Horoscope 15 Oct: ದಿನಭವಿಷ್ಯ, ಯಾರ ಮೇಲೂ ಹಗುರಾದ ಮನೋಭಾವ ಬೇಡ, ಪ್ರಾಣಿಗಳ ಜೊತೆ ಸಖ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 15 Oct: ದಿನಭವಿಷ್ಯ, ಯಾರ ಮೇಲೂ ಹಗುರಾದ ಮನೋಭಾವ ಬೇಡ, ಪ್ರಾಣಿಗಳ ಜೊತೆ ಸಖ್ಯ
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಸಂಜೆ 04:43 ರಿಂದ 06:12ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:47ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:15 ರಿಂದ 04:43ರ ವರೆಗೆ.

ಮೇಷ ರಾಶಿ: ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಆಹಾರ ವ್ಯತ್ಯಾಸದಿಂದ ದೇಹ ಬಾಧೆಯು ಕಾಣಿಸಿಕೊಳ್ಳುವುದು. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಇರುವ ಸಂಪತ್ತನ್ನು ಗ್ರಹಿಸಿಕೊಂಡು ಯೋಜನೆಯನ್ನು ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೇ ಸುಮ್ಮನಿರುವುದ ಲೇಸು ಎಂದೆನಿಸಬಹುದು. ನಿಮ್ಮ ಬಂಧುಗಳು ಭೇಟಿ ಮಾಡಿ ಸಮಯವನ್ನು ಹಾಳುಮಾಡುವರು. ಹಿರಿಯರ ಮೇಲಿದ್ದ ನಿಮ್ಮ ಪೂರ್ವಾಗ್ರಹ ಬೇಡ. ಮನಸ್ಸು ಬಹಳ ಗೊಂದಲದಲ್ಲಿ ಸಿಕ್ಕಿಕೊಳ್ಳಲಿದೆ. ಮನಸ್ಸನ್ನು ಸ್ವಲ್ಪ ಕಾಲ ಬೇರೆ ಕಾರ್ಯಕ್ಕೆ ಜೋಡಿಸಬೇಕಾಗುವುದು.

ವೃಷಭ ರಾಶಿ: ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ.‌ ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೆಚ್ಚಾಗಿರಲಿದೆ. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ಮನಸ್ಸನ್ನು ಮುಟ್ಟಿ ಪರಿವರ್ತನೆ ಆಗಬಹುದು. ಸಹೋದರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡುವರು. ಆರೋಗ್ಯದ ಸ್ಥಿತಿಯು ದೃಢವಾಗಿರಲು ಬೇಕಾದ ಕ್ರಮವನ್ನು ಮಾಡುವಿರಿ. ಪ್ರಾಣಿಗಳ ಜೊತೆ ಸಖ್ಯಮಾಡುವುದು ಇಷ್ಟವಾದೀತು..

ಮಿಥುನ ರಾಶಿ: ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಿಸಬಹುದು. ಪ್ರೀತಿಯು ಸಪ್ಪೆಯಂತೆ ನಿಮಗೆ ಕಾಣಿಸುವುದು. ಹೊಸ ವಸ್ತುಗಳನ್ನು ಖರೀದಿಸುವಿರಿ. ಧಾರ್ಮಿಕ ಶ್ರದ್ಧೆಯಿಂದ ಉತ್ತಮವಾದುದನ್ನು ಸಾಧಿಸುವಿರಿ. ಪ್ರೀತಿಯಿಂದ ಹೇಳಿದರೂ ಯಾರೂ ಮಾತು ಕೇಳುವರು.

ಕರ್ಕ ರಾಶಿ: ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.‌ ಬಂಧುಗಳಿಂದ ಮನೆಯು ತುಂಬಿರುವುದು. ಸಾಮಾಜಿಕ ಗೌರವವನ್ನು ಪಡೆಯುವ ನಿರೀಕ್ಷೆಯು ಹುಸಿಯಾಗುವುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ಸಂಗಾತಿಯನ್ನು ಸಂತೋಷವಾಗಿ ಇಡಲು ಏನಾದರೂ ಉಡುಗೊರೆಯನ್ನು ನೀಡುವಿರಿ. ವ್ಯಾಪಾರದಲ್ಲಿ ನಿಮ್ಮ ಆಲೋಚನೆಯು ತಲೆಕೆಳಗಾಗುವುದು.

ಸಿಂಹ ರಾಶಿ: ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ‌ಶಿಸ್ತಿನಿಂದ‌ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಾದರ ತೋರುವುದು ಬೇಡ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ನೇರ ಮಾತು ಎಲ್ಲ ಸಂದರ್ಭಗಳಲ್ಲಿಯೂ ಪ್ರಯೋಜನಕ್ಕೆ ಬಾರದು. ಪ್ರೀತಿಯಿಂದ ಹೇಳಿ ಕೆಲಸವನ್ನು ಮಾಡಿಸಿಕೊಳ್ಳಿ. ಕೈ ತುಂಬ ಕೆಲಸಗಳಿದ್ದರೂ ಯಾವುದನ್ನೂ ಮಾಡುವ ಮನಸ್ಸು ಇರದು. ನೀವು ಇಂದು ಸಣ್ಣ ಅಪಮಾನವನ್ನು ಸಲಿಸಲಾರಿರಿ.

ಕನ್ಯಾ ರಾಶಿ: ಪ್ರಯಾಣ ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡುವುದು ಅನಿವಾರ್ಯವಾಗಬಹುದು. ನಿಮ್ಮ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳದೇ ಇರುವುದು ನಿಮಗೆ ಸಿಟ್ಟನ್ನು ತರಿಸುವುದು. ಅಸೂಯಯಿಂದ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಇಡನಾಡುವಿರಿ. ನಿಮಗೆ ಜವಾಬ್ದಾರಿಗಳು ಸಾಕೆನಿಸುವುದು.

ತುಲಾ ರಾಶಿ: ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವುದು ಉಚಿತ. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ವರ್ಧಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ಅಪರಿಚಿತ ಕರೆಗಳಿಂದ ನಿಮಗೆ ಹಿಂಸೆ ಆಗಬಹುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಮುಸುಕಿನ ಗುದ್ದಾಟವು ಇರಲಿದೆ. ಶತ್ರುಗಳ ಜೊತೆ ವ್ಯವಹಾರವನ್ನು ಮಾಡಲು ಕಲಿಯಬೇಕಾಗುವುದು. ಇಂದು ಮಾನಸಿಕವಾಗಿ ದುರ್ಬಲರಾದಂತೆ ಕಾಣುವಿರಿ. ಗೋಗ್ರಾಸವನ್ನು ನೀಡಿ, ಗೋಸೇವೆಯನ್ನು ಮಾಡಿ.

ವೃಶ್ಚಿಕ ರಾಶಿ: ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಸಮ್ಮಾನಾದಿಗಳು ಸಿಗುವುದು. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗವು ಸಿಗುವುದು. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮಗೆ ಚಿಂತೆಯಾಗುವುದು. ಕೃಷಿಯಲ್ಲಿ ಆಸಕ್ತಿ ಇರುವವರು ಏನಾದರೂ ಹೊಸತನ್ನು ಮಾಡುವಿರಿ. ನಿಮ್ಮ ಆರ್ಥಿಕ‌ಗುಟ್ಟನ್ನು ಯಾರಾದರೂ ಹೊರ ತೆಗೆದಾರು.

ಧನು ರಾಶಿ: ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಮೇಲೆ ಒತ್ತಡ ನಿರ್ಮಾಣವಾಗಲಿದ್ದು ಇದರಿಂದ ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಸಂಕೋಚವಾಗುವುದು. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಆರ್ಥಿಕ ತೊಂದರೆಯನ್ನು ನೀವು ಸಂಗಾತಿಯ ಬಳಿ ಹೇಳಿಕೊಳ್ಳುವುದು ಬೇಡ. ಮನೆಯಲ್ಲಿಯೇ ಇದ್ದು ಆನಂದಿಸುವಿರಿ.

ಮಕರ ರಾಶಿ: ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ನಿಮ್ಮ ಯೋಜನೆಯು ತೆಗೆದುಕೊಂಡಿದ್ದು ನಿಮಗೆ ಚಿಂತೆಯಾಗಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುವಿರಿ. ಎಲ್ಲರನ್ನೂ ಮೆಚ್ಚಿಸಿ ನಿಮಗೆ ಕಷ್ಟದ ಕೆಲಸ. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ‌ ಇರುವುದು.

ಕುಂಭ ರಾಶಿ: ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು.‌ ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು. ಬರಬೇಕಾದ ಪೂರ್ಣವಾಗಿ ಬಾರದು. ಇಂದು ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಲು ಹೆಚ್ಚು ಗಮನಹರಿಸುವಿರಿ. ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗುವುದು. ನಿಮ್ಮ ಯಶಸ್ಸು ಸುಲಭದಲ್ಲಿ ಸಿಗದು.

ಮೀನ ರಾಶಿ: ಈ ದಿನ ತಂತ್ರಜ್ಞರಿಗೆ ಒತ್ತಡದ ದಿನವಾಗಲಿದೆ.‌ ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕ ದ್ರವ್ಯಪ್ರಾಪ್ತಿಯಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಊಹಿಸದ ಬದಲಾವಣೆಯು ನಿಮ್ಮಿಂದಾಗಬಹುದು. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ‌. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮವನ್ನು ಪಡೆಯುವಿರಿ. ಉಪಕಾರದ ವಿಸ್ಮರಣೆಯಾಗಿ ಪಶ್ಚಾತ್ತಾಪ ಪಡುವಿರಿ.

-ಲೋಹಿತಶರ್ಮಾ – 8762924271 (what’s app only)