Daily Horoscope: ಈ ರಾಶಿಯವರು ಆಲಸ್ಯದಿಂದ ಹೊರಬರಲು ಪ್ರಯತ್ನಿಸುವಿರಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸಿದ್ದಿ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:44ರ ವರೆಗೆ.
ಮೇಷ: ನಿಮ್ಮನ್ನು ಇಂದು ಕೆಲವರು ಭೇಟಿಯಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ನೀವು ಪರಿಚಯಿಸುವಿರಿ. ನೀವು ನೆಮ್ಮದಿಯನ್ನು ಕಳೆದುಕೊಳ್ಳಲು ಕೆಲವು ಸಂಗತಿಗಳು ಆಗಬಹುದು. ಆರೋಗ್ಯಕ್ಕಾಗಿ ವೈದ್ಯರ ಸಲಹೆಯನ್ನು ಪಡೆದು ವ್ಯಾಯಾಮ ಮಾಡಿ. ಎಲ್ಲ ಕೆಲಸಗಳು ನಿಮ್ಮ ಸ್ಥಾನವನ್ನು ಏರಿಸಬಹುದು. ಬಾಕಿ ಕೆಲಸಗಳನ್ನು ನೀವು ಪೂರೈಸಿಕೊಳ್ಳುವುದು ಉತ್ತಮ. ನಿಮಗೆ ಉಂಟಾದ ನೋವನ್ನು ನೀವೇ ನುಂಗಿಕೊಳ್ಳಬೇಕಾದೀತು. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ನಿವಾರಣೆ ಆಗಲಿದೆ. ದುರ್ಗಾದೇವಿಯ ಸ್ಮರಣೆಯನ್ನು ಮಾಡಿ, ಇನ್ನಷ್ಟು ಲಾಭವನ್ನು ಒಡೆಯುವಿರಿ
ವೃಷಭ: ಇಂದಿನ ಬೆಳಗ್ಗೆ ಹೆಚ್ಚಿನ ಉತ್ಸಾಹ ಇರಲಿದೆ. ಅನುಕೂಲಕರ ವಾತಾವರಣವನ್ನು ನೀವು ಸೃಷ್ಟಿಸಿಕೊಂಡು ಇರುವಿರಿ. ನಿಮಗೆ ಆರ್ಥಿಕವಾಗಿ ಬಲವಾಗಲು ಆಲೋಚಿಸುವಿರಿ. ನಿಮ್ಮ ಮನಸ್ಸು ಕ್ಷಣವೂ ಬೇರೆ ಆಲೋಚನೆಯಲ್ಲಿ ಮುಳುಗಿರುವುದು. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಇಷ್ಟಪಡುವಿರಿ. ಅಂತರಂಗವನ್ನು ನೀವು ಬಿಟ್ಟುಕೊಡಯವುದಿಲ್ಲ. ಆಯಾಸವು ಅಧಿಕವಾಗಿದ್ದರೂ ಆಲಸ್ಯದಿಂದ ಮೇಲೇರುವ ಯೋಚನೆಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ.
ಮಿಥುನ: ಹಣವನ್ನು ನೀವು ಹೂಡಿಕೆಯಲ್ಲಿ ಇಡುವ ಸಾಧ್ಯತೆ ಇದೆ. ಸಾಲದ ಹಣವನ್ನು ಪಾವತಿಸಿ ಸ್ವಲ್ಪ ಖುಷಿಪಡುವಿರಿ. ಆರೋಗ್ಯದಲ್ಲಿ ಅನಿರೀಕ್ಷಿತ ಬದಲಾವಣೆಯು ನಿಮಗೆ ಆತಂಕ ಉಂಟಾಗಬಹುದು. ಕೊರತೆಯಿಂದ ನಿಮಗೆ ಉದ್ವೇಗವು ಉಂಟಾಗಬಹುದು. ಹಿರಿಯರಿಂದ ಶುಭಾಶೀರ್ವಾದವನ್ನು ಪಡೆದು ನಿಮಗೆ ಧೈರ್ಯ ಬರಬಹುದು. ಕಛೇರಿಯಲ್ಲಿ ನಿಮ್ಮನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುವಿರಿ. ಸತ್ಯವನ್ನು ಆಡಲು ನೀವು ಹಿಂಜರಿಯುವಿರಿ. ಸರಳವನ್ನು ನೀವು ಕ್ಲಿಷ್ಟಕರವಾಗಿಸಿಕೊಳ್ಳುವಿರಿ.
ಕಟಕ: ನಿಮ್ಮ ಆಲೋಚನೆಗಳನ್ನು ಸಂಗಾತಿಯು ತಿದ್ದಲು ಪ್ರಯತ್ನಿಸಬಹುದು. ಅಧಾರ್ಮಿಕವಾದ ವಿಷಯದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಯಾವುದಾದರೂ ಉತ್ತಮ ವಿಚಾರಗಳು ನಿಮ್ಮಿಂದ ಹೊರಬರುವುದು ಕಷ್ಟಸಾಧವಾದೀತು. ನಿಮ್ಮನ್ನು ಗೌರವಿಸಿಲ್ಲ ಎಂಬ ವ್ಯಥೆಯು ಹೆಚ್ಚಾಗಬಹುದು. ಮನೆಗೆ ಬೇಕಾದ ವಿದ್ಯುತ್ ಉಪಕರಣಗಳನ್ನು ನೀವು ಖರೀದಿಸುವಿರಿ. ಹೆಚ್ಚಿನ ಸಂಬಂಧಗಳನ್ನು ದೂರವಿಡಲು ಪ್ರಯತ್ನಿಸುವಿರಿ. ಏಕಾಂತದಲ್ಲಿ ಇರುವುದು ನಿಮಗೆ ಕಷ್ಟವಾದೀತು. ಬೇಕಾದುದನ್ನು ಪಡೆಯಲು ನೀವು ಬಹಳ ಪರಿಶ್ರಮಿಸಬಹುದು. ನಂಬಿಕೆಯ ಕೊರತೆಯು ಅತಿಯಾಗಿ ಕಾಡಬಹುದು.