Daily Horoscope 14 June: ಮಾತಿನ‌ ಮೇಲೆ‌ ನಿಗಾ ಇರಲಿ, ನೀವಾಡಿದ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾದೀತು

| Updated By: Digi Tech Desk

Updated on: Jul 06, 2023 | 2:16 PM

ಇಂದಿನ (2023 ಜೂನ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 14 June: ಮಾತಿನ‌ ಮೇಲೆ‌ ನಿಗಾ ಇರಲಿ, ನೀವಾಡಿದ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾದೀತು
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:33ರ ವರೆಗೆ.

ಮೇಷ: ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಧನದ ಹಿಂದೆ ಹೋಗಿ ಸಂಬಂಧವನ್ನು ಕಳೆದುಕೊಳ್ಳಬಹುದು. ಮನೋವಿಕಾರಕ್ಕೆ ಬೇಕಾದ ಎಲ್ಲ ಅಂಶಗಳೂ ಇಂದು ಇರಲಿವೆ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ. ಇಂದು ನಿಮಗೆ ಹಿತಕರವಾದ ವಾರ್ತೆತೊಂದು ಬರಲಿದ್ದು ಮನಸ್ಸು ಉಲ್ಲಾಸದಿಂದ ಕೂಡಿರಲಿದೆ. ಕುಟುಂಬದ ಜೊತೆ ಸಂತೋಷದಿಂದ ಕಾಲಕಳೆಯುವಿರಿ. ನಿಮ್ಮಿಷ್ಟವರ ಜೊತೆ ಸಮಯವನ್ನು ಕಳೆಯುವಿರಿ.

ವೃಷಭ: ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನೀವು ಯಶಸ್ವಿಯಾಗುವಿರಿ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ವ್ಯವಹಾರವನ್ನು ಮಾಡುವಾಗ ನೀವು ಗ್ರಾಹಕರ ಬಗ್ಗೆ ಗಮನವಿಡುವುದು ಮುಖ್ಯವಾಗಲಿದೆ. ಯಂತ್ರಗಳ ಮಾರಾಟವು ನಿಮಗೆ ಅಧಿಕಲಾಭವನ್ನು ಕೊಟ್ಟೀತು. ಮನಶ್ಚಾಂಚಲ್ಯಕ್ಕೆ ಉಪಶಮನ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ನಿರ್ಧಾರವನ್ನು ನೀವು ಇಂದು ಸಡಿಲಮಾಡುವಿರಿ. ಒಂದೇ ಕೆಲಸದಿಂದ ಎರಡು ಫಲವನ್ನು ಪಡೆಯುವ ಸಾಧ್ಯತೆ ಇದೆ.

ಮಿಥುನ: ಮನೆಯನ್ನು ಕಟ್ಟಲು ನೀವು ಯೋಜನೆಯನ್ನು ರೂಪಿಸುವಿರಿ. ಹಣಕಾಸಿನ‌ ಒತ್ತಡವು ನಿಮಗೆ ಹೆಚ್ಚಿನ ಆಲೋಚನೆಯನ್ನು ಮಾಡಲು ಬಿಡದು. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಅಧಿಕೃತವಾಗಿ ನಿಮಗೆ ಆಧಿಕಾರವು ನಿಮಗೆ ದೊರೆಯಬಹುದು. ಸಂತಾನವಿಲ್ಲ ಎಂಬ ಚಿಂತೆ ನಿಮ್ಮನ್ನು ಅಧಿಕವಾಗಿ ಕಾಡಲಿದೆ. ನೆಮ್ಮದಿಗೆಂದು ವಾಯುವಿಹಾರಕ್ಕೆ ಹೋಗಲು ಇಚ್ಛಿಸುವಿರಿ. ಧೈರ್ಯದಿಂದ ನೀವು ಕಾರ್ಯಗಳನ್ನು ಮಾಡಲು ಹಿಂಜರಿಯುವಿರಿ.

ಕರ್ಕ: ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಅಧಿಕಾರಿಗಳು ನಿಮ್ಮ ತಪ್ಪನ್ನು ಹುಡುಕಿ ಹೇಳುವರು. ಆಸ್ತಿಯ ವಿಚಾರಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ಸಮಯೋಚಿತ ಅರಿವಿನಿಂದ ಇಂದಿನ ಅವಗಢವನ್ನು ತಪ್ಪಿಸುವಿರಿ. ಆಕಸ್ಮಿಕ ಧನಲಾಭವು ಆಗುವುದು. ಹಿರಿಯರು ನಿಮಗೆ ಲಾಭದಾಯಕವಾದ ಕೆಲಸವೊಂದನ್ನು ಮಾಡುವರು. ಅಶಿಸ್ತಿನಿಂದ ಇಂದು ನೀವು ವರ್ತಿಸುವಿರಿ.

ಸಿಂಹ: ನಿಮ್ಮಿಂದಾಗದು ಎಂಬ ವಿಚಾರವನ್ನು ನೀವು ಹಠವಾಗಿ ತೆಗೆದುಕೊಳ್ಳುವಿರಿ. ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ನೀವು ಮನೆಯಿಂದ ಪ್ರತ್ಯೇಕವಾಗಿರಲು ಬಯಸಬಹುದು. ಇಂದು ನಿಮಗೆ ಅಲ್ಪಲಾಭವಾಗಲಿದೆ. ಇದ್ದಕ್ಕಿದ್ದಂತೆ ಏನ್ನಾದರೂ ಹೊಸತನ್ನು ಮಾಡಲು ಉತ್ಸಾಹ ಬರಲಿದೆ.
ಇಂದು ನಿಮ್ಮದೇ ಜಗತ್ತಿನಲ್ಲಿ ಇರುವಿರಿ.

ಕನ್ಯಾ: ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಂಧುವರ್ಗದಿಂದ ನಿಮಗೆ ಧನಸಹಾಯ ಸಿಗಬಹುದು. ಕೆಲಸಗಳು ಕೈಗೂಡಿಲ್ಲ ಎಂಬ ನೋವು ಅಧಿಕವಾಗಲಿದೆ. ಉತ್ತಮ ಭೋಜನವನ್ನು ನೀವಿಂದು ಮಾಡುವಿರಿ. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಕೆಲವು ಸ್ವಭಾವವನ್ನು ಸಂಗಾತಿಯು ತಿದ್ದಲು ಬಯಸಬಹುದು. ಅಕಾರಣವಾಗಿ ನಿಮ್ಮವರನ್ನು ನೀವು ತೆಗಳುವಿರಿ. ದೈವದಲ್ಲಿ ನಂಬಿಕೆ ಕಡಿಮೆಯಾದೀತು. ಆರೋಗ್ಯವನ್ನು ನೀವು ಔಷಧೋಪಚಾರದಿಂದ ಸರಿಮಾಡಿಕೊಳ್ಳಿ.

ತುಲಾ: ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ನೀವು ಮುಂದಾಗುವಿರಿ. ಆಪ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ಬಂಗಾರದ ವ್ಯಾಪಾರಿಗಳು ಅಧಿಕ ಲಾಭವನ್ನು ಗಳಿಸಲಿದ್ದಾರೆ. ಸ್ನೇಹಿತರ ಮೇಲೆ ಅನುಮಾನಪಟ್ಟುಕೊಂಡು ಅವರನ್ನು ದೂರವಿರಿಸುವಿರಿ. ಸರ್ಕಾರಿ ಉದ್ಯೋಗವನ್ನು ಪಡೆಯಲು ಬಹಳ ಪ್ರಯತ್ನಪಡುವಿರಿ. ವಾಹನದಿಂದ ಬೀಳುವ ಸಂಭವವಿದೆ. ವಾಹನ ಚಲಾಯಿಸುವಾಗ ಜಾಗರೂಕತೆ ಇರಲಿ.

ವೃಶ್ಚಿಕ: ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವಾಹನವನ್ನು ಬದಲಾಯಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಸುಂದರ ಸ್ಥಳಗಳನ್ನು ನೋಡಲು ನೀವು ಇಷ್ಟಪಡುವಿರಿ. ಆಕಸ್ಮಿಕ ವಾರ್ತೆಯು ನಿಮಗೆ ಸಂತೋಷವನ್ನು ಉಂಟುಮಾಡುವುದು. ನಿಮಗೆ ಸಹೋದ್ಯೋಗಿಗಳು ಬೆಂಬಲ ಕೊಡುವುದು ಕಷ್ಟವಾದೀತು. ಇಂದು ಇಡೀ ದಿನ ಕೋಪದಿಂದ ಇರುವಿರಿ. ದಾಂಪತ್ಯದಲ್ಲಿ ಸಂತೋಷವು ಕಡಿಮೆಯಾಗುವುದು.

ಧನುಸ್ಸು: ಅಧ್ಯಯನದ ವಿಚಾರದಲ್ಲಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ನೂತನ ವಸ್ತ್ರಗಳನ್ನು ಧರಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಹಿತಶತ್ರುಗಳು ಎಂದು ಅನ್ನಿಸಿದರೆ ಅವರನ್ನು ದೂರವಿಡುವುದು ಉತ್ತಮ. ಹೂಡಿಕೆಯನ್ನು ಮಾಡಲು ಹೋಗಿ ಮೋಸಕ್ಕೆ ಒಳಗಾಗುವಿರಿ. ಪಶ್ಚಾತ್ತಾಪ ಪಟ್ಟು ಪ್ರಯೋಜನವಾಗದು. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು.

ಮಕರ: ಗುರುಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಪ್ರಯಾಣದ ಸುಖವು ನಿಮಗೆ ಸಿಗಲಿದೆ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ದೂರವಾಗಿರಲಿದೆ. ಮಕ್ಕಳು ದಾರಿ ತಪ್ಪಬಹುದು. ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ. ತಾಯಿಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ನಿಮ್ಮನ್ನು ನೆಚ್ಚುವವರು ಹೆಚ್ಚಾಗಬಹುದು. ಅಧಿಕ ಮಾತನ್ನಾಡಯವುದು ಬೇಡ.

ಕುಂಭ: ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗುವುದು. ಜಾಡ್ಯದಿಂದ ನೀವು ಇಂದು ಮಾಡುವ ಕೆಲಸವನ್ನು ಮಾಡುವುದಿಲ್ಲ. ಸ್ವತಂತ್ರ ಆಲೋಚನೆಗಳು ನಿಮಗೆ ಪೂರಕವಾಗುವುದು. ವ್ಯವಸ್ಥೆಯಲ್ಲಿನ ಧನಾತ್ಮಕ ಅಂಶಗಳನ್ನು ಹುಡುಕಿಕೊಂಡು ಮುಂದೆ ಸಾಗಿರಿ. ಆಸ್ತಿಯ ವಿಚಾರವಾಗಿ ವಿವಾದಗಳು ಆಗಬಹುದು. ನಿಮ್ಮ ಮನಸ್ಸು ಹೇಳಿದ ದಾರಿಯಲ್ಲಿ ಸಾಗಲು ನಿಮಗೆ ಕಷ್ಟವಾದೀತು. ಅಧಿಕ ಚಿಂತನೆಯನ್ನು ಮಾಡಿ ನಿಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳುಬಹುದು. ನೂತನ ವಸ್ತುಗಳನ್ನು ಖರೀದಿಸುವಲ್ಲಿ ಮೋಸವಾಗಬಹುದು. ಸಣ್ಣ ವಿಷಯವನ್ನು ನೀವು ದೊಡ್ಡ‌ ಮಾಡುವುದು‌ ಬೇಡ. ಏಕಾಂತವು ನಿಮಗೆ ಹಿತವೆನಿಸಬಹುದು.

ಮೀನ: ಅಧಿಕಾರಯುತವಾದ ಮಾತಿನಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಸ್ನೇಹಿತರು ಸಂಪತ್ತನ್ನು ಬಯಸಬಹುದು. ಕೈಲಾದ ಸಹಾಯವನ್ನು ಮಾಡುವಿರಿ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ವ್ಯಾಪಾರವನ್ನು ಬಹಳ ನಾಜೂಕಾಗಿ ಮಾಡಬೇಕಿದೆ. ನೀವಾಡಿದ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾಗಬಹುದು. ಮಾತಿನ‌ ಮೇಲೆ‌ ನಿಗಾ ಇರಲಿ.

ಲೋಹಿತಶರ್ಮಾ – 8762924271 (what’s app only)

Published On - 12:02 am, Wed, 14 June 23