Weekly Horoscope: ವಾರ ಭವಿಷ್ಯ: ಅಕ್ಟೋಬರ್ 15 ರಿಂದ 21 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 15 ರಿಂದ 21 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ಅಕ್ಟೋಬರ್ 15 ರಿಂದ 21 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2023 | 1:10 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 15 ರಿಂದ 21 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ: ಅಕ್ಟೋಬರ್ ತಿಂಗಳ ಮೂರನೇ ವಾರವು ನಿಮಗೆ ಹೆಚ್ಚು ಶುಭದ ವಾರವಾಗಲಿದೆ. ಸಪ್ತಮಕ್ಕೆ ಸೂರ್ಯ ಹಾಗೂ ಬುಧರು ಬರಲಿದ್ದಾರೆ. ಸಂಗಾತಿಯ ಕಡೆಯಿಂದ ನಿಮಗೆ ಸಹಕಾರವು ಸಿಗುವುದು. ಮಾನಸಿಕವಾಗಿ ನೀವು ಬಲವಾಗುವಿರಿ. ಸಂಬಂಧಗಳಲ್ಲಿ ಬಿರುಕು ಬರಲಿದೆ. ಅಧಿಕಾರಸ್ಥರು ಸಾಧ್ಯವಾದಷ್ಟು ಜನರಿಗೆ ಉಪಯೋಗ ಮಾಡಲು ಕಾರ್ಯಪ್ರವೃತ್ತರಾಗುವಿರಿ. ದಾಂಪತ್ಯದಲ್ಲಿ ಕಲಹಗಳು ಶಾಂತವಾಗುವುದು. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕಾದೀತು. ಅನಿರೀಕ್ಷಿತ ಖರ್ಚುಗಳನ್ನು ತಡೆಯಲು ಸಾಧ್ಯವಾಗದು. ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ಗಮನವಿರಲಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುವುದು. ನೂತನ ಸಂಬಂಧಗಳನ್ನು ಇಷ್ಟಪಡುವಿರಿ.

ವೃಷಭ ರಾಶಿ: ಅಕ್ಟೋಬರ್ ತಿಂಗಳ ಮೂರನೇ ವಾರ ಇದು. ಈ ವಾರದಲ್ಲಿ ಎರಡು ಗ್ರಹಗಳು ರಾಶಿಯನ್ನು ಬದಲಿಸಲಿವೆ. ಪಂಚಮದಲ್ಲಿ ಇರುವ ಗ್ರಹರು ಷಷ್ಠಸ್ಥಾನಕ್ಕೆ ಹೋಗಲಿದ್ದಾರೆ. ಶತ್ರುಗಳಿಂದ ತೊಂದರೆಗಳು ಬಂದರೂ ಅದನ್ನು ಮೆಟ್ಟಿ ನಿಲ್ಲುವ ಧೈರ್ಯವು ಬದಲಿದೆ. ಯಾವುದಕ್ಕೂ ಎದೆಗುಂದದೇ ಮುನ್ನುಗ್ಗುವಿರಿ. ಚತುರ್ಥದಲ್ಲಿ ಇರುವ ಶುಕ್ರನು ನಿಮಗೆ ಕುಟುಂಬದ ಸೌಖ್ಯವನ್ನು ಕೊಡುವನು. ವೈದ್ಯಕೀಯ ವ್ಯಕ್ತಿಗಳಿಗೆ ಮಾನಸಿಕ ಅಸಮಾಧಾನ ಉಂಟಾಗಬಹುದು. ತಂತ್ರಜ್ಞರು ಅಧಿಕ ಲಾಭವನ್ನು ಗಳಿಸುವರು.‌ ನಿಮ್ಮ ಮೇಲೆ ಗಮನದ ಅಗತ್ಯವಿರಲಿದೆ.‌ ಉದ್ಯೋಗದಲ್ಲಿ ಹೆಚ್ಚು ಒತ್ಯಡವಿರಲಿದೆ. ಉದ್ವೇಗಕ್ಕೆ ಸಿಕ್ಕಿಕೊಳ್ಳುವ ಸಂದರ್ಭವು ಬದಲಿದೆ. ತಂದೆ-ತಾಯಿಯಿಂದ ಹಿತವಚನವು ಸಿಗಲಿದೆ.

ಮಿಥುನ ರಾಶಿ: ಈ ವಾರವು ನಿಮಗೆ ಕೆಲವು ದೃಷ್ಟಿಯಿಂದ ಶುಭ, ಇನ್ನೂ ಕೆಲವು ದೃಷ್ಟಿಯಿಂದ ಅಶುಭವೆಂದೇ ಹೇಳಬೇಕು. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಹಿನ್ನಡೆಯಾಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಪ್ರಶಂಸೆಯು ಸಿಗಲಿದೆ. ತಂದೆ ಮಕ್ಕಳ ನಡುವೆ ಕಲಹವಾಗಬಹುದು. ಏಕಾದಶದ ಗುರುವಿನ ದೃಷ್ಟಿಯು ಇರುವುದರಿಂದ ಎಲ್ಲವೂ ಶಾಂತವಾಗುವುದು. ಮದುವೆ ಮೊದಲಾದ ಶುಭ ಕಾರ್ಯಗಳು ನೆರವೇರಲಿವೆ. ಆರೋಗ್ಯದಲ್ಲಿ ನಿರೀಕ್ಷಿತ ಪ್ರಗತಿಯು ಇಲ್ಲದಿದ್ದರೂ ತೃಪ್ತಿ ಇರಲಿದೆ. ಹತ್ತಿರದ ಗೆಳೆಯರ ಜೊತೆ ಆತ್ಮೀಯತೆ ಹೆಚ್ಚಾಗಲಿದೆ. ಖರ್ಚು ಕಡಿಮೆ, ಉಳಿತಾಯ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಚಂಚಲ ಉಂಟಾಗಲಿದೆ. ಹತ್ತಿರದವರೊಂದಿಗೆ ಪ್ರೀತಿಯಿಂದ ವ್ಯವಹರಿಸಿ ಆರ್ಥಿಕವಾಗಿ ಲಾಭವಾಗಲಿದೆ. ಹೊಸ ಕಾರ್ಯಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುವುದು.

ಕಟಕ ರಾಶಿ: ಈ ವಾರ ಮಿಶ್ರಫಲಗಳನ್ನು ಪಡೆಯುವಿರಿ.‌ ತೃತೀಯದಲ್ಲಿ ಇದ್ದ ಸೂರ್ಯ ಹಾಗೂ ಬುಧರು ಚತುರ್ಥಸ್ಥಾನಕ್ಕೆ ಹೋಗಿದ್ದಾರೆ. ಕುಟುಂಬದಲ್ಲಿ ಅನ್ಯೋನ್ಯತೆ ಇದ್ದಂತೆ ಕಂಡರೂ ಒಬ್ಬರ ನಡುವೆಯೂ ಸಮಾಧಾನದ ಸ್ಥಿತಿ ಇಲ್ಲ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸುವುದು. ಸೂಕ್ತ ಚಿಕಿತ್ಸೆಯನ್ನು ಮಾಡಬೇಕಾದೀತು. ಇಲ್ಲವಾದರೆ ಅದೇ ದೊಡ್ಡದಾಗಲಿದೆ. ದ್ವಿತೀಯದಲ್ಲಿ ಶುಕ್ರನಿದ್ದು ಮಾತಿನಿಂದಲೇ ಎಲ್ಲವನ್ನು ಪಡೆಯುತ್ತೇನೆ ಎಂಬ ಅತಿಯಾದ ವಿಶ್ವಾಸವೂ ಸಲ್ಲ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರ ಬೇಡ. ಮಕ್ಕಳ ಪ್ರೀತಿಯು ನಿಮಗೆ ಸಂತೋಷ ಪಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ದಾಂಪತ್ಯದಲ್ಲಿ ಸಣ್ಣ ಜಗಳವು ದೊಡ್ಡದಾಗಬಹುದು.

ಸಿಂಹ ರಾಶಿ: ಅಕ್ಟೋಬರ್ ತಿಂಗಳ ಮೂರನೇ ವಾರವು ಹೆಚ್ಚು ಶುಭಫಲವು ಸಿಗುವುದು. ದ್ವಿತೀಯದಲ್ಲಿ ಇರುವ ಬುಧ ಹಾಗೂ ಸೂರ್ಯರು ತೃತೀಯ ಸ್ಥಾನಕ್ಕೆ ಹೋಗುವರು. ‌ನಿಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ತೋರಿಸಲು ಉತ್ತಮವಾಗಿದೆ. ನೀವಾಗಿಯೇ ಮುನ್ನುಗ್ಗಲು ಹಿಂದೇಟು ಹಾಕುವಿರಿ. ಯಾರದಾದರೂ ಬಲವಾದ ಪ್ರೋತ್ಸಾಹ ಅವಶ್ಯಕವಿದೆ. ಅಲಂಕಾರಪ್ರಿಯರಾಗಿ ಹೆಚ್ಚಿನ ಸಮಯವನ್ನು ಅಲಂಕಾರಕ್ಕೆಂದು ತೆಗೆದಿಡುವಿರಿ. ಹೆಚ್ಚು ಅದರ ಕಡೆಗೇ ಗಮನವಿರಲಿದೆ. ಸ್ವಂತ ವಾಹನದ ಖರೀದಿಯನ್ನೂ ಮಾಡುವಿರಿ. ಕಲಾವಿದರು ಹೆಚ್ಚು ಅವಕಾಶವನ್ನು ಪಡೆಯುವರು ಮತ್ತು ಅದನ್ನು ಸರಿಯಾಗಿ ಬಳಸಿಕೊಳ್ಳುವರು.‌ ಎಲ್ಲರ ಜೊತೆ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸಿನಿಮಾರಂಗದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳಿವೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆದಾಯವು ಅಭಿವೃದ್ಧಿಯ ಕಡೆ ಹೋಗುವುದು.

ಕನ್ಯಾ ರಾಶಿ: ಅಕ್ಟೋಬರ್ ತಿಂಗಳ ಈ ವಾರವು ನಿಮ್ಮಲ್ಲಿ‌ ಕೆಲವು ಬದಲಾವಣೆಯನ್ನು ತರಲಿದೆ. ನಿಮ್ಮ ಸ್ಥಾನದಲ್ಲಿ ಇದ್ದ ಎರಡು ಗ್ರಹಗಳು ಈ ವಾರ ದ್ವಿತೀಯ ಸ್ಥಾನಕ್ಕೆ ಹೋಗಲಿವೆ. ಸೂರ್ಯ ಹಾಗೂ ಬುಧರು ಕೇತು ಹಾಗೂ ಕುಜರನ್ನು ಸೇರಿಕೊಳ್ಳುವರು. ಮಾತಿನ ಬಗ್ಗೆ ಎಚ್ಚರ ಅಗತ್ಯ.‌ ಏನಾದರೂ ಮಾತನಾಡಿಕೊಂಡು ಅವಕಾಶವನ್ನು ಕಳೆದುಕೊಳ್ಳುವಿರಿ. ಕುಟುಂಬದವರ ಆರೋಗ್ಯವು ಹದಗೆಡಬಹುದು. ನಿಮ್ಮ ಕೂಡಿಟ್ಟ ಹಣವನ್ನು ಬಳಕೆ ಮಾಡಬೇಕಾಗುವುದು. ಭೂಮಿಯ ವ್ಯವಹಾರದಲ್ಲಿ ಯಾರಾದರೂ ಮಧ್ಯಸ್ತಿಕೆ ವಹಿಸಿ ಸರಿ ಮಾಡಬೇಕಾಗುವುದು. ಈ ವಾರ ಹೊಸ ಮಿತ್ರರು ಹೆಚ್ಚಾಗುವರು. ಪೂರ್ಣ ಮನಸ್ಸಿನಿಂದ ಹೊಸ ಕಾರ್ಯಗಳಲ್ಲಿ ತೊಡಗಿ. ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹದ ತ್ಪಿದ ಪತಿಯ ಆರೋಗ್ಯದಲ್ಲಿ ಚೇತರಿಕೆ ಇರವುದು. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ಕೊಡಿ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಲಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ.

ತುಲಾ ರಾಶಿ: ಈ ವಾರದ ನಿಮಗೆ ಮಿಶ್ರ ಫಲವು ಸಿಗಲಿದೆ. ದೇಹದಲ್ಲಿ ನಾನಾ‌ ಬಾಧೆಗಳು ಕಾಣಿಸಿಕೊಳ್ಳುವುದು. ಮನಸ್ಸು ನಕಾರಾತ್ಮಕ ಆಲೋಚನೆಯನ್ನು ಹೆಚ್ಚು ಮಾಡಲಿದೆ. ವಿವಾಹಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಏಕಾದಶದಲ್ಲಿ ಇರುವ ಶುಕ್ರನಿಂದ ನಿಮಗೆ ಕಷ್ಟಗಳ ನಡುವೆಯೂ ಸುಖದ ಲಕ್ಷಣಗಳು ಗೋಚರಿಸಲಿದ್ದು ಎಲ್ಲವನ್ನೂ ಸಹಿಸಿಕೊಳ್ಳುವಿರಿ. ನಿಮ್ಮ ಕೆಲಸಗಳಿಗೆ ಸಾಮಾಜಿಕ ಗೌರವವು ಸಿಗಲಿದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ. ಸ್ನೇಹಿತರ ಜೊತೆ ಭಿನ್ನಾಭಿಪ್ರಾಯ ಬೇಡ. ಮಾಡಬೇಕಾದ ಕಾರ್ಯವನ್ನು ಮುಂದೂಡುವಿರಿ. ಈ ವಾರ ಹೆಚ್ಚು ತಾಳ್ಮೆ ಅವಶ್ಯಕ. ಅನವಶ್ಯಕ ವಿಚಾರಗಳಲ್ಲಿ ಸಕ್ರಿಯರಾಗುವಿರಿ.

ವೃಶ್ಚಿಕ ರಾಶಿ: ಈ ವಾರವು ಅಕ್ಟೋಬರ್ ತಿಂಗಳ ಮೂರನೇ ವಾರವಾಗಿದ್ದು ಅಶುಭಫಲವು ಇರಲಿದೆ. ಏಕಾದಶದಿಂದ ದ್ವಾದಶಸ್ಥಾನಕ್ಕೆ ಬರಲಿರುವ ಸೂರ್ಯ ಹಾಗೂ ಬುಧರು ಕುಜ ಮತ್ತು ಕೇತುವನ್ನು ಸೇರಿಕೊಳ್ಳುವರು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಮರಣ ಭೀತಿಯೂ ಕಾಡಬಹುದು. ನೀವು ಎಲ್ಲವನ್ನೂ ಬಿಟ್ಟು ಅಧ್ಯಾತ್ಮದಲ್ಲಿ ತೊಡಗಿಕೊಳ್ಳುವಿರಿ. ದಶಮದ ಶುಕ್ರನಿಂದ ನಿಮಗೆ ಉದ್ಯೋಗದಲ್ಲಿ ಲಾಭವಾಗಲಿದೆ. ಈ ವಾರ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಇರುವುದು. ನಿಮಗೆ ಹತ್ತಿರದ ಸ್ನೇಹಿತರಿಂದ ನೆರವು ಲಭ್ಯ. ದಾಂಪತ್ಯದಲ್ಲಿ ಸಣ್ಣ ವಿಚಾರಕ್ಕೂ ಕಲಹವಾಗಬಹುದು. ಅಧಿಕಾರದ ಸ್ಥಾನದಲ್ಲಿರುವವರು ಒತ್ತಡಕ್ಕೆ ಸಿಲುಕುವಿರಿ. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಕೊಡಲಾರಿರಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ಧನು ರಾಶಿ: ಈ ವಾರ ನಿಮಗೆ ಶುಭವಾರವಾಗಲಿದೆ. ಏಕಾದಶ ಸ್ಥಾನದಲ್ಲಿ ನಾಲ್ಕು ಗ್ರಹಗಲಕು ಇರಲಿದ್ದು ಎಲ್ಲ ಕಾರ್ಯಗಳಲ್ಲಿಯೂ ಜಯ, ಸಕಾರಾತ್ಮಕ ಬೆಳವಣಿಗೆ ಇರಲಿದೆ. ತಂದೆಯಿಂದ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಸರ್ಕಾರದಿಂದ ಯಾವುದೇ ಲಾಭವು ಸಿಗುವುದು ವಿಳಂಬವಾಗುವುದು. ಭೂಮಿಯ ಲಾಭವನ್ನು ಪಡೆಯುವ ಮನಸ್ಸಿದ್ದರೆ ಉತ್ತಮವಾದುದು ಸಿಗುವುದು. ಬಂಧುಗಳಿಂದ ನಿಮಗೆ ವಿಶೇಷ ಅನುಕೂಲತೆಗಳು ಸಿಗಲಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಉಳಿತಾಯದ ಕಡೆಗೆ ಗಮನ ನೀಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯವಿರಲಿ. ಸಾಲಬಾಧೆಯಿಂದ ಅಲ್ಪ ಸಮಾಧಾನ. ಶುಭ ಕಾರ್ಯಗಳನ್ನು ಮಾಡಲು ನಿಮಗೆ ಪ್ರೇರಣೆ ಸಿಗಲಿದೆ.

ಮಕರ ರಾಶಿ: ಇದು ತಿಂಗಳ ಮೂರನೇ ವಾರವಾಗಿದ್ದು ಶುಭ ಫಲವು ಅಧಿಕವಾಗಿ ಇರಲಿದೆ‌. ನವಮಸ್ಥಾನದಲ್ಲಿ ಇರುವ ಸೂರ್ಯ ಮತ್ತು ಬುಧರು ದಶಮಸ್ಥಾನಕ್ಕೆ ಬರಲಿದ್ದು ವೃತ್ತಿಯಲ್ಲಿ ಬದಲಾವಣೆ ಇರಲಿದೆ. ನಿಮ್ಮ ಪ್ರಾಮಾಣಿಕ ಕಾರ್ಯಕ್ಕೆ ಯಶಸ್ಸು ಸಿಗಲಿದೆ. ಆದರೆ ಅಧಿಕಾರಿಗಳಿಂದ ಸಣ್ಣ ತೊಂದರೆಗಳು ಆಗಬಹುದು. ವಿವೇಚನೆಯಿಂದ ಮಾತನಾಡುವಿರಿ. ಶಾರೀರಿಕ ಬಲವು ಅಧಿಕವಾಗುವುದು. ಒತ್ತಡಗಳಿಂದ ಮುಕ್ತರಾಗುವಿರಿ. ಸಂಬಂಧಗಳ ನಡುವೆ ಬಾಂಧವ್ಯವು ಇನ್ನಷ್ಟು ಹತ್ತಿವಾಗುವುದು. ಅಷ್ಟಮದಲ್ಲಿ ಶುಕ್ರರು ಇರುವ ಕಾರಣ ಖರ್ಚಿನ ಮೇಲೆ ಹಿಡಿತ ಅಸಾಧ್ಯವಾದೀತು. ತಂದೆ-ತಾಯಿ ಮಾತಿಗೆ ಬದ್ಧರಾಗಿ ನಡೆಯಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಹಳೆಯ ಸಾಲಗಳನ್ನು ನೀವು ತೀರಿಸುವಿರಿ.

ಕುಂಭ ರಾಶಿ: ಈ ವಾರವು ಅಕ್ಟೋಬರ್ ತಿಂಗಳ ಮೂರನೇ ವಾರ ಗ್ರಹಗಳ ಚಲನೆಯಿಂದ ಶುಭಫಲವು ಅಧಿಕವಾಗಿದೆ ಎಂದು ಹೇಳಬಹುದು. ಸೂರ್ಯ ಹಾಗೂ ಬುಧರು ಅಷ್ಟಮದಿಂದ ನವಮಸ್ಥಾನವನ್ನು ಪ್ರವೇಶಿಸಲಿದ್ದು ನಿಮಗೆ ಹಲವು ಶುಭಗಳು ಇರಲಿದೆ. ಸೂರ್ಯನು ತನ್ನ ನೀಚಸ್ಥಾನಕ್ಕೆ ಬರಲಿದ್ದು ಆತನಿಂದ ಹೆಚ್ಚು ನಿರೀಕ್ಷೆ ಇರದು. ಬುಧನು ಇರುವ ಕಾರಣ ಸಮ್ಮಾನಾದಿಗಳು ನಿಮಗೆ ಸಿಗಲಿದೆ. ಸಹೋದರು ನಿಮಗೆ ಬೇಕಾದ ಸಹಾಯಕ್ಕೆ ಸಿದ್ಧರಿರುವರು. ವ್ಯಾಪಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ. ಭೂಮಿಗೆ ಸಂಬಂಧಿಸಿದ ವಾದ, ವಿವಾದವೂ ನಿಮ್ಮಂತೆಯೇ ಆಗುವುದು. ತಂದೆಯ ಆರೋಗ್ಯದಲ್ಲಿ ಅಲ್ಪ ಚೇತರಿಕೆ‌ ಇರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ. ಮನೋರಂಜನೆಯಲ್ಲಿ ಹೆಚ್ಚು ಆಸಕ್ತಿ. ಚಿತ್ರಕಲಾವಿದರಿಗೆ ಹೆಚ್ಚಿನ ಮನ್ನಣೆ, ಆದಾಯ ಎರಡೂ ಸಿಗಲಿದೆ. ಹಿಂದೆ ಮಾಡಿದ ಕೆಲಸಕ್ಕೆ ಈ ವಾರ ಫಲವನ್ನು ಕಾಣುವಿರಿ. ಎಷ್ಟೇ ನಿಯಂತ್ರಣದಲ್ಲಿ ಇದ್ದರೂ ಹಣವು ನಿಲ್ಲದು.

ಮೀನ ರಾಶಿ: ಅಕ್ಟೋಬರ್ ತಿಂಗಳ ಮೂರನೇ ವಾರ ಇದಾಗಿದ್ದು ಎರಡು ಗ್ರಹಗಳ ಬದಲಾವಣೆಯು ಆಗಲಿದೆ. ಸೂರ್ಯ ಮತ್ತು ಬುಧರು ಸಪ್ತಮದಿಂದ ಅಷ್ಟಮಕ್ಕೆ ಬರಲಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಮರಣದಂತಹ ಸನ್ನಿವೇಶವು ನಿಮ್ಮ ಪಾಲಿಗೆ ಬರಬಹುದು. ಹಿರಿಯರಿಂದ ಅಪಮಾನವು ಆದೀತು. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು. ಈ ವಾರ ನೂತನ ಉದ್ಯೋಗಕ್ಕೆ ಪ್ರಯತ್ನಿಸಿದರೆ ದೊರೆಯಲಿದೆ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡುವುದು ನಿಮಗೆ ಸಂತೋಷದ ವಿಚಾರವಾಗಲಿದೆ. ವಾರವಿಡೀ ಸುಮ್ಮನೆ ಕೋಪ ಹೆಚ್ಚು ಕೋಪ‌ ಮಾಡಿಕೊಳ್ಳುತ್ತ ಇರುವಿರಿ. ಕೈಹಾಕಿದ ಕಾರ್ಯಗಳಿಗೆ ಪೂರ್ಣವಾಗದೇ ಇದ್ದರೂ ಅಲ್ಪ ಫಲವಂತೂ ಇದೆ. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಗೊತ್ತಾಗದಂತೆ ಅವರ ಮೇಲೆ‌ ಕಣ್ಣಿರಲಿ.

ಲೋಹಿತಶರ್ಮಾ – 8762924271 (what’s app only)

ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ