ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.
ಮೇಷ: ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಸಂತತಿಯ ಶುಭ ವಾರ್ತೆ ಕೇಳಲಿದ್ದೀರಿ. ಯೋಜಿತ ಕಾರ್ಯಗಳನ್ನು ಒಂದೊಂದಾಗಿಯೇ ಮಾಡಲು ತೊಡಗಬಹುದು. ಏಕಾಂತವನ್ನು ಬಯಸಿ ಒಬ್ಬರೇ ಎಲ್ಲಿಗಾದರೂ ಹೋಗಲು ಇಚ್ಛಿಸುವಿರಿ. ನೂತನ ವಾಹನವನ್ನು ಪಡೆಯಲು ಚಿಂತಿಸಬಹುದು. ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಲಿದೆ. ಗಳಿಸಿದ್ದನ್ನು ಕಳೆದುಕೊಳ್ಳುವಾಗ ಯೋಚಿಸಿ. ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.
ವೃಷಭ: ನಿಮ್ಮ ಶಿಸ್ತಿನ ಕೆಲಸದಿಂದ ಕೆಲವರಿಗೆ ಬೇಸರವಾಗಬಹುದು. ದೂರ ಬಂಧುಗಳ ಪರಿಚಯವಾಗಲಿದೆ. ಒತ್ತಡಗಳಿದ್ದರೂ ನೀವು ನಿಮ್ಮ ಕೆಲಸ ಮಾಡಿ ಮುಗಿಸುವಿರಿ. ವಾಹನದಿಂದ ತೊಂದರೆಯಾದೀತು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಇದ್ದು ಯಥಾಶಕ್ತಿ ಸಂಪತ್ತನ್ನು ಕೊಡುವಿರಿ. ಸಹೋದರರಿಂದ ಸಂಪತ್ತು ಸಿಗಲಿದೆ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಮಾತಿನಲ್ಲಿ ಹಿಡಿತವಿರಲಿ. ಅಪಹಾಸ್ಯ ಮಾಡಿಯಾರು.
ಮಿಥುನ: ಗೃಹನಿರ್ಮಾಣದ ಕಾರ್ಯವು ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ಉನ್ನತಸ್ಥಾನಕ್ಕೆ ಹೋಗಬೇಕೆನ್ನುವ ಬಯಕೆ ಇರಲಿದೆ. ನಿಮಗೆ ಯೋಗ್ಯ ಮಾರ್ಗದರ್ಶನದ ಕೊರತೆ ಇದ್ದು ಇದರಿಂದ ಅವಕಾಶವನ್ನು ಕಳೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.
ಕಟಕ: ಬಹಳ ಕಾಲದ ಸ್ನೇಹವು ಇಂದು ದೂರಾಗಬಹುದು. ಆಸ್ತಿಯ ವಿಚಾರವಾಗಿ ಮಾತುಗಳು ಬರಬಹುದು. ತಂದೆಯ ಮಾತಿಗೆ ಗೌರವವನ್ನು ಕೊಡದೇ ಅಹಂಕಾರ ತೋರಿಸಬಹುದು. ತುರ್ತು ಅವಶ್ಯಕತೆಗಳಿಗೆ ಹಣವನ್ನು ವ್ಯಯಮಾಡಿ. ರಮಣೀಯ ಸ್ಥಳಗಳಿಗೆ ಹೋಗಬೇಕೆನಿಸುವುದು. ಆಲಸ್ಯದಿಂದ ವಿಶ್ರಾಂತಿ ಪಡೆಯುವಿರಿ. ಯಂತ್ರೋಪಕರಣಗಳ ಮಾರಾಟ ಮಾಡುವವರಿಗೆ ಅಲ್ಪ ಲಾಭವಾಗಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಬಹಳ ದಿನಗಳ ಅನಂತರ ಪ್ರಯಾಣವು ಖುಷಿ ಕೊಡಲಿದೆ.
ಸಿಂಹ: ಕೆಲಸದಲ್ಲಿ ವಿಘ್ನವು ಬರುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ನಿಮ್ಮಕನಸು ನನಸಾಗಬಹುದು. ಹಿತಶತ್ರುಗಳು ನಿಮಗೆ ಯಶಸ್ಸು ಬಾರದಂತೆ ನೋಡಿಕೊಳ್ಳುವರು. ಸತ್ಯವನ್ನು ಮುಚ್ಚಿಡುವ ಪ್ರಯತ್ನವು ನಿಮ್ಮಿಂದ ನಡೆಯಲಿದೆ. ಅದು ಕುಟುಂಬಕ್ಕೆ ಗೊತ್ತಾಗಲಿದೆ. ನೇರ ಮಾತುಗಳಿಂದ ನಿಮ್ಮವರಿಗೆ ಬೇಸರವಾಗಬಹುದು. ಅತಿಯಾದ ಮಾತೂ ಕೇಳುಗರಿಗೆ ಕಿರಿಕಿರಿ ತರಿಸುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇಲ್ಲದೇ ಮಾಡಬೇಡಿ. ಮೋಸ ಹೋಗುವಿರಿ. ಸ್ವಲ್ಪ ವಿಳಂಬ ಮಾಡಿ. ಧ್ಯಾನದಿಂದ ಓಡುವ ಮನಸ್ಸನ್ನು ನಿಯಂತ್ರಿಸಬಹುದು. ಸ್ವಲ್ಪ ಕಾಲ ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೆಯದು.
ಕನ್ಯಾ: ಮಕ್ಕಳು ನಿಮಗೆ ಖುಷಿಯನ್ನು ತಂದುಕೊಟ್ಟಾರು. ಬಂಧುಗಳ ವಿಯೋಗವಾಗಬಹುದು. ಸಾಲದ ಚಿಂತೆ ಬಹಳ ಕಾಡಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಗೊಂದಲಗಳು ಉಂಟಾಗಬಹುದು. ಸ್ವಂತ ವಾಹನವನ್ನು ಚಲಾಯಿಸುವಾಗ ಅನ್ಯ ಯೋಚನೆಯಲ್ಲಿ ಮಗ್ನರಾಗಿ ಅಪಘಾತವಾಗಬಹುದು. ಶ್ರಮ ವಹಿಸಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗಬಹುದು. ಸಮಾರಂಭಗಳಿಗೆ ಭೇಟಿ ನೀಡಲಿದ್ದೀರಿ. ವಿದ್ಯಾರ್ಥಿಗಳು ಬಹಳ ಜಾಡ್ಯರಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ.
ತುಲಾ: ಇಂದು ನಿಮ್ಮ ಲೆಕ್ಕಾಚಾರಗಳು ಬುಡಮೇಲಾದೀತು. ಪ್ರಯಾಣ ಮಾಡುವ ಸಂದರ್ಭ ಬರಬಹುದು. ಯಾರದ್ದಾದರೂ ವಿಚಾರಕ್ಕೆ ಮೂಗು ತೂರಿಸಬೇಡಿ. ಜನ್ಮಾಂತರದ ಪುಣ್ಯವು ನಿಮ್ಮನ್ನು ಕಾಪಾಡಲಿದೆ. ಬಂಗಾರದ ಖರೀದಿಯನ್ನು ಮಾಡಲಿದ್ದೀರಿ. ಸಿಕ್ಕ ಉದ್ಯೋಗದಿಂದ ಅಸಮಾಧನವಿರಲಿದೆ. ಸದ್ಯ ಇದರಲ್ಲಿಯೇ ಮುಂದುವರಿಯುವುದು ಉತ್ತಮ. ಹಣ ಉಳಿತಾಯದ ಬಗ್ಗೆ ಗಮನವಿರಲಿ. ತಲೆನೋವು ಕಾಡೀತು ಇಂದು. ವಿದ್ಯಾರ್ಥಿಗಳು ಒಂದು ಹಂತದ ಓದನ್ನು ಮುಗಿಸಿ ಉದ್ಯೋಗಕ್ಕೆ ತೆರಳುವ ಆಲೋಚನೆ ಮಾಡುವರು.
ವೃಶ್ಚಿಕ: ಏಕಮುಖವಾದ ನಿರ್ಧಾರವನ್ನು ತೆಗದುಕೊಂಡು ನೀವು ಒಬ್ಬೊಟಿಯಾಗಬೇಕಾದೀತು. ಎಲ್ಲರ ಜೊತೆ ಚರ್ಚಿಸಿ ಅವರನ್ನು ತೆಗೆದುಕೊಂಡು ಹೋಗಿ. ಸಿಟ್ಟಿನಿಂದ ಏನನ್ನೂ ಸಾಧಿಸಲಾಗದು ಎಂಬ ಸತ್ಯವು ತಿಳಿಯಬಹುದು. ದಾಂಪತ್ಯದಲ್ಲಿನ ವಡವಾಗ್ನಿ ಸ್ಫೋಟವಾಗಬಹುದು. ಸ್ನೇಹಿತರ ಜೊತೆ ಹೆಚ್ವು ಸಮಯವನ್ನು ಹರಟೆಯ ಜೊತೆ ಕಳೆಯಬಹುದು. ಗಣ್ಯರು ನಿಮ್ಮನ್ನು ಭೇಟಿಯಾದಾರು. ನೀವು ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅವರಿಂದ ಸಹಾವಾಗಬಹುದು. ಇಂದು ನೀವು ಗೌರವವನ್ನು ಕೇಳಿ ಪಡೆದುಕೊಳ್ಳಲಿದ್ದೀರಿ. ನಿಮ್ಮವರು ಇದನ್ನು ಅಪಹಾಸ್ಯ ಮಾಡುವರು. ನಾಗಾರಾಧನೆಯನ್ನು ಮಾಡಿ.
ಧನು: ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ಉದ್ಯೋಗದ ಸಮಯವು ಬದಲಾಗಿ ಕಿರಿಕಿರಿಯಾದೀತು. ಮನೆಯಲ್ಲಿಯೂ ಅಸಮಾಧಾನವಾಗಬಹುದು. ಎಲ್ಲರನ್ನೂ ಸುಮ್ಮನೇ ಅನುಮಾನದ ದೃಷ್ಟಿಯಿಂದ ನೋಡಬೇಡಿ. ಉದ್ಯೋಗದಲ್ಲಿ ಒಪ್ಪಂದವನ್ನು ಸರಿಯಾಗಿ ಮಾಡಿಕೊಳ್ಳಿ. ಮೋಸವಾಗುವ ಸಾಧ್ಯತೆ ಇದೆ. ಕಷ್ಟದಿಂದ ಸಂಪಾದಿಸಿದ್ದನ್ನು ಕಳೆದುಕೊಳ್ಳುವಿರಿ. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ.
ಮಕರ: ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ಒಂದೇ ಸ್ಥಳದಲ್ಲಿ ಉದ್ಯೋಗವನ್ನು ಮಾಡಿ ಬೇಸರವಾಗಲಿದೆ. ಬದಲಿಸುವ ಇಚ್ಛೆ ತೋರುವಿರಿ. ಅಧಿಕಾರದ ಪಡೆಯಲು ವಾಮಮಾರ್ಗವನ್ನು ಬಳಸಬಹುದು. ಬೇರೆಯವರ ಮೇಲೆ ಪ್ರಭಾವ ಬೀರುವ ಸಂದರ್ಭಬರಬಹುದು. ರಾಜಕೀಯ ವ್ಯಕ್ತಿಗಳಾಗಿದ್ದರೆ ಒಂದು ಸಕಾರಾತ್ಮಕ ಸಂಚಲನವನ್ನು ತರುವಿರಿ. ಅಪರಿಚರ ಒಡನಾಟ ಕಡಿಮೆ ಮಾಡಿ. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಹನುಮಾನ್ ಚಾಲೀಸ್ ಅನ್ನು ಸಂಜೆ ಪಠಿಸಿ.
ಕುಂಭ: ಹಿರಿಯರ ಮಾತನನ್ನು ಅಹಂಕಾರದಿಂದ ಮುರಿಯಬೇಡಿ. ಬಿಸಿ ರಕ್ತವು ಆರಿದ ಮೇಲೆ ಪಶ್ಚಾತ್ತಾಪ ಪಡಬೇಕಾದೀತು. ಇಂದಿನ ಪ್ರಯಾಣವನ್ನು ಮೊಟಕುಗೊಳಿಸಿ, ಇಲ್ಲವೇ ಸ್ಥಗಿತಗೊಳಿಸಿ. ಮಾನಸಿಕ ಆಲಸ್ಯ ಇಂದು ಸರಿಯಾದ ಕೆಲಸ ಸಿಗಲಿದ್ದು, ಅದನ್ನು ಅನಿವಾರ್ಯವಾಗಿ ಮಾಡುವಿರಿ. ಉದರಕ್ಕೆ ಸಂಬಂಧಿಸಿ ರೋಗವು ಕಾಣಿಸಿಕೊಳ್ಳಬಹುದು. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ.
ಮೀನ: ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು. ಭೂಮಿಗೆ ಸಂಬಂಧಿಸಿದ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ಯಾರನ್ನೂ ಕೇವಲವಾಗಿ ನೋಡುವುದು ಬೇಡ. ನಿಮ್ಮ ವಿದ್ಯೆಗೆ ಸೂಕ್ತವಾದ ಸ್ಥಾನ ಸಿಗಲಿಲ್ಲ ಎಂಬ ಬೇಸರ ಆಗಲಿದೆ. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಪ್ರಣಯಸ ವಿಷಯದಲ್ಲಿ ನಿಮ್ಮ ಅಜಾಗರೂಕತೆಯಿಂದ ತಪ್ಪಿಹೋಗಬಹುದು. ಚಿಂತಿಸದೇ ಅನ್ಯ ಮಾರ್ಗವನ್ನು ಹಿಡಿಯಿರಿ. ಶಿವಮಾನಸಸ್ತೋತ್ರದಿಂದ ಶಿವನನ್ನು ಭಕ್ತಿಯಿಂದ ಪೂಜಿಸಿ.
-ಲೋಹಿತಶರ್ಮಾ ಇಡುವಾಣಿ (8762924271)