ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹುಕಾಲ ಬೆಳಿಗ್ಗೆ 05:13 ರಿಂದ 06:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:13ರ ವರೆಗೆ.
ಮೇಷ ರಾಶಿ: ಹೆಚ್ಚು ಖುಷಿಯಾಗಿ ಇಂದು ಇರಲಿದ್ದೀರಿ. ಒಬ್ಬರೇ ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾದೀತು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಆರ್ಥಿಕ ಮೌಲ್ಯವನ್ನು ನೀವು ತಿಳಿದುಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಬಹಳ ಅತಂತ್ರವಾಗಿ ಇರಲಿದೆ. ಒಂದೇ ವಿಚಾರವನ್ನು ಮತ್ತೆ ಮತ್ತೆ ನೆನಪಿಸಬೇಕಾದೀತು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೆ ಬೇಸರಿಸುವಿರಿ. ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯತ್ನಿಸುವಿರಿ.
ವೃಷಭ ರಾಶಿ: ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಹೋಗುವಿರಿ. ವಿದ್ಯಾರ್ಥಿಗಳು ಕೌಶಲವನ್ನು ಪ್ರದರ್ಶಿಸುವರು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸುವಿರಿ. ದಿನದ ಆರಂಭವು ಬಹಳ ಸಂತೋಷದಿಂದ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಸದ್ಯದ ಸೂಕ್ತ ಪರಿಹಾರ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸಿ ಸಮಾಧಾನ ಮಾಡುವಿರಿ. ಅಸಮಯದ ಭೋಜನದಿಂದ ನಿಮಗೆ ಆರೋಗ್ಯವು ಹಾಳಾಗುವುದು. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು.
ಮಿಥುನ ರಾಶಿ: ಉದ್ಯೋಗವನ್ನು ಪ್ರಾಮಾಣಿಕತೆಯಿಂದ ಮಾಡುವಿರಿ. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ಆಸ್ತಿಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯ ಕೊರತೆ ಇರಲಿದೆ. ಮನಸ್ಸಿನಲ್ಲಿ ಇರುವು ವಿಚಾರವನ್ನು ಯಾರ ಜೊತೆಗಾದರೂ ಹೇಳಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದಿಸಲು ಸಿಗುವರು. ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ನಿಮಗೆ ಇಷ್ಟವಾದುದನ್ನು ಕೇಳಿ ಪಡೆದುಕೊಳ್ಳುವಿರಿ. ಹಣವನ್ನು ಉಳಿತಾಯ ಮಾಡಿದ್ದರ ಸಮಾಧಾನವು ಸಿಗಲಿದೆ.
ಕಟಕ ರಾಶಿ: ಹಣಕಾಸಿನ ವಿಚಾರದಲ್ಲಿ ನೀವು ಹತಾಶಭಾವದಿಂದ ಇರುವಿರಿ. ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಕ್ಷೀಣತೆ ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಅಧಿಕವಾಗಿ ಕಾಣಿಸುವುದು. ನಿಮಗೆ ಸ್ಥಿರ ಬುದ್ಧಿಯನ್ನು ತಂದುಕೊಳ್ಳಲು ಆಗದು. ಹತ್ತಾರು ಯೋಚನೆಗಳು ಒಂದಾದಮೇಲೆ ಒಂದರಂತೆ ಬರುವುದು. ನೀವು ಮಾಡಿದ ಕೆಲಸವು ನಿಮಗೇ ಇಷ್ಟವಾಗದು. ತಾಯಿಯ ಮಾತನ್ನು ನೀವು ಅಸಡ್ಡೆಯಿಂದ ಕೇಳುವಿರಿ. ಸಾಹಸಮಯವಾದ ಕೆಲಸಕ್ಕೆ ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳುವಿರಿ. ನಿಮ್ಮ ಕೌಶಲವನ್ನು ಕೆಲಸದಲ್ಲಿ ತೋರಿಸಿ. ಯಾರ ಜೊತೆಗೋ ವಾಗ್ವಾದಕ್ಕೆ ಹೋಗಿ ನೀವೇ ಸಿಕ್ಕಿಕೊಳ್ಳುವಿರಿ.
ಸಿಂಹ ರಾಶಿ: ಅನವರತ ಕಾರ್ಯಗಳಿಂದ ದೇಹವು ಆಯಾಸಗೊಳ್ಳಬಹುದು. ಸುಂದರ ದಿನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದೇ ಒಳ್ಳೆಯದು. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವೇ ಬೇಕಾಗುವುದು. ಭವಿಷ್ಯದ ಬಗ್ಗೆ ನಿಮಗೆ ಸ್ಪಷ್ಟವಾದ ನಿಲುವು ಸಿಗದು. ಯಾರೋ ಮಾಡಿದ ತಪ್ಪು ಕೆಲಸದಿಂದ ನಿಮಗೆ ಪಶ್ಚಾತ್ತಾಪವಾಗಲಿದೆ. ನೀವೇ ಸಂಗಾತಿಯ ಮನಸ್ಸನ್ನು ನೋಯಿಸಿ ಸರಿಪಡಿಸುವಿರಿ. ತಂದೆಯನ್ನು ನೋಡುವ ಬಯಕೆಯಾಗಬಹುದು. ಇಂದಿನ ಖರ್ಚಿನ ಲೆಕ್ಕಾಚಾರವು ಬುಡಮೇಲಾಗವುದು.
ಕನ್ಯಾ ರಾಶಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಸಾಧಿಸಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಇಂದಿನ ಸುತ್ತಾಟವು ನಿಮಗೆ ಆಯಾಸವನ್ನು ಕೊಡಲಿದೆ. ಔಷಧ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಹೆಚ್ಚಿನ ಮೌಲ್ಯವನ್ನು ನಿರೀಕ್ಷಿಸುವಿರಿ. ಸಮೂಹದಲ್ಲಿ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ನಿಮಗೆ ಸಂಬಂಧಿಸದ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವಿರಾದರೂ ಕೇಳುವ ಮನಃಸ್ಥಿತಿಯು ಯಾರಲ್ಲಿಯೂ ಇರದು.
ತುಲಾ ರಾಶಿ: ಹಣದ ಹೂಡಿಕೆಯನ್ನು ಮಾಡುವ ಆಲೋಚನೆಯು ಇರಲಿದೆ. ಪ್ರೇಮದಲ್ಲಿ ನೀವು ಬೀಳಲಿದ್ದೀರಿ. ಹಳೆಯ ಖಾಯಿಲೆಯು ಕಾಣಿಸಿಕೊಳ್ಳಬಹುದು. ಹಿರಿಯರ ಮಾತನ್ನು ನಿರ್ಲಕ್ಷಿಸುವಿರಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂದು ಅಂದುಕೊಳ್ಳುವಿರಿ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ವೆಚ್ಚಕ್ಕೆ ನೀವು ಕಡಿವಾಣ ಹಾಕಲಿದ್ದೀರಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ಉತ್ತಮ ಆಹಾರವನ್ನು ಸ್ವೀಕರಿಸುವಿರಿ. ನಿಮ್ಮ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಿಸಬಹುದು. ನೌಕರರಿಂದ ಅಸಮಾಧಾನವಾಗಲಿದೆ.
ವೃಶ್ಚಿಕ ರಾಶಿ: ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು. ಇಂದು ನೀವು ಗಟ್ಟಿ ಮನಸ್ಸಿನಿಂದ ಹೋದರೂ ಕಾರ್ಯಸ್ಥಳವು ನಿಮಗೆ ಕೆಲವು ಕಹಿಯನ್ನು ಕೊಟ್ಟೀತು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಕಲಹವಾಗುವುದು. ನಿಮಗೆ ಇಂದು ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆಯಾಗುವುದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ.
ಧನು ರಾಶಿ: ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬರಲಿದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಂದು ನಿಮಗೆ ಇಷ್ಟವಾಗದು. ಯಾರ ಒತ್ತಡಕ್ಕೂ ನೀವು ಮಣಿಯದವರು ಇಂದು ಮಣಿಯುವಿರಿ. ನಿಮ್ಮವರಿಗೆ ಸ್ವಭಾವವು ಬದಲಾದಂತೆ ಅನ್ನಿಸೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಬಂದಾಗ ನೀವು ತಪ್ಪಿಸಿಕೊಳ್ಳುವಿರಿ. ಮನಸ್ಸು ಭಾರವಾಗಿದ್ದು ಎಲ್ಲರಿಂದ ದೂರವಿರಲು ಇಷ್ಟಪಡುವಿರಿ. ನಿಮ್ಮ ಮಾತನ್ನು ಅಪಾರ್ಥ ಮಾಡುವರು. ಬಂಧುಗಳಿಂದ ಅನಿರೀಕ್ಷಿತ ವಾರ್ತೆಯನ್ನು ಕೇಳುವಿರಿ. ಆದಾಯವು ಮತ್ತಷ್ಟು ಬೇಕೆನಿಸುವುದು.
ಮಕರ ರಾಶಿ: ಸಂಗಾತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಬಳಿ ಪಡೆಯುವಿರಿ. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಬರಬಹುದು. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡುವಿರಿ. ಏಕಾಂಗಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿಸಿದ್ದಕ್ಕೆ ನಿಮಗೆ ಎಲ್ಲರೆದುರು ಅಪಮಾನವಾಗಬಹುದು. ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ನೀವು ಮಗ್ನರಾಗುವಿರಿ. ಅಂದುಕೊಂಡಿದ್ದು ಹಾಗೆಯೇ ಆಗಿದ್ದು ನಿಮಗೂ ಅಚ್ಚರಿಯಾಗಲಿದೆ. ದುಷ್ಕೃತ್ಯಕ್ಕೆ ಅಪ್ರತ್ಯಕ್ಷವಾಗಿ ಅನುಮೋದನೆ ಸಿಗಲಿದೆ.
ಕುಂಭ ರಾಶಿ: ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ದಿನವನ್ನು ಕಳೆಯುವಿರಿ. ಮನೆಯ ಕಾರ್ಯಕ್ಕಾಗಿ ನೀವು ಓಡಾಟ ಮಾಡಬೇಕಾಗುವುದು. ಹೆಚ್ಚಿನ ಶ್ರಮವು ವಿದ್ಯಾರ್ಥಿಗಳಿಗೆ ಅವಶ್ಯಕ. ಕಛೇರಿಯಲ್ಲಿ ನಿಮಗೆ ವಹಿಸಿದ ಕೆಲಸವನ್ನು ಮಾಡದೇ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ವಾಹನದಿಂದ ಅಪಘಾತವು ಆಗುವುದು ಎಂಬ ಭೀತಿ ಕಾಡಲಿದೆ. ತಂದೆಯ ಆರೋಗ್ಯದ ಬಗ್ಗೆ ನಿಮಗೆ ಚಿಂತೆ ಇರುವುದು. ಸಹೋದ್ಯೋಗಿಗಳ ಸಹಕಾರವಿಲ್ಲದೇ ನಿಮ್ಮ ಕೆಲಸವನ್ನು ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ಕಳೆಯುವಿರಿ. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು.
ಮೀನ ರಾಶಿ: ಸಂಸಾರದಲ್ಲಿ ಆಗುವ ಕಲಹವನ್ನು ಉದ್ವೇಗಕ್ಕೆ ಮನಸ್ಸು ಕೊಡದೇ ಶಾಂತಚಿತ್ತರಾಗಿ ಸಮಾಧಾನ ಮಾಡಿ. ನಿಮ್ಮ ಕೈಯ್ಯಲ್ಲಿ ಒಗ್ಗೂಡಿಸುವಿಕೆ ಇರಲಿದೆ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಿ. ನಿಮ್ಮ ಮನಸ್ಸು ಭಾರವನ್ನೆಲ್ಲ ದೂರ ಮಾಡಿದೆ. ಮನಸ್ಸು ಹಗುರರಾಗಿದ್ದು ಉತ್ಸಾಹವು ನಿಮ್ಮ ಮುಖದಲ್ಲಿ ಕಾಣುವುದು. ನಿಮ್ಮ ನಿಯಮಗಳೇ ನಿಮಗೆ ಹಿಂಸೆಯಾಗುವುದು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಎಲ್ಲರ ಮೇಲಿನ ನಂಬಿಕೆಯನ್ನು ನೀವು ಕಳೆದುಕೊಂಡು ಆರಾಮಾಗಿ ಇರುವಂತೆ ನಟಿಸುವಿರಿ. ಇಂದಿನ ಮಂದಗತಿಯ ಕೆಲಸಗಳಿಗೆ ಚುರುಕು ನೀಡುವಿರಿ. ಸಾಲಾಗಾರ ವಿಚಾರದಲ್ಲಿ ನಿಮಗೆ ಅಸಮಾಧಾನವು ಇರಲಿದೆ.
ಲೋಹಿತಶರ್ಮಾ – 8762924271 (what’s app only)