Horoscope Today: ರಾಶಿಭವಿಷ್ಯ, ಈ ರಾಶಿಯವರು ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ರಾಶಿಭವಿಷ್ಯ, ಈ ರಾಶಿಯವರು ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 3 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ರೇವತೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:10 ರಿಂದ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:37 ರಿಂದ 05:10ರ ವರೆಗೆ.

ಧನು ರಾಶಿ : ಧಾರ್ಮಿಕ ಸಂಭ್ರಮದಲ್ಲಿ ನೀವು ಇರುವಿರಿ. ಯಾರದೋ ಮಾತಿನಿಂದ ನೀವು ಕ್ಲೇಶಕ್ಕೆ ಒಳಗಾಗುವಿರಿ.‌ ಆಪ್ತರನ್ನು ಮನೆಗೆ ಕರೆದು ಸತ್ಕರಿಸಲಿದ್ದೀರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ತುರ್ತು ಕಾರ್ಯಕ್ಕಾಗಿ ನೀವು ಪ್ರಯಾಣ ಮಾಡಬೇಕಾಗಬಹುದು. ಒಳ್ಳೆಯದಾಗಲು ಸಮಯವನ್ನು ನೀವು ಕಾಯಬೇಕಾಗುವುದು. ಮಾನಸಿಕವಾಗಿ ನೀವು ಬಲವಾಗಬೇಕಿದೆ. ಎಲ್ಲ ಸಂದರ್ಭದಲ್ಲಿಯೂ ದುಃಖಿಸಬೇಕಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲ‌ ಮಾಡಬಹುದು. ಮೊದಲೇ ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮಂದೆ ಹೋಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಬಗ್ಗೆ ನಿಮಗೆ ಆಸೆಯಾಗಲಿದೆ.

ಮಕರ ರಾಶಿ : ಸಾಲದಿಂದ ಮುಕ್ತಿ ಒಡೆದು ಮನಸ್ಸು ನಿರಾಳವಾಗುವುದು. ಹಿರಿಯರಿಂದ ಹಿತವಾದ ಮಾತುಗಳು ನಿಮಗೆ ಸಿಗಬಹುದು. ಕೇಳಿ ಮುಂದಡಿ ಇಡುವುದು ಉತ್ತಮ. ಹೊಸ ಉದ್ಯೋಗತ್ತ ನಿಮ್ಮ ಮನಸ್ಸು ಇರಲಿದೆ. ಮಕ್ಕಳಿಗೆ ಬೇಕಾದುದನ್ನು ನೀವು ಕೊಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವು ಕಾಣಿಸುವುದು. ಉಪಕಾರಕ್ಕೆ ಪ್ರತಿಯಾಗಿ ಉಪಕಾರವನ್ನು ಮಾಡುವಿರಿ. ನಿಮಗೆ ಸಂತೋಷವನ್ನು ಕೊಡುವ ಇಂದಿನ ಸಂದರ್ಭವಾಗಿದೆ. ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ. ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ‌ ಮಾತಿರಲಿ. ನಿಮ್ಮ ಯಾರದರೂ ದೂರು ಸಲ್ಲಿಸಬಹುದು.

ಕುಂಭ ರಾಶಿ : ಕೃಷಿಯಿಂದ ಲಾಭ ಗಳಿಸಲು ನೀವು ಸಲಹೆಯನ್ನು ಪಡೆಯಿರಿ. ಓದಿನ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲವಿರಬಹುದು. ಪರೀಕ್ಷೆಯ ಸಿದ್ಧತೆಗೂ ಇದು ಕಷ್ಟವಾದೀತು. ಶತ್ರುಗಳನ್ನು ಆದಷ್ಟು ನಿರ್ಲಕ್ಷಿಸುದು ಉತ್ತಮ. ಸಿಕ್ಕ ಅವಕಾಶಗಳನ್ನು ಬಿಡದೇ ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ.‌ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವಿರಿ. ಬಂಧುಗಳ ಪ್ರೀತಿಯೂ ಸಿಗಲಿದೆ. ಅತಿಥಿ ಸತ್ಕಾರವನ್ನು ಮಾಡಲಿದ್ದೀರಿ. ನಿಮ್ಮ ಚಿಂತನೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗುವಂತೆ ನೋಡಿಕೊಳ್ಳಿ.

ಮೀನ ರಾಶಿ : ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ಕೊಡುವಿರಿ.‌ ಆದರೂ ಕೆಲಸವು ಸಾಧ್ಯವಾಗದು. ಬಯಕೆಗಳನ್ನು ಈಡೇರಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುವಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳು ಸಂಗಾತಿಗೆ ಕಷ್ಟವಾಗುವುದು. ಯಾರಿಂದಲೂ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇರುವುದು. ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳಲು ಉಪಾಯವನ್ನು ಮಾಡಬಹುದು. ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿ ಮಿತ್ರನಿಗೆ ನಿಮ್ಮ ಸಹಾಯವು ಸಿಗಲಿದೆ. ಹೊಸತನ್ನು ವಿಚಾರಗಳತ್ತ ನಿಮ್ಮ ಬುದ್ಧಿಯು ಓಡುವುದು. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಇರಬೇಕಾದೀತು.

-ಲೋಹಿತಶರ್ಮಾ 8762924271 (what’s app only)

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್