Daily Horoscope: ಇಂದಿನ ರಾಶಿ ಭವಿಷ್ಯ, ಸರ್ಕಾರ ಸಾಲ ತೀರಿಸುತ್ತದೆ ಎಂದು ಈ ರಾಶಿಯವರು ಎಷ್ಟಾದರೂ ಸಾಲ ಮಾಡಿದರೆ ಕುತ್ತಿಗೆಗೆ ಬರಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿ ಭವಿಷ್ಯ, ಸರ್ಕಾರ ಸಾಲ ತೀರಿಸುತ್ತದೆ ಎಂದು ಈ ರಾಶಿಯವರು ಎಷ್ಟಾದರೂ ಸಾಲ ಮಾಡಿದರೆ ಕುತ್ತಿಗೆಗೆ ಬರಬಹುದು
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
| Updated By: ಕಿರಣ್ ಹನುಮಂತ್​ ಮಾದಾರ್

Updated on:May 02, 2023 | 10:11 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಾದಶೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.

ಧನಸ್ಸು: ಸ್ನೇಹೊತರಿಗೋಸ್ಕರ ಖರ್ಚುಮಾಡಬೇಕಾಗಿ ಬರಬಹುದು. ಅಪೂರ್ಣಗೊಂಡ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ಚಿಂತಿಸುವಿರಿ. ಹಿಂದೆ ಪಟ್ಟ ಕಷ್ಟದಿಂದ ನಿಮಗೆ ಇಂದು ಸುಖ, ನೆಮ್ಮದಿಗಳು ಸಿಗಲಿವೆ. ಮಕ್ಕಳಿಂದ ಶುಭವಾರ್ತೆಯು ಬರಬಹುದು.‌ ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ಕಾರ್ಯಕ್ರಮದ‌ ಕಾರಣ ದೂರ ಓಡಾಟ ಬರಬಹುದು. ಕೋಪವನ್ನು ಆದಷ್ಟು ಬುದ್ಧಿಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ. ಅಸೂಯೆಯೂ ಸ್ವಭಾವದ ಕಾರಣ ಹೆಚ್ಚಾಗಬಹುದು. ಶಿಕ್ಷಿತರಾದಕಾರಣ ಇದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕಾಗುವುದು.

ಮಕರ: ಚರ್ವಿತಚರ್ವಣ ಎಂದು ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನ‌ಗೌರವದಿಂದ ಕೇಳಬೇಕಾಗಬಹುದು. ಹಳೆಯ ಖಾಯಿಲೆಯು ಮತ್ತೆ ಬರಬಹುದು. ಅವಕಾಶಗಳನ್ನು ಬಿಟ್ಟಕೊಟ್ಟ ಇದ್ದಲ್ಲಿಯೇ ಇರಬೇಡಿ. ಸಮಯವನ್ನು ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಿ. ನಿಮ್ಮನ್ನು ಬೆಂಬಲಿಸುವವರಿಗೆ ನಿಮ್ಮ ಬೆಂಬಲವನ್ನು ನೀಡುವಿರಿ. ಉಪಕಾರದ ಸ್ಮರಣೆಯನ್ನು ಇಟ್ಟುಕೊಳ್ಳುವಿರಿ. ಆತಂಕದ ಸಂದರ್ಭಗಳು ಬರಬಹುದು. ತಾಳ್ಮೆಯಿಂದ ಸರಿ ಮಾಡಿಕೊಳ್ಳಿ.

ಕುಂಭ: ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕಳೆದುಕೊಂಡ ವಸ್ತುವನ್ನು ಮರಳಿಪಡೆಯಲು ಶ್ರಮವಹಿಸುವಿರಿ. ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗುವ ಆಲೋಚನೆಯನ್ನು ವಿದ್ಯಾರ್ಥಿಗಳು ಬಿಡಬೇಕಾಗಿಬರಬಹುದು. ಬೇರೆಯವರಲ್ಲಿ ನಿಮ್ಮ ಬಗ್ಗೆ ಇರುವ ಭವನೆಗಳು ಗೊತ್ತಾಗಬಹುದು. ಸಮುದ್ರ, ಕೆರೆ, ನದಿಯ ಭಾಗಗಳಲ್ಲಿ ತೆರಳುವಾಗ ಎಚ್ಚರಿಕೆ ಇರಲಿ.

ಮೀನ: ಕಚೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಸಾಲವನ್ನು ಸರ್ಕಾರ ತೀರಿಸುತ್ತದೆ ಎಂಬ ಭಾವದಿಂದ ಎಷ್ಟಾದರೂ ಸಾಲವನ್ನು ಮಾಡಬೇಡಿ. ನಿಮ್ಮ ಕುತ್ತಿಗೆಗೆ ಸುತ್ತಿಕೊಂಡೀತು. ಕಬ್ಬಿಣ ಮುಂತಾದ ಲೋಹದ ಕೆಲಸಕ್ಕೆ ಹಿನ್ನಡೆಯಾಗಬಹುದು. ಬರಬೇಕಾದ ಹಣವು ಬರದೇ ಆರ್ಥಿಕವಾದ ಮುಗ್ಗಟ್ಟು ಬರಬಹುದು. ಉದ್ಯೋಗದ ಸ್ಥಳದಲ್ಲಿ ಆಗುವ ಕಲಹದಲ್ಲಿ ಯಾರ ಪರವಾಗಿ ಇರಬೇಕು ಎನ್ನುವ ಗೊಂದಲ ಕಾಣಿಸಿ ತಟಸ್ಥರಾಗಬಹುದು. ಶತ್ರುವನ್ನು ಮಿತ್ರನನ್ನು ಮಾಡಿಕೊಳ್ಳುವ ತಂತ್ರವನ್ನು ಹೂಡುವಿರಿ.

-ಲೋಹಿತಶರ್ಮಾ ಇಡುವಾಣಿ

Published On - 6:30 am, Tue, 2 May 23

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?