Horoscope: ರಾಶಿಭವಿಷ್ಯ, ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗುವುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಸಂಜೆ 04:43 ರಿಂದ 06:12ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:47ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:15 ರಿಂದ 04:43ರ ವರೆಗೆ.
ಧನು ರಾಶಿ : ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಮೇಲೆ ಒತ್ತಡ ನಿರ್ಮಾಣವಾಗಲಿದ್ದು ಇದರಿಂದ ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಸಂಕೋಚವಾಗುವುದು. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಆರ್ಥಿಕ ತೊಂದರೆಯನ್ನು ನೀವು ಸಂಗಾತಿಯ ಬಳಿ ಹೇಳಿಕೊಳ್ಳುವುದು ಬೇಡ. ಮನೆಯಲ್ಲಿಯೇ ಇದ್ದು ಆನಂದಿಸುವಿರಿ.
ಮಕರ ರಾಶಿ : ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ನಿಮ್ಮ ಯೋಜನೆಯು ತೆಗೆದುಕೊಂಡಿದ್ದು ನಿಮಗೆ ಚಿಂತೆಯಾಗಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುವಿರಿ. ಎಲ್ಲರನ್ನೂ ಮೆಚ್ಚಿಸಿ ನಿಮಗೆ ಕಷ್ಟದ ಕೆಲಸ. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ ಇರುವುದು.
ಕುಂಭ ರಾಶಿ : ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು. ಬರಬೇಕಾದ ಪೂರ್ಣವಾಗಿ ಬಾರದು. ಇಂದು ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಲು ಹೆಚ್ಚು ಗಮನಹರಿಸುವಿರಿ. ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗುವುದು. ನಿಮ್ಮ ಯಶಸ್ಸು ಸುಲಭದಲ್ಲಿ ಸಿಗದು.
ಮೀನ ರಾಶಿ : ಈ ದಿನ ತಂತ್ರಜ್ಞರಿಗೆ ಒತ್ತಡದ ದಿನವಾಗಲಿದೆ. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕ ದ್ರವ್ಯಪ್ರಾಪ್ತಿಯಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಊಹಿಸದ ಬದಲಾವಣೆಯು ನಿಮ್ಮಿಂದಾಗಬಹುದು. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮವನ್ನು ಪಡೆಯುವಿರಿ. ಉಪಕಾರದ ವಿಸ್ಮರಣೆಯಾಗಿ ಪಶ್ಚಾತ್ತಾಪ ಪಡುವಿರಿ.
-ಲೋಹಿತಶರ್ಮಾ – 8762924271 (what’s app only)