ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ಭಿನ್ನವಾಗಿರುತ್ತದೆ. ಕೆಲವರಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುತ್ತಾರೆ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ ಇಂದಿನ (2023 ಜುಲೈ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:04 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ಮೇಷ: ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ಆತುರದಿಂದ ಏನ್ನಾದರೂ ಮಾಡಿಕೊಳ್ಳಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳಲು ಹೋಗಬೇಡಿ. ನಿಮ್ಮ ಚೌಕಟ್ಟಿನಲ್ಲಿ ನೀವಿರುವುದು ಉತ್ತಮ. ನಿಮ್ಮ ದಾರಿಯು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ವಸ್ತುಗಳ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಖರೀದಿಯನ್ನು ಬಹಳ ಸಂತೋಷದಿಂದ ಮಾಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ಕೊಡುವಿರಿ. ಇನ್ನೊಬ್ಬರ ಬಗ್ಗೆ ಇಂದು ನಿಮಗೆ ಹೆಚ್ಚು ಕುತೂಹಲ ಇರಲಿದೆ.
ವೃಷಭ: ಮನಸ್ಸಿನ ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳಲಿದ್ದೀರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಬಹುದು. ಉತ್ತಮವಾದ ಆಯ್ಕೆಯಲ್ಲಿ ನೀವು ಸೋಲುವಿರಿ. ನೀವು ಇಂದು ಅಸಹಜವಾಗಿ ವರ್ತಿಸುವಿರಿ. ಆಲಸ್ಯದ ಕಾರಣ ಕಾರ್ಯಕ್ಕೆ ನೆಪವನ್ನು ಕೊಡುವಿರಿ. ಸಾಧಿಸಲಾಗದ ಹೆಚ್ಚು ಶ್ರಮಹಾಕಿ ವ್ಯರ್ಥಮಾಡಿಕೊಳ್ಳಬಹುದು. ಸಂಬಂಧಗಳು ನಿಮ್ಮ ಜೊತೆ ಶಾಶ್ವತವಾಗಿ ಇರಲಾರದು ಎಂಬ ಬೇಸರವೂ ಇರಲಿದೆ. ಮನಸ್ಸನ್ನು ಖಾಲಿ ಬಿಡದೇ ಏನನ್ನಾದರೂ ಆಲೋಚಿಸಿ.
ಮಿಥುನ: ಅನಿರೀಕ್ಷಿತ ದ್ರವ್ಯದ ಲಾಭದಿಂದ ನಿಮಗೆ ಸಂತೋಷವಾಗಲಿದೆ. ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯುವಿರಿ. ನೆಮ್ಮದಿಯ ಕೊರೆತೆಯು ಹೆಚ್ಚು ಕಾಡಬಹುದು. ನಿಷ್ಠುರದ ನಿಮ್ಮ ಮಾತಗಳನ್ನು ಕೇಳಿ ನಿಮ್ಮ ಬಗ್ಗೆ ಭಾವವು ಬದಲಾಗಬಹುದು. ಕಳೆದುಕೊಂಡಿದ್ದನ್ನು ಹೆಚ್ಚು ನೆನಪಿಸಿಕೊಳ್ಳುವಿರಿ. ಪುತ್ರೋತ್ಸವದ ಸಂತೋಷವು ಇರಲಿದೆ. ಸಾಮನ್ಯಜ್ಞಾನದ ಕೊರತೆಯು ನಿಮಗೆ ತಿಳಿಯಬಹುದು. ಎಲ್ಲರೊಡನೆ ಆಪ್ತವಾಗಿ ಮಾತನಾಡುವಿರಿ. ನಿಮ್ಮನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಬಹುದು.
ಕಟಕ: ನಿಮ್ಮನ್ನು ವ್ಯಕ್ತಪಡಿಸಲಾಗದ ಸಮಸ್ಯೆಯೊಂದು ಕಾಡುತ್ತಿದ್ದು ಅದನ್ನು ಪರಿಹಾರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಸಣ್ಣ ಕಿರಿಕಿರಿ ಆರಂಭವಾಗುವುದು. ನಿಮ್ಮ ಇಷ್ಟದವರನ್ನು ಭೇಟಿಯಾಗುವಿರಿ. ದ್ವೇಷಭಾವವನ್ನು ಬಿಟ್ಟು ಮುಂದುವರಿಯುವುದು ಉತ್ತಮ. ಉದ್ವೇಗದಿಂದ ಏನನ್ನಾದರೂ ಹೇಳಲುಹೊಇಗುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವಿರಿ. ನಿಮ್ಮವರ ವರ್ತನೆಯು ನಿಮ್ಮ ದುಃಖಕ್ಕೆ ಕಾರಣವಾಗಬಹುದು. ನಿಮ್ಮಿಂದ ಹೆಚ್ಚು ಉಪಯುಕ್ತವಾದ ಕೆಲಸಗಳು ಆಗಬಹುದು.
ಸಿಂಹ: ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಅಸ್ತವ್ಯಸ್ತಗೊಳಿಸಬಹುದು. ಸಂಗಾತಿಯ ಮೌನವು ನಿಮ್ಮಲ್ಲಿ ಆತಂಕವನ್ನು ಹುಟ್ಟಿಸಬಹುದು. ನಿಯಮ ಉಲ್ಲಂಘನೆಯನ್ನು ಮಾಡಿ ದಂಡ ಕಟ್ಟಬಹುದು. ಇಷ್ಟವಾದ ವಸ್ತುವು ನಷ್ಟವಾಗಿ ಸಂಕಟ ಪಡುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಸಂಗಾತಿಯ ಮಾತುಗಳು ನಿಮಗೆ ಸಿಟ್ಟನ್ನು ತರಿಸೀತು. ಸುತ್ತಾಟದಲ್ಲಿ ಸುಖವನ್ನು ಕಾಣುವಿರಿ. ಮನಸ್ಸಿನಲ್ಲಿ ಅಧಿಕ ಚಿಂತೆಗಳು ಸುಳಿದಾಡುವುದು. ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ಅವಶ್ಯಕತೆಗೆ ಇದ್ದಷ್ಟನ್ನು ಮಾತ್ರ ಹೇಳಿ.
ಕನ್ಯಾ: ನಿಮ್ಮ ಮನಸ್ಸಿನಲ್ಲಿ ಅವ್ಯಕ್ತವಾಗಿ ಆತಂಕವು ಮನೆ ಮಾಡಬಹುದು. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ಅಸಮಾಧನ ಇರಲಿದೆ. ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳಲು ಬಯಸುವಿರಾದರೆ ನಿಮ್ಮ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳಯವುದು ಬೇಡ. ಸಹನೆಯಿಂದ ಆಗುವ ಲಾಭವು ಅನುಭವವೇದ್ಯವಾಗಿರಲಿದೆ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ನಡೆದುಕೊಳ್ಳುವರು. ಪದೋನ್ನತಿಯನ್ನು ನೀವು ಬಯಸಲಿದ್ದೀರಿ. ಭೂಮಿಯ ವ್ಯವಹಾರವು ಲಾಭದಾಯಕವಾಗಿಲ್ಲ. ಅಲ್ಪ ಸುಖಕ್ಕಾಗಿ ನೀವು ಹೆಚ್ಚು ಶ್ರಮಿಸುವಿರಿ.
ತುಲಾ: ತಾಯಿಯ ಕಡೆಯಿಂದ ಲಾಭವನ್ನು ನೀವು ನಿರೀಕ್ಷಿಸುವಿರಿ. ಯಾರಾದರೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಬಹುದು. ನೂತನ ವಸ್ತ್ರಗಳನ್ನು ಖರೀದಿ ಮಾಡುವಿರಿ. ನಿಮ್ಮ ಆದಾಯದ ಮೂಲವು ಅಧಿಕವಾಗಬಹುದು. ಕೆಲಸದಲ್ಲಿ ಎಂದಿನ ಪ್ರಾಮಾಣಿಕತೆ ಇರಲಿ. ಪಾಲುದಾರಿಕೆಯಿಂದ ಹೊರಬರಲು ಬಯಸುವಿರಿ. ಸ್ಪರ್ಧಾಮನೋಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ನಿಮ್ಮ ಕೆಲಸಗಳಿಗೆ ಸೂಚನೆಗಳು ಸಿಗಲಿದ್ದು ಅದರಂತೆ ನಡೆಯಿರಿ. ಸ್ನೇಹಿತರ ವಿಚಾರದಲ್ಲಿ ನೀವು ಮೃದುಮನಸ್ಸನ್ನು ಹೊಂದಿರುವಿರಿ.
ವೃಶ್ಚಿಕ: ಇಂದಿನ ಕೆಲಸದಲ್ಲಿ ಹೆಚ್ಚಿನ ಮುನ್ನಡೆಯಾಗಲಿದ್ದು ನಿಮ್ಮ ಪ್ರಯತ್ನದ ಬಗ್ಗೆ ವಿಶ್ವಾಸವು ಮೂಡುವುದು. ವಾಸಸ್ಥಳದ ಬದಲಾವಣೆಯಿಂದ ನಿಮಗೆ ಕಿರಿಕರಿಯಾಗಬಹುದು. ಆಕಸ್ಮಿಕವಾದ ವಿಷಯಗಳು ನಿಮಗೆ ಕ್ಲೇಶವನ್ನು ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಅಸಮಾಧನಾವನ್ನು ಕೊಡಬಹುದು. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆತ್ಮೀಯರ ಭೇಟಿಯಾಗಲಿದೆ. ನಿಮ್ಮ ತಪ್ಪನ್ನು ಬೇರೆಯವರು ಎತ್ತಿ ಹೇಳಬಹುದು. ಅಲ್ಪದರಲ್ಲಿ ತೃಪ್ತಿಪಡಬೇಕಾದೀತು. ನೀವು ಸಂತೋಷವಾಗಿರಲು ನಾನಾ ಕಾರಣಗಳನ್ನು ಹುಡುಕಬಹುದು.
ಧನು: ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಕಲಹವಾಗಬಹುದು. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ಪ್ರೀತಿಯಿಂದ ಕೊಟ್ಟಿದ್ದನ್ನು ಮರಳಿ ಕೇಳುವುದು ಬೇಡ. ಸಂಗಾತಿಯ ಜೊತೆ ಕಾಲು ಕೆರದುಕೊಂಡು ಜಗಳಕ್ಕೆ ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಸಂತೋಷವಾಗುವುದು. ನಿಮ್ಮವರ ಜೊತೆಯೇ ಎಲ್ಲ ವ್ಯವಹಾರವನ್ನು ಮಾಡಿ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು.
ಮಕರ: ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ವಾಹನವನ್ನು ಚಲಾಯಿಸಲು ಮನಸ್ಸು ಮಾಡುವಿರಿ. ಪರಸ್ಪರ ವಿರುದ್ಧ ಆಹಾರದಿಂದ ನಿಮ್ಮ ಆರೋಗ್ಯವು ಕೆಡಬಹುದು. ನಿಮಗೆ ಅನಾಥಪ್ರಜ್ಞೆಯು ಕಾಡಬಹುದು. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಉತ್ತಮ ಭೋಜನ ಸಿಗಲಿದೆ.
ಕುಂಭ: ನಿಮ್ಮ ಶರೀರವೇದನೆಯು ಸಹಿಸಿಕೊಳ್ಳಲಾರದಷ್ಟು ಇರಲಿದೆ. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಶತ್ರುಗಳ ಕಾಡವು ಇರಲಿದೆ. ಇಂದು ನಿಮಗೆ ಕಛೇರಿಯ ಘಟನೆಗಳೂ ನೆನಪಾಗಬಹುದು. ಅತಿಯಾದ ಕೆಲಸದಿಂದ ಆರೋಗ್ಯವು ಕೆಡಬಹುದು. ನಿಮ್ಮ ಮಾತನ್ನು ನಂಬಲು ಅಸಾಧ್ಯವಾಗಬಹುದು. ನಿಮ್ಮವರೇ ನಿಮ್ಮ ಬಗ್ಗೆ ಆಪಾದನೆಯನ್ನು ಮಾಡುವರು. ಕುಲದೇವರ ಅನುಗ್ರಹವನ್ನು ಪಡೆಯಿರಿ.
ಮೀನ: ಇಂದು ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲಕರವರನಿಸುವುದು. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ನಿಮಗೆ ಬರಬೇಕಾದ ಹಣವನ್ನು ಇಂದು ನೀವೇ ಖುದ್ದಾಗಿ ಹೋಗಿ ಪಡೆಯುವಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವುದು ಉತ್ತಮ. ಬಂಧುಗಳ ಮನೆಯಲ್ಲಿ ಉಳಿಯುವುದು ಅನಿವಾರ್ಯ ಆದೀತು. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ.