Horoscope 30 Oct: ದಿನಭವಿಷ್ಯ, ಈ ರಾಶಿಯವರಿಗೆ ಸಂಗಾತಿಯ ಮಾತುಗಳು ಕಿರಿಕಿರಿ ಎನಿಸಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:55 ರಿಂದ 09:22 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10: 49 ರಿಂದ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:10ರ ವರೆಗೆ.
ಮೇಷ ರಾಶಿ: ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆರ್ಥಿಕತೆಗೆ ಸಂಬಂಧಿಸಿದಂತೆ ಪೂರ್ಣ ಸಮಾಧನಾ ಇರದು. ಇನ್ನೊಬ್ಬರ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಹಣದ ವಿಚಾರದಲ್ಲಿ ನಿಮಗೆ ಇಂದು ಲೋಭವು ಇರದು. ನೀವು ಇಂದು ಯಾರ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಆರ್ಥಿಕತೆಯ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲುವುದು. ಹೊಸಬರ ಪರಿಚಯಿಸಿದಿಂದ ನಿಮಗೆ ಹೊಸ ವಿಷಯಗಳು ಗೊತ್ತಾಗುವುದು.
ವೃಷಭ ರಾಶಿ: ಮಕ್ಕಳ ವಿವಾಹವು ವಿಳಂಬವಾಗುತ್ತಿರುವುದು ನಿಮಗೆ ಆತಂಕವಾಗಬಹುದು. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ಅಹಂಕಾರವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ಅಮೂಲ್ಯ ವಸ್ತುಗಳು ಕಾಣೆಯಾಗಬಹುದು. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು. ನಿಮ್ಮ ಮಾತು ಸ್ನೇಹಿತರಿಗೆ ಕಿರಿಕಿರಿಯಾಗಬಹುದು. ಅತಿಥಿಸತ್ಕಾರಕ್ಕೆ ಅವಕಾಶಗಳು ಬರಬಹುದು.
ಮಿಥುನ ರಾಶಿ: ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಮನೆಯವರ ಮಕ್ಕಳ ಮೇಲೆ ಗಮನ ಇರಿಸುವುದು ಮುಖ್ಯ. ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕಾರ್ಯಗಳಿಗೆ ಪರಿಚಿತರು ಸಹಾಯ ಮಾಡುವರು. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಆರೋಗ್ಯವು ಕೆಡಲಿದ್ದು ಓಡಾಟ ಮಾಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ತೊಡಕಾಗುವುದು. ಉನ್ನತ ಅಧ್ಯಯನಕ್ಕಾಗಿ ನೀವು ಬೇರೆ ಕಡೆಗೆ ಹೋಗಬೇಕಾದೀತು.
ಕಟಕ ರಾಶಿ: ಸಂಗಾತಿಯ ಆರೋಗ್ಯದ ಸಮಸ್ಯೆಯನ್ನು ನೀವು ಬಗೆಹರಿಸುವುದು ಕಷ್ಟವಾದೀತು. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಬಹಳ ದಿನಗಳ ಅನಂತರ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಉಪಚಾರವೂ ಸಿಗುವುದು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಿದ್ದು ಆತಂಕವಾಗಬಹುದು. ನಿಮ್ಮದಲ್ಲದ ವಸ್ತುವನ್ನೂ ನೀವು ಬಿಟ್ಟುಕೊಡಲಾರಿರಿ.
ಸಿಂಹ ರಾಶಿ: ಸಂಗಾತಿಯ ಮಾತುಗಳು ಕಿರಿಕಿರಿ ಎನಿಸಬಹುದು. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ಇರಲು ಇಷ್ಟಪಡುವುದಿಲ್ಲ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯುವಿರಿ. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಅನ್ಯ ಕಾರ್ಯವು ಬರಬಹುದು.
ಕನ್ಯಾ ರಾಶಿ: ಬಂಧುಗಳ ಸಹಾಯಕ್ಕಾಗಿ ಓಡಾಡುವಿರಿ. ನಿದ್ರೆಯಿಂದ ಮಾನಸಿಕ ಕಿರಿಕಿರಿ ಆಗಬಹುದು. ಸಂಗಾತಿಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ತುರ್ತು ಬಸವ ಹೊಂದಿಸುವುದು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ಬರುವ ನಕಾರಾತ್ಮಕ ಅಂಶಗಳನ್ನು ಅಲ್ಲಗಳೆಯುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಲಾವಿದರು ಪ್ರಯತ್ನಪೂರ್ವಕವಾಗಿ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ತುಲಾ ರಾಶಿ: ಸಣ್ಣ ವ್ಯಾಪಾರವೂ ಇಂದು ಎಂದಿಗಿಂತ ಅಧಿಕ ಲಾಭವನ್ನು ಗಳಿಸಬಹುದು. ದೂರದ ಊರಿಗೆ ಉದ್ಯೋಗಕ್ಕೆ ಆಹ್ವಾನ ಬರಬಹುದು. ಸ್ನೇಹಿತರಿಂದ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಯಾರನ್ನೋ ಹೊಗಳಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಇರುವ ಗೊಂದಲವು ನಿವಾರಣೆಯಾಗಲಿದೆ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಒಳ್ಳೆಯ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ.
ವೃಶ್ಚಿಕ ರಾಶಿ: ಮಹಿಳಾ ಅಧಿಕಾರಿಗಳಿಂದ ನಿಮಗೆ ಪೀಡೆ ಇರುವುದು. ಸ್ವಂತ ಉದ್ಯಮದಲ್ಲಿ ಅಡೆತಡೆಗಳು ಕಾಣಿಸಿಕೊಳ್ಳುವುದು. ಇಂದು ಎಲ್ಲದಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ. ಉತ್ತಮ ಕುಲದ ಸಂಗಾತಿಯ ಜೊತೆ ವಿವಾಹವು ಆಗಬಹುದು. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾದೀತು.
ಧನು ರಾಶಿ: ಭೂಮಿಯ ವ್ಯವಹಾರವನ್ನು ಸಂಕೋಚದಿಂದ ಮಾಡುವುದು ಬೇಡ. ನಿಮ್ಮ ನಿರ್ಧಾರವನ್ನು ಬದಲಿಸದೇ ಮುಂದುವರಿಯಿರಿ. ವಾಹನವನ್ನು ಪರೀಕ್ಷಿಸಿ ಖರೀದಿಸಿ. ಶತ್ರುಗಳು ನಿಮ್ಮ ಮೇಲೆ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು ಬೇಡ. ಅಧಿಕಾರದಿಂದ ಕೂಡಿದ ಮಾತು ನಿಮಗೆ ಪ್ರಯೋಜನವಾಗದು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ಆಸಮಯದಲ್ಲಿ ನೀವು ಭೋಜನವನ್ನು ಮಾಡಿದರೆ ಆರೋಗ್ಯವನ್ನು ಕೆಡಸಿಕೊಳ್ಳಬೇಕಾದೀತು. ನೂತನ ಉದ್ಯೋಗಕ್ಕೆ ಸೇರುವವರು ಗಣಪತಿಯ ಸ್ತುತಿಯನ್ನು ಮಾಡಿ ಮುಂದುವರಿಯಿರಿ.
ಮಕರ ರಾಶಿ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನ ಮುಖ್ಯವಾಗಿರಲಿ. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ. ಮನಸ್ಸು ಬಹಳ ಖಿನ್ನತೆಗೆ ಹೋಗಬಹುದು. ಯಾವ ವಿಚಾರವನ್ನೂ ತೀರ್ಮಾನಿಸಲಾಯಿತು ಆಗದು. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ತಾಯಿಯ ಆರೋಗ್ಯದ ವ್ಯತ್ಯಾಸದಿಂದ ಚಿಕಿತ್ಸೆ ಕೊಡಿಸಿ. ಸ್ನೇಹಿತರು ನಿಮ್ಮ ಬಳಿ ಧನಸಹಾಯವನ್ನು ಕೇಳಬಹುದು. ಪ್ರಖ್ಯಾತ ವ್ಯಕ್ತಿಗಳ ಭೇಟಿಯಾಗಬಹುದು. ದೊಡ್ಡ ಅಪಾಯದಿಂದ ನೀವು ಸುರಕ್ಷಿತರಾಗಿರುವಿರಿ. ಸಂಗಾತಿಯ ಇಂಗಿತವನ್ನು ತಿಳಿಯಲು ಪ್ರಯತ್ನಿಸಿ. ಎಂದೋ ಆಡಿದ ನಿಮ್ಮ ಮಾತು ನಿಮಗೇ ಪುನಃ ಬರಬಹುದು.
ಕುಂಭ ರಾಶಿ: ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಾಣಿಕೊಳ್ಳುವುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬಗ್ಗೆ ಭಿನ್ನಾಭಿಪ್ರಾಯ ಬರಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಂದ ನೀವು ಸಾಮಾಜಿಕ ಕಾರ್ಯಕ್ಕೆ ಹಣವನ್ನು ಪಡೆಯುವಿರಿ. ಬಹಳ ದಿನಗಳಿಂದ ಕೆಟ್ಟಿದ್ದ ಆರೋಗ್ಯವು ಸರಿಯಾದರೂ ಆರೋಗ್ಯ ಪೂರ್ಣ ಮನಸ್ಸು ಸರಿಯಾಗಲು ಸಮಯು ಬೇಕು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮವರು ನಿಮ್ಮನ್ನು ಬೇರೆ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಪಾತವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಕೆಲಸಗಳು ನಿಧಾನವಾಗುವುದು. ಮೊದಲೇ ತೀರ್ಮಾನವಾದ ನಿಮ್ಮ ಪ್ರಯಾಣವು ಮುಂದೆ ಹೋಗಬಹುದು.
ಮೀನ ರಾಶಿ: ನಿಮ್ಮ ಪ್ರೀತಿಗೆ ವಂಚನೆಯಾಗುವ ಸಾಧ್ಯತೆ ಇದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು. ಇನ್ನೊಬ್ಬರಿಗೆ ಕೊಡುವ ಸಮಯು ವ್ಯರ್ಥವಾಗುವುದು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ನಿರಂತರ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಯಾವ ಬಂಧನಕ್ಕೂ ಒಳಪಡದೇ ಮನಸ್ಸು ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು. ಅಭ್ಯಾಸ ವಿಷಯದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮನ್ನು ಸ್ನೇಹಿತರು ಕಡೆಗಣಿಸಬಹುದು. ಆಗಬೇಕಾದ ಕಾರ್ಯವನ್ನು ಮುಂದೂಡುವುದು ನಿಮ್ಮ ನಿರಾಸಕ್ತಿಯನ್ನು ತೋರಿಸುವುದು.
ಲೋಹಿತಶರ್ಮಾ 8762924271 (what’s app only)