ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸಿದ್ದಿ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:44ರ ವರೆಗೆ.
ಮೇಷ: ನಿಮ್ಮನ್ನು ಇಂದು ಕೆಲವರು ಭೇಟಿಯಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ನೀವು ಪರಿಚಯಿಸುವಿರಿ. ನೀವು ನೆಮ್ಮದಿಯನ್ನು ಕಳೆದುಕೊಳ್ಳಲು ಕೆಲವು ಸಂಗತಿಗಳು ಆಗಬಹುದು. ಆರೋಗ್ಯಕ್ಕಾಗಿ ವೈದ್ಯರ ಸಲಹೆಯನ್ನು ಪಡೆದು ವ್ಯಾಯಾಮ ಮಾಡಿ. ಎಲ್ಲ ಕೆಲಸಗಳು ನಿಮ್ಮ ಸ್ಥಾನವನ್ನು ಏರಿಸಬಹುದು. ಬಾಕಿ ಕೆಲಸಗಳನ್ನು ನೀವು ಪೂರೈಸಿಕೊಳ್ಳುವುದು ಉತ್ತಮ. ನಿಮಗೆ ಉಂಟಾದ ನೋವನ್ನು ನೀವೇ ನುಂಗಿಕೊಳ್ಳಬೇಕಾದೀತು. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ನಿವಾರಣೆ ಆಗಲಿದೆ. ದುರ್ಗಾದೇವಿಯ ಸ್ಮರಣೆಯನ್ನು ಮಾಡಿ, ಇನ್ನಷ್ಟು ಲಾಭವನ್ನು ಒಡೆಯುವಿರಿ
ವೃಷಭ: ಇಂದಿನ ಬೆಳಗ್ಗೆ ಹೆಚ್ಚಿನ ಉತ್ಸಾಹ ಇರಲಿದೆ. ಅನುಕೂಲಕರ ವಾತಾವರಣವನ್ನು ನೀವು ಸೃಷ್ಟಿಸಿಕೊಂಡು ಇರುವಿರಿ. ನಿಮಗೆ ಆರ್ಥಿಕವಾಗಿ ಬಲವಾಗಲು ಆಲೋಚಿಸುವಿರಿ. ನಿಮ್ಮ ಮನಸ್ಸು ಕ್ಷಣವೂ ಬೇರೆ ಆಲೋಚನೆಯಲ್ಲಿ ಮುಳುಗಿರುವುದು. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಇಷ್ಟಪಡುವಿರಿ. ಅಂತರಂಗವನ್ನು ನೀವು ಬಿಟ್ಟುಕೊಡಯವುದಿಲ್ಲ. ಆಯಾಸವು ಅಧಿಕವಾಗಿದ್ದರೂ ಆಲಸ್ಯದಿಂದ ಮೇಲೇರುವ ಯೋಚನೆಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ.
ಮಿಥುನ: ಹಣವನ್ನು ನೀವು ಹೂಡಿಕೆಯಲ್ಲಿ ಇಡುವ ಸಾಧ್ಯತೆ ಇದೆ. ಸಾಲದ ಹಣವನ್ನು ಪಾವತಿಸಿ ಸ್ವಲ್ಪ ಖುಷಿಪಡುವಿರಿ. ಆರೋಗ್ಯದಲ್ಲಿ ಅನಿರೀಕ್ಷಿತ ಬದಲಾವಣೆಯು ನಿಮಗೆ ಆತಂಕ ಉಂಟಾಗಬಹುದು. ಕೊರತೆಯಿಂದ ನಿಮಗೆ ಉದ್ವೇಗವು ಉಂಟಾಗಬಹುದು. ಹಿರಿಯರಿಂದ ಶುಭಾಶೀರ್ವಾದವನ್ನು ಪಡೆದು ನಿಮಗೆ ಧೈರ್ಯ ಬರಬಹುದು. ಕಛೇರಿಯಲ್ಲಿ ನಿಮ್ಮನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುವಿರಿ. ಸತ್ಯವನ್ನು ಆಡಲು ನೀವು ಹಿಂಜರಿಯುವಿರಿ. ಸರಳವನ್ನು ನೀವು ಕ್ಲಿಷ್ಟಕರವಾಗಿಸಿಕೊಳ್ಳುವಿರಿ.
ಕಟಕ: ನಿಮ್ಮ ಆಲೋಚನೆಗಳನ್ನು ಸಂಗಾತಿಯು ತಿದ್ದಲು ಪ್ರಯತ್ನಿಸಬಹುದು. ಅಧಾರ್ಮಿಕವಾದ ವಿಷಯದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಯಾವುದಾದರೂ ಉತ್ತಮ ವಿಚಾರಗಳು ನಿಮ್ಮಿಂದ ಹೊರಬರುವುದು ಕಷ್ಟಸಾಧವಾದೀತು. ನಿಮ್ಮನ್ನು ಗೌರವಿಸಿಲ್ಲ ಎಂಬ ವ್ಯಥೆಯು ಹೆಚ್ಚಾಗಬಹುದು. ಮನೆಗೆ ಬೇಕಾದ ವಿದ್ಯುತ್ ಉಪಕರಣಗಳನ್ನು ನೀವು ಖರೀದಿಸುವಿರಿ. ಹೆಚ್ಚಿನ ಸಂಬಂಧಗಳನ್ನು ದೂರವಿಡಲು ಪ್ರಯತ್ನಿಸುವಿರಿ. ಏಕಾಂತದಲ್ಲಿ ಇರುವುದು ನಿಮಗೆ ಕಷ್ಟವಾದೀತು. ಬೇಕಾದುದನ್ನು ಪಡೆಯಲು ನೀವು ಬಹಳ ಪರಿಶ್ರಮಿಸಬಹುದು. ನಂಬಿಕೆಯ ಕೊರತೆಯು ಅತಿಯಾಗಿ ಕಾಡಬಹುದು.
ಸಿಂಹ: ಇಂದಿನ ನಿಮ್ಮ ಆಸೆಗಳು ಪೂರ್ಣವಾಗದು. ಇದಕ್ಕಾಗಿ ಎಲ್ಲರನ್ನೂ ಶಪಸುವುದು ಸರಿಯಲ್ಲ. ನಿಮ್ಮವರ ಸಲಹೆಯನ್ನು ಪಡೆದು ಕೆಲಸಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ಪರೀಕ್ಷೆಯ ಕಾಲವಾಗಿದ್ದು ನೀವು ಅದನ್ನು ದಾಟಲು ಶ್ರಮಪಡಬೇಕಾದೀತು. ಆಕಸ್ಮಿಕವಾಗಿ ವಸ್ತುವನ್ನು ಕಳೆದುಕೊಳ್ಳುವಿರಿ. ಬಂಧುಗಳ ನಡುವೆ ಕಲಹವಾಗಬಹುದು. ಅವರು ನಿಮ್ಮಿಂದ ದೂರ ಉಳಿಯಬಹುದು. ಇನ್ನೊಬ್ಬರಿಗೆ ನೀಡುವ ವಿಚಾರದಲ್ಲಿ ನೀವು ಬಹಳ ನೊಂದುಕೊಳ್ಳುವಿರಿ. ನಿಮಗೆ ಕಿರಿಕರಿಯಾಗುವ ಸ್ಥಳದಿಂದ ದೂರವಿರಲು ಪ್ರಯತ್ನಿಸುವಿರಿ. ಪ್ರಯಾಣವು ಶುಭವನ್ನು ತರಬಹುದು.
ಕನ್ಯಾ: ತಾಳ್ಮೆಯಿಂದ ಇರುವುದು ಇಂದು ನಿಮಗೆ ಕಷ್ಟವಾದೀತು. ನಿಮ್ಮ ಕೆಲಸಕ್ಕೆ ಮನೆಯವರ ಬೆಂಬಲಸಿಗುವುದು ಎಂಬ ಭ್ರಮೆಯಲ್ಲಿ ಇರುವಿರಿ. ಕೃಷಿಯಲ್ಲಿ ನೀವು ಹೊಸ ವಿಧಾನವನ್ನು ರೂಪಿಸಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡಲಿದ್ದೀರಿ. ವಿದೇಶಕ್ಕೆ ಹೋಗುವುದು ಕಾರಣಾಂತರಗಳಿಂದ ನಿಂತುಹೋದೀತು. ಇದು ನಿಮಗೆ ಬೇಸರವಾದೀತು. ವಿವಾಹವು ಬಹಳ ವಿಳಂಬವಾಗುವ ಸಾಧ್ಯತೆ ಇದೆ. ಮಿತ್ರರ ಮೂಲಕ ವಿವಾಹವು ಸಂಭವಿಸುವುದು. ಶಿವಕವಚವನ್ನು ಪಠಿಸಿ.
ತುಲಾ: ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಇಷ್ಟಪಟ್ಟಿದ್ದನ್ನು ನೀವು ಪಡೆದುಕೊಳ್ಳುವಿರಿ. ಮನೋವ್ಯಥೆಯನ್ನು ನೀವು ನಿಧಾನವಾಗಿ ಕಳೆದುಕೊಳ್ಳುವಿರಿ. ನಿಮಗೆ ಸಮ್ಮಾನ ಮಾಡಲು ಆಪ್ತರು ನಿಶ್ಚಯಿಸುವರು. ಮಕ್ಕಳ ಅನಾರೋಗ್ಯದಿಂದ ನೀವು ದುರ್ಬಲರಾಗುವಿರಿ. ನೂತನ ವಸ್ತುಗಳನ್ನು ಪಡೆದುಕೊಳ್ಳುವವರಿದ್ದೀರಿ. ನಿಮ್ಮ ಸಿಟ್ಟಿಗೆ ಮನೆಯಲ್ಲಿ ಭಯ ಉಂಟಾಗಬಹುದು. ಗಣಪತಿಯನ್ನು ನೀವು ಆರಾಧಿಸಿ ಶುಭಫಲವನ್ನು ಪಡೆಯಿರಿ.
ವೃಶ್ಚಿಕ: ನಿಮ್ಮ ಉದ್ಯೋಗಕ್ಕೆ ಬೇಕಾದ ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಹೆಚ್ಚಿನ ಕೆಲಸಗಳನ್ನು ನೀವು ಮುಂದೂಡಲಿದ್ದೀರಿ. ಎಲ್ಲದಕ್ಕೂ ನೀವು ಇನ್ನೊಬ್ಬರನ್ನು ಬೊಟ್ಟು ಮಾಡಿಸಲಿದ್ದೀರಿ. ಸಂಗಾತಿಯ ವಿಷಯದಲ್ಲಿ ನಿಮಗೆ ಬೇಸರವಾಗಲಿದೆ. ಸುಖವನ್ನು ಪಡೆಯಲು ನೀವು ಬೇರೆ ಮಾರ್ಗವನ್ನು ಹುಡುಕುವಿರಿ. ಕೆಟ್ಟ ಅಭ್ಯಾಸವನ್ನು ಆರಂಭಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸಾಮರ್ಥ್ಯವನ್ನು ತೋರಿಸುವಿರಿ. ನಿಮ್ಮ ಮಾತುಗಳು ಕಛೇರಿಯಲ್ಲಿ ನಡೆಯಬಹುದು. ಮನಸ್ಸಿನಲ್ಲಿ ಆತಂಕವು ಉಂಟಾಗಬಹುದು. ಹಣಸಂಪಾದನೆಯ ವಿಚಾರವೇ ತಲೆಯಲ್ಲಿ ಓಡಾಡಲಿದೆ. ಗುರುದರ್ಶನವನ್ನು ಪಡೆಯಿರಿ.
ಧನು: ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆಹೇರಲು ಹೋದರೆ ಕಲಹವೇ ಆದೀತು. ನಿಮ್ಮವರನ್ನು ಸ್ವತಂತ್ರವಾಗಿ ಬಿಡಿ. ಹಣಕಾಸಿನ ಕೊರತೆ ಇದ್ದರೂ ನೆಮ್ಮದಿಯ ಜೀವನ ಇರಲಿದೆ. ನಿಮ್ಮವರು ನಿಮಗೆ ಕೊಡುವ ಸಲಹೆಗಳು ನಿಮಗೆ ನಕಾರಾತ್ಮಕವಾಗಿ ತೋರುವುದು. ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ನಿಮ್ಮಲ್ಲಿ ಹೊಸ ಬಗೆಯ ಉತ್ಸಾಹವು ಇರಲಿದೆ. ರಾಜಕೀಯದವರ ಬೆಂಬಲ ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ನಿಮಗೆ ಆಯ್ಕೆಗಳನ್ನು ಮಾಡಲು ಗೊಂದಲವಿರಬಹುದು. ನಿಮ್ಮ ಕೆಲಸವು ಬೇಸರ ತರಿಸಬಹುದು.
ಮಕರ: ನೀವು ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮಗೆ ಅದು ಬಹಳ ಆಪ್ತವಾಗಲಿದೆ. ಸಂಗಾತಿಯ ಭಾವನೆಗಳಿಗೆ ಸ್ಪಂದನೆ ಇರಲಿ. ಸಂಪಾದಿಸಿದ್ದನ್ನು ಮನೆಯ ಬಳಕೆಗೆ ಇಡಬೇಕಾದೀತು. ದೇವರ ದರ್ಶನವನ್ನು ನೀವು ಮಾಡುವಿರಿ. ಸಂಗದೋಷದಿಂದ ಅಪವಾದ ಬರಬಹುದು. ಸಮಯಕ್ಕೆ ನೀವು ನಿಮ್ಮ ವ್ಯಕ್ತಿತ್ವಗಳನ್ನು ಬಳಸಿಕೊಳ್ಳುವಿರಿ. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದವನ್ನು ಹೊರಬೇಕಾದೀತು. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ.
ಕುಂಭ: ನಿಮ್ಮವರನ್ನೇ ನೀವು ನಂಬದ ಸ್ಥಿತಿಯಲ್ಲಿ ಇರಬಹುದು. ನಿಮ್ಮ ಸಿಟ್ಟು ಇಂದು ಕಾಣಿಸಿಕೊಳ್ಳದೇ ಇದ್ದೀತು. ತಾಳ್ಮೆಯಿಂದ ನಿಮ್ಮ ವ್ಯವಹಾರ ಇರಲಿ. ಅಸಾಧ್ಯವನ್ನು ಸಾಧಿಸುವ ಹಠದ ಸ್ವಭಾವ ಒಳ್ಳೆಯದೇ. ಎಲ್ಲವೂ ಕೈಗೂಡುವುದು ಎಂಬ ಅತಿಯಾದ ಆತ್ಮವಿಶ್ವಾಸಬೇಡ. ನಿರ್ಭಾವುಕತೆಯು ನಿಮಗೆ ಶೋಭೆಯನ್ನು ತಂದುಕೊಡದು. ಅನ್ನಿಸಿದ್ದನ್ನು ನೀವು ಇನ್ನೊಬ್ಬರಿಗೆ ಹೇಳುವಾಗ ತಡೆಯುವಿರಿ. ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕಾದೀತು. ವ್ಯರ್ಥವಾಗಿ ಕಲಾಹರಣ ಮಾಡುವುದು ಬೇಡ.
ಮೀನ: ಇಂದು ನೀವು ಯಾವದೇ ವಿಚಾರವನ್ನು ಸಂಪೂರ್ಣವಾಗಿ ತಿಳಿದು ಮಾತನಾಡುವುದು ಒಳ್ಳೆಯದು. ನಿಮ್ಮ ಮಾತು ಇತರರಿಗೆ ನೋವನ್ನು ಕೊಡಬಹುದು. ಅವರು ನೊಂದಿದ್ದು ನಿಮಗೆ ಶಾಪವಾಗಬಹುದು. ನಿಮ್ಮ ಮನಸ್ಸು ಹಾಗೂ ಕೃತಿಯಲ್ಲಿ ಭಿನ್ನತೆ ಇರುವುದು ತಿಳಿದುಬರಲಿದೆ. ನಿಮ್ಮ ಉತ್ಸಾಹಭಂಗವನ್ನು ಮಿತ್ರರು ಮಾಡಿಯಾರು. ಆನಾರೋಗ್ಯವಿದ್ದರೂ ತಿನ್ನಬೇಕು ಎನ್ನುವ ಚಪಲಕ್ಕೆ ಆಹಾರವನ್ನು ತಿಂದು ಆನಾರೋಗ್ಯವನ್ನು ಹೆಚ್ಚುಮಾಡಿಕೊಳ್ಳುವಿರಿ. ಕುತೂಹಲದ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿರಲಿ.
-ಲೋಹಿತಶರ್ಮಾ – 8762924271 (what’s app only)