಮ ಜೀವನವನ್ನು ನಡೆಸಬಹುದು. ಶುಭಫಲದವರೂ ದೇವರ ಕೃಪೆಯನ್ನು ಪಡೆಯುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಲಿದೆ.
ಮೇಷ ರಾಶಿ : ಈ ವಾರ ನಿಮಗೆ ಶುಭಾಶುಭ ಮಿಶ್ರಣ ವಾರವಾಗಿದೆ. ನಿಮ್ಮ ರಾಶಿಯಲ್ಲಿಯೇ ಗುರು ಬುಧರು ಇರುವುದು ದೈಹಿಕ ಮಾನಸಿಕ ಒತ್ತಡಗಳು ದೂರವಾಗಿ, ಎನ್ನವನ್ನು ಸಮಾಧನಾ ಚಿತ್ತದಿಂದ ಮುನ್ನಡೆಸುವಿಸಿ. ದ್ವಾದಶದಲ್ಲಿ ಶುಕ್ರನು ಆರ್ಥಿಕ ವ್ಯವಸ್ಥೆಯನ್ನು ಮಾಡಿಸುವನು. ಆದಷ್ಟು ಉತ್ತಮ ಕಾರ್ಯಕ್ಕೆ ಮಾಡುವಂತೆ ನೀವು ನೋಡಿಕೊಳ್ಳಬೇಕು. ಶನಿ ಕುಜರ ಸಮಾಗಮದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಇರುವುದು. ಯಂತ್ರೋಪಕರಣಗಳ ಮಾರಾಟಗಾರರಿಗೆ ಅಧಿಕ ಲಾಭವು ಇರುವುದು. ಸುಬ್ರಹ್ಮಣ್ಯ ಅನುಗ್ರವನ್ನು ಸ್ತೋತ್ರಗಳಿಂದ ಪೂಜೆಗಳಿಂದ ಪಡೆಯಿರಿ.
ವೃಷಭ ರಾಶಿ : ಏಪ್ರಿಲ್ ತಿಂಗಳ ಮೊದಲ ವಾರವು ಅಶುಭದ ವಾರವೆಂದೇ ಹೇಳಬಹುದು. ದ್ವಾದಶದಲ್ಲಿ ಗುರು ಹಾಗೂ ಬುಧರಿದ್ದು ಯಾರಿಂದಲೂ ಗೌರವ ಸಿಗದು. ನಿಮಗೆ ಪೂರಕವಾದ ಯಾವ ಸಲಹೆಗಳೂ ಸಿಗದೇಹೋಗುವುದು. ಏಕಾದಶದಲ್ಲಿ ಶುಕ್ರ, ರವಿಗಳಿದ್ದರೂ ಜೊತೆಗೆ ರಾಹುವಿರುವ ಕಾರಣ ಸಂಗಾತಿಯ ನಡುವೆ ಸಾಮರಸ್ಯ ಕೊರೆತೆ ಕಾಣಿಸುವುದು. ಶನಿ ಕುಜರು ದಶಮದಲ್ಲಿ ಇರುವುದು ಯಂತ್ರಗಳ ಮಾರಾಟ, ಬಿಡಿ ಭಾಗಗಳ ರಪ್ತು ಮಾಡುವವರಿಗೆ ಲಾಭವಿರಲಿದೆ. ಮಹಾಲಕ್ಷ್ಮಿಯ ಅನುಗ್ರಹದಿಂದ ಒಂದಿಷ್ಟು ನೆಮ್ಮದಿ ನಿಮ್ಮದಾಗುವುದು.
ಮಿಥುನ ರಾಶಿ : ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಮೊದಲ ವಾರವು ಶುಭದ ವಾರವಾಗಿದ್ದರೂ ಕೆಲವು ಆಕಸ್ಮಿಕ ಬದಲಾವಣೆಯನ್ನು ನೀವು ಎದುರಿಸಲು ಕಷ್ಟವಾಗುವುದು. ಏಕಾದಶದಲ್ಲಿ ಗುರು ಬುಧರು ಹಿರಿಯರಿಂದ ಬಂಧುಗಳಿಂದ ಆದಾಯವು ಸಿಗಬಹುದು. ನಿಮಗೆ ಎಲ್ಲ ರೀತಿಯ ಸಹಕಾರವನ್ನು ನೀಡುವರು. ದಶಮದಲ್ಲಿ ಶುಕ್ರನು ಇರುವುದು ಕಲಾತ್ಮಕವಾಗಿ ಮಾಡಿ, ಪ್ರಶಂಸೆಯನ್ನು ಪಡೆಯುವಿರಿ. ನವಮದಲ್ಲಿ ಕುಜನು ಇರುವುದು ಅಷ್ಟು ಅನುಕೂಲವಲ್ಲ. ಬೇಸರ, ಕೆಲಸಗಳನ್ನು ಮಾಡಲು ಹಿನ್ನಡೆಯು ಯಾರಿಂದಲಾದರೂ ಆಗುವುದು. ಮಹಾವಿಷ್ಣುವಿನ ಉಪಾಸನೆ ಅಗತ್ಯ.
ಕಟಕ ರಾಶಿ : ಈ ತಿಂಗಳ ಮೊದಲ ವಾರವು ಸಾಧಾರಣ ವಾರವಾಗಿ ನಿಮಗೆ ಅನಿಸುವುದು. ದಶಮದಲ್ಲಿ ಗುರು ಬುಧರ ಸಮಾಗಮದಿಂದ ನಿಮ್ಮ ಉದ್ಯೋಗದಲ್ಲಿ ದಿಢೀರನೆ ಸಕಾರಾತ್ಮಕ ಬದಲಾವಣೆ ಕಾಣಿಸುವುದು. ನವಮದಲ್ಲಿ ಶುಕ್ರ, ರವಿ, ರಾಹುವಿನ ಸಂಯೋಗವು ನಿಮಗೆ ಗೌರವವನ್ನು ತಂದುಕೊಟ್ಟರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಕುಜ ಹಾಗು ಶನಿಗಳು ಅಷ್ಟಮದಲ್ಲಿ ಇದ್ದು ಆರೋಗ್ಯದ ಬಗ್ಗೆ ಗಮನವಿರಲಿ. ಕಾಲಿಗೆ ಆಯುಧದಿಂದ ಗಾಯವಾಗಬಹುದು. ಶಿವ ಕವಚವನ್ನು ಪಠಿಸಿ, ಸಕಾರಾತ್ಮಕ ಬದಲಾವಣೆ ಇರುವುದು.
ಸಿಂಹ ರಾಶಿ : ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಮೊದಲನೇ ವಾರವು ಗ್ರಹಗಳ ಪರಿವರ್ತನೆಯಿಂದ ಅಸಮಾಧಾನದ ಸ್ಥಿತಿ ಹೆಚ್ಚಾಗುವುದು. ನವಮದಲ್ಲಿ ಗುರು ಹಾಗೂ ಬುಧರು ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುವರು. ಎಲ್ಲ ಕಡೆಗಳಿಂದ ಒಳ್ಳೆಯ ಅಭಿಪ್ರಾಯವು ನಿಮಗೆ ಸಿಗಲಿದೆ. ಅಷ್ಟಮದಲ್ಲಿ ಇರುವ ಶುಕ್ರನು ನಿಮಗೆ ಸಂಗಾತಿಯ ಕಡೆಯಿಂದ ಕೊಡಿಸಬಹುದು. ಆದರೆ ಹೊಂದಾಣಿಕೆಯಿಂದ ಅದನ್ನು ತೂಗಿಸಿಕೊಂಡು ಹೋಗಬೇಕಾಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ತೊಡಕುಗಳು ಬರಬಹುದು. ಮಾತಿನಿಂದ ನಿಮ್ಮ ಯಾವ ಕೆಲಸವು ಆಗದೇ ಇರುವುದು ನಿಮಗೆ ಹತಾಶಭಾವವು ಬರಬಹುದು.
ಕನ್ಯಾ ರಾಶಿ : ಇದು ಏಪ್ರಿಲ್ ತಿಂಗಳ ಮೊದಲನೇ ವಾರವಾಗಿದೆ. ನಿಮ್ಮ ದುಃಖಗಳು ಅಂತ್ಯ ಕಾಣುವ ವಾರವೆನ್ನಬಹುದು. ಅಷ್ಟಮದಲ್ಲಿ ಬುಧ ಹಾಗು ಗುರುವಿನ ಸಂಯೋಗವಾಗಿದೆ. ಇದು ಬಂಧುಗಳಿಂದ ನಿಮಗೆ ತೊಂದರೆಗಳನ್ನು ಹೇಳುವುದಾದರೂ ಕಳೆದ ದಿನಗಳಿಗೆ ಹೋಲಿಸಿದರೆ ಕಡಿಮೆಯೇ. ಸಪ್ತಮದಲ್ಲಿ ಶುಕ್ರನು ಉಚ್ಚನಾಗಿದ್ದಾನೆ ವೈವಾಹಿಕ ಮಾತುಕತೆಗಳು ನಿಮಗೆ ಸಂತೋಷ ಕೊಡುವುದು. ಆದರೆ ಮುಂದುವರಿಸುವಾಗ ಆತುರ ಬೇಡ. ಅಲ್ಪನಿಗೆ ಐಶ್ವರ್ಯ ಬಂದಂತೆ ಆಡಿದಂತಾದೀತು. ಬಂದ ಅವಕಾಶಗಳು ನೋಡುತ್ತ ತಪ್ಪಬಹುದು. ಶತ್ರುಗಳನ್ನು ನಿಮ್ಮ ಪರಾಕ್ರಮದಿಂದ ಗೆಲ್ಲಬಹುದು. ದೇಹವನ್ನು ಅಧಿಕವಾಗಿ ದಂಡಿಸುವಿರಿ. ಲಕ್ಷ್ಮೀನಾರಾಯಣರ ಆರಾಧನೆಯಿಂದ ನೋವನ್ನು ಮರೆಯಲು ಸಾಧ್ಯ.
ತುಲಾ ರಾಶಿ : ಏಪ್ರಿಲ್ ತಿಂಗಳ ಮೊದಲ ವಾರವು ಸುಖದ ವಾರವಗಿದೆ. ನಿಮ್ಮ ಇಚ್ಛೆಗಳನ್ನು ಪೂರ್ಣಮಾಡಿಕೊಳ್ಳಬಹುದು. ಸಪ್ತಮದಲ್ಲಿ ಬುಧ ಹಾಗು ಗುರುವು ನಿಮ್ಮ ಮನಃ ಕಾಮನೆಗಳಿಗೆ ಪೂರಕವಾಗಿ ಇರುವರು. ನೀವು ಬಯಸಿದವರಿಂದ ಬೇಕಾದ ಸಹಕಾರವು ಸಿಗಲಿದೆ. ಬಂಧುಗಳಿಂದ ನಿಮಗೆ ಸಂತೋಷವಾಗಲಿದೆ. ಷಷ್ಠದಲ್ಲಿ ಶುಕ್ರ, ರವಿ ಹಾಗೂ ರಾಹುಗಳು ಸ್ತ್ರೀಯರಂದ ಅಥವಾ ಸಂಗಾತಿಯ ಕಡೆಯಿಂದ ಬರುವ ಕಷ್ಟಗಳು ದೂರವಾಗುವುವು. ಪಂಚಮದಲ್ಲಿ ಕುಜ ಹಾಗೂ ಶನಿಗಳು ವಿದ್ಯಾಭ್ಯಾಸಕ್ಕೆ ಹೊಸ ದಿಕ್ಕನ್ನು ತೋರಿಸಬಹುದು. ದ್ವಾದಶದಲ್ಲಿ ಕೇತುವಿರುವುದು ಅನವಶ್ಯಕ ಒತ್ತಡಗಳಿಗೆ ಕಾರಣವಾಗಲಿದೆ.
ವೃಶ್ಚಿಕ ರಾಶಿ : ಈ ರಾಶಿಯವರಿಗೆ ಮೊದಲ ವಾರದಲ್ಲಿ ಮಧ್ಯಮಫಲವು ಇದ್ದು ನಿಮಗೆ ಸಂತೃಪ್ತಿಯನ್ನು ಕೊಡುವುದು. ಗುರು ಹಾಗೂ ಬುಧರು ಷಷ್ಠದಲ್ಲಿ ಇದ್ದು ಬಂಧುಗಳಿಂದ ಕಿರಿಕಿರಿ, ಮಾತನಿಂದ ದ್ವೇಷವು ಬೆಳೆಯುವುದು. ನಿಮ್ಮ ತಿಳಿವಳಿಕೆಯ ಬಗ್ಗೆ ವಿಶ್ವಾಸವು ಕಡಿಮೆ ಇರುವುದು. ಪಂಚಮದಲ್ಲಿ ಶುಕ್ರ, ರವಿ ಹಾಗೂ ರಾಹುಗಳು ಇರಲಿದ್ದು ಕಾರಣಸಹಿತವಾಗಿ ಮಕ್ಕಳ ಮೇಲೆ ಪ್ರೀತಿ ಬರಬಹುದು. ಹೆಣ್ಣು ಮಕ್ಕಳಿಗೆ ಬೇಕಾದ ವ್ಯವಸ್ಥೆ ಮಾಡುವಿರಿ. ಚತುರ್ಥದಲ್ಲಿ ಕುಜ ಹಾಗೂ ಶನಿಯು ಇರುವುದು ಅಷ್ಟು ಪ್ರಶಸ್ತವಲ್ಲ. ಕೌಟುಂಬಿಕವಾಗಿ ಮನಸ್ತಾಪಗಳು ಬರುವುದು. ಅದನ್ನು ಜಾಣ್ಮೆಯಿಂದ ಎದುರಿಸುವ ಕೌಶಲವೂ ಅಗತ್ಯ. ಏಕಾದಶದಲ್ಲಿ ಕೇತುವು ಉದ್ಯಮಿಗಳ ಆದಾಯದಲ್ಲಿ ಏರಿಳಿತವನ್ನು ತರಿಸುವನು. ಸುಬ್ರಹ್ಮಣ್ಯನ ಆರಾಧನೆಯನ್ನು ನಿಮ್ಮ ಮನಸ್ಸಿಗೆ ಬಂದ ದುಃಖ, ಅಶಾಂತಿಯನ್ನು ದೂರಮಾಡುವನು.
ಧನು ರಾಶಿ : ಇದು ಏಪ್ರಿಲ್ ತಿಂಗಳ ಮೊದಲನೇ ವಾರವಾಗಿದೆ. ಗ್ರಹಗತಿಗಳು ತಮ್ಮ ಸ್ಥಾನವನ್ನು ಬದಲಿಸಿಕೊಂಡು ಶುಭಾಶುಭ ಫಲವನ್ನು ನೀಡಲು ಸನ್ನದ್ಧವಾಗಿವೆ. ಚತುರ್ಥದಲ್ಲಿ ಶುಕ್ರ, ರವಿ ಹಾಗೂ ರಾಹುಗಳು ಇರುವುದರಿಂದ ತಾಯಿಯ ಬಗ್ಗೆ ಪ್ರೀತಿ ಹೆಚ್ಚಿರುವುದು. ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಪಂಚಮದಲ್ಲಿ ಗುರು ಹಾಗೂ ಬುಧರು ನಿಮ್ಮ ಮಕ್ಕಳಿಂದ ಪ್ರಶಂಸೆ ಸಿಗುವಂತೆ ಮಾಡುವರು. ವಿದ್ಯಾಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ತೃತೀಯದಲ್ಲಿ ಕುಜ ಹಾಗು ಶನಿಯು ನಿಮ್ಮ ಸಾಮರ್ಥ್ಯದ ಮತ್ತೊಂದು ಮುಖವನ್ನು ತೋರಿಸುವರು. ಆರ್ಥಿಕತೆಯು ಪೂರ್ಣವಾಗಿ ನಿಮ್ಮ ಕಡೆಗೆ ಇರದು. ಗಣಪತಿಯ ಆರಾಧನೆಯಿಂದ ಅಭೀಷ್ಟವು ಸಿದ್ಧಿಸುವುದು.
ಮಕರ ರಾಶಿ : ಈ ವಾರವು ತಿಂಗಳ ಮೊದಲನೇ ವಾರವಾಗಿದ್ದು ಲಾಭಾಲಾಭಗಳಿರುವುದಾಗಿದೆ. ದ್ವಿತೀಯಾಧಿಪತಿಯು ಶನಿಯು ದ್ವಿತೀಯದಲ್ಲಿ ಕುಜನ ಜೊತೆಗಿದ್ದುದರಿಂದ ಸ್ಥಿರವಾದ ಸಂಪತ್ತನ್ನು ಉಳಿಸಿಕೊಳ್ಳುವಿರಿ. ಯಾರದೋ ಕಾರಣರಕ್ಕೆ ಮಾತನ್ನು ಉಳಿಸಿಕೊಳ್ಳಲಾರಿರಿ. ತೃತೀಯದಲ್ಲಿ ಶುಕ್ರನು ಉಚ್ಚನಾಗಿದ್ದು ರಾಹುವಿನ ಜೊತೆಗಿರುವ ಕಾರಣ ನಿಮ್ಮ ಸಹೋದರರ ನಡುವೆ ಪೂರ್ಣ ಸೌಹಾರ್ದ ಇರದು. ಕೆಲವು ವಿಚಾರಕ್ಕೆ ವಾಗ್ವಾದವು ನಡೆಯಬಹುದು. ಗುರು ಮತ್ತು ಬುಧರು ಚತುರ್ಥದಲ್ಲಿ ಇರುವ ಕಾರಣ ಮನೆಯಲ್ಲಿ, ತಾಯಿಯ ವಿಚಾರದಲ್ಲಿ ಪ್ರೀತಿ ಒರಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನೇರ ಮಾರ್ಗವನ್ನು ಬಿಡುವಿರಿ.
ಕುಂಭ ರಾಶಿ : ತಿಂಗಳ ಮೊದಲ ವಾರದಲ್ಲಿ ನಿಮಗೆ ಮಿಶ್ರಫಲವು ಇರಲಿದೆ. ನಿಮ್ಮ ರಾಶಿಯಲ್ಲಿ ಕುಜ ಹಾಗೂ ಶನಿ ಇರುವುದರಿಂದ ಮಾನಸಿಕವಾಗಿ ಅಸಮತೋಲನ, ನಿಮ್ಮ ಬಗ್ಗೆ ನಿಮಗೇ ಅತಿಯಾದ ವಿಶ್ವಾಸವಿರಲಿದೆ. ದ್ವಿತೀಯದಲ್ಲಿ ಶುಕ್ರ, ರವಿ ಹಾಗೂ ಕುಜರು ಇದ್ದು ಕುಶಲ ಕರ್ಮದಿಂದ ಆರ್ಥಿಕ ನೆರವು ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. ತೃತೀಯದಲ್ಲಿ ಗುರು ಹಾಗೂ ಬುಧರ ಸಂಯೋಗವು ಉತ್ತಮವಾಗಿದ್ದರೂ ಇರುವ ಸ್ಥಾನ ಸರಿಯಾಗಿಲ್ಲದ ಕಾರಣ ಸಿಗಬೇಕಾದ ಪ್ರಯೋಜನ ಸಿಗದು. ಸಂಗಾತಿಯ ಕಡೆಯಿಂದ ಏನನ್ನಾದರೂ ಅಪೇಕ್ಷಿಸಿದರೆ ಸಿಗುವ ಸಾಧ್ಯತೆ ಇದೆ. ನಾಗರ ಉಪಾಸನೆಯಿಂದ ಸ್ಥಗಿತವಾದ ಕಾರ್ಯಗಳು ಪುನರಾರಂಭವಾಗುವುದು.
ಮೀನ ರಾಶಿ : ಇದು ಏಪ್ರಿಲ್ ತಿಂಗಳ ಮೊದಲ ವಾರ ಗ್ರಹಗತಿಗಳ ಬದಲಾವಣೆಯಿಂದ ನಿಮ್ಮ ಜೀವನದ ಬದಲಾವಣೆಯೂ ಆಗಲಿದೆ. ಶುಕ್ರ, ರವಿ, ರಾಹುಗಳು ನಿಮ್ಮ ರಾಶಿಯಲ್ಲಿಯೇ ಇರಲಿದ್ದಾರೆ. ಯಾವುದೇ ಆಯಾಸಕರವಾದ ವಿಚಾರಗಳಿಗೆ ಹೋಗಲಾರಿರಿ. ಅಹಂಕಾರದಿಂದ ವರ್ತಿಸುವಿರಿ. ಎಲ್ಲವೂ ನಿಮ್ಮ ಬಳಿಗೇ ಬರಬೇಕು ಎನ್ನುವ ಮಾನಸಿಕತೆ ಇರಲಿದೆ. ದ್ವಿತೀಯದಲ್ಲಿ ಗುರು ಹಾಗು ಬುಧರು ಇರುವುದರಿಂದ ವಿದ್ಯಾಭ್ಯಾಸಕ್ಕೆ ಬೇಕಾದ ಮಾರ್ಗವನ್ನು ಪಡೆಯುವಿರಿ. ಕುಜ ಹಾಗು ಶನಿ ಇಬ್ಬರೂ ಒಂದೇ ಕಡೆ ಇರುವುದರಿಂದ ವ್ಯಾಪಾರದಲ್ಲಿ ವ್ಯವಹಾರದಲ್ಲಿ ನಷ್ಟವಾಗಲಿದ್ದು, ಅದನ್ನು ಯಾರೊಂದಿಗೂ ಹೇಳದೇ ಗೌಪ್ಯವಾಗಿ ಇಡುವಿರಿ. ಕಾರ್ತಿಕೇಯನ ಸ್ತೋತ್ರವನ್ನು ಪಠಿಸಿ.
-ಲೋಹಿತ ಹೆಬ್ಬಾರ್ – 8762924271 (what’s app only)
Published On - 1:01 am, Sun, 31 March 24