Daily Horoscope 17 July: ವ್ಯಾಪಾರದಲ್ಲಿ ವಿನಮ್ರತೆ ಇರಲಿ, ಆದಾಯ ಹೆಚ್ಚಾಗಬಹುದು
ಇಂದಿನ (2023 ಜುಲೈ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ/ದಕ್ಷಿಣಾಯನ, ಗ್ರೀಷ್ಮ ಋತು, ಮಿಥುನ/ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:49 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:02 ರಿಂದ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ.
ಮೇಷ: ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ನೀವು ಮಾಡಿಕೊಳ್ಳುವಿರಿ. ವಿರೋಧಿಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಒಲವು ಹೆಚ್ಚಾಗಲಿದೆ. ಕಛೇರಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಯತ್ನಿಸಬಹುದು. ನಮಗೆ ಬೇಕಾದುದಷ್ಟನ್ನೇ ಬಳಸಿಕೊಂಡು, ಇನ್ನೊಬ್ಬರ ವಸ್ತುವನ್ನು ಹಿಂದಿರುಗಿಸುವಿರಿ. ನಿಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಇರಲಿ. ಸಂಗಾತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಿ.
ವೃಷಭ: ನಿಮ್ಮ ಉದ್ಯೋಗದ ಕನಸು ನನಸಾಗಲಿದೆ. ಅಶಿಸ್ತಿನ ವ್ಯವಸ್ಥೆಯು ನಿಮಗೆ ಬೇಸರ ತರಿಸಬಹುದು. ವಿದೇಶದ ಕನಸು ಅಂಕುರಿಸಬಹುದು. ಗುರುವಿನ ದರ್ಶನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಸಕಾರಾತ್ಮಕ ನಿಲುವು ಇಷ್ಟವಾಗುವುದು. ಕೆಲಸದಲ್ಲಿ ಪಾರದರ್ಶಕತೆಯನ್ನು ಇಷ್ಟಪಡುವಿರಿ. ಇಂದು ಎಂದಿಗಿಂತ ಹೆಚ್ಚು ಕಾರ್ಯವಾಗಲಿದೆ. ವ್ಯಾಪಾರವನ್ನು ವಿನಮ್ರತೆಯಿಂದ ಮಾಡಿ. ಆದಾಯವು ಹೆಚ್ಚಾಗಬಹುದು. ನಿಮಗೆ ಇಷ್ಟವಾದ ಕೊಡುಗೆಯು ಲಭ್ಯವಾಗಲಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಲಯಕ್ಕೆ ಪ್ರಯತ್ನಿಸಿ ಸೋಲುವರು.
ಮಿಥುನ: ನಿಮ್ಮ ಕಾರ್ಯವನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳು ಬರಲಿದ್ದಾರೆ. ಪ್ರಶಂಸೆಯೂ ಸಿಗುವ ಸಾಧ್ಯತೆ ಇದೆ. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಬಹುದು. ಯಾವುದಾದರೂ ಒಂದು ಅಪವಾದಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇರಲಿ. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಗೊಂದಲವನ್ನು ಮಾಡಿಕೊಂಡು ಹಣವನ್ನು ಕಳೆದುಕೊಳ್ಳುವಿರಿ. ನೀವು ಉನ್ನತ ಸ್ಥಾನದ ಆಕಾಂಕ್ಷಿಗಳೂ ಆಗಿರುವಿರಿ.
ಕರ್ಕಾಟಕ: ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಶತ್ರುಗಳಿಂದ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನದಿಂದ ಸ್ವಲ್ಪ ಫಲವನ್ನು ಪಡೆಯುವಿರಿ. ಅವಕಾಶದ ಕೊರತೆಯಿಂದ ದುಃಖಿಸುವಿರಿ. ನಿಮ್ಮ ಕಲ್ಪನೆಯಂತೆ ಎಲ್ಲವೂ ಆಗದು. ಯೋಜನೆಯನ್ನು ಮಾಡುವಾಗ ಸರಿಯಾಗಿ ಇರಲಿ. ಉದ್ವೇಗದಿಂದ ಏನನ್ನಾದರೂ ಹೇಳುವಿರಿ. ಒತ್ತಡಕ್ಕೆ ಅವಕಾಶವನ್ನು ಕೊಡದೇ ನೀವು ನೆಮ್ಮದಿಯಿಂದ ಇರುವಿರಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ನಾಯಕತ್ವದಿಂದ ನಿಮಗೆ ಸಾಕಾಗಲಿದೆ. ಸ್ಥಾನವನ್ನು ನೀವೇ ಬಿಡುವಿರಿ. ವರ್ಗಾವಣೆಯ ಕಿರಿಕಿರಿ ನಿಮ್ಮ ತಲೆಯಲ್ಲಿ ಇರಲಿದೆ.
ಸಿಂಹ: ನಿಮ್ಮ ಆಸೆಯನ್ನು ಪ್ರಕಟಪಡಿಸಲು ಹಿಂಜರಿಯಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ವರ್ತಿಸುವಿರಿ. ನಿಮಗೆ ಅನಾದರೂ ಸಿಗಲಿದ್ದು, ಬೇಸರವಾಗುವ ಸಾಧ್ಯತೆ ಇದೆ. ದ್ವೇಷವು ನಿಮ್ಮ ಜೀವನವನ್ನು ಮಾರ್ಗಭ್ರಷ್ಟ ಮಾಡಬಹುದು. ಧನಾತ್ಮಕ ಚಿಂತನೆಯಿಂದ ಉತ್ಸಾಹವೂ ಇರಲಿದೆ. ಧೈರ್ಯದ ಕೊರತೆಯು ಕಾಣಿಸುವುದು. ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡಿನಿಂದ ಅನುಕೂಲವಾಗಲಿದೆ. ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪ್ರಶಂಸೆ ಲಭ್ಯ.
ಕನ್ಯಾ: ದಾಯಾದಿ ಕಲಹವು ತಾರಕಕ್ಕೆ ಹೋಗಲಿದೆ. ನಿಮಗೆ ಬೆಂಬಲವು ಕಡಿಮೆ ಆಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಲಿದ್ದು ಸಹೋದ್ಯೋಗಿಗಳಿಂದ ದೂರು ಸಿಗಬಹುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರಲಿದೆ. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗಿವ ಸಂಭವಿದೆ. ಹಠದ ಸ್ವಭಾವವನ್ನು ಬಿಟ್ಟರೆ ಸಂತೋಷದ ಸಂಗತಿಗಳನ್ನು ನೀವು ಪಡೆಯುವಿರಿ. ನಿಮ್ಮ ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ಪುಣ್ಯಕ್ಷೇತ್ರಕ್ಕೆ ಕುಟುಂಬ ಜೊತೆ ಹೋಗಲಿದ್ದೀರಿ. ನಡೆದಾಡುವಾಗ ಜಾಗರೂಕತೆ ಇರಲಿ.
ತುಲಾ: ಬಂಧುಗಳು ನಿಮ್ಮ ಸಹಾಯವನ್ನು ಬಯಸುವರು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡಲಿದ್ದೀರಿ. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಬೆನ್ನಿನ ನೋವು ಮತ್ತೆ ಕಾಣಿಕೊಳ್ಳುವುದು. ಇಂದಿನ ಕಾರ್ಯವು ಪೂರ್ಣವಾಗುವ ತನಕ ನೀವು ವಿಶ್ರಾಂತಿಯನ್ನು ಬಯಸುವುದಿಲ್ಲ. ವಿವಾದವಾಗುವ ಹೇಳಿಕೆಯನ್ನು ನೀಡಬೇಡಿ. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭವಾದೀತು. ಸಂಗಾತಿಯ ಬಯಕೆಯನ್ನು ಈಡೇರಿಸಿ ಸಂತೋಷಪಡಿಸುವಿರಿ. ನಿಮ್ಮ ಬೆಳವಣಿಗೆಯನ್ನು ಬಂಧುಗಳು ಕಂಡು ಇಷ್ಟಪಡುವರು.
ವೃಶ್ಚಿಕ: ನೀವು ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವನ್ನು ಗಳಿಸುವಿರಿ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹಾರವನ್ನು ಮುಂದುವಿರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆಯನ್ನು ಮಾಡುವಿರಿ. ಇಂದು ತೆಗೆದುಕೊಳ್ಳುವ ಸಾಲು ಬಹಳ ಕಾಲದವರೆಗೂ ಉಳಿಯಲಿದೆ. ಯುಕ್ತಿಯಿಂದ ಕೆಲಸವನ್ನು ಸಾಧಿಸಿ. ನಿಮ್ಮ ನಡವಳಿಕೆಯು ಕೆಲವರಿಗೆ ಇಷ್ಟವಾಗದೇ ಇರುವುದು. ಮಕ್ಕಳು ನಿಮ್ಮ ಮಾತನ್ನೇ ನಿಮಗೆ ಹೇಳುವರು. ಯೋಗ ಹಾಗೂ ಧ್ಯಾನವನ್ನು ಮಾಡಿ ಮನಸ್ಸನ್ನು ನಿರ್ಮಲವಾಗಿಸಿಕೊಳ್ಳಿ. ನಿಮ್ಮವರ ಕೆಲವು ಸ್ವಭಾವವು ನಿಮಗೆ ಮೆಚ್ಚುಗೆಯಾಗದು.
ಧನು: ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿ ಹೋಗುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯು ಬರಲಿದೆ. ಇಂದಿನ ನಿಮ್ಮ ಉತ್ಸಾಹವು ಬಹಳ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯು ಸಿಗಬಹುದು. ಸ್ವಂತ ವ್ಯವಹಾರವನ್ನು ಲಾಭದಾಯಕವಾಗಿ ಪರಿವರ್ತಿಸುವಿರಿ. ಕಛೇರಿಯ ವಾತಾವರಣವು ನಿಮಗೆ ಮುಜುಗರವನ್ನು ತಂದೀತು. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು.
ಮಕರ: ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ. ಯಾವ ವಸ್ತುವನ್ನು ಖರೀದಿಸುವ ಯೋಚನೆಯನ್ನು ಮಾಡಬೇಡಿ.
ಕುಂಭ: ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರಗೊಳಿಸಿಕೊಳ್ಳುವಿರಿ. ಸಂಗಾತಿಯ ಮಾರ್ಗದರ್ಶನದಲ್ಲಿ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಧಾರ್ಮಿಕ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಸ್ಪೃಹತೆಯನ್ನು ಹೆಚ್ಚಿಸುವುದು. ಅಭಾವವೈರಾಗ್ಯವು ನಿಮ್ಮಲ್ಲಿ ಉಂಟಾಗಬಹುದು. ಇಂದಿನ ನಿಮ್ಮ ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ತಂದುಕೊಡುವುದು. ಆಪ್ತರಿಂದ ನೀವು ಟೀಕೆಗೆ ಗುರಿಯಾಗುವಿರಿ. ಇದು ನಿಮ್ಮ ನಡುವಿನ ಸಂಬಂಧವನ್ನು ಸಡಿಲಿಸೀತು. ಯಾರನ್ನೂ ಅವಲಂಬಿಸದೇ ಸ್ವಂತ ಶ್ರಮದಿಂದ ನೀವು ಆಗುವಷ್ಟು ಕೆಲಸವನ್ನು ಮಾಡಿ.
ಮೀನ: ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಕಾರ್ಯವನ್ನು ಮಾಡುವ ಆಲೋಚನೆ ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಇದೆ. ಮಕ್ಕಳಿಂದ ಕೆಲಸಕ್ಕೆ ಅಡ್ಡಿಯಾಗಲಿದೆ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದವನ್ನು ಮಾಡಿ ಬೇಸರ ತರಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವು ಸಂತೋಷವನ್ನು ತರುವುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವಿರಿ. ನಿಮ್ಮ ಸಮಯವು ಇಂದು ವ್ಯರ್ಥವಾದಂತೆ ತೋರುವುದು. ಆಪ್ತರ ನೋವಿಗೆ ಸ್ಪಂದಿಸುವಿರಿ.