ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ರೇವತೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:10 ರಿಂದ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:37 ರಿಂದ 05:10ರ ವರೆಗೆ.
ಮೇಷ ರಾಶಿ: ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಪ್ರೇರಣೆಯನ್ನು ನೀಡದು. ಶತ್ರುಗಳ ಭಯದಿಂದ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ನಿಮ್ಮ ಒತ್ತಡಗಳನ್ನು ಎಲ್ಲವನ್ನು ಮರೆತು ನಿಶ್ಚಿಂತೆಯಿಂದ ಇಂದಿನ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ತೊಂದರೆಯಾಗಬಹುದು. ಸಂಗಾತಿಯನ್ನು ಕಡೆಗಣಿಸಿ ನಿಮಗೆ ಬೇಸರವಾಗಬಹುದು. ಧಾರ್ಮಿಕ ಸ್ಥಳಗಳಿಗೆ ಹೋಗಿ ಬರುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿಚಾರಗಳು ತಪ್ಪಾಗಿ ಇರಬಹುದು. ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಲು ಆಲೋಚಿಸುವಿರಿ.
ವೃಷಭ ರಾಶಿ: ನಿಮ್ಮ ಸಲಹೆಯನ್ನು ಪಡೆಯದೇ ಇರುವುದಕ್ಕೆ ನಿಮಗೆ ಬೇಸರವಾಗುವುದು. ನೌಕರರು ನಿಮ್ಮ ಮೇಲೆ ಮುನಿಸಿಕೊಂಡಾರು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಇಂದು ಜೀವನವು ಹೊಸ ತಿರುವನ್ನು ಪಡೆದುಕೊಳ್ಳುವುದು. ಹೊಸ ವ್ಯಕ್ತಿಗಳ ಪರಿಚಯವು ನಿಮಗೆ ಆಗುವುದು. ಇಂದು ನಿಮ್ಮ ಸಂಗಾತಿಯಿಂದ ಕೆಲವು ವಿಚಾರಗಳಿಗೆ ಸಲಹೆಯನ್ನು ಪಡೆಯುವಿರಿ. ನಿಮ್ಮ ಮನೆ ಕೆಲಸವು ಇಂದು ಅರ್ಧಕ್ಕೆ ನಿಲ್ಲಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಕಂಪ ಇರಲಿದೆ.
ಮಿಥುನ ರಾಶಿ: ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವು ಸಿಗುವುದು. ಆಕಸ್ಮಿಕ ಧನಲಾಭದಿಂದ ನಿಮಗೆ ಸಂತೋಷವಾಗಲಿದೆ. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಇರುವುದು. ನಿಮ್ಮವರ ಬಳಿ ಇಂದು ಧನ ಸಹಾಯವನ್ನು ಕೇಳುವಿರಿ. ಅನ್ಯ ಆಲೋಚನೆಯಿಂದ ನಿದ್ರೆಗೆ ತೊಂದರೆ ಆಗಬಹುದು. ಅನವಶ್ಯಕ ಮಾತುಗಳು ವಿವಾದಕ್ಕೆ ಕಾರಣವಾಗುವುದು. ಹಂಚಿಕೊಂಡು ಮಾಡುವ ಕೆಲಸವು ಸಂತೋಷವನ್ನು ನೀಡುವುದು ಹಾಗೂ ವೇಗವಾಗಿ ಕಾರ್ಯವು ಆಗುವುದು. ಧಾರ್ಮಿಕವಾದ ಆಚರಣೆಗಳಲ್ಲಿ ತೊಡಗುವಿರಿ.
ಕಟಕ ರಾಶಿ: ಹಣಕಾಸಿನ ವಿಚಾರದಲ್ಲಿ ನಿಮಗೆ ಮಿತ್ರರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವ ಇರಿ. ಸ್ತ್ರೀಯರಿಗೆ ಸಂತೋಷದ ದಿನವಾಗುವುದು. ಎಲ್ಲರೆದುರೂ ಕೋಪಗೊಂಡು ಕೂಗಾಡುವಿರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅಗತ್ಯ. ನಿಮ್ಮ ಪ್ರಾಮಾಣಿಕ ಮಾತುಗಳು ಹಣವನ್ನು ಸಾಲವಾಗಿ ಕೊಟ್ಟವರಿಗೆ ನಂಬಿಕೆ ತರಲಿದೆ. ಅಪರಿಚಿತರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೆರಮನೆಯರ ಜೊತೆ ಕಲಹವಾಗಲಿದೆ. ನಿಮ್ಮ ಮಾತುಗಳು ಸಂತೋಷವನ್ನು ಕೊಡದೇ ಇರಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ.
ಸಿಂಹ ರಾಶಿ: ಮಿತ್ರರ ಆಗಮನವನ್ನು ನೀವು ಇಷ್ಟಪಡುವಿರಿ. ಅಹಂಕಾರದಿಂದ ನಿಮಗೆ ಮಿತ್ರರು ದೂರವಾಗಬಹುದು. ಸುಮ್ಮನೇ ಇದ್ದು ಹತ್ತಾರು ಯೋಚನೆಗಳು ಬರಲಿದೆ. ಬಂಧುಗಳಿಂದ ಉಡುಗೊರೆ ಸಿಗಲಿದೆ. ಮಾತಿನ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಗುಂಪಿನಲ್ಲಿ ಕಳೆಯುವುದು ಇಷ್ಟವಾಗದು. ನೀರಿನಿಂದ ಭೀತಿಯು ಇರಲಿದೆ. ಕಲಾವಿದರಿಗೆ ಅವಕಾಶಗಳು ತಪ್ಪಿಹೋಗಬಹುದು. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಮನೆಯ ಕಾರ್ಯದಲ್ಲಿ ತೊಡಗುವಿರಿ. ಸಭೆ ಸಮಾರಂಭಗಳಿಗೆ ಹೋಗುವಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ.
ಕನ್ಯಾ ರಾಶಿ: ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವುದು. ಸ್ಪರ್ಧೆಯಲ್ಲಿ ಜಯಗಳಿಸುವ ಬದಲು ಸೋಲಾಗಬಹುದು ಇದರಿಂದ. ಮಹಿಳೆಯರು ಸ್ವ ಉದ್ಯೋಗದಲ್ಲಿ ಲಾಭವನ್ನು ಮಾಡಿಕೊಳ್ಳುವಿರಿ ನಂಬಿಕೆಯ ಕೊರತೆಯಿಂದ ಪ್ರೇಮವು ಭಗ್ನವಾಗಬಹುದು. ಆಪ್ತರ ಸಹಕಾರದಿಂದ ನಿಮಗೆ ಉದ್ಯೋಗವು ಸಿಗುವುದು. ಭವಿಷ್ಯದ ಯೋಜನೆಯನ್ನು ಕುಟುಂಬದ ಜೊತೆ ಹಂಚಿಕೊಳ್ಳಿ. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ ಅನುಮಾನವನ್ನು ದೂರಮಾಡುಬುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ.
ತುಲಾ ರಾಶಿ: ಸಂಗಾತಿಯ ಸಂಪತ್ತನ್ನು ಇಂದು ಖಾಲಿಮಾಡಲಿದ್ದೀರಿ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಇರಲಿದೆ. ಹಿರಿಯರ ಸೇವೆಯನ್ನು ನೀವು ಮಾಡಲಿದ್ದೀರಿ. ಆರಂಭಿಸಿದ ಉದ್ಯೋಗದಲ್ಲಿ ಏನೂ ತೊಂದರೆಗಳು ಬಾರದಂತೆ ಪ್ರಾರ್ಥನೆಯನ್ನು ಮಾಡುವಿರಿ. ತಂದೆಯ ಮಾತು ನಿಮಗೆ ಕಿರಿಕಿರಿ ನೀಡಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ವಾಸಿಯಾಗದ ರೋಗಕ್ಕೆ ಔಷಧವು ಸಿಗಬಹುದು. ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ನಿಮ್ಮ ಉದ್ಯೋಗದ ಬಗ್ಗೆ ಅಸೂಯೆ ಬರಬಹುದು.
ವೃಶ್ಚಿಕ ರಾಶಿ: ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ. ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಮಾಡಿದ ತಪ್ಪಿಗೆ ನಿಮಗೆ ಬೇಸರವಾಗಬಹುದು. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗಬಹುದು. ಮಕ್ಕಳ ವಿವಾಹಕ್ಕೆ ಪ್ರಯತ್ನ ಅತಿಯಾಗುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು. ವೇಗವಾಗಿ ವಾಹನವನ್ನು ಚಲಾಯಿಸುವುದು ಬೇಡ. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ.
ಧನು ರಾಶಿ: ಧಾರ್ಮಿಕ ಸಂಭ್ರಮದಲ್ಲಿ ನೀವು ಇರುವಿರಿ. ಯಾರದೋ ಮಾತಿನಿಂದ ನೀವು ಕ್ಲೇಶಕ್ಕೆ ಒಳಗಾಗುವಿರಿ. ಆಪ್ತರನ್ನು ಮನೆಗೆ ಕರೆದು ಸತ್ಕರಿಸಲಿದ್ದೀರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ತುರ್ತು ಕಾರ್ಯಕ್ಕಾಗಿ ನೀವು ಪ್ರಯಾಣ ಮಾಡಬೇಕಾಗಬಹುದು. ಒಳ್ಳೆಯದಾಗಲು ಸಮಯವನ್ನು ನೀವು ಕಾಯಬೇಕಾಗುವುದು. ಮಾನಸಿಕವಾಗಿ ನೀವು ಬಲವಾಗಬೇಕಿದೆ. ಎಲ್ಲ ಸಂದರ್ಭದಲ್ಲಿಯೂ ದುಃಖಿಸಬೇಕಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲ ಮಾಡಬಹುದು. ಮೊದಲೇ ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮಂದೆ ಹೋಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಬಗ್ಗೆ ನಿಮಗೆ ಆಸೆಯಾಗಲಿದೆ.
ಮಕರ ರಾಶಿ: ಸಾಲದಿಂದ ಮುಕ್ತಿ ಒಡೆದು ಮನಸ್ಸು ನಿರಾಳವಾಗುವುದು. ಹಿರಿಯರಿಂದ ಹಿತವಾದ ಮಾತುಗಳು ನಿಮಗೆ ಸಿಗಬಹುದು. ಕೇಳಿ ಮುಂದಡಿ ಇಡುವುದು ಉತ್ತಮ. ಹೊಸ ಉದ್ಯೋಗತ್ತ ನಿಮ್ಮ ಮನಸ್ಸು ಇರಲಿದೆ. ಮಕ್ಕಳಿಗೆ ಬೇಕಾದುದನ್ನು ನೀವು ಕೊಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವು ಕಾಣಿಸುವುದು. ಉಪಕಾರಕ್ಕೆ ಪ್ರತಿಯಾಗಿ ಉಪಕಾರವನ್ನು ಮಾಡುವಿರಿ. ನಿಮಗೆ ಸಂತೋಷವನ್ನು ಕೊಡುವ ಇಂದಿನ ಸಂದರ್ಭವಾಗಿದೆ. ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ. ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ ಮಾತಿರಲಿ. ನಿಮ್ಮ ಯಾರದರೂ ದೂರು ಸಲ್ಲಿಸಬಹುದು.
ಕುಂಭ ರಾಶಿ: ಕೃಷಿಯಿಂದ ಲಾಭ ಗಳಿಸಲು ನೀವು ಸಲಹೆಯನ್ನು ಪಡೆಯಿರಿ. ಓದಿನ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲವಿರಬಹುದು. ಪರೀಕ್ಷೆಯ ಸಿದ್ಧತೆಗೂ ಇದು ಕಷ್ಟವಾದೀತು. ಶತ್ರುಗಳನ್ನು ಆದಷ್ಟು ನಿರ್ಲಕ್ಷಿಸುದು ಉತ್ತಮ. ಸಿಕ್ಕ ಅವಕಾಶಗಳನ್ನು ಬಿಡದೇ ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವಿರಿ. ಬಂಧುಗಳ ಪ್ರೀತಿಯೂ ಸಿಗಲಿದೆ. ಅತಿಥಿ ಸತ್ಕಾರವನ್ನು ಮಾಡಲಿದ್ದೀರಿ. ನಿಮ್ಮ ಚಿಂತನೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗುವಂತೆ ನೋಡಿಕೊಳ್ಳಿ.
ಮೀನ ರಾಶಿ: ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ಕೊಡುವಿರಿ. ಆದರೂ ಕೆಲಸವು ಸಾಧ್ಯವಾಗದು. ಬಯಕೆಗಳನ್ನು ಈಡೇರಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುವಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳು ಸಂಗಾತಿಗೆ ಕಷ್ಟವಾಗುವುದು. ಯಾರಿಂದಲೂ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇರುವುದು. ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳಲು ಉಪಾಯವನ್ನು ಮಾಡಬಹುದು. ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿ ಮಿತ್ರನಿಗೆ ನಿಮ್ಮ ಸಹಾಯವು ಸಿಗಲಿದೆ. ಹೊಸತನ್ನು ವಿಚಾರಗಳತ್ತ ನಿಮ್ಮ ಬುದ್ಧಿಯು ಓಡುವುದು. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಇರಬೇಕಾದೀತು.
-ಲೋಹಿತಶರ್ಮಾ 8762924271 (what’s app only)