Horoscope: ನಿತ್ಯಭವಿಷ್ಯ; ಆರೋಗ್ಯ ಸಮಸ್ಯೆಗಳಿಂದ ಮುಕ್ತಿ, ಇತರರನ್ನು ದೂರುವ ಕೆಲಸ ಬೇಡ

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 31 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯಭವಿಷ್ಯ; ಆರೋಗ್ಯ ಸಮಸ್ಯೆಗಳಿಂದ ಮುಕ್ತಿ, ಇತರರನ್ನು ದೂರುವ ಕೆಲಸ ಬೇಡ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 31, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಮಾರ್ಚ್​​​​ 31) ರಾಶಿ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:37 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ.

ಮೇಷ ರಾಶಿ: ಇಂದು ನಿಮಗೆ ಸಿಕ್ಕ ಸಮಯವನ್ನು ಇನ್ನೊಬ್ಬರ ಟೀಕೆಗೆ ಬಳಸಿಕೊಳ್ಳುವಿರಿ. ಸುಳ್ಳನ್ನು ಸತ್ಯ ಮಾಡುವುದು ಸುಲಭದ್ದಲ್ಲ. ಇಂದು ನಿಮ್ಮ ವ್ಯಾಪಾರದಿಂದ ಖ್ಯಾತಿಯು ಹೆಚ್ಚಾಗಬಹುದು. ವೈವಾಹಿಕ ಸುಖವನ್ನು ಆನಂದದಿಂದ ಅನುಭವಿಸುವಿರಿ. ಸ್ನೇಹಿತರ ಜೊತೆ ಮೋಜಿನ ಸಮಯವನ್ನು ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತೋರ್ಪಡಿಕೆ ಬೇಡ. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಕೃಷಿಯಲ್ಲಿ ಆಸಕ್ತಿಯು ಬೆಳೆಯುವುದು. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಮನೆಗೆಲಸಕ್ಕೆ ಆಲಸ್ಯವಿರುವುದು.

ವೃಷಭ ರಾಶಿ: ಇಂದು ನಿಮಗೆ ಉದ್ಯೋಗಕ್ಕೆ ಸಂಬಂಧಿಸಿ ಕಿರಿಕಿರಿಯ ನೆನಪಾಗುವುದು. ಎಲ್ಲವನ್ನೂ ವಿರೋಧಿಸುವ ಭಾವವು ಇರಲಿದೆ. ಇಂದು ಯಾವುದೇ ಕಾರ್ಯದಲ್ಲಿ ನಿರತರಾಗಿದ್ದರೂ, ನಿಮ್ಮ ಮನಸ್ಸು ಮರ್ಯಾವುದರಮೇಲೋ ಇರಬಹುದು. ಯಾರೊಂದಿಗೂ ಅನಗತ್ಯ ವಿಚಾರಗಳನ್ನು ಚರ್ಚಿಸಬೇಡಿ. ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ. ವೈವಾಹಿಕ ಸುಖವು ಕ್ಷೀಣಿಸಬಹುದು. ಆರೋಪಗಳಿಂದ ಮುಕ್ತರಾಗುವುದು ಕಷ್ಟವಾಗುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಬಗ್ಗೆ ಇರುವ ಯಾವ ಅಭಿಪ್ರಾಯವೂ ಇಷ್ಟವಾಗದು. ಸಮೂಹದಲ್ಲಿ ಇರುವುದು ಕಷ್ಟವಾದೀತು.

ಮಿಥುನ ರಾಶಿ: ಇಂದು ಹಳೆಯ ವಾಹನದ ಖರ್ಚಿನ ಬಗ್ಗೆ ಚಿಂತೆಯಾಗುವುದು. ಭಾಷಣಕಾರರು ಉತ್ತಮ ಅವಕಾಶವನ್ನು ಪಡೆಯುವರು. ಧಾರ್ಮಿಕ ಆಚರಣೆಯು ನಿಮಗೆ ಬಾಲಿಶ ಎನಿಸಬಹುದು. ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡುವಿರಿ. ಉದ್ಯಮವನ್ನು ಚುರುಕುಗೊಳಿಸುವ ಅಗತ್ಯವಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು. ಯಾರನ್ನೋ ದೂರುತ್ತ ನಿಮ್ಮ ಕೆಲಸದ ಅವಧಿಯನ್ನು ವ್ಯರ್ಥ ಮಾಡುವುದು ಬೇಡ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ಸಂಗಾತಿಯ ಮನೋರಥವನ್ನು ಈಡೇರಿಸುವುದು ಕಷ್ಟವಾಗುವುದು. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಹಠದ ಸ್ವಭಾವದಿಂದ ಇತರರಿಗೆ ಕಷ್ಟವಾಗಬಹುದು.

ಕಟಕ ರಾಶಿ: ಇಂದು ನಿಮ್ಮ ಕೆಲಸಗಳೇ ತಪ್ಪಾಗಿ ಕಾಣಿಸಬಹುದು. ಪಶ್ಚಾತ್ತಾಪದಿಂದ ನಿಮಗೆ ಪ್ರಯೋಜನವಾಗದು. ಹೊರಟ ರೈಲನ್ನು ನಿಲ್ಲಿಸಲು ಸಾಧ್ಯವಿಲ್ಲ.‌ ಇಂದು ಪ್ರಯಾಣವು ಕಾರ್ಯಸಿದ್ಧಿಗೆ ಪೂರಕವಾದೀತು. ನಿಮ್ಮ ನಿರ್ಧಾರಗಳು ಇತರರಿಗೆ ಒಪ್ಪಿಗೆಯಾಗದೇ ಹೋಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಹೊಂದಿಸಬೇಕಾದೀತು. ನೀವು ಹೂಡಿಕೆಯಿಂದ ಆರ್ಥಿಕವಾಗಿ ಬಲವುಳ್ಳವರಾಗಲು ಯೋಚಿಸುವಿರಿ. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಇದರಿಂದ‌ ನಿಮ್ಮ ಜೊತೆಗಾರ ಸ್ಥಿತಿಯೂ ಹದ ತಪ್ಪಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವವು ನಿಮ್ಮನ್ನು ಕಾಡಬಹುದು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿ ಮಾಡುವಿರಿ. ಏಕತಾನತೆಯಿಂದ ಇರುವ ಜೀವನವು ನಿಮಗೆ ಬೇಸರವಾಗುವುದು.