Horoscope 14 September: ದಿನಭವಿಷ್ಯ, ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ, ನಿಂದನೆಗಳಿಗೆ ಒಳಗಾಗಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಬ್ರಹ್ಮ, ಕರಣ: ಚತುಷ್ಪಾದ್, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:59 ರಿಂದ ಸಂಜೆ 03:31 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:25 ರಿಂದ 10:57ರ ವರೆಗೆ.
ಮೇಷ ರಾಶಿ: ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಕಛೇರಿಯಲ್ಲಿ ಹೆಚ್ಚಿನ ಕಾರ್ಯವನ್ನು ಮಾಡಲು ಇರಬೇಕಾದೀತು. ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ. ನಿಂದನೆಯನ್ನು ಸಹಜದಂತೆ ಸ್ವೀಕರಿಸುವಿರಿ. ಬೆನ್ನು ನೋವು ಕಾಣಿಸಿಕೊಂಡೀತು.
ವೃಷಭ ರಾಶಿ: ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಶ್ರೇಷ್ಠವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ಉಂಟುಮಾಡುವುದು. ನೇರ ನುಡಿಗಳು ನಿಮಗೆ ಮುಜುಗರವನ್ನು ಉಂಟುಮಾಡಬಹುದು. ಮನೆಯಿಂದ ದೂರ ಇದ್ದವರಿಗೆ ತೊಂದರೆ ಬರಬಹುದು.
ಮಿಥುನ ರಾಶಿ: ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಇರುವಿರಿ. ಕೆಲವು ವಿಚಾರದಲ್ಲಿ ನಿಮಗೆ ನಿರ್ದಿಷ್ಟತೆ ಇರದು.
ಕರ್ಕ ರಾಶಿ: ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ. ನಿಮ್ಮ ತಪ್ಪನ್ನು ಯಾರಿಂದಲೂ ಕೇಳಲು ಇಚ್ಛಿಸುವುದಿಲ್ಲ. ಸಂಗಾತಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲಾರಿರಿ.
ಸಿಂಹ ರಾಶಿ: ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಮಾತುಗಳು ಬರಬಹುದು. ಯಾರನ್ನೂ ಅವಲಂಬಿಸದೇ ನಿಲ್ಲಬೇಕು ಎನ್ನುವ ಹಠವು ಇರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಅಹಂಕಾರದ ಮಾತುಗಳು ನಿಮಗೆ ಶೋಭೆಯಾಗದು.
ಕನ್ಯಾ ರಾಶಿ: ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ. ನಿಮ್ಮ ಸ್ವಭಾವವು ಇಯರರಿಗೆ ಅಸಹಜತೆಯಂತೆ ಕಾಣಿಸಬಹುದು. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹುಡುಕುವರು. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಬಂಧಿವಿನಿಂದ ನೀವು ಧನವನ್ನು ಅಪೇಕ್ಷಿಸುವಿರಿ. ಉತ್ತಮ ಸ್ನೇಹದಿಂದ ಖುಷಿ ಇರಲಿದೆ.
ತುಲಾ ರಾಶಿ: ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ. ತಂದೆಯ ಮೇಲೆ ನಿಮ್ಮ ಗೌರವವು ಅಧಿಕಾಗಿದ್ದು ಅನಿರೀಕ್ಷಿತ ಉಡುಗೊರೆಯನ್ನು ಕೊಡುವಿರಿ. ಹಿತಶತ್ರುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮಗೆ ಗೊತ್ತಾಗುವುದು.
ವೃಶ್ಚಿಕ ರಾಶಿ: ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಟ್ಟಾರು. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ಮನಸ್ಸಿಗೆ ಬೇರಸವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದ ಭಡ್ತಿಯು ಸಿಗಲಿದೆ. ನಿಮ್ಮ ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ. ಹಣವನ್ನು ವೃಥಾ ಖಾಲಿ ಮಾಡುವುದು ಬೇಡ. ಸ್ನೇಹಿತರ ಜೊತೆ ಎಲ್ಲಿಗಾದರೂ ಪ್ರಯಾಣವನ್ನು ಮಾಡುವಿರಿ. ಸತ್ಯವನ್ನು ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುವಿರಿ.
ಧನು ರಾಶಿ: ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಿರಿ. ಯೋಗಾಭ್ಯಾಸದಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವಿರಿ. ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷವಾಗಲಿದೆ. ಸ್ನೇಹಿತನ ಸಹವಾಸದಿಂದ ದುರಭ್ಯಾಸವು ಬರಬಹುದು. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಂಬಿಕೆಯನ್ನು ಕಳೆದುಕೊಳ್ಳುವವ ಪ್ರಸಂಗವು ಬರಬಹುದು. ಉದ್ಯಮವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ದೇವತಾರಾಧನೆಯಲ್ಲಿ ಮನಸ್ಸು ನಿಲ್ಲಲಿದೆ.
ಮಕರ ರಾಶಿ: ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ಹೊಸ ಉದ್ಯೋಗಕ್ಕೆ ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರಿಂದ ಮಾರ್ಗದರ್ಶನವು ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥಯವಾಗುವುದು. ಉಚಿತವಾಗಿ ಸಿಕ್ಕಿದ್ದನ್ನು ಪಡೆಯಲು ಇಚ್ಛಿಸುವುದಿಲ್ಲ. ಶ್ರಮಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ.
ಕುಂಭ ರಾಶಿ: ಹಳೆಯ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ವಾಹನದಿಂದ ಗಾಯವಾಗುವ ಸಾಧ್ಯತೆ ಇದೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ಸಹೋದರನ ಜೊತೆ ಸಣ್ಣ ವಿಷಯಕ್ಕೆ ವಿವಾದವಾಗಬಹುದು. ಕಾರ್ಯದ ಅನಿವಾರ್ಯತೆಯು ಎದ್ದು ಕಾಣಿಸುವುದು. ನಿಮ್ಮ ಸರಳ ವ್ಯಕ್ತಿತ್ವವು ಮಾದರಿಯಾಗುವುದು.
ಮೀನ ರಾಶಿ: ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು.ಲ. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ. ನಿಮ್ಮ ಅಧಿಕಾರದ ಮಾತುಗಳು ಅಹಂಕಾರವಾಗಿ ಪರಿವರ್ತಿತವಾಗಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಕಾರವನ್ನು ಮಾಡುವಿರಿ. ನೂತನ ಸಂಬಂಧವನ್ನು ಬೆಳೆಸಿಕೊಳ್ಳಲು ಉತ್ಸುಕರಾಗುವಿರಿ. ಅರ್ಥಿಕ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವಿರಿ.
-ಲೋಹಿತಶರ್ಮಾ – 8762924271 (what’s app only)