Daily Horoscope: ಈ ರಾಶಿಯವರ ವರ್ತನೆಯೂ ಇತರರಿಗೆ ಬೇಸರ ತರಿಸಬಹುದು

|

Updated on: Jun 03, 2023 | 12:02 AM

ಇಂದಿನ (2023 ಜೂನ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಈ ರಾಶಿಯವರ ವರ್ತನೆಯೂ ಇತರರಿಗೆ ಬೇಸರ ತರಿಸಬಹುದು
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ.

ಮೇಷ: ನಿಮಗೆ ಬೇಕಾದವರು ಇಂದು ನಿಮ್ಮಿಂದ ದೂರವಾಗಬಹುದು.‌ ಸಹೋದರರು ನಿಮ್ಮ ಮಾತನ್ನು ಮೀರಿ ವರ್ತಿಸುವರು. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ವ್ಯಾಪಾರದಿಂದ ನಿಮಗೆ ಸ್ವಲ್ಪ ನಷ್ಟವಾಗಿ ಅನಂತರ ಸ್ವಲ್ಪ ಲಾಭವಾಗಬಹುದು. ನಿಮ್ಮ ವಾಹನ ಚಲಾವಣೆಯಲ್ಲಿ ಜಾಗರೂಕತೆ ಇರಲಿ. ಸಂತೋಷದ ವಾತಾವರಣವು ಪ್ರಕ್ಷುಬ್ಧವಾಗಬಹುದು. ನಿಯಮಗಳನ್ನು ಪಾಲಿಸಲು ನಿಮಗೆ ಕಷ್ಟವಾದೀತು. ನಿದ್ರೆಯ ಕಷ್ಟವನ್ನು ನೀವು ಅನುಭವಿಸುವಿರಿ.‌ ಅನಾರೋಗ್ಯದಿಂದ ಸ್ವಲ್ಪ ಆರಾಮೆನಿಸಬಹುದು.

ವೃಷಭ: ಬದುಕಿನ ಬಂಡಿಯು ನಿಧಾನವಾಗಿ ಸಾಗುವಂತೆ ಕಾಣುತ್ತದೆ. ವಿವಾದಗಳು ಸುಮ್ಮನೇ ಸಮಯವನ್ನು ವ್ಯರ್ಥ ಮಾಡುವುವು. ಕಷ್ಟಗಳಿಗೆ ಮೈಯೊಡ್ಡುವ ನಿಮ್ಮ ಸ್ವಭಾವಕ್ಕೆ ಇಂದಿನ ಕಷ್ಟವು ಯಾವ ಲೆಕ್ಕದ್ದೂ ಆಗಿರದು. ಅಧಿಕಾರದ ಮಾತ್ರ ನಿಮ್ಮ ವರ್ತನೆಯನ್ನು ಬದಲಿಸಬೇಕೆಂದಿಲ್ಲ. ನಗು ಮೊಗವು ನಿಮಗೆ ಭೂಷಣವಾದೀತು. ಏಕಾಂತವನ್ನು ನೀವು ಇಷ್ಟಪಡುವಿರಿ. ವಾದಿಸಿದ ಮಾತ್ರಕ್ಕೆ ಸುಳ್ಳು ಸತ್ಯವಾಗದು. ಇನ್ನೊಬ್ಬರ ಕೋಪವನ್ನು ನಿವಾರಿಸುವ ಕಲೆ ನಿಮಗೆ ಗೊತ್ತಿದೆ. ನಿಮ್ಮವರು ನಿಮಗೆ ಇಂದು ಬೇಕಾದ ಸಹಾಯವನ್ನು ಮಾಡುವರು.

ಮಿಥುನ: ಅಕಾರಣವಾಗಿ ನೀವು ಉತ್ಸಾಹವನ್ನು ಕಳೆದುಕೊಳ್ಳುವುದು ಸರಿಯಲ್ಲ. ಉನ್ನತ ಅಧಿಕಾರಿಗಳ ಸಹಾಯವನ್ನು ನೀವು ಅನಿವಾರ್ಯವಾಗಿ ಕೇಳಬೇಕಾದೀತು. ಕಾರ್ಯದಲ್ಲಿ ಒತ್ತಡವಿಲ್ಲದಿದ್ದರೂ ಕೆಲಸವು ನಿಧಾನವಾದೀತು. ಯಂತ್ರದಂತೆ ಬದುಕುವುದು ನಿಮಗೆ ಸಾಕೆನಿಸಿ ಸ್ವಲ್ಪ ಹೊರಗೆ ಸುತ್ತುವ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ‌ವಾದ ನಂಬಿಕೆಯನ್ನು ನೀವು ಬಿಡುವುದಿಲ್ಲ. ದೈವಾನುಕೂಲಕ್ಕೆ ನಿಮ್ಮ ಪ್ರಯತ್ನವೂ ಇರಲಿ. ಸಿಕ್ಕಿದ್ದನ್ನು ಅನುಭವಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ. ದ್ವೇಷವನ್ನು ಬೆಳೆಸಿಕೊಳ್ಳುವುದು ಅವಾಸ್ತವವೆನಿಸಬಹುದು ನಿಮಗೆ.

ಕರ್ಕ: ಇಂದು ನೀವು ಬಹಳ ದಿನಗಳಿಂದ ವಾಸವಾಗಿದ್ದ ಮನೆಯನ್ನು ಬದಲಾಯಿಸುವ ಯೋಚನೆ ಮಾಡುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ನೀವು ನಿರಾಕರಿಸುವಿರಿ.‌ ಪ್ರೇಮ ವ್ಯವಹಾರವನ್ನು ಮನೆಯವರಲ್ಲಿ ಹೇಳಲು ನೀವು ಹಿಂದೇಟು ಹಾಕುವಿರಿ. ನಿಮಗೆ ಬೇಕಾಗಿರುವವರಿಗೆ ನೀವು ನಿಮ್ಮ ವಸ್ತುವನ್ನು ಕೊಡುವಿರಿ. ನಿಮ್ಮ ಸಹಾಯವನ್ನು ಮರೆತಿರುವವರ ಮೇಲೆ ಬೇರಗೊಳ್ಳುವಿರಿ. ಸಂಗಾತಿಯ ನಡುವೆ ಹಣದ ವಿಚಾರಕ್ಕೆ ಕಲಹವಾಗಬಹುದು. ನಿಮ್ಮ ಪ್ರತ್ಯುತ್ತರವು ನಿಮಗೆ ಇನ್ನಷ್ಟು ಕೋಪವನ್ನು ತರಿಸಬಹುದು. ದುರಾಲೋಚನೆಯಿಂದ‌ ಮನಸ್ಸು ಕುಗ್ಗಲಿದೆ. ನಿಮ್ಮ ಆಸೆಗಳನ್ನು ನೀವು ಇಂದು ನಿಯಂತ್ರಣದಲ್ಲಿ ಇರಿಸಿಕೊಳ್ಳಿ.

ಸಿಂಹ: ಮನೆಯಲ್ಲಿ ನೆಮ್ಮದಿಯ ವಾತಾವರಣ ಇದ್ದರೂ ಕೊರತೆಯನ್ನು ನೀವು ಸೃಷ್ಟಿಕೊಳ್ಳುವಿರಿ. ಇದರಿಂದ ನಿಮಗೇ ನಷ್ಟವಾಗುವ ಸಾಧ್ಯತೆ ಇದೆ. ಮಾತಿನ ನಿಯಂತ್ರಣ ತಪ್ಪಿ‌ ಇನ್ನೊಬ್ಬರಿಂದ ಅಪಮಾನವನ್ನು ಎದುರಿಸಿಬೇಕಾದೀತು. ಎಲ್ಲವೂ ವಿಳಂಬವಾಗುವುದು ಎಂಬ ವ್ಯಥೆಯು ಬಾಧಿಸಬಹುದು. ಹಿರಿಯರನ್ನು ನೀವು ಅಗೌರವದಿಂದ‌‌ ಕಾಣುವಿರಿ. ಸಮಾಜದ ನಡುವೆ ನೀವೊಬ್ಬ ವ್ಯಕ್ತಿಯಾಗಬೇಕು ಎಂದು ಅಂದುಕೊಳ್ಳುವಿರಿ. ಸಂಪತ್ತನ್ನು ಸಂಪಾದಿಸಲು ವಿಧವಾದ ಯೋಜನೆಯನ್ನು ಮಾಡುವಿರಿ. ಅಪವಾದವನ್ನು ನೀವು ಎದುರಿಸಲು ಹಿಂಜರಿಯಬಹುದು.

ಕನ್ಯಾ: ನಿಮ್ಮವರು ನಿಮ್ಮ ನಡವಳಿಕೆಯನ್ನು ಕಂಡು ನಕ್ಕಾರು. ಆದರೂ ನಿಮ್ಮ ಮಾರ್ಗವನ್ನು ನೀವು ಬದಲಿಸುವುದಿಲ್ಲ. ಮಕ್ಕಳಿಗಾಗಿ ನೀವು ಪರಿವರ್ತನೆಯಾಗುವಿರಿ. ಲೆಕ್ಕಾಚಾರ ವಿಚಾರಗಳು ನಿಮ್ಮ ತಲೆಗೆ ಹೋಗದು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಅಭ್ಯಾಸ ಮಾಡಬೇಕಾದೀತು. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡುವಿರಿ. ಆರೋಗ್ಯವು ನಿಮಗೆ ದೃಢವಾಗಿದೆ ಎಂದು ಅನ್ನಿಸಿದರೂ ಹಠಾತ್ ವ್ಯತ್ಯಾಸದ ಕಾರಣದಿಂದ ಧೈರ್ಯವನ್ನು ಕಳೆದುಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವು ಮಧ್ಯಮದಲ್ಲಿ ಇರಲಿದೆ. ಗುರುಸೇವೆಯ ಅಗತ್ಯತೆ ಬಹಳ ಇರಲಿದೆ. ನಿಮಗೆ ಒದಗುವ ಅನೇಕ ಸಂಕಟಗಳನ್ನು ಅದು ದೂರ ಮಾಡೀತು.

ತುಲಾ: ಇಂದು ನಿಮ್ಮ ಕೋಪವನ್ನು ಮನೆಯವರು ನೋಡುವರು. ನಿಮ್ಮ ವರ್ತನೆಯು ಬಹಳ ಬೇಸರ ತರಿಸಬಹುದು. ಸಂಗಾತಿಯ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಬೆಳಗಿನ ಸಮಯದಲ್ಲಿ ನಿಮಗೆ ಈ ದಿನ‌ವು ಮನೋಹರವಾಗಲಿದೆ ಎಂದು ಅನ್ನಿಸಬಹುದು. ಮಕ್ಕಳ ಜೊತೆ ಹೆಚ್ಚು ಕಾಲವನ್ನು ನೀವು ಕಳೆಯುವಿರಿ. ವಹಿಸಿಕೊಂಡ ಕೆಲಸವು ಹಿಂದುಳಿಯಬಹುದು. ಸಣ್ಣ ವಿಚಾರಕ್ಕೂ ಕೋಪಗೊಳ್ಳುವಿರಿ. ಸಾಮಾಜಿಕ‌ ಕಾರ್ಯದಲ್ಲಿ ತೊಡಗಿಕೊಳ್ಳಲು ಒತ್ತಾಯ ಬರಬಹುದು. ವ್ಯಾಪರವು ಮಧ್ಯಮಗತಿಯಲ್ಲಿ ಇರುವುದು. ಕೇಳಿಕೊಂಡರೆ ನಿಮಗೆ ಆಗಬೇಕಾದ ಕೆಲಸವು ಆಗುವುದು.

ವೃಶ್ಚಿಕ: ನಿಮ್ಮ ಬಹಳ ದಿನದ ಆಸೆಯು ಪೂರ್ಣಗೊಳ್ಳುವ ಸಂದರ್ಭವು ಬರಬಹುದು. ನೀವು ಇಂದು ಒತ್ತಡಗಳನ್ನು ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದರೂ ಸನ್ನಿವೇಶಗಳು ಅದೇ ರೀತಿ ಸೃಷ್ಟಿಯಾಗುವ ಸಂಭವವಿದೆ. ಅನವಶ್ಯಕ ಖರ್ಚಿಗೆ ನೀವು ಕಡಿವಾಣ ಹಾಕಲಿದ್ದೀರಿ. ಆರೋಗ್ಯವನ್ನು ದೃಢ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿರುವಿರಿ. ಅಪರಿಚಿತರ ಪರಿಚಯವು ನಿಮ್ಮ ಉದ್ಯಮಕ್ಕೆ ಹೆಚ್ಚು ಪೂರಕವಾಗಲಿದೆ. ಮಕ್ಕಳಿಂದ ದೂರವಿರುವ ನಿಮಗೆ ಬೇಸರವಾದೀತು. ದಿನದ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ.

ಧನುಸ್ಸು: ನಿಮಗೆ ಇಷ್ಟವಾದುದನ್ನು ನೀವು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಮನೆಯ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಆಯಾಸವೂ ನಿಮ್ಮನ್ನು ಬಾಧಿಸೀತು.‌ ವಿಶ್ರಾಂತಿಯ ಕಡೆ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಬಗ್ಗೆ ನಿಮಗೆ ಕೀಳು ಯೋಚನೆಗಳು ಬರಬಹುದು.‌ ಬೇಕಾದುದನ್ನು ನೀವು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ‌ಕನಸನ್ನು ಕಂಡಿದ್ದು ಸತ್ಯವಾಗಬಹುದು ಎಂಬ ಆತಂಕವೂ ಉಂಟಾಗಬಹುದು. ಯಾರನ್ನೂ ಸಂದೇಹದಲ್ಲಿ ನೋಡುವುದು ಬೇಡ. ಇನ್ನೊಬ್ಬರ ಬದುಕಿನ ಬಗ್ಗೆ ನೀವು ಆಡಿಕೊಳ್ಳುವುದು ಸರಿ ಎನಿಸದು. ಉದ್ಯೋಗವೇ ನಿಮಗೆ ಸದ್ಯದ ನೆಮ್ಮದಿಯ ಸ್ಥಳವಾಗಿದೆ.

ಮಕರ: ನಿಮ್ಮವರೇ ಆಗಿದ್ದು ನಿಮಗೆ ಅವರ ಪರಿಚಯ ಸಿಗದೇ ಹೋಗಬಹುದು. ಆದರೆ ಅವರಿಂದ ಬಹಳ ಉಪಕಾರವನ್ನು ಪಡೆದಿರುವುದು ಇಂದು ತಿಳಿಯಬಹುದು.‌ ನೀವು ಇಂದು ಸಂಸ್ಥೆಯ ಮುಖ್ಯಸ್ಥಾನವನ್ನು ಅಲಂಕರಿಸಬಹುದು. ತಂದೆಯ ಆನಾರೋಗ್ಯದ ನಿಮಿತ್ತ ನೀವು ಮನೆಗೆ ಬರಬಹುದು.‌ ಮನಸ್ಸಿನಲ್ಲಿ ಸಾವಧಾನತೆ ಇರುವುದು ಬಹಳ ಮುಖ್ಯ. ನಿಮ್ಮಲ್ಲಿ ಹೇಳುವಷ್ಟು ಅಹಂ ಇಲ್ಲದಿದ್ದರೂ ನೀಮ್ಮನ್ನು ಅಹಂಕಾರಿ ಎನ್ನುವರು. ನೀವು ಕಲಿತ ವಿದ್ಯೆಗೆ ಗೌರವವು ಸಿಗಬಹುದು. ಆಕಸ್ಮಿಕ ತಿರುವುಗಳು ನಿಮ್ಮನ್ನು ವಿಚಲಿತಗೊಳಿಸಬಹುದು. ಹಳೆಯದನ್ನು ಮರೆತು ಹೊಸತನ್ನು ತಂದುಕೊಳ್ಳುವಿರಿ.

ಕುಂಭ: ಯಾವ ಕೆಲಸವೂ ಕೈಗೂಡದು ಎಂದು ನಿಮಗೆ ಜುಗುಪ್ಸೆ ಉಂಟಾಗಬಹುದು. ಆಧಿಕಾರಕ್ಕೆ ಸಂಬಂಧಿಸಿದಂತೆ ನಿಮಗೆ ವಂಚನೆ ಆಗಬಹುದು. ಇಂದಿನ‌ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಏಕಾಂತವನ್ನು ಬಯಸಬಹುದು. ಸ್ನೇಹಿತರು ನಿಮಗೆ ತಪ್ಪು ದಾರಿಯನ್ನು ತೋರಿಸಬಹುದು. ಹೇಳಿಕೊಟ್ಟ ತಿಳಿವಳಿಕೆಯು ನಿಮಗೆ ಸಮಯಕ್ಕೆ ಬಾರದೇ ಹೋಗುವುದು. ಪ್ರಶಾಂತರಾಗಿರಲು ಯತ್ನಿಸಿದರೂ ಕೆಲವು ಸಂದರ್ಭಗಳಲ್ಲಿ ಉದ್ವೇಗವು ಪ್ರಕಡವಾಗಬಹುದು. ನಿಮ್ಮ ಮನಸ್ಸು ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಅಣಿಗೊಳಿಸುವುದು ಒಳ್ಳೆಯದು.

ಮೀನ: ಕುಟುಂಬದ ಕಲಹದಲ್ಲಿ ನೀವು ಮೌನವಹಿಸುವಿರಿ. ಕಳೆದುದರ ಬಗ್ಗೆ ಅತಿಯಾದ ಚಿಂತೆ ಬೇಡ. ಆಪ್ತರ ನಡುವೆ ನಿಮ್ಮ ಸಮಾಲೋಚನೆಗಳು ನಡೆದು ನೀವು ಒಂದು ತೀರ್ಮಾನಕ್ಕೆ ಬರಬಹುದಾಗಿದೆ. ನೀವು ಪಾಲುದಾರಿಕೆಯಲ್ಲಿ ಯಾರನ್ನೋ ಜೊತೆ ಮಾಡಿಕೊಂಡು ಹೋಗಬಹುದು. ನಿಮಗೆ ಇಂದು ಧೈರ್ಯದ ಕೊರತೆ ಕಾಣಬಹುದು. ದೂರಪ್ರಯಾಣವನ್ನು ನೀವು ಆದಷ್ಟು ನಿಲ್ಲಿಸುವುದು ಒಳ್ಳೆಯದು. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಸನ್ನಿವೇಶಗಳು ಬರಬಹುದು. ನಿಮ್ಮ ನಿಯಮಗಳೇ ನಿಮಗೆ ತೊಂದರೆಯನ್ನು ತಂದೀತು. ಕುಲದೇವರ ಸ್ಮರಣೆಯನ್ನು ನೀವು ಮಾಡಬೇಕಾದೀತು.

ಲೋಹಿತಶರ್ಮಾ – 8762924271 (what’s app only)